For Quick Alerts
ALLOW NOTIFICATIONS  
For Daily Alerts

ಮೆಸೇಜ್ ಮೂಲಕ ನಿಮ್ಮ ಕ್ರಷ್ ಮನಸಲ್ಲಿ ಒಳ್ಳೆ ಭಾವನೆ ಮೂಡಿಸುವುದು ಹೇಗೆ?

|

''ಹೇ, ನಿನ್ನ ಕ್ರಷ್ ಯಾರು'' ಅಂತ ಯಾವ್ದಾದ್ರು ಹುಡುಗ-ಹುಡುಗಿಯ ಬಳಿ ಕೇಳ್ದಾಗ, ಅವರ ಕೆನ್ನೆ ಕೆಂಪಾಗದೇ ಇರಲಾರದು. ಒಂದು ವೇಳೆ ಆ ಕ್ರಷ್ ನಂಬರ್ ಏನಾದ್ರೂ ಸಿಕ್ ಬಿಟ್ರೆ ಅವರ ಖುಷಿಗೆ ಪಾರವೇ ಇಲ್ಲ. ಆದರೆ ಏನ್ ಮಾತಾಡೋದು? ಹೇಗೆ ಮಾತಾಡೋದು? ಕ್ರಷ್ ಮನಸಲ್ಲಿ ಮೆಸೇಜ್ ಮೂಲಕ ನನ್ ಬಗ್ಗೆ ಯಾವ ರೀತಿ ಒಳ್ಳೆ ಭಾವನೆ ಮೂಡಿಸೋದು ಅನ್ನೋ ಪ್ರಶ್ನೆ ಒಳಗೊಳಗೆ ಕಾಡ್ತಾ ಇರುತ್ತೆ. ಫ್ರೆಂಡ್ಸ್ ಚಿಂತೆ ಬಿಡಿ, ಈ ಸ್ಟೋರಿ ನೋಡಿ, ಒಂದು ಐಡಿಯಾ ಬರುತ್ತೆ.

ನಿಮ್ಮ ಕ್ರಷ್ ಗೆ ಟೆಕ್ಸ್ಟ್ ಮೂಲಕ ಇಂಪ್ರೆಸ್ ಮಾಡಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಅವರು ಬ್ಯುಸಿ ಇದ್ದಾಗ ಮೆಸೇಜ್ ಮಾಡಬೇಡಿ:

ಅವರು ಬ್ಯುಸಿ ಇದ್ದಾಗ ಮೆಸೇಜ್ ಮಾಡಬೇಡಿ:

ಸೋಷಿಯಲ್ ಮೀಡಿಯಾದಲ್ಲಿ ನಿಮ್ಮ ಕ್ರಷ್ ಅವರ ಸ್ನೇಹಿತರ ಜೊತೆ ಇರುವ ಪೋಸ್ಟ್‌ಗಳನ್ನು ಹಾಕಿದನ್ನು ನೀವು ನೋಡಿದರೆ, ಅದನ್ನು ನೋಡಿ ಅವರಿಗೆ ತೊಂದರೆ ಮಾಡಬೇಡಿ. ಅವರನ್ನು ಪ್ರಶ್ನಿಸಬೇಡಿ. ಜೊತೆಗೆ ಅವರ ಕೆಲಸದ ಸಮಯದಲ್ಲಿ ಅಥವಾ ಅಧ್ಯಯನದ ಸಮಯದಲ್ಲಿಯೂ ಸಹ ಅವರಿಗೆ ಮೆಸೇಜ್ ಮಾಡಬೇಡಿ. ಇದು ಅವರಿಗೆ ಕಿರಿಕಿರಿ ಉಂಟು ಮಾಡಬಹುದು.

ಮೊದಲಿಗೆ ಮೆಸೇಜ್ ಶಾರ್ಟ್ ಹಾಗೂ ಸ್ವೀಟ್ ಆಗಿರಲಿ:

ಮೊದಲಿಗೆ ಮೆಸೇಜ್ ಶಾರ್ಟ್ ಹಾಗೂ ಸ್ವೀಟ್ ಆಗಿರಲಿ:

ನಂಬರ್ ಸಿಕ್ಕ ದಿನವೇ ನೀವು ಅವರನ್ನು ಎಷ್ಟು ಇಷ್ಟ ಪಡುತ್ತೀರಾ ಎಂದು ಉದ್ದುದ್ದ ಪ್ಯಾರಾಗ್ರಾಫ್ ಗಳಲ್ಲಿ ಬರೆದು ಕಳುಹಿಸಿದರೆ ಅವರಿಗೆ ಖಂಡಿತವಾಗಿಯೂ ಇಷ್ಟವಾಗುವುದಿಲ್ಲ. ಆದ್ದರಿಂದ, ಮೊದಮೊದಲ ದಿನಗಳಲ್ಲಿ ಸಂಭಾಷಣೆ ಶಾರ್ಟ್ ಹಾಗೂ ಸ್ವೀಟ್ ಆಗಿರಲಿ. ದಿನಕಳೆದಂತೆ ಮುಂದೆ ಅದನ್ನು ದೊಡ್ಡ ಪ್ಯಾರಾಗ್ರಾಪ್ ಗೆ ತಿರುಗಿಸಬಹುದು. ಆಗ ಅವರು ಅದನ್ನು ಓದಲು ತಯಾರಿರುತ್ತಾರೆ.

ಅವರು ಇಷ್ಟಪಡುವ ವಿಷಯಗಳ ಬಗ್ಗೆ ಮಾತನಾಡಿ:

ಅವರು ಇಷ್ಟಪಡುವ ವಿಷಯಗಳ ಬಗ್ಗೆ ಮಾತನಾಡಿ:

ನಿಮ್ಮ ಕ್ರಷ್ ನ್ನು ಮೆಚ್ಚಿಸುವ ಮೊದಲ ಹೆಜ್ಜೆ ಅಂದರೆ ಅವರು ಇಷ್ಟಪಡುವ ವಿಷಯಗಳ ಬಗ್ಗೆ ಮಾತನಾಡುವುದು. ಅವರ ಸೋಶಿಯಲ್ ಮೀಡಿಯಾ ಗಮನಿಸಿದರೆ ಸಾಮಾನ್ಯವಾಗಿ ಅವರಿಗೇನು ಇಷ್ಟ ಎಂಬ ಕಲ್ಪನೆ ನಿಮಗೆ ಮೂಡುತ್ತದೆ. ಅದಕ್ಕೆ ತಕ್ಕಂತೆ ನೀವು ಮಾತನಾಡಲು ಆರಂಭಿಸಿ. ಅವರ ನೆಚ್ಚಿನ ಟಿವಿ ಶೋ ಅಥವಾ ಅವರು ಇಷ್ಟಪಡುವ ಕಾಲ್ಪನಿಕ ಪಾತ್ರದ ಬಗ್ಗೆ ಚರ್ಚೆಯನ್ನು ಪ್ರಾರಂಭಿಸಿ. ಇದು ಖಂಡಿತವಾಗಿಯೂ ನಿಮ್ಮ ಮಾತುಗಳನ್ನು ಮುಂದುವರಿಸುತ್ತದೆ.

ಫ್ಲರ್ಟ್ ಮಾಡಿ, ಆದರೆ ಅತಿಯಾಗಿ ಅಲ್ಲ:

ಫ್ಲರ್ಟ್ ಮಾಡಿ, ಆದರೆ ಅತಿಯಾಗಿ ಅಲ್ಲ:

ಫ್ಲರ್ಟಿಂಗ್ ನಿಮ್ಮ ಕ್ರಷ್ ನ ಗಮನವನ್ನು ಸೆಳೆಯಲು ಒಂದು ಉತ್ತಮ ಮಾರ್ಗವಾಗಿದೆ ಆದರೆ ಅದು ಅತಿರೇಕಕ್ಕೆ ಹೋದರೆ ನಿಮ್ಮ ಬಗ್ಗೆ ಇತರ ಭಾವನೆ ಮೂಡುವಂತೆ ಮಾಡಬಹುದು. ಆದ್ದರಿಂದ ಜಾಗೃತರಾಗಿರಿ. ಇನ್ನೊಂದು ವಿಚಾರ, ನಿಮ್ಮ ಕ್ರಷ್ ಗೆ ಫ್ಲರ್ಟಿಂಗ್ ಇಷ್ಟವೋ ಇಲ್ಲವೋ ಎಂಬುದನ್ನು ಮೊದಲೇ ತಿಳಿಯುವುದು ಉತ್ತಮ. ಯಾವಾಗಲೂ ಅವರೊಂದಿಗೆ ಚೆಲ್ಲಾಟವಾಡಬೇಡಿ, ಸಂಭಾಷಣೆಯನ್ನು ಇತರ ವಿಚಾರಗಳೊಂದಿಗೆ ಮುಂದುವರಿಸಿ. ಫ್ಲರ್ಟ್ ಮಾಡುತ್ತಾ ಅವರು ಹೇಳಿದ ವಿಚಾರಗಳಿಗೆ ಆಗಾಗ ಕಾಂಪ್ಲಿಮೆಂಟ್ ನೀಡಿ.

ಬೇಸರದ ಸಂಭಾಷಣೆ ಬೇಡ:

ಬೇಸರದ ಸಂಭಾಷಣೆ ಬೇಡ:

ನಿಮ್ಮ ಕ್ರಷ್ ಗೆ ನಿಮ್ಮ ಜೀವನದ ಯಾವುದೇ ದುಃಖದ ಘಟನೆಯ ಬಗ್ಗೆ ಹೇಳಿ ಕೊರೆಯಬೇಡಿ. ಅಂತಹ ಘಟನೆಗಳನ್ನು ಅವರು ನಿರೀಕ್ಷೆ ಮಾಡುವುದಿಲ್ಲ. ಒಮ್ಮೆ ಕ್ಲೋಸ್ ಆದ ಮೇಲೆ ನಿಧಾನವಾಗಿ ಬೇಕಾದರೆ ಅಂತಹ ವಿಚಾರಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಬಹುದು. ಮೊದಲಿಗೆ ಹೇಳಿದರೆ ಕಷ್ಟವಾಗಬಹುದು.

ಸ್ವಲ್ಪ ಮೆತ್ತಗಿರಿ:

ಸ್ವಲ್ಪ ಮೆತ್ತಗಿರಿ:

ಪ್ರತಿಯೊಬ್ಬರೂ ಸ್ವಲ್ಪ ಮುದ್ದು ಮಾಡುವುದನ್ನು ಇಷ್ಟಪಡುತ್ತಾರೆ. ಅವರ ವ್ಯಕ್ತಿತ್ವದ ಬಗ್ಗೆ ಕ್ರಷ್ ನ್ನು ಅಭಿನಂದಿಸುವುದು ಅಥವಾ ಗುಡ್ನೈಟ್ ಹೇಳುವ ಮೊದಲು ಚೀಸೀ ವಿಷಯಗಳನ್ನು ಹೇಳುವುದು ಖಂಡಿತವಾಗಿಯೂ ಅವರನ್ನು ನಗುವಂತೆ ಮಾಡುತ್ತದೆ. ಮೊದಲಿಗೆ ಈ ರೀತಿ ಮಾಡಬೇಡಿ, ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ. ಹೆಚ್ಚು ಅಭಿನಂದನೆಗಳನ್ನು ನೀಡಬೇಡಿ. ಇದು ಅವರಿಗೆ ಆರ್ಟಿಫಿಶಿಯಲ್ ಭಾವನೆ ಮೂಡಿಸಬಹುದು.

English summary

How To Impress Your Crush On Text in Kannada

Here we talking about How To Impress Your Crush On Text in Kannada, read on
X
Desktop Bottom Promotion