For Quick Alerts
ALLOW NOTIFICATIONS  
For Daily Alerts

ಫ್ರೆಂಡ್‌ಶಿಪ್‌ ಈಗ ಫ್ರೆಂಡ್‌ಶಿಪ್‌ ಆಗಿ ಉಳಿದಿಲ್ಲ, ಪ್ರೀತಿಯಾಗಿ ಮಾರ್ಪಟ್ಟಿದೆ ಎನ್ನುವ ಲಕ್ಷಣಗಳಿವು

|

ಪ್ರೀತಿ ಕಣ್ಣಿನಲ್ಲಿ ಶುರುವಾಗಿ, ಹೃದಯ ಮುಟ್ಟುತ್ತೆ ಎಂಬ ಮಾತಿದೆ. ಆದರೆ, ಕೆಲವೊಮ್ಮೆ ಸ್ನೇಹದಿಂದ ಶುರುವಾಗಿ, ಪ್ರೀತಿಯಾಗಿ ಪರಿವರ್ತನೆಯಾಗುತ್ತೆ. ಹಲವಾರು ವರ್ಷಗಳ ಕಾಲ ಸ್ನೇಹಿತರಾಗಿದ್ದವರು, ಯಾವುದೋ ಒಂದು ಕ್ಷಣದಲ್ಲಿ ಪ್ರೀತಿಯ ಬಲೆಯಲ್ಲಿ ಬೀಳುತ್ತಾರೆ. ಹಾಗಾದರೆ, ಸ್ನೇಹ ಪ್ರೀತಿಗೆ ತಿರುಗಿದೆ ಎಂದು ಅರ್ಥ ಮಾಡಿಕೊಳ್ಳುವುದು ಹೇಗೆ? ಸ್ನೇಹ ಪ್ರೀತಿಯಾಗಿ ಬದಲಾಗಿರುವ ಲಕ್ಷಣ ಅಥವಾ ಸೂಚನೆಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಸ್ನೇಹ ಪ್ರೀತಿಯಾಗಿ ಬದಲಾಗಿರುವ ಸೂಚನೆಗಳನ್ನು ಈ ಕೆಳಗೆ ನೀಡಲಾಗಿದೆ:

ಕಾಲ್, ಮೆಸೇಜ್ ಇದ್ದಕ್ಕಿದ್ದಂತೆ ಹೆಚ್ಚಾಗುವುದು:

ಕಾಲ್, ಮೆಸೇಜ್ ಇದ್ದಕ್ಕಿದ್ದಂತೆ ಹೆಚ್ಚಾಗುವುದು:

ನಿಮ್ಮ ನಡುವೆ ಸ್ನೇಹವಷ್ಟೇ ಇದ್ದಾಗ, ನಡೆಯುತ್ತಿದ್ದ ಸಂಭಾಷಣೆ ಬಗ್ಗೆ ಒಮ್ಮೆ ಯೋಚಿಸಿ. ಆಗ ಹೇಗಿತ್ತು, ಈಗ ಹೇಗಾಗಿದೆ? ಎಷ್ಟು ವ್ಯತ್ಯಾಸವಾಗಿದೆ ನೀವೇ ಅರ್ಥಮಾಡಿಕೊಳ್ಳಿ. ಸ್ನೇಹಿತರಾಗಿದ್ದಾಗಲೂ ದೀರ್ಘ ಸಂಭಾಷಣೆ ನಡೆಸುತ್ತಿದ್ದವರಾಗಿದ್ದರೆ, ಈ ವಿಧಾನ ನಿಮಗೆ ಅನ್ವಯಿಸದು. ಆದರೆ, ನಿಮ್ಮಿಬ್ಬರ ನಡುವೆ ಫೋನ್, ಮೆಸೇಜ್ ಹೆಚ್ಚಾಗಿದ್ದರೆ, ನಿಮ್ಮ ಸ್ನೇಹ ಪ್ರೀತಿಗೆ ತಿರುಗಿದೆ ಎಂದರ್ಥ.

ಮಾಜಿ ಪ್ರೇಮಿ ಬಗ್ಗೆ ಅಸೂಯೆ ಆಗುವುದು:

ಮಾಜಿ ಪ್ರೇಮಿ ಬಗ್ಗೆ ಅಸೂಯೆ ಆಗುವುದು:

ಸ್ನೇಹಿತರೊಂದಿಗೆ ಮಾಜಿ ಸಂಗಾತಿ ಅಥವಾ ಪ್ರೆಸೆಂಟ್ ರಿಲೇಷನ್‌ಶಿಪ್ ಬಗ್ಗೆ ಮಾತನಾಡುವುದು ಸಾಮಾನ್ಯ. ಇದೇ ರೀತಿ ನೀವು ಮಾಡಿರಬಹುದು. ಆದರೆ, ಈಗೀಗ ನಿಮ್ಮ ಫ್ರೆಂಡ್ ಬೇರೆ ಹುಡುಗ/ಹುಡುಗಿಯ ಬಗ್ಗೆ ಅಥವಾ ತನ್ನ ಮಾಜಿ ಪ್ರೇಮಿಯ ಬಗ್ಗೆ ಮಾತನಾಡಿದರೆ, ನಿಮಗೆ ಹೊಟ್ಟೆಕಿಚ್ಚಾಗುತ್ತಿದ್ದರೆ, ಅದರಿಂದ ನಿಮ್ಮ ನಡವಳಿಕೆ ಅಥವಾ ಮಾತು ಬದಲಾದರೆ, ನಿಮ್ಮ ಸ್ನೇಹಕ್ಕೆ ಪ್ರೀತಿ ರೂಪ ಧಕ್ಕಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಿ.

ಬಾಡಿ ಲ್ಯಾಂಗ್ವೇಜ್ ಬದಲಾಗುವುದು:

ಬಾಡಿ ಲ್ಯಾಂಗ್ವೇಜ್ ಬದಲಾಗುವುದು:

ಇದು ಬಹುಶಃ ಸ್ನೇಹವು ಪ್ರೀತಿಯಾಗಿ ಬದಲಾಗುವ ಅತ್ಯಂತ ಸೂಕ್ಷ್ಮ ಚಿಹ್ನೆಗಳಲ್ಲಿ ಒಂದಾಗಿದೆ. ದೇಹ ಭಾಷೆ ಅಂದರೆ ಬಾಡಿ ಲ್ಯಾಂಗ್ವೇಜ್ ಗಮನಿಸಬೇಕಾದ ಮುಖ್ಯ ವಿಷಯವಾಗಿದೆ. ಈಗೀಗ ಅವರ ತೋಳು ನಿಮ್ಮ ಬೆನ್ನಹಿಂದೆ ಬರುತ್ತಿದ್ದರೆ ಅಥವಾ ನಿಮ್ಮ ಹೆಗಲು ಅವರ ಭುಜವನ್ನು ಬಯಸುತ್ತಿದ್ದರೆ, ಅವರೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದೀರಿ ಎಂಬುದನ್ನು ಸೂಚಿಸುವುದು. ಇದನ್ನು ಬಹಳ ಸೂಕ್ಷ್ಮವಾಗಿ ಗಮನಿಸಬೇಕು.

ಪರಸ್ಪರ ಫ್ಲರ್ಟಿಂಗ್ ಆರಂಭಿಸುವುದು:

ಪರಸ್ಪರ ಫ್ಲರ್ಟಿಂಗ್ ಆರಂಭಿಸುವುದು:

ನಿಮ್ಮ ನಡುವೆ ಕೇವಲ ಸ್ನೇಹವಷ್ಟೇ ಇದೆಯೋ ಅಥವಾ ಫ್ಲರ್ಟಿಂಗ್ ಮಾಡುತ್ತಿದ್ದೀರೋ ಎಂಬುದನ್ನು ನೀವೇ ಅರ್ಥಮಾಡಿಕೊಳ್ಳಬೇಕು. ಆಗಾಗ ನಿಮ್ಮನ್ನು ಸ್ಪರ್ಶಿಸುವುದು, ಕಣ್ಣಲ್ಲೇ ಮಾತನಾಡುವುದು ಇವುಗಳೆಲ್ಲ ಫ್ಲರ್ಟಿಂಗ್‌ನ ಲಕ್ಷಣಗಳಾಗಿವೆ. ಇವು ನಿಮ್ಮ ನಡುವೆ ಇದ್ದರೆ, ನಿಮ್ಮ ನಡುವೆ ಇರುವುದು ಸ್ನೇಹವಲ್ಲ, ಪ್ರೀತಿ ಎಂಬುದನ್ನು ಅರಿಯಿರಿ.

ಎಲ್ಲದಕ್ಕೂ ಮೊದಲು ಅವರೇ ನೆನಪಾಗುವುದು:

ಎಲ್ಲದಕ್ಕೂ ಮೊದಲು ಅವರೇ ನೆನಪಾಗುವುದು:

ನಿಮ್ಮ ದೈನಂದಿನ ಜೀವನದಲ್ಲಿ ನಡೆದ ಆಗು-ಹೋಗುಗಳ ಬಗ್ಗೆ ಹೇಳಿಕೊಳ್ಳುವ ಅಭ್ಯಾಸ ಕೆಲವರಿಗಿರುವುದು. ಅದೇ ರೀತಿ ದಿನದ ವರದಿ ಹೇಳಲು ಮೊದಲು ನಿಮ್ಮ ಸ್ನೇಹಿತನೇ ನೆನಪಾದರೆ, ಆತ ನಿಮಗೆ ಸ್ನೇಹಿತನಿಗಿಂತ ಅಥವಾ ಸ್ನೇಹಿತೆಗಿಂತ ಹತ್ತಿರವಾಗಿರುತ್ತಾರೆ. ದುಃಖವಿರಲಿ, ಖುಷಿಯಿರಲಿ ಎಲ್ಲದಕ್ಕೂ ಅವರೇ ನೆನಪಾದರೆ ಅದು ಪ್ರೀತಿಯಲ್ಲದೇ ಬೇರೇನೂ ಅಲ್ಲ. ಏನೇ ಆದರೂ ಮೊದಲು ತಲೆಗೆ ಬರುವ ವ್ಯಕ್ತಿಯೇ ನಿಮ್ಮ ಜೀವನ ಸಂಗಾತಿಯಾಗುವ ಬಹಳಷ್ಟು ಸಾಧ್ಯತೆಗಳಿರುತ್ತದೆ. ಅಷ್ಟೇ ಅಲ್ಲ, ಪ್ರತಿಯೊಬ್ಬರ ಜೊತೆ ಮಾತನಾಡುವಾಗಲೂ ಪದೇ ಪದೇ ಅವರ ಹೆಸರೇ ತರುತ್ತೀರಿ. ಎಲ್ಲದಕ್ಕೂ ಅವರದ್ದೇ ಉದಾಹರಣೆ ನೀಡುವುದು ಇರುತ್ತದೆ.

ಪೆಟ್‌ನೇಮ್ ಬದಲಾಗುವುದು:

ಪೆಟ್‌ನೇಮ್ ಬದಲಾಗುವುದು:

ಸ್ನೇಹಿತರಿಗೆ ಪೆಟ್‌ನೇಮ್ ಅಥವಾ ಅಡ್ಡಹೆಸರಿನಿಂದ ಕರೆಯೋದು ಸಾಮಾನ್ಯ. ಆದರೆ, ಆ ಪೆಡ್‌ನೇಮೇ ಬದಲಾದರೆ ಅಲ್ಲಿ ಸ್ನೇಹದ ಬದಲು ಪ್ರೀತಿ ಬಂದಿದೆ ಎಂದರ್ಥ. ಈ ಹಿಂದೆ ಕರೆಯುತ್ತಿದ್ದ ಹೆಸರುಗಳ ಬದಲು, ಸ್ವೀಟಿ, ಬೇಬಿ ಎಂದು ಬದಲಾದರೆ, ಅದು ಪ್ರೀತಿಯ ಸಂಕೇತ. ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಲು ಇದು ನೇರವಾದ ಮಾರ್ಗವಾಗಿದೆ. ಕೆಲವರಿಗೆ ಈ ಬದಲಾವಣೆ ಇಷ್ಟವಾಗದು. ಅದರೆ, ನಿಮ್ಮ ಸ್ನೇಹಿತೆ/ ಸ್ನೇಹಿತ ಇದನ್ನು ಇಷ್ಟಪಟ್ಟರೆ ಅಲ್ಲಿ ಪ್ರೀತಿಯಿದೆ ಎಂದರ್ಥ.

ನಿಮ್ಮ ಸ್ನೇಹಿತರು ನಿಮ್ಮಬ್ಬರ ಬಗ್ಗೆ ತಮಾಷೆ ಮಾಡುವುದು:

ನಿಮ್ಮ ಸ್ನೇಹಿತರು ನಿಮ್ಮಬ್ಬರ ಬಗ್ಗೆ ತಮಾಷೆ ಮಾಡುವುದು:

ಸಾಮಾನ್ಯವಾಗಿ ನಿಮ್ಮ ಸ್ನೇಹಿತರಿಗೆ ನಿಮ್ಮಿಬ್ಬರ ನಡುವೆ ಏನಾಗುತ್ತಿದೆ ಎಂಬುದು ಗೊತ್ತಿರುತ್ತೆ. ಏಕೆಂದರೆ, ಅವರು ನಿಮ್ಮಿಬ್ಬರನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ. ನಿಮ್ಮ ನಡುವಿನ ಕಳ್ಳ ಸನ್ನೆಗಳು, ಕಣ್ಣೋಟಗಳು, ತರಲೆಳಿಂದ ಅವರು ಅರ್ಥ ಮಾಡಿಕೊಂಡಿರುತ್ತಾರೆ. ಅದೇ ಕಾರಣದಿಂದ ನಿಮ್ಮಬ್ಬರನ್ನು ಕಪಲ್ಸ್ ಎಂದು ತಮಾಷೆ ಮಾಡುತ್ತಿರುತ್ತಾರೆ.

ನೀವಿಬ್ಬರೇ ಏಕಾಂತ ಬಯಸುವುದು:

ನೀವಿಬ್ಬರೇ ಏಕಾಂತ ಬಯಸುವುದು:

ಸ್ನೇಹ ಅಂದ ಮೇಲೆ ಅಲ್ಲಿ ಮಾತು, ಹರಟೆ, ನಗು ಎಲ್ಲವೂ ಮಾಮೂಲಿ. ಆದರೆ, ನಿಮ್ಮ ಸ್ನೇಹ ಪ್ರೀತಿಯಾಗಿ ಬದಲಾಗಿದ್ದಾಗ, ಬೇರಾರನ್ನು ನಿಮ್ಮ ಗುಂಪಿಗೆ ಸೇರಿಸಿಕೊಳ್ಳಲು ಮನಸ್ಸಾಗುವುದಿಲ್ಲ. ನಿಮ್ಮ ನಡುವೆ ಯಾರೂ ಬರುವುದು ನಿಮಗೆ ಇಷ್ಟವಾಗದು. ನೀವಿಬ್ಬರು ಏಕಾಂತದ ಸಮಯವನ್ನು ಒಟ್ಟಿಗೆ ಕಳೆಯಲು ಬಯಸುತ್ತೀರಿ. ಯಾರಾದರೂ ನಿಮ್ಮ ನಡುವೆ ಬಂದಾಗ, ಅದನ್ನು ಸಹಿಸಲು ಕಷ್ಟವಾಗುವುದು.

ಆತ ನಿಮ್ಮನ್ನು ಹೊರಗೆ ಕರೆಯಬಹುದು:

ಆತ ನಿಮ್ಮನ್ನು ಹೊರಗೆ ಕರೆಯಬಹುದು:

ಸ್ನೇಹಿತರಾಗಿದ್ದಾಗ ನೈಟ್ ಔಟ್ ಅಥವಾ ಪಾರ್ಟಿಗೆ ಕರೆಯದ ನಿಮ್ಮ ಸ್ನೇಹಿತರು, ಇದ್ದಕ್ಕಿದ್ದಂತೆ ನಿಮ್ಮನ್ನಷ್ಟೇ ಹೊರಗೆ ಬರುವಂತೆ ಹೇಳುತ್ತಿದ್ದರೆ, ಅವರಿಗೆ ಪ್ರೀತಿಯಾಗಿದೆ ಎಂದರ್ಥ. ಅದಕ್ಕಾಗಿಯೇ ನಿಮ್ಮನ್ನು ಹೊರಗೆ ತಿರುಗಲು ಅಥವಾ ಪ್ರವಾಸ ಅಥವಾ ಡಿನ್ನರ್‌ಗೆ ಕರೆಯಬಹುದು. ಇದರ ಮುಖ್ಯ ಉದ್ದೇಶ ಅವರಿಗೆ ನಿಮ್ಮೊಂದಿಗೆ ಮುಕ್ತವಾಗಿ ಕಾಲ ಕಳೆಯುದಾಗಿದೆ. ಈ ಮೂಲಕ ನಿಮಗೆ ಮತ್ತಷ್ಟು ಹತ್ತಿರವಾಗುವ ಆಸಕ್ತಿಯನ್ನು ಹೊಂದಿರುತ್ತಾರೆ.

ಗಾಳಿ ಸುದ್ದಿಯಿಂದ ಭಯಭೀತರಾಗಬಹುದು:

ಗಾಳಿ ಸುದ್ದಿಯಿಂದ ಭಯಭೀತರಾಗಬಹುದು:

ಗಾಳಿಸುದ್ದಿ ಸ್ನೇಹಿತರಿಗೆ ಏನೂ ಮಾಡದು, ಅಂದರೆ ಸ್ನೇಹಿತರಾದವರು ಗಾಳಿಸುದ್ದಿಗೆ ಕಿವಿಕೊಡುವುದಿಲ್ಲ. ಆದರೆ ನೀವೇನಾದರೂ ಪ್ರೀತಿಯಲ್ಲಿ ಬಿದ್ದಿದ್ದರೆ ಮಾತ್ರ ಇಂತಹ ಗಾಳಿ ಸುದ್ದಿಗಳು ನಿಮ್ಮನ್ನು ಭಯಭೀತರಾಗಿಸಬಹುದು. ನಿಮ್ಮಬ್ಬರ ನಡುವಿನ ಗಾಳಿಸುದ್ದಿಯು ನಿಮ್ಮ ಸಂಬಂಧವನ್ನು ಹಾಳು ಮಾಡಬಹುದೆಂಬ ಭಯವೂ ನಿಮ್ಮಲ್ಲಿರುವುದು.

English summary

Signs A Friendship Is Turning Into Love in Kannada

Here we talking about Signs A Friendship Is Turning Into Love in Kannada, read on
Story first published: Saturday, May 14, 2022, 11:22 [IST]
X
Desktop Bottom Promotion