For Quick Alerts
ALLOW NOTIFICATIONS  
For Daily Alerts

ರಹಸ್ಯವಾಗಿ ಹುಟ್ಟುವ ಪ್ರೀತಿ, ಕೊನೆಯವರೆಗೂ ಉಳಿಯುವುದಿಲ್ಲ!

|

ನೀವು ಒಂದು ಸಂಬಂಧದಲ್ಲಿರುವಾಗ ಕಚೇರಿಯಲ್ಲೋ ಅಥವಾ ಸ್ನೇಹಿತರ ವಲಯದಲ್ಲೋ ಹೀಗೆ ಎಲ್ಲೋ ಒಂದು ಕಡೆ ನಿಮಗೆ ಬೇರೊಬ್ಬರೊಂದಿಗೆ ಪ್ರೀತಿಯುಂಟಾಗುವುದು. ಇಂತಹ ಪ್ರೀತಿಯನ್ನು ನೀವು ಆದಷ್ಟು ಮಟ್ಟಿಗೆ ರಹಸ್ಯವಾಗಿಡಲು ಪ್ರಯತ್ನಿಸುವಿರಿ. ಆದರೆ ಇಂತಹ ಸಂಬಂಧಗಳು ಎಷ್ಟು ದಿನ ಉಳಿಯುವುದು ಎನ್ನುವುದು ಮಾತ್ರ ಪ್ರಶ್ನಾರ್ಹ ವಿಚಾರ. ಯಾಕೆಂದರೆ ಇಂತಹ ಸಂಬಂಧಗಳಿಗೆ ಬಾಳಿಕೆ ಎನ್ನುವುದು ಕಡಿಮೆ. ಒಂದಲ್ಲಾ ಒಂದು ದಿನ ಇದರ ರಹಸ್ಯ ಸ್ಫೋಟವಾಗುವುದು. ಆದರೆ ಇಂತಹ ಸಂಬಂಧದಿಂದ ಕೆಲವು ಮಂದಿಗೆ ಸ್ವಲ್ಪ ಮಟ್ಟಿಗೆ ಶಾಂತಿ ಹಾಗೂ ಪ್ರೀತಿ ಸಿಕ್ಕಿದರೆ, ಇನ್ನು ಕೆಲವರು ಯಾವಾಗಲೂ ಒತ್ತಡದಲ್ಲೇ ಕಳೆಯುವರು. ಕೊನೆಯಲ್ಲಿ ಇಷ್ಟು ಸಮಸ್ಯೆಗಳನ್ನು ಎದುರಿಸಿ, ಒತ್ತಡದಲ್ಲಿ ಯಾಕೆ ಮುಳುಗಿರಬೇಕು ಎನ್ನುವ ಪ್ರಶ್ನೆ ಖಂಡಿತವಾಗಿಯೂ ನಿಮ್ಮನ್ನು ಕಾಡುವುದು. ರಹಸ್ಯ ಸಂಬಂಧಗಳು ಯಾವತ್ತೂ ಯಶಸ್ವಿಯಾಗಲ್ಲ. ಈ ಲೇಖನದಲ್ಲಿ ರಹಸ್ಯ ಸಂಬಂಧದ ಬಗ್ಗೆ ನಿಮಗೆ ತಿಳಿಸಿಕೊಡಲಿದ್ದೇವೆ. ಜನರು ರಹಸ್ಯ ಸಂಬಂಧದಲ್ಲಿ ತೊಡಗುವುದು ಯಾಕೆ?

relationship

1. ಅವರು ವಿಚ್ಛೇದನ ಪಡೆಯುತ್ತಿದ್ದರೆ...

ಹೆಚ್ಚುವರಿ ಸಮಸ್ಯೆ ಆಗದಂತೆ ಇರಲು ಸಂಬಂಧವನ್ನು ರಹಸ್ಯವಾಗಿಡುವರು. ವಿಚ್ಛೇದನ ಪಡೆಯುವಂತಹ ಸಮಯದಲ್ಲಿ ಆತ/ ಆಕೆ ಹೊಸ ಸಂಬಂಧದಲ್ಲಿ ತೊಡಗಿಕೊಳ್ಳುವರು. ಇದನ್ನು ಅವರು ಸುರಕ್ಷತೆಗಾಗಿ ರಹಸ್ಯವಾಗಿಡುವರು. ಕೆಲವೊಂದು ಸಲ ವಿಚ್ಛೇದನ ಪಡೆದ ಕೂಡಲೇ ಹೊಸ ಸಂಬಂಧವು ಬೆಳೆಯುವುದು. ಕೆಲವರು ಇದು ಹೊಸ ಭಾಂದವ್ಯವೆಂದು ಭಾವಿಸುವರು. ನೀವು ಹಿಂದಿನ ತಪ್ಪಿನಿಂದ ಪಾಠ ಕಲಿತುಕೊಂಡಿದ್ದೀರಿ ಮತ್ತು ಹೊಸ ಸಂಬಂಧದ ಬಗ್ಗೆ ತುಂಬಾ ಎಚ್ಚರಿಕೆ ವಹಿಸಿ, ತಿಳಿಯಿರಿ. ಮತ್ತೆ ಅದೇ ರೀತಿಯ ತಪ್ಪನ್ನು ಪುನರಾವರ್ತಿಸಬೇಡಿ. ಇದರಿಂದ ನಿಮ್ಮ ರಹಸ್ಯ ಸಂಬಂಧವು ದೀರ್ಘಕಾಲ ಉಳಿಯುವುದು.

2. ಸ್ನೇಹಿತೆ/ಸ್ನೇಹಿತನ ಮಾಜಿಯೊಂದಿಗೆ ಡೇಟಿಂಗ್

ನಿಮ್ಮ ಸ್ನೇಹಿತೆ/ ಸ್ನೇಹಿತ ಮಾಜಿ ಪ್ರೇಯಸಿ/ ಪ್ರಿಯತಮನ ಜತೆಗೆ ಡೇಟಿಂಗ್ ಮಾಡಲು ಆರಂಭಿಸಿದ್ದೀರಿ. ಇದನ್ನು ಸ್ನೇಹಿತೆ/ಸ್ನೇಹಿತನಿಗೆ ಹೇಳಲು ನಿಮಗೆ ಧೈರ್ಯವಿಲ್ಲ ಮತ್ತು ಇದನ್ನು ನೀವು ಎಲ್ಲಾ ರೀತಿಯಿಂದಲೂ ಸ್ನೇಹಿತ/ಸ್ನೇಹಿತೆಯಿಂದ ಗೌಪ್ಯವಾಗಿಡಲು ಬಯಸುವಿರಿ. ಇಂತಹ ಸಂಬಂಧಗಳು ಹೆಚ್ಚು ಸಮಯ ಉಳಿಯುವುದಿಲ್ಲ. ಕೆಲವೊಂದು ಸಲ ಪಶ್ಚಾತಾಪವು ಸಂಬಂಧವನ್ನು ಕೊಂದು ಹಾಕುವುದು. ಇದು ತುಂಬಾ ಕಡೆ ನಡೆಯುವುದು. ಜೋಡಿಯು ಸಂಬಂಧವನ್ನು ರಹಸ್ಯವಾಗಿಡಲು ಬಯಸುವರು. ಯಾಕೆಂದರೆ ಸ್ನೇಹಿತರ ಮಧ್ಯೆ ಜಗಳವಾಗುವುದು ಅವರಿಗೆ ಇಷ್ಟವಿರಲ್ಲ. ನೀವು ಹೀಗೆ ಮಾಡಿದ್ದರೆ ಆಗ ನೀವು ಸ್ನೇಹದ ಬಗ್ಗೆ ಎಚ್ಚರಿಕೆ ವಹಿಸಿಕೊಳ್ಳಿ. ಇಂತಹ ಸಂಬಂಧಗಳು ಅಂತ್ಯದಲ್ಲಿ ಕೆಲಸ ಮಾಡುವುದಿಲ್ಲ.

3. ಹೆತ್ತವರಿಂದ ಸಂಬಂಧವನ್ನು ದೂರವಿಡುವುದು

ನಿಮ್ಮ ಸಂಬಂಧದ ಬಗ್ಗೆ ಹೆತ್ತವರಿಗೆ ತಿಳಿಯಬಾರದು ಎಂದು ನೀವು ಬಯಸುವಿರಿ. ಇದರಿಂದ ನೀವು ಸಂಬಂಧವನ್ನು ರಹಸ್ಯವಾಗಿಡುವಿರಿ. ನಮ್ಮ ಆಯ್ಕೆಯ ಸಂಗಾತಿಯು ಅವರ ಗುಣಮಟ್ಟಕ್ಕೆ ಸರಿಹೊಂದದೇ ಇದ್ದರೆ ಆಗ ಯಾವ ರೀತಿ ಪ್ರತಿಕ್ರಿಯೆ ನೀಡಬಹುದು ಎಂದು ನೀವು ಯೋಚನೆ ಮಾಡುವಿರಿ. ಇದರಿಂದ ಒತ್ತಡ ಕಾಡುವುದು ಮತ್ತು ಸಂಬಂಧವನ್ನು ರಹಸ್ಯವಾಗಿಡುವಂತೆ ಮಾಡುವುದು. ಇಂತಹ ಸಂಬಂಧಗಳು ಹೆಚ್ಚಾಗಿ ಪ್ರೇಮಿಗಳ ಪರವಾಗಿ ಕೆಲಸ ಮಾಡುವುದು.

4. ಬೇರೆಯವರು ಕೂಡ ನಿಮ್ಮ ನೋಟದಲ್ಲಿದ್ದಾರೆ

ಇಂತಹ ಪರಿಸ್ಥಿತಿಯಲ್ಲಿ ಒಬ್ಬ ಸಂಗಾತಿಯು ಮದುವೆಯಾಗಿರಬಹುದು ಅಥವಾ ಬೇರೆ ಯಾವುದೇ ಸಂಬಂಧ ಅಥವಾ ಈ ಕ್ಷಣದಲ್ಲಿ ಆತನಿಗೆ ಸಂಬಂಧದಲ್ಲಿ ಬದ್ಧತೆ ತೋರಿಸಲು ಇಷ್ಟವಿಲ್ಲದೆ ಇರಬಹುದು. ಇಂತಹ ಸಮಯದಲ್ಲಿ ಜನರು ಸಂಬಂಧವನ್ನು ರಹಸ್ಯವಾಗಿಡುವರು. ಸಂಬಂಧವು ತಿಳಿದರೆ ಆಗ ಮದುವೆಯ ಮೇಲೆ ಪರಿಣಾಮ ಬೀರಬಹುದು ಅಥವಾ ಪ್ರೇಮಿಗಳ ಮೇಲೆ ಕಲಹ ಉಂಟಾಗಬಹುದು. ಇಂತಹ ಸಂಬಂಧಗಳು ಸಂಗಾತಿಗಳ ಪರವಾಗಿ ಕೆಲಸ ಮಾಡುವುದಿಲ್ಲ.

5. ಧಾರ್ಮಿಕ ಒತ್ತಡ

ಹೆಚ್ಚಾಗಿ ಜೋಡಿಯು ತಮ್ಮ ಸಂಬಂಧವನ್ನು ರಹಸ್ಯವಾಗಿಡುವ ಕಾರಣವೆಂದರೆ ಅದು ಧರ್ಮ. ಎರಡು ವಿಭಿನ್ನ ಧರ್ಮದಿಂದ ಬಂದಿರುವ ಪ್ರೇಮಿಗಳು ಇಂತಹ ಸಂಬಂಧವನ್ನು ತುಂಬಾ ಗೌಪ್ಯವಾಗಿಡಲು ಬಯಸುವರು. ಪ್ರತ್ಯೇಕ ಧರ್ಮದ ಪ್ರೇಮಿಗಳು ಯಾವಾಗಲೂ ಧರ್ಮದ ಒತ್ತಡದಲ್ಲಿ ಸಿಲುಕಿರುವರು. ಇದನ್ನು ಸರಿಯಾಗಿ ನಿಭಾಯಿಸಿದರೆ ಆಗ ಇಂತಹ ಸಂಬಂಧವು ಸಂಗಾತಿಗಳ ಪರವಾಗಿ ಕೆಲಸ ಮಾಡುವುದು. ಸವಾಲುಗಳನ್ನು ಇಬ್ಬರು ಸರಿಯಾಗಿ ನಿಭಾಯಿಸಿದರೆ ಆಗ ಧರ್ಮದ ಒತ್ತಡವನ್ನು ಕಡಿಮೆ ಮಾಡಬಹುದು.

ಪ್ರೇಮಿಗಳು ಸಂಬಂಧವನ್ನು ರಹಸ್ಯವಾಗಿಡಲು ಐದು ಕಾರಣಗಳನ್ನು ಮೇಲೆ ನೀಡಲಾಗಿದೆ. ಸಂಬಂಧ ರಹಸ್ಯವಾಗಿಡಲು ಇದು ಕಾರಣಗಳು. ಆದರೆ ಎಲ್ಲವನ್ನು ಸಮಾನವಾಗಿ ಸ್ವೀಕರಿಸುವಂತಿಲ್ಲ. ನೀವು ಯಾವುದೇ ರಹಸ್ಯ ಸಂಬಂಧದಲ್ಲಿ ಇದ್ದರೆ ಆಗ ಇದರಿಂದ ನಿಮಗೆ ನಿಜವಾಗಿಯೂ ಸಂತೋಷ ಸಿಗುತ್ತಿದೆಯಾ ಅಥವಾ ಇಲ್ಲವಾ ಎನ್ನುವುದನ್ನು ಮೊದಲು ತೀರ್ಮಾನಿಸಿಕೊಳ್ಳಿ. ನಿಮ್ಮ ಪರಿಸ್ಥಿತಿಯನ್ನು ನೋಡಿಕೊಂಡು ಈ ಸಂಬಂಧವು ನಿಜವಾಗಿಯೂ ಬೇಕಾಗಿದೆಯಾ ಎಂದು ಪ್ರಾಮಾಣಿಕವಾಗಿ ಯೋಚಿಸಿ. ಇದರಿಂದ ರಹಸ್ಯ ಸಂಬಂಧದ ಬಗ್ಗೆ ನಿಮಗೆ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗಬಹುದು.

English summary

Secret Relationships Work In Favour Of The Ones Involved

Secret relationships happen for many reasons. But do secret relationships work in favour of the ones involved? Some have advantages, like creating a unique bond when the love is forbidden of its rights and the rest face the reality of struggling to be successful and be stress-free. Constantly hiding your secret love, kind of gets exhausting and in the end, you start to wonder if it is really worth the trouble. You get second thoughts in mind and you cannot do anything about it.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more