ಮದುವೆಗೂ ಮುಂಚೆ ಹೀಗೆಲ್ಲಾ ಮಾಡಬೇಡಿ, ಮುಂದೆ ತೊಂದರೆಯಾಗಬಹುದು!

Posted By: Arshad Hussain
Subscribe to Boldsky

ವಿವಾಹಕ್ಕೂ ಮುನ್ನ ಲೈಂಗಿಕ ಸಂಪರ್ಕ ಸರಿಯೋ ತಪ್ಪೋ ಎಂದು ವಾದ ಈಗ ಬೇಡ. ಈ ಬಗ್ಗೆ ಇದುವರೆಗೆ ಹಲವಾರು ಚರ್ಚೆಗಳು ಈಗಾಗಲೇ ನಡೆದಿವೆ ಹಾಗೂ ಈ ಬಗ್ಗೆ ಹೊಸತೇನನ್ನೂ ಕಲಿಯಲು ಇದರಿಂದ ಏನೂ ನೆರವಾಗಲಿಕ್ಕಿಲ್ಲ. ಮನುಷ್ಯರು ಸಂಘಜೀವಿಗಳಾಗಿದ್ದು ಪ್ರತಿಯೊಬ್ಬರಿಗೂ ಇತರರ ಸಹಕಾರ ಬೇಕೇ ಬೇಕಾಗುತ್ತದೆ ಹಾಗೂ ಆತ್ಮೀಯರೊಂದಿಗೆ ನಿಕಟರಾಗಿರುವ ಮೂಲಕ ಸಾರ್ಥಕತೆಯನ್ನೂ ಅನುಭವಿಸುತ್ತಾರೆ.

ಇವರಲ್ಲಿ ಜೀವನಸಂಗಾತಿಯಾಗುವವರೊಂದಿಗೆ ಈ ಸಂಬಂಧ ಅತ್ಯಂತ ನಿಕಟ ಹಾಗೂ ಆತ್ಮೀಯವಾಗಿರುತ್ತದೆ ಹಾಗೂ ಇವರ ನಡುವೆ ನಡೆಯುವ ಲೈಂಗಿಕ ಕ್ರಿಯೆ ಹೆಚ್ಚಿನ ನೆಮ್ಮದಿ ಹಾಗೂ ಸಂತೋಷ ನೀಡುತ್ತದೆ. ಕೆಲವರು ಹೇಗಿದ್ದರೂ ವಿವಾಹವಾಗುತ್ತಿದ್ದೇವೆ, ವಿವಾಹಕ್ಕೂ ಮುನ್ನ ಲೈಂಗಿಕ ಸಂಪರ್ಕ ಹೊಂದುವುದರಲ್ಲಿ ತಪ್ಪೇನಿಲ್ಲ ಎಂಬ ಅಭಿಪ್ರಾಯ ಹೊಂದಿದ್ದರೆ ಉಳಿದವರು ವಿವಾಹದ ಬಳಿಕವೇ ಲೈಂಗಿಕ ಕ್ರಿಯೆ ಸರಿ ಎಂಬ ಅಭಿಪ್ರಾಯ ಹೊಂದಿದ್ದಾರೆ.

ಯಾವುದೇ ನಿರ್ಣಯಕ್ಕೂ ತನ್ನದೇ ಆದ ಧನಾತ್ಮಕ ಹಾಗೂ ಋಣಾತ್ಮಕ ಅಂಶಗಳಿವೆ. ಇಂದಿನ ಲೇಖನದಲ್ಲಿ ವಿವಾಹಪೂರ್ವ ಲೈಂಗಿಕ ಸಂಬಂಧದಲ್ಲಿ ಯಾವ ನಿರ್ಣಯವನ್ನೂ ನಿರ್ಧರಿಸದೇ ಕೇವಲ ಇದರಿಂದ ಯಾವ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ನೋಡೋಣ....

ವಿವಾಹಕ್ಕೂ ಮುನ್ನ ಈ ಸಂಬಂಧವೇ ಮುರಿದು ಬೀಳಬಹುದು!

ವಿವಾಹಕ್ಕೂ ಮುನ್ನ ಈ ಸಂಬಂಧವೇ ಮುರಿದು ಬೀಳಬಹುದು!

ಲೈಂಗಿಕ ಕ್ರಿಯೆಯ ಮೂಲಕ ಯಾವುದೇ ಸಂಬಂಧ ಉಜ್ವಲಗೊಳ್ಳಬಹುದು ಅಥವಾ ಶಿಥಿಲಗೊಳ್ಳಬಹುದು. ಹೌದು, ಇದು ಮೂಲ ಪ್ರಶ್ನೆಯನ್ನೇ ಬದಲ್ಲಿಸಿಬಿಡಬಲ್ಲುದು. ಕೆಲವು ಸಂದರ್ಭಗಳಲ್ಲಿ ನಿಶ್ಚಿತಾರ್ಥ ಮುಗಿದ ನಂತರ, ವಿವಾಹದ ದಿನದವರೆಗೂ ಸಮಯ ಸಿಕ್ಕಂತೆ ಲೈಂಗಿಕ ಕ್ರಿಯೆಯಲ್ಲಿ ಒಳಗೊಳ್ಳುವ ಜೋಡಿಗಳಿದ್ದಾರೆ. ಒಂದು ವೇಳೆ ಇಬ್ಬರ ಲೈಂಗಿಕ ಬಯಕೆಗಳೂ ಪರಸ್ಪರ ಪೂರಕವಾಗಿದ್ದರೆ ಸರಿ, ಯಾವುದೇ ತೊಂದರೆಯಿಲ್ಲ, ಇದು ವಿವಾಹದ ನಂತರವೂ ಮುಂದುವರೆದು ಸುಖೀ ದಾಂಪತ್ಯದ ಜೀವನ ಸಾಗುತ್ತದೆ. ಆದರೆ ಒಂದು ವೇಳೆ ಇಬ್ಬರಲ್ಲೊಬ್ಬರಿಗೆ ತಮ್ಮ ಸಂಗಾತಿಯಿಂದ ನಿರೀಕ್ಷಿಸಿದಷ್ಟು ಫಲಿತಾಂಶ ಸಿಗದೇ ಇದ್ದರೆ? ಹೀಗಾದಾಗ ವಿವಾಹಕ್ಕೂ ಮುನ್ನ ಈ ಸಂಬಂಧವೇ ಮುರಿದು ಬೀಳುತ್ತದೆ.

"ಆ ಉದ್ದೀಪನ"ವೇ ಹೊರಟು ಹೋಗಬಹುದು

ಎಷ್ಟೋ ಜನರಲ್ಲಿ ಲೈಂಗಿಕ ಕ್ರಿಯೆ ಮುಗಿದ ತಕ್ಷಣ ತಮ್ಮ ಸಂಗಾತಿಯಲ್ಲಿ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಇವರು "ಆ ಉದ್ದೀಪನ"ವೇ ಹೊರಟು ಹೋಯಿತು ಎಂದು ಹಲಬುತ್ತಾರೆ. ಹಾಗೂ ಒಂದು ವೇಳೆ ದಿನಾಂಕ ನಿಗದಿಯಾಗಿದ್ದರೆ ಮದುವೆಯನ್ನೇ ನಿಲ್ಲಿಸಲು ತಮ್ಮ ಪ್ರಯತ್ನಗಳನ್ನು ಪ್ರಾರಂಭಿಸುತ್ತಾರೆ. ಈ ಮದುವೆಯಿಂದ ಪಾರಾಗಲು ಕಾರಣಗಳನ್ನು ಹುಡುಕತೊಡಗುತ್ತಾರೆ.

ಜೀವನವೆಲ್ಲಾ ಗೋಜಲುಮಯವಾಗುತ್ತಾ ಹೋಗಬಹುದು...

ಜೀವನವೆಲ್ಲಾ ಗೋಜಲುಮಯವಾಗುತ್ತಾ ಹೋಗಬಹುದು...

ಕೆಲವು ವ್ಯಕ್ತಿಗಳು ತಮ್ಮ ಜೀವನದಲ್ಲಿ ಎದುರಾದ ಕೆಲವು ವ್ಯಕ್ತಿಗಳ ಬಗ್ಗೆ ಅತಿ ಹೆಚ್ಚಾದ ಆಕರ್ಷಣೆಯನ್ನು ಬೆಳೆಸಿಕೊಂಡು ತಮ್ಮ ಜೀವನಸಂಗಾತಿಯಾಗುವವರು ಇವರಂತೆಯೇ ಇರಬೇಕು ಎಂದು ಕನಸು ಕಾಣುತ್ತಿರುತ್ತಾರೆ. ಈ ವ್ಯಕ್ತಿಗಳು ಅವರ ನೆರೆಹೊರೆಯವರು, ಶಾಲಾ ಸಹಪಾಠಿ, ಸ್ನೇಹಿತ/ತೆ ಅಥವಾ ಈಗಾಗಲೇ ವಿವಾಹಿತರಾದ ವ್ಯಕ್ತಿಯೂ ಆಗಿರಬಹುದು. ಈ ವ್ಯಕ್ತಿಗಳು ಮದುವೆಯಾಗುವ ವ್ಯಕ್ತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದರೆ ಮನಸ್ಸಿನಾಳದಲ್ಲಿ ಹುದುಗಿದ್ದ ಆಕರ್ಷಣೆಯನ್ನು ಇವರಿಗೆ ಅನ್ವಯಿಸಿಕೊಳ್ಳಲು ಯತ್ನಿಸುವ ಮೂಲಕ ಮುಂದಿನ ಜೀವನವೆಲ್ಲಾ ಗೋಜಲುಮಯವಾಗುತ್ತಾ ಹೋಗುತ್ತದೆ.

ಗರ್ಭಾವಸ್ಥೆ ಅಥವಾ ಲೈಂಗಿಕ ರೋಗ ಬರಬಹುದು...

ಗರ್ಭಾವಸ್ಥೆ ಅಥವಾ ಲೈಂಗಿಕ ರೋಗ ಬರಬಹುದು...

ಈ ಸಂಬಂಧದ ಮೂಲಕ ಎದುರಾಗುವ ಗರ್ಭಾವಸ್ಥೆ ಅಥವಾ ಲೈಂಗಿಕ ರೋಗಗಳನ್ನೂ ಅಲ್ಲಗಳೆಯುವಂತಿಲ್ಲ.

ಜಗಳಗಳು ಪ್ರಾರಂಭವಾಗಬಹುದು!

ಜಗಳಗಳು ಪ್ರಾರಂಭವಾಗಬಹುದು!

ಈ ಸಂಬಂಧ ವ್ಯಕ್ತಿಯನ್ನು ಅತಿಯಾದ ಗೊಂದಲಕ್ಕೆ ನೂಕಬಹುದು ಅಥವಾ ದ್ವಂದ್ವದಲ್ಲಿ ಸಿಲುಕಿಸಬಹುದು. ಉದಾಹರಣೆಗೆ ಓರ್ವ ವ್ಯಕ್ತಿ ವಿವಾಹವಾಗುವ ಬಯಸುವ ವ್ಯಕ್ತಿಯ ಬಗ್ಗೆ ಅರಿಯುತ್ತಾ ಹೋದಂತೆ ಅವರ ಸ್ವಭಾವಗಳು ತನಗೆ ಕೊಂಚವೂ ಇಷ್ಟವಿಲ್ಲದಂತೆಯೇ ತೋರಬಹುದು ಆದರೆ ಇದಕ್ಕೆ ವ್ಯತಿರಿಕ್ತವಾಗಿ ಆ ವ್ಯಕ್ತಿಯೊಂದಿಗಿನ ಲೈಂಗಿಕ ಸಂಪರ್ಕ ಅತೀವ ಅಪ್ಯಾಯಮಾನವಾಗಿದ್ದರೆ? ಈಗ ದ್ವಂದ್ವ ಎದುರಾಗುತ್ತದೆ. ವ್ಯಕ್ತಿಯ ನಡತೆ ಇಷ್ಟವಿಲ್ಲ, ಆದರೆ ಸಂಬಂಧ ಮಾತ್ರ ಇಷ್ಟವಾಗುತ್ತದೆ, ಈ ವ್ಯಕ್ತಿಯನ್ನು ಮದುವೆಯಾದರೆ ಮುಂದಿನ ದಿನಗಳಲ್ಲಿ ಬದುಕು ನರಕವಾಗಬಹುದು, ಮದುವೆಯಾಗದೇ ಇದ್ದರೆ ಈ ಪರಿಯ ಲೈಂಗಿಕ ಸುಖ ಮತ್ತೆ ಸಿಗುತ್ತದೋ ಇಲ್ಲವೋ ಎಂಬ ದ್ವಂದ್ವ , ಗೊಂದಲಕ್ಕೆ ಬೀಳಬಹುದು. ಅಷ್ಟಕ್ಕೂ ಮದುವೆಯಾಗಿಯೇ ಹೋದರೆ ಶೀಘ್ರವೇ ಜಗಳಗಳು ಪ್ರಾರಂಭವಾಗುವುದರಲ್ಲಿ ಅನುಮಾನವೇ ಇಲ್ಲ.

ಮನಸ್ಸು ಬದಲಾಗಬಹುದು...

ಮನಸ್ಸು ಬದಲಾಗಬಹುದು...

ಕೆಲವು ಜೋಡಿಗಳು ಮದುವೆಗೂ ಮುನ್ನ ಕೆಲವಾರು ವರ್ಷಗಳವರೆಗೆ ಜೊತೆಯಾಗಿರುತ್ತಾರೆ. ಕೆಲವರಂತೂ ಮದುವೆಗೂ ಮುನ್ನ ಲೈಂಗಿಕ ಸಂಬಂಧವನ್ನೂ ಬೆಳೆಸುತ್ತಾರೆ. ಇವರಿಗೆ ಕೆಲವೇ ದಿನಗಳಲ್ಲಿ ಲೈಂಗಿಕ ಸಂಬಂಧ ಬೇಸರ ತರಿಸುತ್ತದೆ. ಇವರಿಗೆ ತಮ್ಮ ಸಂಗಾತಿಗಿಂತಲೂ ಉತ್ತಮವಾಗಿ ಕಾಣುವ ಇನ್ನೋರ್ವ ವ್ಯಕ್ತಿ ದೊರಕಿದರೆ ಇವರು ತಮ್ಮ ಮನಸ್ಸನ್ನು ಬದಲಾಯಿಸಿ ಕೊಳ್ಳಬಹುದು ಹಾಗೂ ಮದುವೆಯನ್ನೇ ರದ್ದುಪಡಿಸಬಹುದು.

English summary

What are the effects of sex before marriage?

Let us not get into the debate of the rights or the wrongs of sex before marriage. Arguments may or may not serve the purpose or help us understand anything new.