Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
ಒನ್ ಸೈಡ್ ಲವ್ ಸಮಸ್ಯೆಯಲ್ಲಿ ಸಿಲುಕಿದ್ದೀರಾ? ಹಾಗಾದರೆ ಹೀಗೆ ಮಾಡಿ ನೋಡಿ
ನಮ್ಮಲ್ಲಿ ಹೆಚ್ಚಿನವರು ಒಮ್ಮುಖ ಪ್ರೇಮದಲ್ಲಿ ಸಿಲುಕಿದ್ದು ಇದರ ವಿರಹವೇದನೆಯನ್ನು ಅನುಭವಿಸಿರುವವರೇ ಆಗಿದ್ದು ಕೆಲವರು ಮಾತ್ರವೇ ಸ್ಪಷ್ಟವಾಗಿ ಒಪ್ಪಿಕೊಳ್ಳುತ್ತಾರೆ. ನಿಮ್ಮ ಜೀವನಸಂಗಾತಿಯಾಗಬಲ್ಲ ಎಲ್ಲಾ ಅರ್ಹತೆ, ಗುಣ ಮತ್ತು ಲಕ್ಷಣಗಳಿರುವ ಯುವತಿ ನಿಮ್ಮ ದೃಷ್ಟಿಯಲ್ಲಿದ್ದರೂ ಆಕೆಗೆ ಈ ಬಗ್ಗೆ ಅರಿವಿರದೇ ಇರಬಹುದು. ಆಕೆಗೆ ನಿಮ್ಮ ಭಾವನೆಗಳನ್ನು ತಲುಪಿಸಲು ನಿಮಗೆ ಅಡ್ಡಿಯಾಗಿದ್ದಾದರೂ ಏನು? ಇದಕ್ಕೆ ಕೆಲವಾರು ಕಾರಣಗಳಿರಬಹುದು.

ಆಕೆ ಬೇರೊಬ್ಬರಲ್ಲಿ ಅನುರಕ್ತೆಯಾಗಿದ್ದರಬಹುದು, ತನಗೆ ಪ್ರೇಮದಲ್ಲಿ ಸಿಲುಕಲು ಸಮಯ ಅಥವಾ ಆಸಕ್ತಿ ಇಲ್ಲವೆಂದು ಅಥವಾ ತನ್ನ ಆದ್ಯತೆಗಳೇ ಬೇರೆ ಇವೆ ಎಂದು ಆಕೆ ನಿರಾಕರಿಸಿರಬಹುದು. ಕೆಲವು ಯುವತಿಯರು ನಿಮ್ಮೊಂದಿಗೆ ಆತ್ಮೀಯರಾಗಿದ್ದರೂ ಇದರಲ್ಲಿ ಕೇವಲ ಸ್ನೇಹಭಾವನೆಯನ್ನು ಮಾತ್ರವೇ ಹೊಂದಿರಬಹುದು. ಕೆಲವು ನಿಮಗೆ ಸಂಬಂಧಿಸಿವೆ ಎಂದು ಅನ್ನಿಸುತ್ತಿದೆಯಲ್ಲವೇ? ಆದರೆ ನೀವು ಆಕೆಯ ಬಗ್ಗೆ ಹೊಂದಿರುವ ಪ್ರೇಮ ನಿಮ್ಮ ನಿದ್ದೆ, ನೆಮ್ಮದಿಯನ್ನು ಹಾಳು ಮಾಡಿರುವುದಂತೂ ಖಂಡಿತ. ಒಂದು ವೇಳೆ ಹೌದು ಎಂದಾದರೆ ನೀವು ಒಮ್ಮುಖ ಪ್ರೇಮಕಥೆಯೊಂದರ ನಾಯಕನಾಗಿದ್ದೀರಿ ಹಾಗೂ ಈ ಪರಿಸ್ಥಿತಿಯಿಂದ ಹೊರಬರಲು ತಜ್ಞರು ನೀಡುವ ಸಲಹೆಯನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ....

ಮೊದಲು ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳಿ, ಆಕೆಯ ಉತ್ತರ 'ಇಲ್ಲ' ಎಂದಾದರೂ ಸರಿ, ಸ್ವೀಕರಿಸಲು ಸಿದ್ಧರಾಗಿ
ನೀವು ಆಕೆಯಲ್ಲಿ ಅನುರಕ್ತನಾಗಿದ್ದರೂ ಆಕೆ ನಿಮ್ಮಲ್ಲಿ ಅನುರಕ್ತಳಾಗಿಲ್ಲ ಎಂಬುದನ್ನು ನೀವು ಈಗಾಗಲೇ ಗ್ರಹಿಸಿರಬಹುದು. ಆದರೆ ಆಕೆಗೆ ನಿಮ್ಮ ಪ್ರೇಮವನ್ನು ನಿವೇದಿಸಿಕೊಳ್ಳದೇ ಇದ್ದರೆ ಆಕೆಗೆ ನಿಮ್ಮ ಅನಿಸಿಕೆಗಳು ಗೊತ್ತಾಗುವುದಾದರೂ ಹೇಗೆ? ಕನಿಷ್ಟ ಪಕ್ಷ, ಜೀವಮಾನದಲ್ಲೊಂದು ಬಾರಿಯಾದರೂ ಸರಿ, ನಿಮ್ಮ ಹೃದಯದ ಮಾತನ್ನು ಕೇಳದೇ, ವಾಸ್ತವಿಕವಾಗಿ ನಿಮ್ಮ ಮೆದುಳಿನ ಭಾವನೆಯನ್ನು ಪರಿಗಣಿಸಿ. ನಿಮ್ಮ ಭಾವನೆಯನ್ನು ಆಕೆಯಲ್ಲಿ ನೇರವಾಗಿ, ಸ್ಪಷ್ಟಮಾತುಗಳಲ್ಲಿ ನಿವೇದಿಸಿಕೊಳ್ಳಿ. ಅತಿ ಹೆಚ್ಚೆಂದರೆ ಆಕೆ ನಿಮ್ಮನ್ನು ನಿರಾಕರಿಸಬಹುದು, ಈ ನಿರಾಕರಣೆಗೆ ಸಿದ್ದರಾಗಿರಿ. ಆಕೆಯ ಉತ್ತರವೇನೇ ಇದ್ದರೂ ಸರಿ, ಇದರಿಂದ ನೀವು ತೊಳಲಾಡುವ ದ್ವಂದ್ವದಿಂದಲಾದರೂ ಹೊರಬರಬಹುದು. ನಂಬಿದರೆ ನಂಬಿ, ಬಿಟ್ಟರೆ ಬಿಡಿ, ಈ ನಿವೇದನೆಯ ಬಳಿಕ, ಆಕೆಯ ಉತ್ತರವೇನೇ ಆದರೂ ಸರಿ, ನಿಮ್ಮ ಮುಂದಿನ ಹೆಜ್ಜೆ ಇಡಲು ಸುಲಭಸಾಧ್ಯವಾಗುತ್ತದೆ.

ಆಕೆ ನಿಮ್ಮನ್ನು ಕೇವಲ ಸ್ನೇಹಿತನನ್ನಾಗಿ ಮಾತ್ರವೇ ಪರಿಗಣಿಸಲಿಚ್ಛಿಸಿದರೆ, ಸಾಧ್ಯವಾದರೆ ಮಾತ್ರವೇ ಒಪ್ಪಿಕೊಳ್ಳಿ.
ಪ್ರೇಮಿಯಾಗಬಸಿದ ವ್ಯಕ್ತಿಯನ್ನು ಕೇವಲ ಸ್ನೇಹಿತೆಯಾಗಿ ಒಪ್ಪಿಕೊಳ್ಳಲು ಹೆಚ್ಚಿನವರಿಗೆ ಸಾಧ್ಯವಾಗದ ಮಾತು. ಒಂದು ವೇಳೆ ನಿಮ್ಮ ಮನೋದಾರ್ಢ್ಯತೆ ಬಲವಾಗಿದ್ದು ಆಕೆಯನ್ನು ಕೇವಲ ಓರ್ವ ಸ್ನೇಹಿತೆಯಾಗಿ ಒಪ್ಪಿಕೊಳ್ಳುವ ಹಾಗಿದ್ದರೆ ಮಾತ್ರವೇ ಆಕೆಯ ಸ್ನೇಹವನ್ನು ಒಪ್ಪಿಕೊಳ್ಳಿ. ಬದಲಿಗೆ ಕೇವಲ ಆಕೆಯಲ್ಲಿ ಒಲವುಳ್ಳ ಗೊಂಬೆಯಂತೆ ಆಕೆಯ ಸುತ್ತಮುತ್ತ ಓಡಾಡಿಕೊಂಡಿರುವ ಬದಲು ಧೈರ್ಯವಾಗಿ ಆಕೆಯಿಂದ ದೂರವಾಗಿ. ಜೀವನದಲ್ಲಿ ಸಾಧಿಸಬಹುದಾಗಿರುವುದು ಇನ್ನೂ ಬಹಳಷ್ಟಿದೆ ಎಂಬ ವಾಸ್ತವವನ್ನು ಮನಗಂಡು ಸೂಕ್ತ ನಿರ್ಧಾರ ಕೈಗೊಳ್ಳಿ.

ಆಕೆಗೆ ತಮ್ಮ ಮಿತಿಗಳನ್ನು ತಿಳಿದುಕೊಳ್ಳುವಂತೆ ಮಾಡಿ
ನಿಮ್ಮ ಮಿತಿಗಳನ್ನು ಅರಿತುಕೊಳ್ಳುವುದಕ್ಕಿಂತ ಮುಖ್ಯವಾದುದು ಇನ್ನೇನಿದೆ? ಇದೇ ರೀತಿಯಾಗಿ ಎದುರಿನ ವ್ಯಕ್ತಿಯೂ ತನ್ನ ಮಿತಿಗಳನ್ನು ಅರಿತುಕೊಂಡಿರುವುದು ಅವಶ್ಯವಾಗಿದೆ. ಆಕೆಯ ಅಗತ್ಯತೆಗಳಿಗೆ ನಿಮ್ಮ ಹೆಗಲು ದಿನದ ಇಪ್ಪತ್ತನಾಲ್ಕೂ ಘಂಟೆಗಳು ಲಭ್ಯವಿಲ್ಲವೆಂದು ಸ್ಪಷ್ಟವಾಗಿ ತಿಳಿಸಿ. ಒಂದು ವೇಳೆ ಆಕೆಗೆ ತನ್ನ ಪ್ರಲಾಪವನ್ನು ನಿವೇದಿಸಿಕೊಳ್ಳಲು ವ್ಯಕ್ತಿಯೊಬ್ಬರು ಬೇಕಾಗಿದ್ದರೆ ಇದಕ್ಕೆ ಕೇವಲ ನಿಮ್ಮ ಹೆಗಲು ಮಾತ್ರವೇ ಬೇಕೇ? ಆಕೆಯೇ ಬೇಕಿದ್ದರೆ ಇನ್ನೊಬ್ಬರ ನೆರವು ಪಡೆದುಕೊಳ್ಳಲಿ. ಹಾಗಾಗಿ, ನಿಮ್ಮ ಮಿತಿಗಳನ್ನು ನೀವೇ ವಿಶ್ವಾಸಾತ್ಮಕವಾಗಿ ಹೇರಿಕೊಳ್ಳಿರಿ ಹಾಗೂ ಈ ಮಿತಿಗಳನ್ನು ಮೀರದಂತೆ ಕಟ್ಟುಪಾಡುಗಳನ್ನು ನಿರ್ಧರಿಸಿಕೊಳ್ಳಿ.

ನಿಮ್ಮನ್ನು ನೀವೇ ವ್ಯಸ್ತರಾಗಿಸಿಕೊಳ್ಳಿ
ಖಾಲಿ ಮನಸ್ಸು ಸೈತಾನನ ಕಾರ್ಯಾಗಾರ ಎಂಬ ನಾಣ್ಣುಣಿಯೊಂದಿದೆ. ಯಾವಾಗ ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಹೋಗುತ್ತದೆಯೋ ಆಗ ಯಾವುದಾದರೊಂದು ಕೆಲಸದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಳ್ಳುವುದು ಉತ್ತಮ ಪರಿಹಾರವಾಗಿದೆ. ಈ ಮೂಲಕ ನಿಮಗೆ ಆಕೆಯ ಬಗ್ಗೆ ಯೋಚಿಸಲು ಸಮಯವೇ ಇಲ್ಲವಾಗುತ್ತದೆ. ಸಾಧ್ಯವಾದರೆ ನಿಮ್ಮ ಕೆಲಸದಿಂದ ಕೆಲವು ದಿನಗಳ ರಜೆ ಪಡೆದು ನೀವು ಇಚ್ಛಿಸಿದ ಪ್ರದೇಶವೊಂದಕ್ಕೆ ಪ್ರವಾಸ ಹೋಗಿ ಅಥವಾ ನೀವು ಇಷ್ಟಪಡುವ ಹವ್ಯಾಸವೊಂದನ್ನು ಪ್ರಾರಂಭಿಸಿ, ಒಟ್ಟಾರೆಯಾಗಿ ನೀವು ವ್ಯಸ್ತರಾಗಿದ್ದು ನಿಮ್ಮ ಮನಸ್ಸು ಪರಿಪೂರ್ಣವಾಗಿ ಒಳಗೊಳ್ಳುವ, ನಿಮಗೆ ಸಂತೋಷ ಕೊಡುವ ಕೆಲಸ ಮಾಡಿ.

ನಿಮಗೆ ಸೂಕ್ತರಾದ ವ್ಯಕ್ತಿಯನ್ನು ಹುಡುಕಿ
ಆಕೆಯನ್ನು ಪಡೆಯಲು ನಿಮ್ಮ ಪ್ರಯತ್ನಗಳು ಕೈಗೂಡಲಿಲ್ಲವೆಂದರೆ ನಿರಾಶರಾಗದಿರಿ, ಬದಲಿಗೆ ನಿಮ್ಮ ಪ್ರಯತ್ನ ಇನ್ನೊಂದು ಮಗ್ಗುಲಿಗೆ ಹರಿಯಲಿ. ಈ ಜಗತ್ತಿನಲ್ಲಿ ನಿಮಗೆ ಸೂಕ್ತವಾದ ವ್ಯಕ್ತಿಯೊಬ್ಬರು ಇದ್ದೇ ಇರುತ್ತಾರೆ ಹಾಗೂ ನೀವು ತಪ್ಪು ಬಾಗಿಲನ್ನು ತಟ್ಟುತ್ತಿದ್ದೀರಿ ಎಂಬುದನ್ನು ಅರಿತುಕೊಳ್ಳಿ. ಹುಸಿನಂಬಿಕೆಯ ಹಿಂದೆ ಬೀಳದೇ ವಾಸ್ತವವನ್ನು ಒಪ್ಪಿಕೊಳ್ಳಲು ತಯಾರಾಗಿ. ಹೊಸ ವ್ಯಕ್ತಿಗಳನ್ನು ಭೇಟಿಯಾಗಿ, ಹೊಸ ಸ್ನೇಹಿತರನ್ನು ಪಡೆಯಿರಿ ಹಾಗೂ ಹೊಸ ಸಂಬಂಧಗಳತ್ತ ಒಲವು ತೋರಿ.

ನಿಮ್ಮ ಸಂತೋಷವನ್ನು ಬೇರೊಬ್ಬರ ಕೈಯಲ್ಲಿರಿಸದಿರಿ
ನೀವು ಓರ್ವ ವ್ಯಕ್ತಿಯೊಂದಿಗೆ ಕೇವಲ ಸ್ನೇಹದಿಂದಿದ್ದೀರೋ ಅಥವಾ ಪ್ರೇಮದಲ್ಲಿದ್ದೀರೋ ಅದು ಬೇರೆ ಮಾತು, ಆದರೆ, ಈ ವಿಷಯ ನೆನಪಿರಲಿ, ಎಂದಿಗೂ ನಿಮ್ಮ ಸಂತೋಷವನ್ನು ಬೇರೆಯ ವ್ಯಕ್ತಿಯ ಕೈಯಲ್ಲಿರಿಸದಿರಿ. ತಕ್ಷಣವೇ ನಿಮ್ಮ ನಿಷ್ಫಲ ಪ್ರೇಮದ ಹಿಂದೆ ಬೀಳುವುದನ್ನು ನಿಲ್ಲಿಸಿ ಭವಿಷ್ಯವನ್ನು ಹಾಳು ಮಾಡಿಕೊಳ್ಳದಿರಿ. ಮೊದಲಿಗೆ ನಿಮ್ಮನ್ನು ನೀವೇ ಪ್ರೀತಿಸಿಕೊಳ್ಳುವುದನ್ನು ಕಲಿಯಿರಿ ಹಾಗೂ ಜಾಣತನದಿಂದ ಪರಿಸ್ಥಿತಿಯನ್ನು ನಿಭಾಯಿಸಿ.



Click it and Unblock the Notifications











