For Quick Alerts
ALLOW NOTIFICATIONS  
For Daily Alerts

ಮಾಜಿ ಪ್ರಿಯತಮ/ಮೆಗೆ ಅಪ್ಪಿತಪ್ಪಿಯೂ ಇಂತಹ ಟೆಕ್ಷ್ಟ್ ಮಾಡಬೇಡಿ

|

ಅನಿವಾರ್ಯ ಕಾರಣಗಳಿಂದ ಸಂಬಂಧವೊಂದರಿಂದ ಹೊರಬಂದು ಹೊಸ ಜೀವನವನ್ನು ಪ್ರಾರಂಭಿಸುತ್ತಿದ್ದೀರೇ? ಹಾಗಾದರೆ ಹಿಂದಿನ ನೆನಪುಗಳನ್ನು ಮಾಡಿ ಮನಸ್ಸನ್ನು ಕಲಕಿಸಿಕೊಳ್ಳಬೇಡಿ ಎಂದು ಹಿರಿಯರು ತಿಳಿಸುತ್ತಾರೆ. ಆದರೆ ಇಂದಿನ ದಿನಗಳು ಹಿರಿಯರ ಎಚ್ಚರಿಕೆಯ ಮಾತುಗಳನ್ನು ಮೀರಿ ಹಿಂದಿನ ಸಂಬಂಧವನ್ನು ಕೆದಕುವ ಕೆಲವು ವಿಷಯಗಳು ಹಲವಾರು ಮಾಧ್ಯಮಗಳ ಮೂಲಕ ಬಂದೇ ಬರುತ್ತವೆ.

ಇದರಲ್ಲೊಂದು ಸಂದೇಶ ರವಾನೆ. ಕೆಲವರು ಹಿಂದಿನ ಸಂಬಂಧದಿಂದ ಹೊರಬಂದಿದ್ದರೂ ಹಳೆಯ ಸಂಗಾತಿಗೆ ಪಠ್ಯ ಸಂದೇಶ ಕಳಿಸುವ ಪರಿಪಾಠವಿಟ್ಟುಕೊಂಡಿರುತ್ತಾರೆ. ಆದರೆ ಈ ಮೂಲಕ ಕೆಲವು ವಿಷಯಗಳನ್ನೆಂದೂ ತಿಳಿಸಬಾರದು. ತಪ್ಪಿದರೆ ಮರುನಿಮಿಷದಲ್ಲಿಯೇ ಇದು ಪ್ರಕ್ಷುಬ್ದ ವಾತಾವರಣವನ್ನು ಸೃಷ್ಟಿಸಿ ಮಾನಸಿಕ ಆರೋಗ್ಯವನ್ನೇ ಕದಡುತ್ತದೆ.

things you should never tell your ex

ಹಿಂದಿನ ಸಂಬಂಧದ ಬಗ್ಗೆ ಮಾಹಿತಿಯನ್ನು ಕೆದಕುವುದು ಅಥವಾ ಇವರನ್ನು ಮತ್ತೊಮ್ಮೆ ಸಂಪರ್ಕಿಸುವುದು ಒಳ್ಳೆಯದೋ ಕೆಟ್ಟದ್ದೋ ಎಂದು ಚರ್ಚಿಸಬಹುದಾದರೂ ಪರಿಣಾಮ ಮಾತ್ರ ಒಂದೇ. ಪರಿಚಯಕ್ಕಾಗಿ ಮುಂದುವರೆಯುವುದು ಒಳ್ಳೆಯದೇ, ಆದರೆ ಈ ಮೂಲಕ ಕೆಲವು ವಿಷಯಗಳನ್ನು ಸರ್ವಥಾ ಪ್ರಸ್ತಾಪಿಸಬಾರದು. ಕೆಲವು ಸಂದರ್ಭಗಳಲ್ಲಿ ಇವು ನಿಮಗೆ ಅನುಕೂಲಕರವಾಗಿ ಪರಿಣಮಿಸಬಹುದು ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇವು ಹಾನಿ ಎಸಗುವ ಸಂಭವವೇ ಹೆಚ್ಚು. ಇನ್ನೂ ಕೆಲವು ಸಂದರ್ಭಗಳಲ್ಲಿ ಎಷ್ಟೇ ವಿಚಾರಗಳು ವಿಮರ್ಶಿಸಲ್ಪಟ್ಟರೂ ಕಳಚಿ ಹೋದ ಹಿಂದಿನ ಸಂಬಂಧ ಮತ್ತೆ ಚಿಗುರುವ ಸಾಧ್ಯತೆಯನ್ನೇ ಮೂಡಿಸುವುದಿಲ್ಲ.

ಒಂದು ಸಂಬಂಧ ಕೊನೆಗೊಳಿಸುವುದು ಎಂದರೆ ವ್ಯಕ್ತಿಯ ಭಾವನಾತ್ಮಕ ಹಾಗೂ ಮಾನಸಿಕ ಸ್ಥಿತಿಯ ಮೇಲೆ ಭಾರೀ ಪ್ರಭಾವ ಬೀರುವುದೇ ಆಗಿದೆ. ಕೆಲವೊಮ್ಮೆ ಈ ಆಘಾತದಿಂದ ಹೊರಬರಲಾರದೇ ಅಪಾಯಕಾರಿ ಕ್ರಮವನ್ನು ಕೈಗೊಳ್ಳುವುದು, ಖಿನ್ನತೆಗೆ ಒಳಗಾಗುವುದು, ಮಾನಸಿಕ ರೋಗಿಗಳಾಗುವುದು ಮೊದಲಾದವು ಸಂಭವಿಸುತ್ತವೆ. ಕೆಲವರು ಈ ಸಂಬಂಧವನ್ನು ಮರೆಯಲು ಸಾಧ್ಯವಾಗದೇ, ಕೇವಲ ಪರಿಚಯವನ್ನೇ ಮುಂದುವರೆಸಿಕೊಂಡು ಹೋಗುವ ಇರಾದೆಯನ್ನು ಪ್ರಕಟಿಸುತ್ತಾರೆ. ಆದರೆ ಈ ನಿಟ್ಟಿನಲ್ಲಿ ಹಿಂದಿನ ಸಂಬಂಧದ ವ್ಯಕ್ತಿಯನ್ನು ಭೇಟಿಯಾಗಲು ಹೋದಾಗ ಅತೀವ ಎಚ್ಚರಿಕೆಯನ್ನು ವಹಿಸಬೇಕಾಗುತ್ತದೆ. ನಿಮ್ಮ ಭಾವನೆಗಳು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಮನಸ್ಸನ್ನು ಚಂಚಲಗೊಳಿಸಬಹುದು. ಪರಿಣಾಮವಾಗಿ ಅನೈಚ್ಛಿಕ ಪರಿಣಾಮ ಎದುರಾಗಬಹುದು.

ಹಾಗಾಗಿ, ಈಗ, ಮುಂದಿನ ನಡೆಗಳೆಲ್ಲಾ ನೀವು ಈಗ ಏನಾಗಿದ್ದೀರಿ ಹಾಗೂ ನಿಮ್ಮ ಹಿಂದಿನ ಸಂಬಂಧವೇಕೆ ಕೊನೆಗೊಂಡಿತು ಎಂಬ ಹಲವಾರು ವಿಷಯಗಳನ್ನು ಅನುಸರಿಸುತ್ತದೆ. ಅಲ್ಲದೇ ನೀವು ಹಿಂದೆ ಯಾವ ಬಗೆಯ ಸಂಬಂಧವನ್ನು ಹೊಂದಿದ್ದಿರಿ ಹಾಗೂ ಈಗ ಮತ್ತೊಮ್ಮೆ ನೀವು ಅವರನ್ನು ಸಂಪರ್ಕಿಸಬಯಸುತ್ತಿದ್ದರೆ ಇದಕ್ಕೆ ಕಾರಣಗಳೇನು ಎಂಬೆಲ್ಲಾ ಮಾಹಿತಿಗಳು ಅವಲಂಬಿಸುತ್ತವೆ. ಇದಕ್ಕೂ ಹೊರತಾಗಿ ನೀವು ನಿಜಕ್ಕೂ ಹಿಂದಿನ ಸಂಬಂಧದ ವ್ಯಕ್ತಿಯೊಂದಿಗೆ ಸಂಪರ್ಕ ಬೆಳೆಸಲು ಸಂದೇಶ ಕಳಿಸುವ ಇರಾದೆಯಿದ್ದರೆ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ: ಈ ಬಗ್ಗೆ ಯಾವ ಮಾರ್ಗಸೂಚಿಗಳನ್ನು ಅನುಸರಿಸಬೇಕು?

1. ನಿಮ್ಮ ಹೃದಯವೆಷ್ಟು ನೊಂದಿದೆ ಎಂಬುದನ್ನು ಪ್ರಕಟಿಸದಿರಿ

ಎಂದಿಗೂ, ನಿಮ್ಮ ಈಗಿನ ಮನಃಸ್ಥಿತಿಯ ಬಗ್ಗೆ, ನಿಮ್ಮ ಬೇರ್ಪಡುವಿಕೆಯಿಂದ ನೀವೆಷ್ಟು ನೊಂದಿದ್ದೀರಿ ಎಂಬುದನ್ನು ಪ್ರಕಟಿಸದಿರಿ. ನೀವು ಭಗ್ನಹೃದಯಿಯಾಗಿದ್ದರೆ ಹಾಗೂ ಪ್ರಕಟಿಸದೇ ಇದ್ದರೆ ಹೃದಯ ಒಡೆದು ಹೋಗುತ್ತದೆ ಎಂದಿದ್ದರೆ ಈ ವಿಷಯವನ್ನು ಸೂಚ್ಯವಾಗಿ ಪ್ರಸ್ತಾಪಿಸಿ, ಆದರೆ ನೇರವಾಗಿ ಎಂದೂ ತಿಳಿಸದಿರಿ. ಅಪ್ಪಿ ತಪ್ಪಿ ಹೀಗೇನಾದರೂ ನೇರವಾಗಿ ಹೇಳಿಬಿಟ್ಟರೆ, ಮತ್ತೊಮ್ಮೆ ನಿಮ್ಮ ಹೃದಯವನ್ನು ಅವರು ಒಡೆಯಲು ನೀವೇ ಸ್ಪಷ್ಟ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಎಂದಿಗೂ ನಿಮ್ಮ ನೋವು ಅಥವಾ ಅವರ ಅಗಲಿಕೆಯಿಂದ ನಿಮಗೆ ಎದುರಾಗುತ್ತಿರುವ ವಿರಹವೇದನೆಯನ್ನು ಪ್ರಕಟಿಸದಿರಿ. ಮತ್ತೊಮ್ಮೆ ನೀವು ಈ ವೇದನೆಯ ಸ್ಥಿತಿಗೆ ಬರಲು ನೀವು ಖಂಡಿತಾ ಬಯಸಲಾರಿರಿ.

2. ನಿಮ್ಮ ವಿರಹವನ್ನು ಎಂದಿಗೂ ಪ್ರಕಟಿಸದಿರಿ

ಹಿಂದಿನ ಸಂಬಂಧದ ವ್ಯಕ್ತಿಯೊಂದಿಗೆ ನೀವು ಅವರನ್ನೆಷ್ಟು ತಪ್ಪಿಸಿಕೊಳ್ಳುತ್ತಿದ್ದೀರಿ ಎಂಬುದನ್ನೆಂದೂ ತಿಳಿಸದಿರಿ. ಹೀಗೆ ಮಾಡಿದರೆ ಅವರಿಗೆ ನಿಮ್ಮ ಮೇಲೆ ನಿಯಂತ್ರಣ ಸಾಧಿಸಲು ನೀವೇ ಅನುವು ಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ನೀವೇ ಹೀಗೆ ಮಾಡಿ ದುರ್ಬಲರಾಗುತ್ತೀರಿ. ಅಲ್ಲದೇ ಬೇರ್ಪಡುವಿಕೆಯ ಬಳಿಕ ನಿಮ್ಮ ಜೀವನ ಮೊದಲಿನಷ್ಟು ಸುಲಲಿತವಾಗಿಲ್ಲ ಎಂಬುದನ್ನು ನೀವೇ ತಿಳಿಸಿದಂತಾಗುತ್ತದೆ. ನೀವು ಅವರಿಗೆ ತಾನಾಗಿ ಬಂದ ಅಂಟುಜೀವಿಯಂತೆ ತೋರುತ್ತೀರಿ.

3. ಜೀವನದಲ್ಲಿ ಈಗೇನು ಮಾಡುತ್ತಿದ್ದೀರಿ ಎಂದು ಪ್ರಕಟಿಸದಿರಿ

ನಿಮ್ಮ ಜೀವನದ ವಾಸ್ತವದ ಬಗ್ಗೆ ಅವರಿಗೆ ಮಾಹಿತಿ ನೀಡದಿರಿ. ಚೆನ್ನಾಗಿದ್ದೇನೆ, ಜೀವನ ಚೆನ್ನಾಗಿದೆ ಎಂಬ ಸರಳ ಮಾತುಗಳಲ್ಲಿಯೇ ನಿಮ್ಮ ಬಗ್ಗೆ ಮಾಹಿತಿ ನೀಡಿ. ಅವರಿಲ್ಲದೇ ಜೀವನ ಬೇಸರವಾಗಿದೆ ಎಂಬ ಬಗ್ಗೆ ಅವರಿಗೆ ಎಂದಿಗೂ ಊಹಿಸಲು ಅನುವು ಮಾಡಿಕೊಡಬೇಡಿ. ಅದರಲ್ಲೂ ಅವರು ನೀವು ಹೇಗಿದ್ದೀರಿ ಎಂದು ತಾವಾಗಿಯೇ ಕೇಳದ ಹೊರತು ಇಷ್ಟನ್ನೂ ಮಾಡುವುದು ಬೇಡ.

4. ಅವರನ್ನೆಂದೂ ಅಸೂಯೆಗೊಳಪಡಿಸಲು ಯತ್ನಿಸದಿರಿ

ಈ ಪ್ರಯತ್ನವೆಂದೂ ಫಲ ನೀಡಲಾರದು. ಅವರನ್ನು ಅಸೂಯೆಗೊಳಿಸಲು ಎಂದಿಗೂ ಪಠ್ಯಸಂದೇಶಗಳನ್ನು ಕಳಿಸದಿರಿ. ಇದರಿಂದ ನೀವೆಷ್ಟು ಕರುಣಾಜನಕ ಸ್ಥಿತಿಯಲ್ಲಿದ್ದೀರಿ ಎಂಬುದನ್ನು ನೀವೇ ಪ್ರಕಟಿಸಿದಂತಾಗುತ್ತದೆ. ಅವರಿಗೆ ಈ ಬಗ್ಗೆ ಊಹಿಸಿಕೊಳ್ಳಲು ಯಾವುದೇ ಅವಕಾಶ ನೀಡದಿರಿ.

5. ನಿಮ್ಮ ವ್ಯಕ್ತಿತ್ವವನ್ನು ಎಂದೂ ರಾಜಿ ಮಾಡಿಕೊಳ್ಳದಿರಿ

ನಿಮ್ಮ ವ್ಯಕ್ತಿತ್ವವನ್ನು ನಿಮ್ಮ ಹಿಂದಿನ ಸಂಬಂಧದ ವ್ಯಕ್ತಿಯೊಂಗಿದೆ ಹೇಗೆ ಪ್ರಕಟಿಸುತ್ತೀರಿ ಎಂಬುದು ತುಂಬಾ ಮುಖ್ಯವಾಗಿದೆ. ನಿಮ್ಮ ಒಟ್ಟಾರೆ ವ್ಯಕ್ತಿತ್ವವನ್ನು ರಾಜಿ ಮಾಡಿಕೊಳ್ಳುವ ಯಾವುದೇ ವಿಷಯಗಳನ್ನು ಪ್ರಸ್ತಾಪಿಸದಿರಿ. ನೀವು ಅವರ ಹೊರತಾಗಿಯೂ ನಿಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಂಡಿದ್ದೀರಿ ಎಂಬುದನ್ನು ಪ್ರಕಟಿಸಿ. ಅ ವ್ಯಕ್ತಿಗೆ ಪಠ್ಯಸಂದೇಶವನ್ನು ಕಳುಹಿಸುವಾಗ ಈ ಚಿಕ್ಕ ಚಿಕ್ಕ ವಿಷಯಗಳೆಲ್ಲಾ ಹೆಚ್ಚಿನ ಮಹತ್ವ ಪಡೆಯುತ್ತವೆ. ಕೆಲವೊಮ್ಮೆ ಅವರು ಪಠ್ಯಸಂದೇಶದ ಮೂಲಕ ಕೇಳುವ ಪ್ರಶ್ನೆಗಳನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಅವರಿಗೆ ಬೇಕಾದ ಮಾಹಿತಿಯನ್ನು ನೀವಾಗೇ ಕೊಡುವ ಸಂಭವವಿದೆ. ಈ ಮೂಲಕ ನೀವು ಸೋಲುತ್ತೀರಿ ಹಾಗೂ ಕಡೆಯಲ್ಲಿ ಭಾರೀ ಮಾನಸಿಕ ಆಘಾತಕ್ಕೆ ಒಳಗಾಗುವ ಸಂಭವವಿದೆ. ಹಾಗಾಗಿ ನೀವು ಯಾವ ನಿಟ್ಟಿನಲ್ಲಿ ನಿಮ್ಮ ಹಳೆಯ ಸಂಬಂಧವನ್ನು ಕೆದಕುತ್ತಿದ್ದೀರೋ, ಆ ವಿಷಯಗಳು ಮಾತ್ರವೇ ಪ್ರಸ್ತಾಪಿಸಲ್ಪಡುವಂತೆ ಎಚ್ಚರ ವಹಿಸಿ ಹಾಗೂ ನಿಮ್ಮ ಸಂದೇಶಗಳು ಸರಳ ಹಾಗೂ ಹೆಚ್ಚಿನ ಮಾಹಿತಿ ಒದಗಿಸದಂತಿರಲಿ. ಉತ್ತಮ ಸಂವಾದ ಹೀಗಿರಬೇಕು ಅಂದರೆ ಸಂದೇಶ ರವಾನೆಯ ಅಷ್ಟೂ ಹೊತ್ತು ನಿಮ್ಮ ಮುಖದಲ್ಲಿ ಮುಗುಳ್ನಗೆ ಇರಬೇಕು ಹಾಗೂ ಯಾವುದೇ ರೀತಿಯ ಭಾವೊದ್ವೇಗಕ್ಕೊಳಗಾಗಬಾರದು.

ಉತ್ತಮ ಮಾನಸಿಕ ಆರೋಗ್ಯವನ್ನು ಹೊಂದಿರುವುದು ನಿಮಗೆ ಅಗತ್ಯ ಎಂದು ನಿಮಗೆ ಸ್ಪಷ್ಟವಾಗಿ ನೆನಪಿರಬೇಕು. ಈ ಲೇಖನ ನಿಮಗೆ ಇಷ್ಟವಾದರೆ ಸಾಮಾಜಿಕ ತಾಣದಲ್ಲಿ ಹಂಚಿಕೊಳ್ಳಿ ಹಾಗೂ ನಿಮ್ಮ ಅನಿಸಿಕೆಗಳನ್ನು ಕೆಳಗಿನ ಕಮೆಂಟ್ಸ್ ಭಾಗದಲ್ಲಿ ಬರೆದು ನಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಿ.

English summary

Certain Things You Should Never Text Your Ex

What you have left your past behind, let it be there. Do not think to dive back into those and trouble yourself. If you are trying to reach your ex, then you should know there are certain things you should never ever text your ex. These things are minute but can create havoc in your mental health. You do not seek it. You can debate the fact of reaching out to your ex is a good idea or not but the end result will be one. It is okay to reach out but certain things you should refrain from letting them know. In some cases, it all works out for your good. And in some cases, it makes one’s situation worse. And in some other cases, it really doesn’t have an effect at all on the nature of your relationship with your ex.
X
Desktop Bottom Promotion