For Quick Alerts
ALLOW NOTIFICATIONS  
For Daily Alerts

ಹೊಟ್ಟೆಕಿಚ್ಚಿನ ಸಹೋದ್ಯೋಗಿಗಳ ಜತೆ ಕೆಲಸ ಮಾಡಲು ಇಲ್ಲಿದೆ ಟಿಪ್ಸ್

|

ಮಗ್ಗುಲ ಮುಳ್ಳು ಯಾವತ್ತಿದ್ದರೂ ಅದು ಅಪಾಯಕಾರಿಯೇ. ಇದರಿಂದ ನಿಮಗೆ ದಿನನಿತ್ಯವೂ ತುಂಬಾ ಜೀವನ ಸಾಗಿಸಲು ಕಷ್ಟವಾಗುವುದು. ಅದರಲ್ಲೂ ನಾವು ಜೀವನದಲ್ಲಿ ಇಂತಹ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ. ಅದರಲ್ಲೂ ಕಚೇರಿ ಹಾಗೂ ನಾವು ಕೆಲಸ ಮಾಡುವ ಕಡೆಗಳಲ್ಲಿ ನಮ್ಮ ಸಹೋದ್ಯೋಗಿಗಳಿಂದ ಕೆಲವೊಮ್ಮೆ ಕಿರಿಕಿರಿ ಅನುಭವಿಸುವುದು ಇದೆ.

How To Deal With Jealous Colleagues: Tips

ಕೆಲಸ ಮಾಡುವಂತಹ ವಾತಾವರಣವು ಉತ್ತಮವಾಗಿದ್ದರೆ ಆಗ ನಮ್ಮ ಉತ್ಪಾದಕತೆಯು ಹೆಚ್ಚಾಗುವುದು. ಅದೇ ನಮ್ಮ ಸಹೋದ್ಯೋಗಿಯು ಪ್ರತಿನಿತ್ಯವೂ ಕಿರುಕುಳ ನೀಡುತ್ತಲಿದ್ದರೆ ಅದರಿಂದ ನಮ್ಮಲ್ಲಿ ನಕಾರಾತ್ಮಕತೆಯು ಬೆಳೆಯುವುದು. ಕೆಲವು ಸಹೋದ್ಯೋಗಿಗಳು ನಮ್ಮ ಪ್ರಗತಿಯನ್ನು ಸಹಿಸುವುದಿಲ್ಲ ಮತ್ತು ಅಸೂಹೆ ಪಟ್ಟುಕೊಳ್ಳುವರು. ಇಂತಹ ಜನರೊಂದಿಗೆ ನಿಭಾಯಿಸಿಕೊಂಡು ಹೋಗುವುದು ತುಂಬಾ ಕಷ್ಟ.

ಅದರಲ್ಲೂ ಅವರು ಹಿರಿಯ ಸಹೋದ್ಯೋಗಿಯಾಗಿದ್ದರೆ ಆಗ ನಮ್ಮ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವರು ಮತ್ತು ಇನ್ನಿಲ್ಲದ ಸುಳ್ಳು ದೂರುಗಳನ್ನು ಕೂಡ ನೀಡಬಹುದು ಮತ್ತು ನಮ್ಮ ಮೇಲೆ ಏನಾದರೂ ಆಪಾದನೆ ಮಾಡಲು ಪ್ರಯತ್ನಿಸುತ್ತಿರಬಹುದು. ಇಂತಹ ವರ್ತನೆಯನ್ನು ಸಹಿಸಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ. ಆದರೆ ಇಲ್ಲಿ ಜಗಳವಾಡುವುದು ಕಷ್ಟವಾಗಿರುವ ಕಾರಣದಿಂದಾಗಿ ಎಲ್ಲವನ್ನು ಸಹಿಸಿಕೊಂಡು ಸಾಗಬೇಕು. ಇಂತಹ ಅಸೂಹೆ ಪಡುವ ಸಹೋದ್ಯೋಗಿಗಳನ್ನು ಹೇಗೆ ನಿಭಾಯಿಸುವುದು? ಅದನ್ನು ನೀವು ಈ ಲೇಖನ ಓದುತ್ತಾ ಕಲಿಯಬಹುದು.

ನಿಮ್ಮ ಕೆಲಸವನ್ನು ಒಳ್ಳೆಯ ರೀತಿ ಮಾಡಿ

ನಿಮ್ಮ ಕೆಲಸವನ್ನು ಒಳ್ಳೆಯ ರೀತಿ ಮಾಡಿ

ನಿಮ್ಮ ಮೇಲೆ ಅಸೂಯೆ ಪಡುವಂತಹ ವ್ಯಕ್ತಿಗೆ ನಿರಾಶೆ ಉಂಟು ಮಾಡಬೇಕಾದರೆ ಆಗ ನೀವು ಒಳ್ಳೆಯ ರೀತಿಯಲ್ಲಿ ನಿಮ್ಮ ಕೆಲಸವನ್ನು ಮಾಡಬೇಕು. ನಿಮ್ಮ ಕೆಲಸವನ್ನು ಎಲ್ಲರು ಪ್ರಶಂಸೆ ಮಾಡಬೇಕು ಮತ್ತು ನೀವು ಎಲ್ಲರ ಮನಸ್ಸನ್ನು ಗೆಲ್ಲಬೇಕು. ನಿಮ್ಮ ಮಾಲಕರು ಕೂಡ ನಿಮ್ಮ ಕೆಲಸವನ್ನು ಪ್ರಶಂಸೆ ಮಾಡುವಂತೆ ಆಗಬೇಕು. ಆಗ ನಿಮ್ಮ ಮೇಲೆ ಅಸೂಯೆ ಪಡುವವರಿಗೆ ಇನ್ನಷ್ಟು ಉರಿ ಬರಬಹುದು. ಆದರೆ ಇದರಿಂದ ನೀವು ಭೀತಿ ಪಡಬೇಕಾಗಿಲ್ಲ. ಯಾಕೆಂದರೆ ನಿಮ್ಮ ಕೆಲಸವನ್ನು ನಿಷ್ಠೆಯಿಂದ ಮಾಡಿ, ಎಲ್ಲವೂ ಸಮಯಕ್ಕೆ ಸರಿಯಾಗಿ, ಅಚ್ಚುಕಟ್ಟಾಗಿ ಇದ್ದರೆ ಆಗ ನಿಮ್ಮ ಬೆಂಬಲಕ್ಕೆ ಮಾಲಕರು ಕೂಡ ನಿಲ್ಲುವರು.

ಕಡೆಗಣನೆ

ಕಡೆಗಣನೆ

ಕಡೆಗಣನೆ ಎನ್ನುವುದು ಪ್ರೀತಿ ಹಾಗೂ ದ್ವೇಷ ಎರಡರಲ್ಲೂ ಕೆಲಸಕ್ಕೆ ಬರುವುದು. ಯಾಕೆಂದರೆ ನೀವು ಕಡೆಗಣಿಸಿದರೆ, ಆಗ ನಿಮ್ಮ ಮೇಲೆ ಅಸೂಯೆ ಪಡುವಂತಹ ಸಹೋದ್ಯೋಗಿಯು ಇನ್ನಷ್ಟು ಕುಸಿಯುವರು. ಅವರ ಸ್ವಭಾವದಿಂದ ನಮ್ಮ ಕೆಲಸದ ಮೇಲೆ ಯಾವ ರೀತಿಯ ಒತ್ತಡ ಬೀಳುತ್ತದೆ ಎಂದು ಹೇಳಿ. ಆದರೆ ಇದನ್ನು ಕೇಳಿ ಅವರಿಗೆ ತುಂಬಾ ಕೋಪ ಬರಬಹುದು. ಯಾಕೆಂದರೆ ಅಂತಹವರು ಯಾವಾಗಲೂ ಏನಾದರೂ ನಾಟಕ ಮಾಡಲು ಬಯಸುವರು ಮತ್ತು ಇಂತಹ ಸಂದರ್ಭಕ್ಕಾಗಿ ಕಾಯುತ್ತಲಿರುವರು. ಹೀಗಾಗಿ ನೀವು ಅವರನ್ನು ಕಡೆಗಣಿಸಿದರೆ ಒಳ್ಳೆಯದು.

ಎಲ್ಲವನ್ನು ದಾಖಲಿಸಿಕೊಳ್ಳಿ

ಎಲ್ಲವನ್ನು ದಾಖಲಿಸಿಕೊಳ್ಳಿ

ಪ್ರತಿಯೊಂದು ವಿಚಾರವನ್ನು ನೀವು ದಾಖಲಿಸಿಕೊಳ್ಳಿ. ವಾರಾಂತ್ಯದಲ್ಲಿ ಕೆಲಸ ಮಾಡುವುದು, ಸಮಯಕ್ಕೆ ಸರಿಯಾಗಿ ಕೆಲಸ ಪೂರೈಸುವುದು, ಹೆಚ್ಚುವರಿ ಕೆಲಸ ಮಾಡುವುದು ಇತ್ಯಾದಿ. ಯಾಕೆಂದರೆ ನಿಮ್ಮ ಮೇಲೆ ಅಸೂಯೆ ಪಡುವಂತಹ ಸಹೋದ್ಯೋಗಿಯು ನೀವು ಕೆಲಸ ಮಾಡುತ್ತಿಲ್ಲವೆಂದು ಬೇರೆಯವರ ಮುಂದೆ ತೋರಿಸಲು ಪ್ರಯತ್ನಿಸಬಹುದು. ನೀವು ಎಲ್ಲವನ್ನು ಸರಿಯಾಗಿ ಮಾಡಿದರೂ ಅವರು ಸತ್ಯವನ್ನು ತಿರುಚಲು ಪ್ರಯತ್ನಿಸುವರು. ಭಾನುವಾರ ಮತ್ತು ರಜಾ ದಿನಗಳಲ್ಲಿ ಕೆಲಸ ಮಾಡುವುದರಿಂದ ಯಾವಾಗಲೂ ತಪ್ಪಿಸಿಕೊಳ್ಳುವರು ಎಂದು ನಿಮ್ಮ ಮೇಲೆ ಆರೋಪ ಮಾಡುವರು. ಇದರಿಂದ ನೀವು ಇದರ ಬಗ್ಗೆ ದಾಖಲೆ ಇಟ್ಟುಕೊಂಡರೆ ಒಳ್ಳೆಯದು.

ಉಳಿದ ಸಹೋದ್ಯೋಗಿಗಳನ್ನು ಸ್ನೇಹಿತರನ್ನಾಗಿ ಮಾಡಿ

ಉಳಿದ ಸಹೋದ್ಯೋಗಿಗಳನ್ನು ಸ್ನೇಹಿತರನ್ನಾಗಿ ಮಾಡಿ

ನಿಮ್ಮನ್ನು ಕಚೇರಿಯಲ್ಲಿ ಏಕಾಂಗಿಯಾಗಿ ಮಾಡಿ, ಅವರ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುವರು. ಆದರೆ ನೀವು ಇದಕ್ಕೆ ಬೇರೆ ಸಹೋದ್ಯೋಗಿಗಳನ್ನು ಸ್ನೇಹಿತರನ್ನಾಗಿ ಮಾಡಿ. ಅವರನ್ನು ನಿಮ್ಮ ಪರವಾಗಿ ಇರುವಂತೆ ಮಾಡಿ. ನಿಮ್ಮ ಮೇಲೆ ಅಸೂಯೆ ಪಡುವಂತಹ ಸಹೋದ್ಯೋಗಿ ಕೂಡ ತಂಡ ಮಾಡಬಹುದು. ಆದರೆ ನೀವು ಬೇರೆ ಒಳ್ಳೆಯ ತಂಡದೊಂದಿಗೆ ಸೇರಿ. ಇಂತಹ ತಂಡವನ್ನು ಆಯ್ಕೆ ಮಾಡುವ ವೇಳೆ ನಿಮಗಿಂತ ಸ್ವಲ್ಪ ದೊಡ್ಡ ಹುದ್ದೆಯಲ್ಲಿ ಇರುವವರನ್ನು ಆಯ್ಕೆ ಮಾಡಿದರೆ ಒಳ್ಳೆಯದು.

ನಿಮ್ಮಷ್ಟಕ್ಕೆ ನೀವಿರಿ ಮತ್ತು ಸ್ವಲ್ಪ ಮಟ್ಟಿಗೆ ಕ್ಷಮಿಸಿ

ನಿಮ್ಮಷ್ಟಕ್ಕೆ ನೀವಿರಿ ಮತ್ತು ಸ್ವಲ್ಪ ಮಟ್ಟಿಗೆ ಕ್ಷಮಿಸಿ

ಕಚೇರಿಯಲ್ಲಿ ನಿಮ್ಮ ಮನೋಬಲವನ್ನು ಕುಗ್ಗಿಸುವಂತಹ ಸಹೋದ್ಯೋಗಿಯು ಇದ್ದರೆ ಅಂತಹ ಕಚೇರಿಯಲ್ಲಿ ಕೆಲಸ ಮಾಡುವುದು ಎಷ್ಟು ಕಷ್ಟ ಎಂದು ನಮಗೆ ತಿಳಿದಿದೆ. ಕೆಲವರು ಇಂತಹ ಸಂದರ್ಭದಲ್ಲಿ ಒತ್ತಡದಲ್ಲಿ ಕುಸಿದು ಹೋಗುವರು ಮತ್ತು ಅಲ್ಲಿಂದ ಬೇರೆ ಕಡೆಗೆ ಹೋಗುವರು. ಇನ್ನು ಕೆಲವರು ತುಂಬಾ ಧೈರ್ಯವಾಗಿ ಎಲ್ಲವನ್ನು ಎದುರಿಸಿ ತಮ್ಮನ್ನು ಸಾಬೀತು ಮಾಡುವರು.

ಆದರೆ ಎರಡೂ ಸಂದರ್ಭದಲ್ಲಿ ಮಾನಸಿಕವಾಗಿ ನಿಮ್ಮ ಮೇಲೆ ಒತ್ತಡ ಬೀಳುವುದು ಖಚಿತ. ನಿಮ್ಮ ಜತೆಗೆ ತುಂಬಾ ಕಠಿಣ ವ್ಯಕ್ತಿಗಳಿದ್ದರೆ ಅವರೊಂದಿಗೆ ಇರುವುದು ತುಂಬಾ ಕಷ್ಟ. ನೀವು ಗಟ್ಟಿ ಮನಸ್ಸು ಮಾಡಬೇಕು ಮತ್ತು ಕ್ಷಮೆ ಕೂಡ ನೀಡಬೇಕು. ನಿಮ್ಮಷ್ಟಕ್ಕೆ ನೀವಿದ್ದು, ಅವರು ಮಾಡುವಂತಹ ಕುತಂತ್ರಗಳನ್ನು ಕ್ಷಮಿಸುತ್ತಿರಿ. ನೀವು ತುಂಬಾ ಸಂತೋಷದಲ್ಲಿ ಇರುವಂತೆ ತೋರಿಸಿಕೊಳ್ಳಿ. ಇದು ಕೂಡ ಇಂತಹ ವಾತಾವರಣದಲ್ಲಿ ಬದುಕುವ ಒಳ್ಳೆಯ ವಿಧಾನ.

English summary

How To Deal With Jealous Colleagues: Tips

Here we are discussing about How To Deal With Jealous Colleagues: Tips. well within the office norms Such jealous colleagues need to be deal with tactfully. So here are some strategic ways to handle jealous and toxic colleagues without losing your cool.Read more.
X
Desktop Bottom Promotion