ಮಹಿಳೆಯರ ಇಂತಹ ಗುಣಗಳಿಗೆಯೇ, ಪುರುಷರು ಕ್ಲೀನ್ ಬೌಲ್ಡ್ ಆಗಿ ಬಿಡುತ್ತಾರೆ!

Posted By: Hemanth
Subscribe to Boldsky

ಹೆಣ್ಣು ಈ ಭೂಮಿಯ ಸುಂದರ ಸೃಷ್ಟಿ. ಆಕೆಯ ಸೌಂದರ್ಯದಿಂದಾಗಿಯೇ ಈ ಭೂಮಿ ಮೇಲೆ ಹಲವಾರು ಮಹಾನ್ ಘಟನೆಗಳು ನಡೆದು ಇತಿಹಾಸ ಸೇರಿವೆ. ಇದರಲ್ಲಿ ರಾಮಾಯಣ, ಮಹಾಭಾರತ ಕೂಡ ಒಂದು. ಇತಿಹಾಸವನ್ನು ನೋಡಿದರೆ ರಾಜರು, ಮತ್ತೊಂದು ದೇಶದ ಯುವರಾಣಿಯ ಮೋಹಪಾಶದಲ್ಲಿ ಬಿದ್ದಿರುವುದನ್ನು ನಾವು ಓದಿರುತ್ತೇವೆ.

ಆಧುನಿಕ ಯುಗದಲ್ಲಿ ಮಹಿಳೆಯು ತನ್ನಲ್ಲಿರುವ ಕೆಲವೊಂದು ಆಕರ್ಷಣೆಗಳಿಂದ ಪುರುಷನನ್ನು ಸೆಳೆಯುತ್ತಾಳೆ. ಮಹಿಳೆಯಲ್ಲಿರುವ ಕೆಲವು ಅಂಶಗಳನ್ನು ಪುರುಷರು ತುಂಬಾ ಆಕರ್ಷಣೀಯವೆಂದು ಭಾವಿಸುವರು. ಮಹಿಳೆಯರಲ್ಲಿರುವ ಇಂತಹ 13 ಆಕರ್ಷಣೆಗಳು ಯಾವುದು ಎಂದು ಈ ಲೇಖನದ ಮೂಲಕ ತಿಳಿದುಕೊಳ್ಳುವ...

ಆತ್ಮವಿಶ್ವಾಸ

ಆತ್ಮವಿಶ್ವಾಸ

ನಿಮ್ಮ ಆತ್ಮವಿಶ್ವಾಸವು ಪುರುಷರ ಮೇಲೆ ತುಂಬಾ ಪ್ರಭಾವ ಬೀರುವುದು. ಮಹಿಳೆಯು ಆಕರ್ಷಣೆ ಮತ್ತು ಸೆಕ್ಸಿಯಾಗಿರುವ ಜತೆಗೆ ಜಾಣೆಯಾಗಿರಬೇಕೆಂದು ಪುರುಷರು ಬಯಸುವರು. ನೀವು ಮಾತನಾಡುವ ರೀತಿ ಮತ್ತು ವಿಷಯವನ್ನು ಕೊಂಡುಹೋಗುವ ರೀತಿ ತುಂಬಾ ಪ್ರಾಮುಖ್ಯತೆ ವಹಿಸುವುದು. ಇದರಲ್ಲಿ ನಿಮ್ಮ ಆತ್ಮವಿಶ್ವಾಸವು ಪ್ರಮುಖ ಪಾತ್ರ ವಹಿಸುವುದು.

ಜಾಣ್ಮೆ

ಜಾಣ್ಮೆ

ಮಹಿಳೆಯು ತುಂಬಾ ಜಾಣ್ಮೆಯಿಂದ ಮಾತನಾಡಬೇಕೆಂದು ಪುರುಷರು ಬಯಸುವರು. ಮಹಿಳೆಯರು ಕೆಲವೊಂದು ಪ್ರಮುಖ ಅಂಶಗಳೊಂದಿಗೆ ತಮ್ಮ ಹೃದಯಬಿಚ್ಚಿ ಮಾತನಾಡುವುದು ಪುರುಷರಿಗೆ ಇಷ್ಟ. ಜಾಣ ಮಹಿಳೆಯು ತುಂಬಾ ಮಹತ್ವಾಕಾಂಕ್ಷಿಯಾಗಿರುವಳು ಮತ್ತು ಸುಶಿಕ್ಷಿತೆಯಾಗಿರುವಳು. ಇದರಿಂದ ಪುರುಷರು ಆಕೆಯ ಕಡೆ ಆಕರ್ಷಿತರಾಗುವರು.

ಉದ್ದನೆಯ ಕಾಲುಗಳು

ಉದ್ದನೆಯ ಕಾಲುಗಳು

ಉದ್ದನೆಯ ಕಾಲುಗಳು ಇರುವಂತಹ ಮಹಿಳೆಯರನ್ನು ಪುರುಷರು ಇಷ್ಟಪಡುವರು. ಇದು ದೈಹಿಕವಾಗಿ ಪುರುಷರು ಇಷ್ಟಪಡುವ ಅಂಶ.

ತಾಳ್ಮೆ

ತಾಳ್ಮೆ

ಮಹಿಳೆಯರು ತುಂಬಾ ಕೋಪಗೊಂಡ ಜಗಳವಾಡುವಂತಹ ಕೆಲಸ ಮಾಡುವುದು ಪುರುಷರಿಗೆ ಇಷ್ಟವಿರುವುದಿಲ್ಲ. ತುಂಬಾ ತಾಳ್ಮೆಯಿಂದ ಇರುವ ಮಹಿಳೆಯ ಇಷ್ಟಪಡುವರು.

ನೀಲಿ ಕಣ್ಣುಗಳು

ನೀಲಿ ಕಣ್ಣುಗಳು

ನೀಲಿ ಕಣ್ಣುಗಳು ತುಂಬಾ ಅಪರೂಪ ಮತ್ತು ಇದಕ್ಕೆ ಪುರುಷರು ಆಕರ್ಷಿತರಾಗುವರು. ಇದು ತಡೆಯಲಾಗದ್ದು ಎಂದು ಪುರುಷರು ಭಾವಿಸುವರು.

ಪ್ರೌಢತೆ ಪಡೆದಿರುವ

ಪ್ರೌಢತೆ ಪಡೆದಿರುವ

ಮಹಿಳೆಯರು ತಮ್ಮ ವಯಸ್ಸಿಗಿಂತ ಸ್ವಲ್ಪ ಹೆಚ್ಚು ಪ್ರೌಢತೆ ಪಡೆದಿರುವುದನ್ನು ಪುರುಷರು ಇಷ್ಟಪಡುವರು.

ನಡವಳಿಕೆ

ನಡವಳಿಕೆ

ನಡತೆ ವ್ಯಕ್ತಿಯನ್ನು ರೂಪಿಸುವುದು. ಅದೇ ರೀತಿ ಮಹಿಳೆಯ ನಡವಳಿಕೆಯು ಪುರುಷರನ್ನು ಆಕರ್ಷಿಸುವುದು. ಧನಾತ್ಮಕ ಮನೋಭಾವ ಹೊಂದಿರುವಂತಹ ಮಹಿಳೆಯರತ್ತ ಪುರುಷರು ಆಕರ್ಷಣೆಗೊಳಗಾಗುವರು. ಇದನ್ನು ನೋಡಿ ಅವರು ತಡೆದುಕೊಳ್ಳಲಾರರು ಮತ್ತು ಪ್ರಸ್ತಾವ ಮಾಡುವರು.

ಕೂದಲು

ಕೂದಲು

ಹೆಚ್ಚಿನ ಪುರುಷರು ಮಹಿಳೆಯರ ಕೂದಲು ನೋಡಿ ಆಕರ್ಷಿತರಾಗುವರು. ಇದು ಮಹಿಳೆಯ ಸೌಂದರ್ಯದ ಪ್ರತೀಕವಾಗಿರುವ ಕಾರಣ ಪುರುಷರು ಅದರತ್ತ ಆಕರ್ಷಿತರಾಗುವರು. ಸುಂದರವಾಗಿ ಕಾಣುವಲ್ಲಿ ಕೂದಲು ಪ್ರಮುಖ ಪಾತ್ರ ವಹಿಸುವುದು. ರೇಷ್ಮೆಯಂತಹ ಕೂದಲು ಇರುವ ಮಹಿಳೆಯರತ್ತ ಪುರುಷರು ಆಕರ್ಷಿತರಾಗುವುದು ಸಹಜ. ತಮ್ಮ ಕೇಶರಾಶಿಯಲ್ಲಿ ಕೈಗಳನ್ನು ಆಡಿಸುತ್ತಾ ಅದರೊಂದಿಗೆ ಆಟವಾಡುತ್ತಿರುವ, ಗಾಳಿಗೂ ಮುತ್ತಿಕ್ಕಲು ಹೋಗುವಂತಹ ಕೂದಲು ಪ್ರತಿಯೊಬ್ಬರು ಇಷ್ಟಪಡುವರು.

ಏರುತಗ್ಗುಗಳು

ಏರುತಗ್ಗುಗಳು

ಪುರುಷರನ್ನು ಆಕರ್ಷಿಸಲು ಇದು ಪ್ರಮುಖ ಪಾತ್ರ ವಹಿಸುವುದು. ಸುಂದರವಾದ ದೇಹ ಹೊಂದಿರುವ ಮಹಿಳೆಯರತ್ತ ಪುರುಷರು ಬೇಗನೆ ಆಕರ್ಷಿತರಾಗುವರು. ದೇಹದ ಏರುತಗ್ಗುಗಳು ಸರಿಯಾಗಿರುವಂತಹ ಮಹಿಳೆಯು ಪುರುಷರನ್ನು ಬೇಗನೆ ಸೆಳೆಯುವಳು.

 ಹಾಸ್ಯ

ಹಾಸ್ಯ

ಹಾಸ್ಯಕ್ಕೆ ಪ್ರತಿಯೊಬ್ಬರು ಆಕರ್ಷಿತರಾಗುವರು. ಮಹಿಳೆಯರ ವಿಚಾರದಲ್ಲಿ ಅವರು ಪುರುಷರನ್ನು ನಗಿಸಬೇಕೆಂದಿಲ್ಲ. ಆದರೆ ಅವರು ಹಾಸ್ಯವನ್ನು ಸ್ವಲ್ಪ ಮಟ್ಟಿಗೆ ಆನಂದಿಸಿದರೆ ಸಾಕು. ಇದರಿಂದಾಗಿ ಅವರು ಪುರುಷರ ಕಣ್ಣಲ್ಲಿ ಹೆಚ್ಚು ಆಕರ್ಷಣೀಯವಾಗಿ ಕಾಣುವರು.

ನಿಗೂಢ ಪ್ರವೃತ್ತಿ

ನಿಗೂಢ ಪ್ರವೃತ್ತಿ

ಪುರುಷರು ಪ್ರವೃತ್ತಿಯಲ್ಲಿ ಹೆಚ್ಚು ಕುತೂಹಲಿಗರಾಗಿರುವರು. ಇದರಿಂದಾಗಿ ಮಹಿಳೆಯರು ಎಲ್ಲಾ ರಹಸ್ಯಗಳನ್ನು ತಮ್ಮಲ್ಲಿ ಹೇಳಿಕೊಳ್ಳಬೇಕೆಂದು ಬಯಸುವರು. ರಹಸ್ಯಗಳನ್ನು ಮುಚ್ಚಿಡುವುದರಿಂದ ಮತ್ತು ನಿಗೂಢವಾಗಿರುವ ಕಾರಣ ಪುರುಷರು ಆಕರ್ಷಣೆಗೆ ಒಳಗಾಗುವರು. ಸಾಮಾನ್ಯ ಮಹಿಳೆಗಿಂತ ನಿಗೂಢ ಮಹಿಳೆಯರು ಹೆಚ್ಚು ಆಕರ್ಷಣೀಯ ಎಂದು ಪುರುಷರು ಭಾವಿಸಿರುವರು.

ಹೊಂದಿಕೊಳ್ಳುವ ಧಿರಿಸು

ಹೊಂದಿಕೊಳ್ಳುವ ಧಿರಿಸು

ಟ್ರೆಂಡ್ ಆಗಿರುವ ಮತ್ತು ನಿಮಗೆ ಹೊಂದಿಕೊಳ್ಳುವ ಬಟ್ಟೆ ಧರಿಸುವುದರಿಂದ ಇತರರಗಿಂತ ನೀವು ಹೆಚ್ಚು ಆಕರ್ಷಣೀಯವಾಗಿ ಕಾಣುವಿರಿ. ಈ ರೀತಿಯ ಬಟ್ಟೆಯ ಜ್ಞಾನದಿಂದ ನೀವು ಪುರುಷರಿಗೆ ಹೆಚ್ಚು ಆಕರ್ಷಣೀಯವಾಗಿ ಕಾಣುವಿರಿ. ಯಾವುದೇ ಒಂದು ಕಾರ್ಯಕ್ರಮಕ್ಕೆ ಅದಕ್ಕೆ ಹೊಂದಿಕೊಳ್ಳೂವಂತೆಹ ಬಟ್ಟೆ ಧರಿಸಿದರೆ ಆಗ ಪುರುಷರಿಗೆ ನೀವು ತುಂಬಾ ಆಕರ್ಷಣೀಯವಾಗಿರುವಿರಿ. ಬಟ್ಟೆ ಮೂಲಕವೇ ನೀವು ಅವರನ್ನು ಸೆಳೆಯಬಹುದು.

ಕನ್ನಡಕ

ಕನ್ನಡಕ

ಉದ್ದನೆಯ ಕೂದಲಿನೊಂದಿಗೆ ಮಹಿಳೆಯು ಕನ್ನಡಕ ಧರಿಸಿರಬೇಕೆಂದು ಪುರುಷರು ಬಯಸುವರು. ಇದರಿಂದ ಮಹಿಳೆಯು ತುಂಬಾ ಸುಲಭವಾಗಿ ಪುರುಷರನ್ನು ಆಕರ್ಷಿಸುವಳು. ಇತರ ಕೆಲವೊಂದು ಅಂಶಗಳು ಕೂಡ ಪುರುಷರಿಗೆ ತುಂಬಾ ಸೆಕ್ಸಿ ಹಾಗೂ ಆಕರ್ಷಣೀಯವಾಗಿ ಕಾಣಿಸಬಹುದು. ಆದರೆ ಈಗ 13 ವಿಚಾರಗಳನ್ನು ನಿಮಗೆ ತಿಳಿಸಿಕೊಡಲಾಗಿದೆ. ಇದರಿಂದ ಪುರುಷರು ಹೇಗೆ ಆಕರ್ಷಿತರಾಗುತ್ತಾರೆ ಎಂದು ಮಹಿಳೆಯರು ಇದರಿಂದ ತಿಳಿಯಬಹುದು.

English summary

13 Most Attractive Things About A Woman That Attracts Men

Every woman has her own charm. Women always have their ways to attract the attention of a guy. Sometimes, without any intention, these charms work their way out. No matter what guys are doing or where they are just by watching a group of girls happily chatting or having a cute girl passing by catches their attention.things about women that attract men, attractive things about a woman, attractive female personality traits, attractive qualities in a woman