Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಿನಿಮಾ ಪ್ರೀತಿಯೇ ಬೇರೆ, ನಿಜ ಜೀವನವೇ ಬೇರೆ!
ಸಿನಿಮಾವು ಭಾರೀ ಪ್ರಭಾವಶಾಲಿ ಮಾಧ್ಯಮ. ಸಿನಿಮಾ ನೋಡಿಯೇ ಹಲವಾರು ಬದಲಾವಣೆಗಳು ಆಗಿರುವುದನ್ನು ನಾವು ನೋಡಿದ್ದೇವೆ. ಒಂದು ಸಿನಿಮಾವು ಎಷ್ಟು ಪ್ರಭಾವ ಬೀರುತ್ತದೆ ಎನ್ನುವುದು ಬಂಗಾರದ ಮನುಷ್ಯ ಚಿತ್ರದ ಬಳಿಕ ಆಗಿರುವ ಕೆಲವೊಂದು ಬದಲಾವಣೆಗಳಿಂದ ತಿಳಿಯಬಹುದು. ಕೆಲವೊಂದು ಸಿನಿಮಾಗಳು ಸ್ಫೂರ್ತಿಯಾಗುವುದಿದೆ.
ಸಿನಿಮಾಗಳನ್ನೇ ಪ್ರೇರಣೆಯನ್ನಾಗಿ ಮಾಡಿಕೊಂಡು ಹೊಸ ಉದ್ಯಮವನ್ನು ಸ್ಥಾಪಿಸಿದವರು ಇದ್ದಾರೆ. ಮಕ್ಕಳಿಂದ ಹಿಡಿದು ವಯೋವೃದ್ಧರ ತನಕ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಸಿನಿಮಾಗಳು ಇಂದಿನ ದಿನಗಳಲ್ಲಿ ಬರುವುದು ತುಂಬಾ ಕಡಿಮೆ. ಆದರೆ ರೋಮ್ಯಾಂಟಿಕ್ ಚಿತ್ರಗಳು ಜನರಿಗೆ ಇಷ್ಟವಾಗುತ್ತಾ ಇವೆ.
ಸಿನಿಮಾಗಳಲ್ಲಿ ನಾಯಕ ಹಾಗೂ ನಾಯಕಿ ಪ್ರೀತಿಸುವುದನ್ನು ನೋಡಿ ಖುಷಿಪಡುತ್ತೇವೆ ಮತ್ತು ನಾವು ಕೂಡ ಹೀಗೆ ಪ್ರೀತಿಸಬಹುದಲ್ಲವೇ ಎಂದು ಯೋಚಿಸುತ್ತೇವೆ. ಆದರೆ ಏನೇ ಆದರೂ ಸಿನಿಮಾ ಸಿನಿಮಾವೇ. ಅದು ನಿಜಜೀವನವಾಗಲು ಸಾಧ್ಯವಿಲ್ಲ. ಸಿನಿಮಾದಲ್ಲಿ ತೋರಿಸಿದಂತೆ ಯಾವುದೂ ನಿಜಜೀವನದಲ್ಲಿ ನಡೆಯುವುದಿಲ್ಲ ಎನ್ನುವುದನ್ನು ಬೋಲ್ಡ್ ಸ್ಕೈ ನಿಮಗೆ ತಿಳಿಸಿಕೊಡಲಿದೆ....

ಮೊದಲ ನೋಟದಲ್ಲೇ ಪ್ರೀತಿ ಮೂಡಲ್ಲ!
ನಾಯಕ ಕಾರಿನಿಂದ ಇಳಿಯುತ್ತಿರುವಾಗ ರಸ್ತೆಯ ಬದಿಯಲ್ಲಿ ನಾಯಕಿ ಅನಾಥ ಮಕ್ಕಳಿಗೆ ತಿಂಡಿ ನೀಡುವುದು ಕಾಣಿಸುತ್ತದೆ. ತಕ್ಷಣ ನಾಯಕಿಯ ಮೇಲೆ ನಾಯಕನಿಗೆ ಪ್ರೀತಿ ಮೂಡುತ್ತದೆ. ಇದು ಕೇವಲ ಸಿನಿಮಾದಲ್ಲಿ ಮಾತ್ರ. ನೈಜ ಜೀವನದಲ್ಲಿ ಪ್ರೀತಿ ಎನ್ನುವುದು ಮೊದಲ ನೋಟದಲ್ಲೇ ಮೂಡಿದರೆ ಅದು ಕೇವಲ ಆಕರ್ಷಣೆ. ಸಂಪೂರ್ಣವಾಗಿ ವ್ಯಕ್ತಿಯನ್ನು ತಿಳಿಯುವ ತನಕ ಸಂಬಂಧವು ಸರಿಯಾಗಿ ಸಾಗಲು ಸಾಧ್ಯವಿಲ್ಲ.

ಆಕರ್ಷಣೆ ಕಾಣಿಸದು
ಎಷ್ಟೋ ಮಂದಿ ಸುಂದರ ಹುಡುಗಿಯರನ್ನು ನಾಯಕ ನೋಡುತ್ತಾ ಇರುತ್ತಾನೆ. ಆದರೆ ನಾಯಕಿಯನ್ನು ಮೊದಲ ಸಲ ನೋಡಿದಾಗ ಅವನಿಗೆ ಸೆಳೆತ ಉಂಟಾಗುತ್ತದೆ. ಹೃದಯದಲ್ಲಿ ಏನೇನೋ ಭಾವನೆಗಳು ಮೂಡುವುದು. ಯಾವುದೇ ಕಾರಣವಿಲ್ಲದೆ ಆತ ಪ್ರೀತಿಯಲ್ಲಿ ಬೀಳುತ್ತಾನೆ. ಮೊದಲ ಸಲ ಭೇಟಿಯಾದ ವ್ಯಕ್ತಿಯೊಂದಿಗೆ ಡೇಟಿಂಗ್ ಮಾಡುವ ಬಗ್ಗೆ ನೈಜ ಜೀವನದಲ್ಲಿ ಊಹಿಸಲೂ ಸಾಧ್ಯವಿಲ್ಲ.

ಎಲ್ಲಾ ಹುಡುಗರಿಗೂ ಸಿಕ್ಸ್ ಪ್ಯಾಕ್ ಇರಲ್ಲ
ಸಿನಿಮಾಗಳಲ್ಲಿ ಹೀರೋ ಯಾವಾಗಲೂ ಕಟ್ಟುಮಸ್ತಾದ ದೇಹ ಹೊಂದಿರುತ್ತಾನೆ. ಆತನಿಗೆ ಸಿಕ್ಸ್ ಪ್ಯಾಕ್ ಅಬ್ಸ್ ಕೂಡ ಇರುವುದು. ನಾಯಕಿಯನ್ನು ಸುಂದರ ಕೂದಲು ಹಾಗೂ ಸೌಂದರ್ಯಕ್ಕೆ ತಕ್ಕ ದೇಹವಿರುವಂತೆ ತೋರಿಸಲಾಗುವುದು. ನಿಜ ಜೀವನದಲ್ಲಿ ದೈಹಿಕವಾಗಿ ಸುಂದರವಾಗಿಲ್ಲದಿದ್ದರೂ ಪ್ರೀತಿ ಮೂಡಬಹುದು.

ಎಲ್ಲಾ ಹುಡುಗರು ನಾಯಕರಲ್ಲ
ಸಿನಿಮಾಗಳಲ್ಲಿ ನಾಯಕನು ಹೇಳುವಂತಹ ಮಾತನ್ನು ಪ್ರತಿಯೊಬ್ಬರು ಹೇಳುತ್ತಾರೆ. ಆತ ಪ್ರೇರಣೆ ಹಾಗೂ ಸಮಾಜದಲ್ಲಿ ಬದಲಾವಣೆ ತರುತ್ತಾನೆ. ಆದರೆ ಇಂತವುಗಳು ನಿಜ ಜೀವನದಲ್ಲಿ ನಡೆಯುವುದಿಲ್ಲ. ನಿಜ ಜೀವನದಲ್ಲಿ ಇಂತಹ ಪುರುಷರು ಹಾಗೂ ಮಹಿಳೆಯರ ಸಂಖ್ಯೆ ತುಂಬಾ ಕಡಿಮೆ ಇರಬಹುದು. ಆದರೆ ನಿಮ್ಮ ಪ್ರೇಮಿ ನಿಜವಾಗಿಯೂ ನಿಮ್ಮನ್ನು ಪ್ರೀತಿಸುತ್ತಾ ಇರುತ್ತಾನೆ.

ಎಲ್ಲರು ಶ್ರೀಮಂತರಾಗಿರಲ್ಲ
ಸಿನಿಮಾಗಳಲ್ಲಿ ನಾಯಕ ಶ್ರೀಮಂತನಾಗಿದ್ದು, ವಿದೇಶದಲ್ಲಿ ವಿದ್ಯಾಭ್ಯಾಸ ಮುಗಿಸಿರುತ್ತಾನೆ. ಆದರೆ ನಿಜ ಜೀವನದಲ್ಲಿ ಪ್ರತಿಯೊಬ್ಬರು ಹೀಗೆ ಇರುವುದಿಲ್ಲ. ಇಂತಹ ನಿರೀಕ್ಷೆಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು.

ಎಲ್ಲಾ ಹುಡುಗರು ಹಾಸಿಗೆಯಲ್ಲಿ ಉತ್ತಮವಾಗಿರಲ್ಲ
ನೀವು ಯಾವುದೇ ಕೆಲಸ ಮಾಡುತ್ತಿದ್ದರೂ ಕಾಲಕ್ಕೆ ತಕ್ಕಂತೆ ಅದರ ಪ್ರದರ್ಶನ ಕಡಿಮೆಯಾಗುತ್ತಾ ಬರುತ್ತದೆ. ಅದೇ ರೀತಿ ಹಾಸಿಗೆಯಲ್ಲೂ ಆಗುವುದು. ಪ್ರತೀ ಸಲ ಒಂದೇ ರೀತಿಯ ಪ್ರದರ್ಶನ ನೀಡಲು ಸಾಧ್ಯವಿಲ್ಲ. ಇದರಲ್ಲೂ ಏರಿಳಿತಗಳು ಇರುವುದು. ನಿಜ ಜೀವನದಲ್ಲಿ ನಿಮ್ಮ ನಾಯಕ ಹಾಸಿಗೆಯಲ್ಲಿ ಕೆಲವೊಮ್ಮೆ ನಿಮಗೆ ಬೇಸರ ಮೂಡಿಸಬಹುದು.

ಎಲ್ಲಾ ಹುಡುಗರು ತುಂಬಾ ರೋಮ್ಯಾಂಟಿಕ್ ಆಗಿ ಪ್ರೀತಿ ನಿವೇದಿಸಲ್ಲ!
ಪ್ಯಾರೀಸ್ ನ ದುಬಾರಿ ಹೋಟೆಲ್ ನಲ್ಲಿ ಶಾಪಿಂಗ್ ಮುಗಿಸಿಕೊಂಡು ಬಂದು ಕುಳಿತಿರುವಂತಹ ನಾಯಕಿಗೆ ನಾಯಕರು ಗುಲಾಬಿಯ ಗುಚ್ಛವನ್ನು ನೀಡುತ್ತಾನೆ ಮತ್ತು ಮೊಣಕಾಲೂರಿ ತನ್ನ ಪ್ರೀತಿಯ ನಿವೇದನೆ ಮಾಡುತ್ತಾನೆ. ಆದರೆ ನಿಜಜೀವನದಲ್ಲಿ ಹುಡುಗರು ತಮ್ಮ ಹೃದಯ ಹೇಳಿದಾಗ ಪ್ರೀತಿ ನಿವೇದಿಸುತ್ತಾರೆ.ಕಾಲೇಜಿನ ಮೆಟ್ಟಿಲು, ಕಚೇರಿಯ ಕ್ಯಾಂಟೀನ್, ನಡುರಸ್ತೆ ಹೀಗೆ ಯಾವುದೇ ಸ್ಥಳದಲ್ಲಾದರೂ ಪ್ರೀತಿಯ ನಿವೇದನೆ ಮಾಡಬಹುದು.

ಎಲ್ಲವೂ ಮದುವೆಯಾಗಲ್ಲ
ಹೆಚ್ಚಿನ ರೋಮ್ಯಾಂಟಿಕ್ ಸಿನಿಮಾಗಳಲ್ಲಿ ಅಂತಿಮವಾಗಿ ನಾಯಕ ಮತ್ತು ನಾಯಕಿ ಮದುವೆಯಾಗುವುದರೊಂದಿಗೆ ಸಿನಿಮಾ ಕೊನೆಯಾಗುವುದು. ಎಲ್ಲವೂ ಸುಖಾಂತ್ಯವಾಗುವುದು ಎಂದು ನಾವು ಭಾವಿಸುತ್ತೇವೆ. ಆದರೆ ನಿಜ ಜೀವನದಲ್ಲಿ ಮದುವೆ ಬಳಿಕವೇ ಸಮಸ್ಯೆಗಳು ಆರಂಭವಾಗುತ್ತದೆ. ಇದರಿಂದ ಪ್ರೀತಿಸುವಾಗ ಸಿನಿಮಾದ ಬಗ್ಗೆ ಕಲ್ಪನೆ ಮಾಡಿಕೊಂಡು ಪ್ರೀತಿಸಬೇಡಿ. ನಿಜ ಜೀವನವೇ ಬೇರೆ. ಸಿನಿಮಾವೇ ಬೇರೆ ಎನ್ನುವುದು ತಿಳಿದಿರಲಿ.



Click it and Unblock the Notifications
