ಮದುವೆಯ ನಂತರ ಇದೆಲ್ಲಾ ಬೇಕಾ? ಹಿಂದಿನ ಕಥೆಯೆಲ್ಲಾ ಮರೆತುಬಿಡಿ!

By: Hemanth
Subscribe to Boldsky

ಮದುವೆಗೆ ಮೊದಲು ಪ್ರೀತಿಯಲ್ಲಿ ಬೀಳುವುದು, ಆ ಪ್ರೀತಿ ಮುರಿದು ಹೋಗುವುದು ಇದು ಇಂದಿನ ದಿನಗಳಲ್ಲಿ ಸಾಮಾನ್ಯ. ಪ್ರೀತಿ-ಪ್ರೇಮಕ್ಕೆ ಬೆಲೆಯೇ ಇಲ್ಲದಿರುವ ಈಗಿನ ಕಾಲದಲ್ಲಿ ಪ್ರೀತಿ ಎನ್ನುವುದು ಕೇವಲ ಆಟಿಕೆಯ ವಸ್ತುವಾಗಿದೆ. ಅದರಲ್ಲೂ ಕೆಲವು ಮಂದಿ ಒಬ್ಬರನ್ನು ಪ್ರೀತಿಸಿ ಮತ್ತೊಬ್ಬರನ್ನು ಮದುವೆಯಾಗುತ್ತಾರೆ. ಇನ್ನು ಕೆಲವರು ಹಲವರನ್ನು ಪ್ರೀತಿಸಿ ಕೊನೆಗೆ ಮದುವೆಯಾಗದೆ ಉಳಿಯುತ್ತಾರೆ ಅಥವಾ ಮನೆಯವರು ಹೇಳಿದವರನ್ನು ಮದುವೆಯಾಗುವರು. ಇದಕ್ಕೆ ಹೆಣ್ಣು ಅಥವಾ ಗಂಡು ಎಂಬ ಭೇದವಿಲ್ಲ.

ಗಂಡ-ಹೆಂಡತಿಯ ಮಧ್ಯೆ ಹೊಂದಾಣಿಕೆ ಹೀಗಿದ್ರೆ ಸ್ವರ್ಗ ಅಂಗೈಯಲ್ಲಿ!

ಮದುವೆಯಾದ ಬಳಿಕ ನೀವು ಪ್ರೀತಿಸುತ್ತಿದ್ದ ವ್ಯಕ್ತಿಯ ಬಗ್ಗೆ ಸಂಗಾತಿಗೆ ತಿಳಿಸಿದರೆ ಆಗ ಅವರಿಗೆ ಅಸೂಯೆಯಾಗುವುದು ಖಚಿತ. ಇದನ್ನು ಪೂರ್ವಾನ್ವಯ ಅಸೂಯೆ ಎನ್ನಲಾಗುತ್ತದೆ. ನೀವು ತುಂಬಾ ಸುಂದರವಾಗಿರುವ ಮಹಿಳೆಯರನ್ನು ಮದುವೆಗೆ ಮೊದಲು ಪ್ರೀತಿಸುತ್ತಾ ಇದ್ದೀರಿ. ಆದರೆ ಬೇರೆಯವರನ್ನು ಮದುವೆಯಾದಿರಿ. ಇದರ ಬಗ್ಗೆ ಪತ್ನಿಗೆ ಹೇಳಿದರೆ ಆಕೆಗೆ ಪೂರ್ವಾನ್ವಯ ಅಸೂಯೆಯಾಗುವುದು. ಅದೇ ರೀತಿ ಪತ್ನಿ ತನ್ನ ಪ್ರಿಯಕರನ ಬಗ್ಗೆ ಹೇಳಿದರೂ ಪತಿಗೆ ಹೀಗೆ ಆಗುವುದು. ದಂಪತಿ ಇದನ್ನು ಹೇಗೆ ನಿಭಾಯಿಸುತ್ತಾರೆ. ಇದರ ಹಿಂದಿರುವ ಸತ್ಯಗಳನ್ನು ಬೋಲ್ಡ್ ಸ್ಕೈ ಹೊರಹಾಕಲಿದೆ....

ನಿಜವಾದ ಕಾರಣ

ನಿಜವಾದ ಕಾರಣ

ಅಸುರಕ್ಷತೆಯ ಭಾವದಿಂದ ಇಂತಹ ಪೂರ್ವಾನ್ವಯ ಅಸೂಯೆ ಹುಟ್ಟುವುದು. ಸಂಗಾತಿಯ ಮಾಜಿ ಪ್ರೇಮಿ/ ಪ್ರೇಯಸಿ ತುಂಬಾ ಸುಂದರವಾಗಿದ್ದರೆ ಆಗ ನಿಮ್ಮಲ್ಲಿ ಪೂರ್ವಾನ್ವಯ ಅಸೂಯೆ ಕಾಣಿಸಿಕೊಳ್ಳುತ್ತದೆ. ಮಾಜಿ ಪ್ರೇಯಸಿ ಮತ್ತೆ ತನ್ನ ಸಂಗಾತಿಯ ಜೀವನದಲ್ಲಿ ಬರಬಹುದು ಎನ್ನುವ ಅಸುರಕ್ಷಿತ ಭಾವವೇ ಇದಕ್ಕೆ ಕಾರಣ.

ನಿಜವಾದ ಕಾರಣ

ನಿಜವಾದ ಕಾರಣ

ಭಯವನ್ನು ನಿಯಂತ್ರಿಸಿಕೊಳ್ಳುವುದು ಅತೀ ಅಗತ್ಯ. ಇಲ್ಲವೆಂದಾದರೆ ನೀವು ಒಳಗಿನಿಂದೊಳಗೆ ಕುದಿಯುತ್ತಾ ಇರುತ್ತೀರಿ ಮತ್ತು ಜೀವನ ಒಳ್ಳೆಯ ರೀತಿಯಿಂದ ಸಾಗುವುದಿಲ್ಲ. ಭಯದ ಬಗ್ಗೆ ಸಂಗಾತಿಗೆ ಹೇಳಿಬಿಡಿ. ನಿಮ್ಮ ಸಂಗಾತಿಗೆ ಪೂರ್ವಾನ್ವಯ ಅಸೂಯೆಯಾಗುತ್ತಾ ಇದ್ದರೆ ನೀವು ತಾಳ್ಮೆಯಿಂದ ಇದ್ದು ಭಯದ ಬಗ್ಗೆ ತಿಳಿ ಹೇಳಿ.

ಏನು ಮಾಡಬೇಕು?

ಏನು ಮಾಡಬೇಕು?

ಸಂಗಾತಿಯ ಭಯ ನಿವಾರಿಸಲು ಏನು ಮಾಡಬೇಕು ಎನ್ನುವ ಪ್ರಶ್ನೆ ಬರುವುದು. ನೀವು ಯಾವುದನ್ನೂ ಮುಚ್ಚಿಡಬೇಡಿ. ನಿಮ್ಮ ಜೀವನದ ಬಗ್ಗೆ ಎಲ್ಲವನ್ನೂ ಮುಕ್ತವಾಗಿ ಹೇಳಿಕೊಳ್ಳಿ. ಸಂಗಾತಿಯಿಂದ ಯಾವುದೇ ವಿಚಾರ ಮುಚ್ಚಿಟ್ಟರೂ ಅಸೂಯೆ ಹೆಚ್ಚಾಗುವುದು. ಪೂರ್ವಾನ್ವಯ ಅಸೂಯೆಯಿಂದ ನೀವು ಬಳಲುತ್ತಾ ಇದ್ದರೆ ಆಗ ಇದರ ಬಗ್ಗೆ ನಿಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಮಾತನಾಡಿ ಮತ್ತು ಮನಸ್ಸಿನಲ್ಲಿರುವ ಅಸುರಕ್ಷಿತ ಮನೋಭಾವ ತೆಗೆದುಹಾಕಿ.

ಸಾಮಾಜಿಕ ಜಾಲತಾಣ ಲೈಕ್, ಕಮೆಂಟ್.....

ಸಾಮಾಜಿಕ ಜಾಲತಾಣ ಲೈಕ್, ಕಮೆಂಟ್.....

ಸಾಮಾಜಿಕ ಜಾಲತಾಣದ ಬಗ್ಗೆ ನಿಮ್ಮ ನಡವಳಿಕೆ ಸ್ಪಷ್ಟವಾಗಿರಲಿ. ಇದು ಸರಳವಾಗಿದ್ದಷ್ಟು ನಿಮ್ಮ ಸಂಗಾತಿಯ ಭೀತಿ ಕಡಿಮೆಯಾಗುವುದು. ಲೈಕ್, ಕಮೆಂಟ್ ಮತ್ತು ಮಾಜಿ ಪ್ರೇಯಸಿ ಅಥವಾ ಪ್ರಿಯತಮನನ್ನು ಛೇಡಿಸುವುದು ನಿಮ್ಮ ಸಂಗಾತಿಯ ಭೀತಿ ಹೆಚ್ಚಿಸಬಹುದು. ನೀವು ಪೂರ್ವಾನ್ವಯ ಭೀತಿಗೆ ಒಳಗಾಗಿದ್ದರೆ ಸಾಮಾಜಿಕ ಜಾಲತಾಣಗಳಲ್ಲಿ ನಿಮ್ಮ ಸಂಗಾತಿ ತುಂಬಾ ವಿಚಿತ್ರವಾಗಿ ವರ್ತಿಸುವ ಬಗ್ಗೆ ಪ್ರಶ್ನಿಸಿ.

ಹಿಂದಿನದ್ದನ್ನು ಮರೆತುಬಿಡಿ

ಹಿಂದಿನದ್ದನ್ನು ಮರೆತುಬಿಡಿ

ವರ್ತಮಾನದಲ್ಲಿ ಬದುಕಲು ಕಲಿಯಿರಿ. ನಿಮ್ಮ ಮಾಜಿ ಪ್ರೇಯಸಿಯೊಂದಿಗಿನ ಎಲ್ಲಾ ಸಂಬಂಧಗಳನ್ನು ಮುರಿದುಕೊಳ್ಳಿ. ಇದರಿಂದ ನಿಮ್ಮ ಈಗಿನ ಸಂಬಂಧ ಚೆನ್ನಾಗಿರುವುದು. ನಿಮಗೆ ಪೂರ್ವಾನ್ವಯ ಅಸೂಯೆಯಾಗುತ್ತಾ ಇದ್ದರೆ ನಿಮ್ಮ ಸಂಗಾತಿಯಲ್ಲಿ ಹಿಂದಿನ ಎಲ್ಲಾ ಸಂಬಂಧಗಳನ್ನು ಕಡಿದುಕೊಳ್ಳಲು ಹೇಳಿ.

ಒಳ್ಳೆಯ ಹೆಜ್ಜೆಯನ್ನಿಡಿ

ಒಳ್ಳೆಯ ಹೆಜ್ಜೆಯನ್ನಿಡಿ

ಸಂಗಾತಿಯು ನಿಮ್ಮೊಂದಿಗಿನ ಸಂಬಂಧದಲ್ಲಿ ಒಳ್ಳೆಯ ಭಾವನೆ ಹೊಂದಿರಲಿ ಮತ್ತು ಸಂಬಂಧವು ವಿಶೇಷವಾಗಿದೆ ಎಂದು ಅವರಿಗೆ ಅನಿಸಲಿ. ನಿಮ್ಮ ಸಂಗಾತಿಯು ನೀವು ಅಸೂಯೆ ಪಡುವಂತೆ ಮಾಡುತ್ತಾ ಇದ್ದರೆ ಆಗ ನಿಮ್ಮ ಭಾವನೆಗಳನ್ನು ಆತ ಅಥವಾ ಆಕೆಗೆ ಹೇಳಿ ಮತ್ತು ಅಸುರಕ್ಷಿತ ಭಾವನೆ ಇರದಂತೆ ನೋಡಿಕೊಳ್ಳಿ. ನಿಮಗೆ ಭೀತಿಯಿದ್ದರೂ ಸಂಗಾತಿ ಮಾತ್ರ ಇದನ್ನು ನಿವಾರಣೆ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳದೆ ಇದ್ದರೆ ಆಗ ನಿಮ್ಮ ಸಂಗಾತಿಗೆ ಕೌನ್ಸಿಲಿಂಗ್ ಬೇಕಾಗುವುದು. ಸಂಬಂಧಕ್ಕೆ ಬೆಲೆ ಕೊಡುತ್ತಾ ಇದ್ದರೆ ಖಂಡಿತವಾಗಿಯೂ ತನ್ನ ಸಂಗಾತಿಯು ಪೂರ್ವಾನ್ವಯ ಭೀತಿಯಿಂದ ಹೊರಬರಲು ಆತ ಅಥವಾ ಆಕೆ ನೆರವಾಗುತ್ತಾರೆ.

ಗಂಡ-ಹೆಂಡತಿಯ ಸಂಬಂಧ ಕನ್ನಡಿ ಇದ್ದಂತೆ-ಒಡೆದರೆ ಹೋಯಿತು!

English summary

Is Your Past Making Your Partner Jealous?

If your partner feels jealous of your past then it is known as retroactive jealousy. Didn't understand? Imagine this. You have dated some very good-looking women in the past before your partner got into your life. When she comes to see the pictures of your ex-girlfriends, she may feel a bit jealous. That is known as retroactive jealousy.It occurs to even men whose partners have handsome ex-boyfriends. Well, how should couples handle it? Here are some more facts.
Subscribe Newsletter