ಮತ್ತೆ ಹಳೆ ಪ್ರೇಮಿಯ ಸಂಗ ಮಾಡಬೇಡಿ

Posted By: Lekhaka
Subscribe to Boldsky

ಪ್ರೀತಿ ಪ್ರೇಮದಲ್ಲಿ ಸಿಲುಕಿದ ಬಳಿಕ ಪರಸ್ಪರರ ಮಧ್ಯೆ ಸಣ್ಣ ಸಣ್ಣ ಮುನಿಸು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಇದೇ ಮುನಿಸು ದೊಡ್ಡದಾಗಿ ಅದು ಸಂಬಂಧಕ್ಕೆ ಅಡ್ಡಿಯಾದರೆ ಅದರ ಪರಿಣಾಮ ಮಾತ್ರ ಭಿನ್ನವಾಗಿರುತ್ತದೆ. ಯಾಕೆಂದರೆ ಒಮ್ಮೆ ಸಂಬಂಧ ಕಡಿದು ಬಿದ್ದರೆ ಮತ್ತೆ ಅದನ್ನು ಜೋಡಿಸಲು ತುಂಬಾ ಕಷ್ಟವಾಗುತ್ತದೆ. ಪ್ರೇಮಿಯಿಂದ ದೂರವಾದ ಬಳಿಕ ಆತನ ಬಗ್ಗೆ ಮನಸ್ಸಿನಲ್ಲಿ ಭಾವನೆಗಳು ಇದ್ದೇ ಇರುತ್ತದೆ. ಆದರೆ ಅವರಿಂದ ನೀವು ಯಾಕೆ ದೂರವಾದಿರಿ ಎನ್ನುವುದನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳಬೇಕು. ಹಿಂದೆ ಪತ್ರ, ಗ್ರೀಟಿಂಗ್ಸ್ ಮೂಲಕ ಪ್ರೇಮ ನಿವೇದನೆ ಮಾಡಲಾಗುತ್ತಿತ್ತು.

ಆದರೆ ಇಂದಿನ ಯುಗ ಎಷ್ಟೇ ವೇಗವಾಗಿದೆಯೆಂದರೆ ಕೇವಲ ಒಂದು ವಾಟ್ಸಪ್ ಮೆಸೇಜ್ ನಲ್ಲೇ ಪ್ರೇಮ ನಿವೇದನೆಯಾಗಿಬಿಡುತ್ತದೆ. ಆದರೆ ಇದೇ ತಂತ್ರಜ್ಞಾನವು ಪ್ರೇಮಿ ಅಥವಾ ಪ್ರಿಯತಮೆಯಿಂದ ದೂರವಾದ ಬಳಿಕ ನಿಮ್ಮನ್ನು ಕಾಡುತ್ತಿರುವುದು. ಯಾಕೆಂದರೆ ಅವರ ಸಾಮಾಜಿಕ ಜಾಲತಾಣಗಳು ನಿಮ್ಮ ಕಣ್ಣ ದೃಷ್ಟಿಗೆ ಬೀಳುತ್ತಿರುವುದು.

ಇದರಲ್ಲಿ ಅವರ ಇತ್ತೀಚಿನ ಫೋಟೊಗಳು ಕೂಡ ಇರಬಹುದು. ಇಂತಹ ಸಂದರ್ಭದಲ್ಲಿ ಅವರನ್ನು ಮನಸ್ಸಿನಿಂದ ದೂರ ಮಾಡುವುದು ಅಷ್ಟು ಸುಲಭ ಕೆಲಸವಲ್ಲ. ಆದೆರ ಮಾಜಿ ಪ್ರೇಮಿ ಮತ್ತೆ ನಿಮ್ಮ ಜೀವನದಲ್ಲಿ ಬರಲು ಬಯಸಿದರೆ ಆಗ ನೀವು ಏನು ಮಾಡಬೇಕು ಎಂದು ತಿಳಿದುಕೊಳ್ಳಬೇಕು. ಯಾಕೆಂದರೆ ಮೊದಲಾಗಿ ನೀವು ದೂರವಾಗಿರುವುದು ಯಾಕೆ ಎಂದು ತಿಳಿಯುವುದು ಅತೀ ಅಗತ್ಯ. ನಿಮ್ಮನ್ನು ಮೊದಲು ಪ್ರೀತಿಸಿ. ಪ್ರೇಮಿ ನಿಮ್ಮ ಜೀವನದಲ್ಲಿ ಮರಳಿ ಬರಲು ಪ್ರಯತ್ನಿಸಿದರೆ ನೀವು ಖಂಡಿತವಾಗಿಯೂ ಇಲ್ಲ ಎನ್ನುವ ಉತ್ತರ ನೀಡಬೇಕು. ಇದು ಯಾಕೆಂದು ಈ ಲೇಖನ ಓದಿದರೆ ತಿಳಿಯಲಿದೆ.... 

ಅದರಿಂದ ನೀವು ಮುನ್ನಡೆದಿದ್ದೀರಿ

ಅದರಿಂದ ನೀವು ಮುನ್ನಡೆದಿದ್ದೀರಿ

ಪ್ರೇಮಿಯಿಂದ ದೂರವಾಗಿರುವ ಆ ಕೆಟ್ಟ ಸಮಯದಿಂದ ನೀವು ಈಗಾಗಲೇ ದೂರ ಸಾಗಿದ್ದೀರಿ. ಆದರೆ ಪ್ರೇಮಿ ಈಗ ಕ್ಷಮೆ ಕೇಳುತ್ತಾ ಇದ್ದಾನೆ. ಆತ ಮತ್ತೆ ನಿಮ್ಮ ಜತೆಗಿರಲು ಬಯಸುತ್ತಿದ್ದಾನೆ. ಆದರೆ ಮತ್ತೆ ಅದೇ ವಿಚಾರವನ್ನು ನೀವು ಬಯಸುವುದಿಲ್ಲವೆಂದು ನೀವು ನೆನಪಿಟ್ಟುಕೊಳ್ಳಿ. ದೂರವಾದ ಈ ಸಮಯದಲ್ಲಿ ಇದು ಮತ್ತಷ್ಟು ಕಠಿಣವಾಗಲಿದೆ.

ಮರಳುವುದಕ್ಕಿಂತ ನೀವು ಎಷ್ಟೋ ಉತ್ತಮ

ಮರಳುವುದಕ್ಕಿಂತ ನೀವು ಎಷ್ಟೋ ಉತ್ತಮ

ಪ್ರೇಮಿಗಳು ದೂರವಾಗಲು ಏನಾದರೂ ಒಂದು ಕಾರಣ ಇದ್ದೇ ಇರುವುದು. ಇದನ್ನು ಯಾರು ಬೇಕಾದರೂ ಆರಂಭಿಸಿರಬಹುದು. ಆದರೆ ದೂರವಾದ ಕೆಲವು ಸಮಯದ ಬಳಿಕ ನೀವು ಸಂಪೂರ್ಣ ಜೀವನ ಸಾಗಿಸಲು ಬಯಸಿದ ವ್ಯಕ್ತಿ ಆತನಲ್ಲವೆಂದು ಅರ್ಥಮಾಡಿಕೊಳ್ಳುತ್ತೀರಿ. ಆತ ಮತ್ತೆ ನಿಮ್ಮ ಜೀವನದಲ್ಲಿ ಮರಳಿ ಬರಲು ಬಯಸುತ್ತಿದ್ದರೂ ನಿಮಗೆ ಅದಕ್ಕಿಂತ ಒಳ್ಳೆಯ ಆಯ್ಕೆಯಿದೆ ಎನ್ನುವುದು ನೆನಪಿರಲಿ. ನಿಮ್ಮ ಬಗ್ಗೆ ಕಾಳಜಿ ವಹಿಸದೆ ಇರುವ ವ್ಯಕ್ತಿಯೊಂದಿಗೆ ಜೀವನ ಸಾಗಿಸಲು ಬಯಸುವುದಿಲ್ಲವೆಂದು ನೀವು ಅರ್ಥ ಮಾಡಿಕೊಳ್ಳಿ.

ನೀವು ಯಾವುದೋ ಒಂದು ಕಾರಣಕ್ಕೆ ದೂರವಾಗಿರಬಹುದು

ನೀವು ಯಾವುದೋ ಒಂದು ಕಾರಣಕ್ಕೆ ದೂರವಾಗಿರಬಹುದು

ಮಾಜಿ ಪ್ರೇಮಿಯು ನಿನ್ನನ್ನು ತುಂಬಾ ಪ್ರೀತಿಸುತ್ತಿದ್ದೇನೆ ಮತ್ತು ಮರಳಿ ನಿನ್ನ ಜತೆಗಿರಲು ಬಯಸುತ್ತೇನೆ ಎನ್ನುವ ಸಂದೇಶಗಳನ್ನು ನಿಮಗೆ ಕಳುಹಿಸಬಹುದು. ಆದರೆ ದೂರವಾಗಿರುವ ಕೆಟ್ಟ ಕಾರಣ ಮತ್ತು ಅದರ ಬಳಿಕದ ಕಠಿಣ ಸಮಯವನ್ನು ನೀವು ಎಂದಿಗೂ ಮರೆಯದಿರಿ. ನೀವು ಯಾವ ಪರಿಸ್ಥಿತಿಯಲ್ಲಿ ಇದ್ದೀರಿ ಎಂದು ತಿಳಿಯಲು ನಿಮ್ಮ ಮಾಜಿ ಪ್ರೇಮಿ ಪ್ರಯತ್ನಿಸದೆ ಇರಬಹುದು. ಆತ ತನ್ನ ಗೆಳೆಯರು ಅಥವಾ ಹೊಸ ಹುಡುಗಿ ಜತೆಗಿನ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿರಬಹುದು. ಒಮ್ಮೆ ನಿಮ್ಮಿಂದ ದೂರವಾದತ ಮತ್ತೊಮ್ಮೆ ನಿಮ್ಮಿಂದ ದೂರವಾಗಬಲ್ಲ.

ಮತ್ತೆ ಹಾಗೆ ಇರದು

ಮತ್ತೆ ಹಾಗೆ ಇರದು

ಒಮ್ಮೆ ಪ್ರೇಮಿಯಿಂದ ದೂರವಾದ ಬಳಿಕ ಮತ್ತೆ ಜತೆಯಾದರೂ ಕೂಡ ಆ ಸುಂದರ ಕ್ಷಣಗಳು ಮರಳಿ ಬರುವುದಿಲ್ಲ. ಹಿಂದೆ ನೀವು ಪ್ರೀತಿಸಿದಷ್ಟು ಪರಸ್ಪರ ಪ್ರೀತಿಸಲು ಸಾಧ್ಯವಿಲ್ಲ. ಪ್ರೀತಿ ಕೊನೆಯಾದ ಕಾರಣ ನೀವಿಬ್ಬರು ದೂರವಾಗಿದ್ದೀರಿ.

ಅವಕಾಶಗಳು

ಅವಕಾಶಗಳು

ನಿಮ್ಮನ್ನು ಬಿಟ್ಟು ಹೋಗದಂತೆ ಮತ್ತು ಸಂಬಂಧ ಕಡಿದುಕೊಳ್ಳದಂತೆ ನೀವು ಗೋಗರೆದು ಬೇಡಿಕೊಂಡರೂ ಆತ ನಿಲ್ಲಲಿಲ್ಲ. ಕಾರಣ ಏನೇ ಆಗಿದ್ದರೂ ಮರಳಿ ಬರಲು ಆತನಿಗೆ ಹೆಚ್ಚಿನ ಸಮಯ ಇದ್ದೇ ಇರುತ್ತದೆ. ಒಂದು ವರ್ಷ ಅಥವಾ ಅದರ ಬಳಿಕ ಮರಳುವುದರಲ್ಲಿ ಯಾವುದೇ ಅರ್ಥವಿಲ್ಲ. ಯಾಕೆಂದರೆ ನೀವು ಆಗಲೇ ಎಲ್ಲವನ್ನು ಮರೆತಿರುತ್ತೀರಿ.

ಏಕಾಂಗಿಯಾಗಿರಿ

ಏಕಾಂಗಿಯಾಗಿರಿ

ತುಂಬಾ ಕೆಟ್ಟ ಸಂಬಂಧ ಅಥವಾ ತುಂಬಾ ಭಯಾನಕವಾಗಿ ನೀವು ಪ್ರೇಮಿಯಿಂದ ದೂರವಾಗಿರಬಹುದು. ಇದರಿಂದ ನೀವು ಏಕಾಂಗಿಯಾಗಿರಲು ಬಯಸಬಹುದು. ಆತ ನಿಮ್ಮೊಂದಿಗಿನ ಸಂಬಂಧಕ್ಕೆ ಮರಳಲು ಎಷ್ಟೇ ಸಲ ಬೇಕಾದರೂ ಮೆಸೇಜ್ ಮಾಡಿದರೂ ನೀವು ಮಾತ್ರ ನಿರ್ಧಾರ ಹಿಂತೆಗೆದುಕೊಳ್ಳಬೇಡಿ.

 ಆತನಿಗೆ ಬೋರ್ ಆಗಿರಬಹುದು

ಆತನಿಗೆ ಬೋರ್ ಆಗಿರಬಹುದು

ಆತ ನಿಮ್ಮೊಂದಿಗಿನ ಸಂಬಂಧದಿಂದ ಬೋರ್ ಆಗಿರಬಹುದು. ನಿಮ್ಮ ಸಂಬಂಧದಲ್ಲಿನ ಆಕರ್ಷಣೆ ಕಳೆದುಕೊಂಡಿರಬಹುದು. ನಮ್ಮೊಂದಿಗೆ ಮರಳಲು ಬಯಸಿರುವುದು ಕೇವಲ ಟೈಂ ಪಾಸ್ ಆಗಿರಬಹುದು ಅಥವಾ ನನ್ನ ಜತೆಗೂ ಸಂಗಾತಿ ಇದ್ದಾಳೆ ಎಂದು ತೋರಿಸಲು ಹೀಗೆ ಮಾಡಬಹುದು. ಮಾಜಿ ಪ್ರೇಮಿಯ ಜತೆಗೆ ಮತ್ತೆ ಸಂಬಂಧ ಬೆಳೆಸುವುದು ತುಂಬಾ ಕೆಟ್ಟ ವಿಷಯ. ನೀವು ಆತನನ್ನು ಬಿಟ್ಟು ಕೂಡ ಚೆನ್ನಾಗಿದ್ದೀರಿ ಎಂದು ನೆನಪಿಸಿಕೊಳ್ಳುತ್ತಿರಬೇಕು.

English summary

Ex Wanting To Get Back? Here's Why You Should Tell A “No”

Unfriending them is not really an option because it is hard to get them out of your mind. Just remember, if your ex tries to come back, you need to think why you people broke up in the first place. Your ex may be the one who started all the mess. It is true that keeping your sanity intact is not possible at this time, but you need to remind yourself that you deserve a lot better. Love yourself first. And here's why you should say a "NO" if your ex plans on getting back with you.
Subscribe Newsletter