For Quick Alerts
ALLOW NOTIFICATIONS  
For Daily Alerts

ಗಂಡ-ಹೆಂಡತಿಯರ ನಡುವೆ ಇಂತಹ ಕಮಿಟ್‌ಮೆಂಟ್‌ ಇದ್ದರೆ, ಸುಖವಾಗಿ ಇರುವಿರಿ...

By Hemanth
|

ಭೂಮಿ ಮೇಲೆ ಪ್ರೀತಿಯಲ್ಲಿ ಬೀಳದವರು ಯಾರಿದ್ದಾರೆ ಹೇಳಿ? ಪ್ರತಿಯೊಬ್ಬರಿಗೂ ಒಂದಲ್ಲಾ ಒಂದು ಸಲ ಪ್ರೀತಿ ಆಗಿಯೇ ಆಗುವುದು. ಪ್ರೀತಿಸುವಾಗ ಉಂಟಾಗುವಂತಹ ಭಾವನೆಯೇ ಬೇರೆ. ಅದೇ ರೀತಿ ಒಳ್ಳೆಯ ಮತ್ತು ಆರೋಗ್ಯಕಾರಿ ಸಂಬಂಧ ಉಳಿಸಿಕೊಳ್ಳಬೇಕೆಂದರೆ ಅದು ಪ್ರತಿಯೊಬ್ಬರ ಕನಸಾಗಿರುವುದು. ಇಂತಹ ಸಂಬಂಧ ಉಳಿಸಿಕೊಳ್ಳಲು ಕೆಲವೊಂದು ವಿಚಾರಗಳನ್ನು ಪಾಲಿಸಿಕೊಂಡು ಹೋಗುವುದು ಕೂಡ ಅತೀ ಅಗತ್ಯವಾಗಿದೆ.

ಯಾವುದೇ ಸಂಬಂಧಕ್ಕಾದರೂ ಅದನ್ನು ಉಳಿಸಿಕೊಳ್ಳಲು ಅಡ್ಡದಾರಿಗಳು ಇರುವುದಿಲ್ಲ. ಪ್ರತಿಯೊಂದು ಸಂಬಂಧ ಕೂಡ ತನ್ನದೇ ಆಗಿರುವ ಒಂದು ಹಂತವನ್ನು ದಾಟಿ ಬಳಿಕ ಬಲಗೊಳ್ಳುವುದು. ಈ ಹಂತವನ್ನು ದಾಟಬೇಕಾದರೆ ಸಂಬಂಧಲ್ಲಿ ಇರುವಂತಹ ಇಬ್ಬರು ಕಠಿಣ ಸಮಯವನ್ನು ಎದುರಿಸಬೇಕಾಗುತ್ತದೆ. ಆಗ ಮಾತ್ರ ಸಂಬಂಧವು ಯಶಸ್ವಿಯಾಗುವುದು. ಆದರೆ ಕೆಲವೊಂದು ವಿಚಾರಗಳು ನನಗೆ ಎಂದಿಗೂ ಆಗುವುದಿಲ್ಲವೆಂದು ಕುಳಿತರೆ ಆಗ ಖಂಡಿತವಾಗಿಯೂ ಸಂಬಂಧದ ಮೇಲೆ ಪರಿಣಾಮ ಬೀರುವುದು. ನಿಜವಾದ ಸಂಬಂಧ ಉಳಿಯಲು ಈ ಎಂಟು ಸೂತ್ರ ಪಾಲಿಸಿ....

 ಒಬ್ಬರನ್ನೊಬ್ಬರು ಬಿಟ್ಟು ಕೊಡದಿರುವುದು

ಒಬ್ಬರನ್ನೊಬ್ಬರು ಬಿಟ್ಟು ಕೊಡದಿರುವುದು

ನಿಜವಾದ ಸಂಬಂಧವೆಂದರೆ ಅಲ್ಲಿ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಮತ್ತು ಇಬ್ಬರ ಪ್ರೀತಿಯ ಸೇತುವನ್ನು ಗಟ್ಟಿಯಾಗಿಸಿಕೊಳ್ಳುವುದು. ನಿಜವಾಗಿ ಪ್ರೀತಿಸುವಂತಹ ವ್ಯಕ್ತಿಯು ಯಾವತ್ತಿಗೂ ತನ್ನ ಸಂಗಾತಿಯ ಬಿಟ್ಟುಕೊಡಲ್ಲ. ಸಂತೋಷ ಹಾಗೂ ದುಃಖದ ಸಮಯದಲ್ಲಿ ಪರಸ್ಪರರು ಜತೆಯಾಗಿರುವುದೇ ಸಂಬಂಧದ ಗುಟ್ಟು ಮತ್ತು ಹೊರಗಿನ ಶಕ್ತಿಗಳು ಸಂಬಂಧದ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳುವುದು.

ನನ್ನ ವೈಯಕ್ತಿಕ ಜೀವನ ಕಳಕೊಂಡೆ

ನನ್ನ ವೈಯಕ್ತಿಕ ಜೀವನ ಕಳಕೊಂಡೆ

ಯಾರಾದರೂ ನಿಮಗೆ ಇಷ್ಟವಾಗಿದ್ದಾರೆ ಎಂದಾದರೆ ಆಗ ನಿಮ್ಮತನ ಕಳೆದುಕೊಳ್ಳಬೇಡಿ. ನಿಮ್ಮ ಮನಸ್ಸನ್ನು ನೋಡಿ ಸಂಗಾತಿಯು ನಿಮ್ಮನ್ನು ಪ್ರೀತಿಸಿರುವುದು. ಆಕೆ/ಆತನನ್ನು ನಿಜವಾಗಿಯೂ ಪ್ರೀತಿಸಿ. ಇದೇ ವೇಳೆ ನಿಮ್ಮನ್ನು ಕೂಡ ಪ್ರೀತಿಸಿ. ನಿಮ್ಮ ಸಮಗ್ರತೆ ಕಳೆದುಕೊಳ್ಳುವುದು ಸಂಬಂಧಕ್ಕೆ ದೊಡ್ಡ ನಷ್ಟ. ಪ್ರತಿಯೊಂದು ಸಂಬಂಧವು ನಾಣ್ಯದ ಎರಡು ಮುಖಗಳೂ ಇದ್ದಂತೆ. ಸಂಬಂಧದಲ್ಲಿ ನಿಮ್ಮ ಭಾಗವನ್ನು ಮುಂದಿಡಬೇಕು.

ಹೋಲಿಕೆ

ಹೋಲಿಕೆ

ನಿಮ್ಮ ಸಂಬಂಧವನ್ನು ಮತ್ತೊಬ್ಬರ ಸಂಬಂಧದೊಂದಿಗೆ ಯಾವತ್ತಿಗೂ ಹೋಲಿಕೆ ಮಾಡಿಕೊಳ್ಳಲು ಹೋಗಬೇಡಿ. ಇದರಿಂದ ಅದರ ಅನನ್ಯತೆ ಮತ್ತು ಪರಿಶುದ್ಧತೆ ಕಳೆದುಹೋಗುವುದು. ಇದು ಸಂಬಂಧ ಕಾಪಾಡಲು ಆರೋಗ್ಯಕಾರಿ ವಿಧಾನವಲ್ಲ ಮತ್ತು ಹೆಚ್ಚು ಕಾಲ ಇದು ಬಾಳದು.

 ಮೂರನೇಯವರಿಗೆ ಹೆಚ್ಚಿನ ಆದ್ಯತೆ ನೀಡುವುದು

ಮೂರನೇಯವರಿಗೆ ಹೆಚ್ಚಿನ ಆದ್ಯತೆ ನೀಡುವುದು

ನೀವು ಮತ್ತೊಬ್ಬರನ್ನು ಪ್ರೀತಿಸುವಾಗ ಅವರಿಗೆ ನೀವು ಮೊದಲ ಆದ್ಯತೆಯಾಗಿರುವಿರಿ ಮತ್ತು ಅವರಿಗೆ ನೀವು ಮೊದಲ ಆದ್ಯತೆ. ನಿಮ್ಮ ಸಂಗಾತಿಯನ್ನು ಬಿಟ್ಟು ಬೇರೆಯವರಿಗೆ ಹೆಚ್ಚಿನ ಆದ್ಯತೆ ನೀಡಿದರೆ ಆಗ ಸಂಬಂಧದಲ್ಲಿ ಬಿರುಕು ಮತ್ತು ಕಲಹ ಉಂಟಾಗಬಹುದು. ಇದು ಸಂಬಂಧದ ಅಂತ್ಯಕ್ಕೂ ಕಾರಣವಾಗಬಹುದು.

ಗೂಢಚಾರಿಕೆ

ಗೂಢಚಾರಿಕೆ

ಸಂಗಾತಿಯು ನಿಮ್ಮ ಜತೆಯಲ್ಲಿ ಇಲ್ಲದೆ ಇರುವಾಗ ನೀವು ಗೂಢಚಾರಿಕೆ ಮಾಡುವುದು ಸಂಬಂಧದಲ್ಲಿ ಸರಿಯಾದ ವಿಧಾನವಲ್ಲ. ನೀವು ಗೂಢಚಾರಿಕೆ ಮಾಡುತ್ತಾ ಇರುವಾಗ ಸಿಕ್ಕಿ ಬೀಳಬಹುದು ಅಥವಾ ನಿಮಗೆ ಚಿಂತೆ ಮೂಡಿಸುವಂತಹ ವಿಷಯ ಸಿಗಬಹುದು. ಇದರಿಂದ ಸಂಬಂಧದಲ್ಲಿ ಹಲವಾರು ಸಮಸ್ಯೆಗಳು ಉಂಟಾಗಬಹುದು. ನೀವು ಭಾವಿಸಿರುವ ರೀತಿಯು ಬೇರೆ ಆಗಿರುವ ಕಾರಣದಿಂದ ಅದು ಸಂಬಂಧದಲ್ಲಿ ಹಲವಾರು ಸಮಸ್ಯೆ ಉಂಟು ಮಾಡಬಹುದು.

ಬದಲಾಗಲು ಒತ್ತಾಯಿಸುವುದು

ಬದಲಾಗಲು ಒತ್ತಾಯಿಸುವುದು

ನಿಮ್ಮ ಸಂಗಾತಿಯು ಹೇಗೆ ಮತ್ತು ಯಾವ ರೀತಿಯಲ್ಲಿ ಇದ್ದರೂ ನೀವು ಅದನ್ನು ಸ್ವೀಕರಿಸಬೇಕು. ಕೆಲವರು ಪ್ರೀತಿಯಲ್ಲಿ ಬಿದ್ದ ಬಳಿಕ ತಮ್ಮ ಸಂಗಾತಿಯಲ್ಲಿರುವ ತಪ್ಪುಗಳನ್ನು ಹುಡುಕಲು ಆರಂಭಿಸುವರು. ಈ ಜಗತ್ತಿನಲ್ಲಿ ಯಾರು ಕೂಡ ಪರಿಪೂರ್ಣರಾಗಿಲ್ಲ. ಸಂಗಾತಿಯನ್ನು ಬದಲಾಯಿಸುವುದು ತಪ್ಪು. ಇದು ಸಂಬಂಧದ ಮೇಲೆ ಪರಿಣಾಮ ಬೀರಬಹುದು.

ವೈರತ್ವ ಇಟ್ಟುಕೊಳ್ಳುವುದು

ವೈರತ್ವ ಇಟ್ಟುಕೊಳ್ಳುವುದು

ಕೆಲವೊಂದು ಸಲ ಸಂಬಂಧಲ್ಲಿ ಪರಸ್ಪರ ವೈರತ್ವ ಇಟ್ಟುಕೊಳ್ಳುವುದು. ಹಿಂದಿನ ವಿಷಯಗಳನ್ನು ಜಗಳ ಮಾಡುವುದು ಸಾಮಾನ್ಯ. ಆದರೆ ಸಂಬಂಧದಲ್ಲಿ ಇದು ನಿಷಿದ್ಧ. ವೈರತ್ವ ಇಟ್ಟುಕೊಂಡರೆ ಆಗ ನಿಮ್ಮ ಸಂಗಾತಿ ಬಗ್ಗೆ ಅಸಹಿಷ್ಣುತೆ ಭಾವನೆ ಉಂಟಾಗುವುದು. ಇಲ್ಲಿ ಪ್ರೀತಿ ಒಳಗೊಳಗೆ ಉಸಿರುಗಟ್ಟಿ ಸಾಯುವುದು ಮತ್ತು ಕ್ರೋಧ ಹೆಚ್ಚಾಗುವುದು. ಕ್ರೀಡೆಯಲ್ಲಿ ಸೋಲಿಗೆ ಪ್ರತೀಕಾರ ಸರಿ. ಆದರೆ ಜೀವನದಲ್ಲಿ ಅಲ್ಲ. ಕ್ಷಮಿಸಿ ಹಾಗೂ ಮರೆತುಬಿಡಿ. ಇದು ಜೀವನದಲ್ಲಿ ಪಾಲಿಸಬೇಕಾದ ನಿಯಮ.

ಮೋಸ

ಮೋಸ

ಸಂಬಂಧಲ್ಲಿ ಮೋಸ ಮಾಡುವುದು ಅನೈತಿಕ ಹಾಗೂ ತಪ್ಪು. ಪರಸ್ಪರ ಪ್ರೀತಿಸುವುದು ಇಬ್ಬರು ಸೇರಿಕೊಂಡು ಮಾಡಿರುವ ನಿರ್ಧಾರವಾಗಿರುವುದು. ಅದೇ ಮೋಸ ಎನ್ನುವುದು ಒಬ್ಬನಿಂದ ಆಗುವಂತದ್ದಾಗಿದೆ. ಸಂಗಾತಿ ಜತೆಗಿನ ಸಂಬಂಧ ಕಳೆದುಕೊಳ್ಳಲು ಬಯಸದೆ ಇದ್ದರೆ ಆಗ ನೀವು ಮೋಸ ಮಾಡಲೇಬಾರದು. ಈ ಎಂಟು ವಿಚಾರಗಳನ್ನು ಪಾಲಿಸಿಕೊಂಡು ಹೋದರೆ ಆಗ ಖಂಡಿತವಾಗಿಯೂ ನಿಮ್ಮ ಜೀವನದಲ್ಲಿ ಸುಖ, ಸಂತೋಷವಿರುವುದು. ಈ ಲೇಖನದ ಬಗ್ಗೆ ನಿಮ್ಮ ಅಭಿಪ್ರಾಯಗಳು ಏನು ಎನ್ನುವುದರ ಬಗ್ಗೆ ಕಮೆಂಟ್ ಬಾಕ್ಸ್‌ನಲ್ಲಿ ತಿಳಿಸಲು ಮರೆಯಬೇಡಿ. ಅದೇ ರೀತಿ ನಿಮ್ಮ ಪ್ರೀತಿಪಾತ್ರರ ಜತೆಗೆ ಇದನ್ನು ಶೇರ್ ಮಾಡಿಕೊಳ್ಳಿ.

English summary

8 "I Won't Ever" In A Relationship

Falling in love is one of the most amazing feelings in the entire world. A good and healthy relationship is a dream of every couple and there are certain righteous things one must do in order to maintain the realtionship. "I won't ever" is a list of things that every couple needs to adhere to for a healthy relationship. There is no shortcut to any relationship.
X
Desktop Bottom Promotion