Latest Updates
-
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ -
ಹುಷಾರ್.. ಗಂಡನಿಗೆ ಈ 4 ಮಾತು ಹೇಳ್ತೀರಾ? ಮನೇಲಿ ಬೆಂಕಿ ಉರಿಯುತ್ತೆ.. ಹೀಗೆ ಮಾಡಿದ್ರೆ ಸಂಸಾರದಲ್ಲಿ ಸುಖ ಇರುತ್ತೆ -
ಸಿಸ್ಟರ್.. 30+ ಬಳಿಕ ಈ ಸೂತ್ರಗಳನ್ನು ಬೆಳೆಸಿಕೊಳ್ಳಿ! ಆರೋಗ್ಯ ಸದಾ ಚೆನ್ನಾಗಿ ಇರುತ್ತೆ -
10 ನಿಮಿಷದ ಹಾಟ್ ಹಾಟ್ ಪರೋಟ! ಈ ರೀತಿ ಮಾಡಿದ್ರೆ ಮೃದು & ಕ್ರಿಸ್ಪಿಯಾಗಿ ಬರುತ್ತೆ.. ಹೋಟೆಲ್ ಸ್ಟೈಲ್ ಸೀಕ್ರೆಟ್ ಇಲ್ಲಿದೆ -
ಹೋಟೆಲ್ ಸ್ಟೈಲ್ ರಾಯಲ್ ಚಟ್ನಿ! ಈ ಒಂದು ವಸ್ತು ಸೇರಿಸಿ ನೋಡಿ.. ರುಚಿ ಡಬಲ್, 2 ಇಡ್ಲಿ ಜಾಸ್ತಿ ತಿಂತೀರಾ -
ಈ ದಿನ ಆರ್ಥಿಕ ಲಾಭದ ಸಾಧ್ಯತೆಗಳೂ ಇವೆ! ನಿಮ್ಮ ಕ್ರಶ್ ಭೇಟಿಯಾಗುವ ಯೋಗ -
March 07 Horoscope: ಪ್ರಯಾಣ ಮಾಡುವಾಗ ಎಚ್ಚರವಿಡಿ! -
ಅಬ್ಬಬ್ಬಾ ಎಂಥಾ ರುಚಿ ಈ ಈರುಳ್ಳಿ ಮಂಚೂರಿಯನ್: ನೀವೂ ಕೂಡ ಟ್ರೈ ಮಾಡಿ -
ಮಾರ್ಚ್ನಲ್ಲಿ ಕಾಳಸರ್ಪ ಯೋಗ: ಈ ರಾಶಿಯವರಿಗೆ ಯೋಗದಿಂದ ಇದೆ ದೊಡ್ಡ ಲಾಭ!
ಕಣ್ಣೀರು ತರಿಸುವ 'ಪ್ರೇಮ ಕಥೆ', ಕೊನೆಗೂ ಆ ಜೋಡಿ ಒಂದಾದರು...

ಹೃದಯದ ಆಳದಿಂದ ಮೂಡಿರುವಂತಹ ನಿಜವಾದ ಪ್ರೀತಿ ಯಾವತ್ತಿಗೂ ಸಾಯಲ್ಲ. ಅದು ಹೃದಯದಿಂದ ಮೂಡಿರುವ ಪ್ರೀತಿ, ಯಾವುದೇ ಆಕರ್ಷಣೆ, ಮೋಹದಿಂದ ಮೂಡಿರುವ ಪ್ರೀತಿಯಲ್ಲ. ಇಂತಹ ಪ್ರೀತಿ ಪ್ರತಿಯೊಬ್ಬರಿಗೂ ಸಿಗಲ್ಲ, ಅದರಲ್ಲೂ ಇಂದಿನ ಯುವ ಜನಾಂಗದವರಲ್ಲಿ ಇಂತಹ ಪ್ರೀತಿ ಮೂಡಲು ಸಾಧ್ಯವೇ ಇಲ್ಲ. ಯಾಕೆಂದರೆ ಇವರೆಲ್ಲರದ್ದು ಟೈಂಪಾಸ್ ಪ್ರೀತಿ. ಕೇವಲ ಆಕರ್ಷಣೆಗೆ ಮಾತ್ರ ಪ್ರೀತಿಸುವರು. ಆಕರ್ಷಣೆ ಕಡಿಮೆಯಾದ ಕೂಡಲೆ ದೂರ ಮಾಡುವರು. ಇವರು ಬದ್ಧತೆಯೊಂದಿಗೆ ಪ್ರೀತಿಸಿ, ಆ ಪ್ರೀತಿಯನ್ನು ಒಂದು ಸುಂದರ ಸಂಸಾರದಲ್ಲಿ ಬದಲಾಯಿಸಿಕೊಳ್ಳಲು ಬಯಸುವುದಿಲ್ಲ. ಯಾಕೆಂದರೆ ಇವರಿಗೆ ಜವಾಬ್ದಾರಿ ಎನ್ನುವುದು ಬೇಕಿಲ್ಲ.
ನೈಜ ಪ್ರೀತಿ ಸಿಕ್ಕಿರುವವರು ನಿಜವಾಗಿಯೂ ಪುಣ್ಯವಂತರು ಎನ್ನಬಹುದು. ಯಾಕೆಂದರೆ ವಿಚ್ಛೇದನಗಳೇ ಹೆಚ್ಚಾಗುತ್ತಿರುವ ಇಂದಿನ ದಿನಗಳಲ್ಲಿ ನೈಜ ಪ್ರೀತಿ ಹುಡುಕಿಕೊಂಡು ಹೋಗುವುದು ಕಷ್ಟ. ಆದರೆ ಕೆಲವೊಂದು ಪ್ರೇಮಕಥೆಗಳು ಇತರರಿಗೂ ಪ್ರೇರಣೆಯಾಗಿರುವುದು. ಇದು ಯೋಧನೊಬ್ಬನ ನಿಜವಾದ ಪ್ರೀತಿ ಮತ್ತು ಆ ಪ್ರೀತಿ ಬದುಕನ್ನೇ ಬದಲಾಯಿಸಿದ ರೀತಿಯಿರಿ. ಈ ಕಥೆ ಓದಿದ ಬಳಿಕ ಪ್ರೀತಿ ಎನ್ನುವುದು ಯಾವುದೇ ಕಟ್ಟುಪಾಡುಗಳು ಇಲ್ಲದೆ ಇರುವಂತಹದ್ದು ಮತ್ತು ನಿಜವಾದ ಪ್ರೀತಿಗೆ ಯಾವುದೂ ಅಡ್ಡಿಯಾಗಲ್ಲ ಎಂದು ತಿಳಿದುಬರಲಿದೆ. ಪ್ರೇರಣೆಯಾಗಲಿರುವ ಈ ಪ್ರೇಮಕಥೆಯನ್ನು ನೀವು ಓದಿಕೊಳ್ಳಿ....

ಅವರಿಬ್ಬರ ಭೇಟಿ.....
ಅವರಿಬ್ಬರು ಸಹಪಾಠಿಗಳಾಗಿದ್ದರು ಮತ್ತು ಸಮಯ ಕಳೆದಂತೆ ಸ್ನೇಹವು ಪ್ರೀತಿಗೆ ತಿರುಗಿತು. ಅವರಿಬ್ಬರು ಬೇರೆ ಬೇರೆ ಜಾತಿಗೆ ಸೇರಿದವರು. ಆದರೆ ಇದರಿಂದ ಅವರು ಭವಿಷ್ಯದ ಬಗ್ಗೆ ಕನಸು ಕಾಣುವುದನ್ನು ನಿಲ್ಲಿಸಲಿಲ್ಲ.

ಕುಟುಂಬದವರು ಆರಂಭದಲ್ಲಿ ವಿರೋಧಿಸಿದರು...
ಯೋಧನಾಗಿದ್ದರೂ ಆತ ಕೆಳಜಾತಿಯವನು ಎನ್ನುವ ಕಾರಣಕ್ಕಾಗಿ ಹುಡುಗಿ ಮನೆಯವರು ಆರಂಭದಲ್ಲಿ ಈ ಮದುವೆಗೆ ವಿರೋಧ ವ್ಯಕ್ತಪಡಿಸಿದರು ಆದರೆ ಇವರಿಬ್ಬರ ಪ್ರೀತಿಯನ್ನು ನೋಡಿದ ಬಳಿಕ ಕುಟುಂಬದವರು ಸಮ್ಮತಿಸಿದರು.

ಯುದ್ಧದ ಕರೆ ಬಂತು....!
ತುರ್ತು ಸಂದರ್ಭದಲ್ಲಿ ಯುದ್ಧಕ್ಕೆ ಕರೆ ಬಂದ ಹಿನ್ನೆಲೆಯಲ್ಲಿ ಹುಡುಗ ಕರ್ತವ್ಯಕ್ಕೆ ಹಾಜರಾಗಬೇಕಾಯಿತು. ಆದರೆ ಇದಕ್ಕೆ ಮೊದಲು ಆದರೆ ಇದಕ್ಕೆ ಮೊದಲು ಹುಡುಗಿಗೆ ತನ್ನ ಪ್ರೇಮ ನಿವೇದನೆ ಮಾಡಿ, ನಿಶ್ಚಿತಾರ್ಥ ನೆರವೇರಿಸಿ ಮುಂದಿನ ವರ್ಷ ಮದುವೆಯಾಗುವುದೆಂದು ನಿರ್ಧರಿಸಿದರು. ಇಲ್ಲಿಯ ತನಕ ಎಲ್ಲವೂ ಸರಿಯಾಗಿತ್ತು.

ಅವಘಡ ಸಂಭವಿಸಿತು!
ಹುಡುಗ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಹುಡುಗಿ ತನ್ನ ದ್ವಿಚಕ್ರ ವಾಹನದಲ್ಲಿ ಹೊರಗಡೆ ಹೋಗಿಬರುತ್ತಿದ್ದಳು. ಆದರೆ ಒಂದು ದಿನ ನಡೆದ ಅಪಘಾತದಲ್ಲಿ ಆಕೆಯ ಪ್ರಾಣ ಮಾತ್ರ ಉಳಿಯಿತು ಮತ್ತು ಕೋಮಾಗೆ ಹೋದಳು. ಆಕೆಯ ಸುಂದರ ಮುಖವು ಗಾಯಗಳಿಂದ ವಿರೂಪವಾಯಿತು.

ಒಂದು ದಿನ ಕೋಮಾದಿಂದ ಹೊರಬಂದಳು....
ಆಕೆ ಒಂದು ದಿನ ಕೋಮಾದಿಂದ ಹೊರಬಂದಳು ಮತ್ತು ಆಕೆಯ ಹೆತ್ತವರು ಜತೆಗಿದ್ದರು. ಅವರು ಅಳುವುದನ್ನು ನೋಡಿದ ಆಕೆ ಏನೋ ದೊಡ್ಡ ದುರ್ಘಟನೆ ನಡೆದಿದೆ ಎಂದು ಗ್ರಹಿಸಿದಳು. ಏನಾಗಿದೆಯೆಂದು ಹೇಳಿ ಎಂದು ಆಕೆ ಗೋಗರೆದಳು. ಹೆತ್ತವರು ಆಕೆಗೆ ಕನ್ನಡಿ ತೋರಿಸಿದರು. ಇದರಿಂದ ಆಕೆ ಆಘಾತಕ್ಕೆ ಒಳಗಾಗಿ, ಕಣ್ಣೀರಿನ ಕಡಲಲ್ಲಿ ಮುಳುಗಿದಳು.

ಮರೆಯಲು ಪ್ರಯತ್ನಿಸಿದಳು!
ತಾನು ಮದುವೆಯಾಗುತ್ತೇನೆಂದು ಮಾತು ಕೊಟ್ಟಿದ್ದ ವ್ಯಕ್ತಿಯ ಜೀವನ ಹಾಳು ಮಾಡಲು ಆಕೆಗೆ ಇಷ್ಟವಿರಲಿಲ್ಲ. ಆತನ ಕರೆಗಳನ್ನು ಸ್ವೀಕರಿಸಲಿಲ್ಲ ಮತ್ತು ಮೇಲ್ ಗಳಿಗೂ ಉತ್ತರಿಸಲಿಲ್ಲ. ಕೋಣೆಯಲ್ಲಿ ಒಂಟಿಯಾಗಿದ್ದುಕೊಂಡು ಅಳುವುದೇ ಆಕೆಯ ದಿನಚರಿಯಾಯಿತು. ನಾನು ಆ ದಿನವೇ ಯಾಕೆ ಸಾಯಲಿಲ್ಲವೆಂದು ದೇವರನ್ನೇ ಪ್ರಶ್ನಿಸಿದಳು.

ಅಂತಿಮವಾಗಿ ಇದು ನಡೆಯಿತು....
ಕೋಣೆಯಲ್ಲಿದ್ದ ಆಕೆಯ ಬಳಿ ಬಂದ ತಾಯಿ, ಆತ ಮರಳಿದ್ದಾನೆ ಮತ್ತು ಮದುವೆಯಾಗುತ್ತಿದ್ದಾನೆ ಎಂದು ಹೇಳಿದಳು. ಆಕೆ ಒತ್ತಿ ಬರುತ್ತಿದ್ದ ದುಃಖವನ್ನು ತಡೆದು, ಕಣ್ಣೀರು ಒರೆಸಿಕೊಳ್ಳುತ್ತಾ ತಾಯಿಯ ಕೈಯಲ್ಲಿದ್ದ ಮದುವೆಯ ಆಮಂತ್ರಣ ಪತ್ರಿಕೆ ತೆಗೆದುಕೊಂಡಳು. ಅದರಲ್ಲಿ ಆಕೆಯ ಹೆಸರನ್ನು ನೋಡಿ ಒಂದು ಕ್ಷಣ ತನ್ನ ಕಣ್ಣುಗಳನ್ನೇ ನಂಬದಾದಳು. ಆನಂದಬಾಷ್ಪದೊಂದಿಗೆ ತಾಯಿಯ ನೋಡಿದಳು.....

ಆಕೆಗೆ ಸಂಭ್ರಮ ತಡೆಯಲಾಗಲಿಲ್ಲ!
ಆತ ಒಂದು ಹೂಗುಚ್ಛ ಹಿಡಿದುಕೊಂಡು ಆಕೆಯಿದ್ದ ಕೋಣೆಗೆ ಬಂದ ಮತ್ತು ನಡೆದಿರುವುದೆಲ್ಲವೂ ನನಗೆ ತಿಳಿದಿತ್ತು ಎಂದು ಹೇಳಿದ. ಆಕೆಯ ತಾಯಿಯೊಂದಿಗೆ ಸಂಪರ್ಕದಲ್ಲಿದ್ದ ಆತ ಆಕೆಯ ಫೋಟೊಗಳನ್ನು ನೋಡಿದ್ದ.

ಆಕೆ ಸೌಂದರ್ಯವತಿಯೆಂದು ಆತನಿಗೆ ತಿಳಿದಿತ್ತು...
ಪ್ರತೀ ಸಲ ಆಕೆಯ ಫೋಟೊವನ್ನು ನೋಡುತ್ತಿದ್ದ ಆತನಿಗೆ ತನ್ನ ಪ್ರೀತಿಯನ್ನು ಬದಲಾಯಿಸಲು ಯಾವುದರಿಂದಲೂ ಸಾಧ್ಯವಿಲ್ಲ ಮತ್ತು ಆಕೆ ಈಗಲೂ ಆತನಿಗೆ ಹಿಂದಿನ ಹುಡುಗಿಯೇ ಆಗಿದ್ದಳು. ತಾನು ತುಂಬಾ ಪ್ರೀತಿಸಿರುವ ಹುಡುಗಿಯನ್ನು ಮದುವೆಯಾಬೇಕೆಂದು ಆತ ನಿರ್ಧರಿಸಿದ್ದ.

ಆಕೆ ಸೌಂದರ್ಯವತಿಯೆಂದು ಆತನಿಗೆ ತಿಳಿದಿತ್ತು...
ನಿಜವಾದ ಪ್ರೀತಿ ಮುಂದೆ ಯಾವುದೇ ರೀತಿಯ ಅಡ್ಡಿಆಂತಕಗಳು ಇರುವುದಿಲ್ಲ ಮತ್ತು ನೈಜಪ್ರೀತಿ ಯಾವತ್ತೂ ಸೌಂದರ್ಯ ನೋಡುವುದಿಲ್ಲವೆನ್ನುವುದು ಈ ಕಥೆಯಿಂದ ಸಾಬೀತಾಗಿದೆ.



Click it and Unblock the Notifications











