For Quick Alerts
ALLOW NOTIFICATIONS  
For Daily Alerts

  ಅನುಷ್ಕಾ-ವಿರಾಟ್ ಇವರಿಬ್ಬರ ಸಂಪೂರ್ಣ ಪ್ರೀತಿಯ ಕಥೆ...

  By Lekhaka
  |

  ಕ್ರಿಕೆಟ್ ಮೈದಾನದಲ್ಲಿ ಯಾವಾಗಲೂ ತನ್ನ ಆಕ್ರಮಣಕಾರಿ ಶೈಲಿ ಹಾಗೂ ವ್ಯಕ್ತಿತ್ವ ತೋರಿಸುವಂತಹ ವ್ಯಕ್ತಿ ಮತ್ತು ಬಾಲಿವುಡ್ ನಲ್ಲಿ ತುಂಬಾ ಪ್ರತಿಭಾವಂತ ನಟಿಯ ನಡುವಿನ ಸಂಬಂಧ ಹೇಗಿರಬಹುದು ಎಂದು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅನುಷ್ಕಾ ಶರ್ಮಾ ತನ್ನ ಕುಟುಂಬದೊಂದಿಗೆ ಇಟಲಿಗೆ ತೆರಳಲು ವಿಮಾನವೇರಿದ ಬಳಿಕ ಇಂಟರ್ನೆಟ್ ನಲ್ಲಿ ಹಲವಾರು ರೀತಿಯ ಗಾಳಿಸುದ್ದಿಗಳು ಹಬ್ಬಲು ಆರಂಭವಾದವು. ಏನು ಸುದ್ದಿ ಎನ್ನುವ ತವಕ ಪ್ರತಿಯೊಬ್ಬರಲ್ಲೂ ಇತ್ತು. ಅನುಷ್ಕಾ ಮತ್ತು ವಿರಾಟ್ ಕೊಹ್ಲಿ ಡಿ. 12ರಂದು ಇಟಲಿಯ ಮಿಲಾನ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಕೂಡ ಬಂತು.

  ಇದು ತುಂಬಾ ಖಾಸಗಿ ಕಾರ್ಯಕ್ರಮವಾಗಿರುವುದು ಮಾತ್ರವಲ್ಲದೆ, ಸಚಿನ್, ಯುವರಾಜ್ ಮತ್ತು ಶಾರೂಕ್ ಖಾನ್ ಮಾತ್ರ ಅತಿಥಿಗಳ ಪಟ್ಟಿಯಲ್ಲಿದ್ದರು. ಇವರಿಬ್ಬರ ನಡುವಿನ ಸಂಬಂಧವು ತುಂಬಾ ದೀರ್ಘ ಸಮಯದ್ದಾಗಿದೆ. ವಿರಾಟ್ ಇದರ ಬಗ್ಗೆ ಹೇಳಿಕೊಂಡಿದ್ದರೂ ಅನುಷ್ಕಾ ಮಾತ್ರ ಚಕಾರವೆತ್ತಿಲ್ಲ. ಎನ್ ಎಚ್ 10 ಚಿತ್ರದಲ್ಲಿ ಅನುಷ್ಕಾ ನಟನೆ ಮಾಡುತ್ತಿದ್ದ ಸಮಯದಲ್ಲಿ ಇವರಿಬ್ಬರ ಮಧ್ಯೆ ಪ್ರೇಮಾಂಕುರವಾಯಿತು ಎನ್ನಲಾಗಿದೆ. ಅನುಷ್ಕಾ ಸಿನಿಮಾಗಳನ್ನು ವಿರಾಟ್ ಪ್ರಶಂಸೆ ಮಾಡಿದರೆ, ವಿರಾಟ್ ಹೊಡೆದ ಪ್ರತಿ ಬೌಂಡರಿ ಸಿಕ್ಸರ್ ಗೂ ಅನುಷ್ಕಾ ಚಪ್ಪಾಳೆ ಬೀಳುತ್ತಿತ್ತು. ಅವರಿಬ್ಬರ ಸಂಪೂರ್ಣ ಪ್ರೀತಿಯ ಕಥೆ ಇಲ್ಲಿದೆ.... 

  ಮೊದಲ ಭೇಟಿ

  ಮೊದಲ ಭೇಟಿ

  ಟಿವಿ ಜಾಹೀರಾತು ಒಂದರಲ್ಲಿ ಜತೆಯಾಗಿ ನಟಿಸಲು ಅವಕಾಶ ಸಿಕ್ಕಿದಾಗ ಕ್ರಿಕೆಟಿನ ಸ್ಫೂರದ್ರೂಪಿ ಯುವಕ ವಿರಾಟ್ ಗೆ ಬಾಲಿವುಡ್ ಬೆಡಗಿ ಅನುಷ್ಕಾ ಭೇಟಿಯಾಗುವ ಅವಕಾಶ ಸಿಕ್ಕಿತು. ಈ ಚಿತ್ರೀಕರಣದ ಬಳಿಕ ಅವರಿಬ್ಬರು ಪರಸ್ಪರ ಒಳ್ಳೆಯ ಸಂಬಂಧವನ್ನು ಇಟ್ಟುಕೊಂಡಿದ್ದರು ಮತ್ತು ಹಲವಾರು ಜಾಹೀರಾತುಗಳಲ್ಲಿ ಜತೆಯಾಗಿ ನಟಿಸಿದ್ದರು. ಈ ಮೊದಲ ಭೇಟಿಯೇ ಅವರಲ್ಲಿ ಪ್ರೀತಿ ಮೂಡಿಸಿದೆ ಎನ್ನಲಾಗಿದೆ.

   ಹನಿಮೂನ್ ಜಾಗ!

  ಹನಿಮೂನ್ ಜಾಗ!

  ವಿರಾಟ್ ಮತ್ತು ಅನುಷ್ಕಾ ಸಂಬಂಧವು ಜತೆಯಾಗಿದ್ದಾಗ ಅದು ತುಂಬಾ ಬಿಸಿ ಸುದ್ದಿಯಾಗಿರುತ್ತಿತ್ತು. ವಿರಾಟ್ ನೋಡಲು ಅನುಷ್ಕಾ ಮೈದಾನಕ್ಕೆ ತೆರಳಿದರೆ, ಅನುಷ್ಕಾ ನೆನಪಲ್ಲಿ ಕೆಲವು ಸಲ ಝೀರೋ ಸುತ್ತಿಕೊಂಡು ವಿರಾಟ್ ನೇರವಾಗಿ ಸೆಟ್ ಗೆ ಓಡುತ್ತಿದ್ದರು. ಪುಣಿ ವಿರುದ್ಧ ನಡೆದ ಐಪಿಎಲ್ ನ ಪಂದ್ಯದಲ್ಲಿ ವಿರಾಟ್ ಗೆ ಬೆಂಬಲ ನೀಡುತ್ತಾ ಅನುಷ್ಕಾ ಪೆವಿಲಿಯನ್ ನಲ್ಲಿ ಖುಷಿ ಪಡುತ್ತಾ ಇದ್ದದ್ದು ಕಾಣಿಸುತ್ತಾ ಇತ್ತು. ಹೈದರಾಬಾದ್ ನಲ್ಲಿ ಶ್ರೀಲಂಕಾ ವಿರುದ್ಧ ನಡೆದ ಪಂದ್ಯದ ವೇಳೆ ಪೆವಿಲಿಯನ್ ನಲ್ಲಿದ್ದ `ನುಷ್ಕಾ' ಗೆ ಫ್ಲೈಯಿಂಗ್ ಕಿಸ್ ನೀಡಿದ್ದ ವಿರಾಟ್ ಮಾಧ್ಯಮಗಳ ಚರ್ಚೆಗೆ ವಸ್ತುವಾಗಿದ್ದರು. ಇದೇ ವರ್ಷ ಬಾಂಬೆ ವೆಲ್ವೆಟ್ ಚಿತ್ರದಲ್ಲಿ ನಟಿಸುತ್ತಿದ್ದ ಅನುಷ್ಕಾ ಚಿತ್ರೀಕರಣದ ಜಾಗಕ್ಕೆ ಕೂಡ ವಿರಾಟ್ ಭೇಟಿ ನೀಡಿದ್ದರು.

  ವಿರಾಟ್ ಕಳಪೆ ಪ್ರದರ್ಶನ

  ವಿರಾಟ್ ಕಳಪೆ ಪ್ರದರ್ಶನ

  ವಿರಾಟ್ ಮತ್ತು ಅನುಷ್ಕಾ ಸಂಬಂಧವು ಎಷ್ಟು ಜನಪ್ರಿಯವಾಗಿತ್ತು ಎಂದರೆ ಮೈದಾನದಲ್ಲಿ ವಿರಾಟ್ ಕಳಪೆ ಪ್ರದರ್ಶನ ನೀಡಿದರೆ ಆಗ ಅನುಷ್ಕಾಳನ್ನು ಗುರಿ ಮಾಡಲಾಗುತ್ತಾ ಇತ್ತು. ಈ ವಿಚಾರದ ಬಗ್ಗೆ ಅನುಷ್ಕಾ ಮೌನವನ್ನೇ ವಹಿಸಿದ್ದಳು. ಇನ್ ಸ್ಟಾ ಗ್ರಾಮ್ ನಲ್ಲಿ ಅವರಿಬ್ಬರು ಅನ್ ಫಾಲೋ ಮಾಡಿಕೊಂಡಿದ್ದರು. ಜತೆಯಾಗಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದನ್ನು ನಿಲ್ಲಿಸಿದ್ದರು. ಆದರೆ ಕೆಲವೇ ತಿಂಗಳಲ್ಲಿ ಅವರಿಬ್ಬರು ಮತ್ತೆ ಜತೆಯಾಗಿ ಕಾಣಿಸಿಕೊಂಡು ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದ್ದರು.

  ರತ್ನಗಂಬಳಿಯಲ್ಲಿ ಮೊದಲು ಜತೆಯಾಗಿ...

  ರತ್ನಗಂಬಳಿಯಲ್ಲಿ ಮೊದಲು ಜತೆಯಾಗಿ...

  ವಿರಾಟ್ ಮತ್ತು ಅನುಷ್ಕಾ 2015ರ ಜುಲೈ 21ರಂದು ಮುಂಬಯಿಯಲ್ಲಿ ನಡೆದ ವೋಗ್ ಬ್ಯೂಟಿ ಅವಾರ್ಡ್ ಕಾರ್ಯಕ್ರಮದಲ್ಲಿ ಜತೆಯಾಗಿ ಕಾಣಿಸಿಕೊಂಡರು. ಆ ಕಾರ್ಯಕ್ರಮದಲ್ಲಿ ಅವರಿಬ್ಬರು ಸ್ವರ್ಗದಿಂದ ಬಂದ ಜೋಡಿಯಂತೆ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಫೋಟೊಗ್ರಾಫರ್ ಗಳಿಗೆ ಅಂದು ಹಬ್ಬವಾಗಿತ್ತು. ಈ ಕಾರ್ಯಕ್ರಮದ ಬಳಿಕ ಇಂಟರ್ನೆಟ್ ನಲ್ಲಿ ಅವರಿಬ್ಬರ ಪ್ರೀತಿಯ ಬಗ್ಗೆ ಮತ್ತೆ ಚರ್ಚೆಗಳು ಆರಂಭವಾದವು ಮತ್ತು ಅಭಿಮಾನಿಗಳು ಅವರಿಬ್ಬರು ಪ್ರೀತಿಯನ್ನು ಸ್ವೀರಸಿದ್ದರು.

  ವೈಯಕ್ತಿಕ ಕಲಹ

  ವೈಯಕ್ತಿಕ ಕಲಹ

  ಮಾಧ್ಯಮಗಳು ಹೇಳುವ ಪ್ರಕಾರ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನಕ್ಕೆ ಅನುಷ್ಕಾ ಶರ್ಮಾಳೇ ಕಾರಣವಂತೆ. ಅವರಿಬ್ಬರ ವೈಯಕ್ತಿಕ ಕಲಹ ವಿರಾಟ್ ಆಟದ ಮೇಲೆ ಪರಿಣಾಮ ಬೀರಿತ್ತು. ಪುರುಷರ ಮ್ಯಾಗಜಿನ್ ಒಂದಕ್ಕೆ ತುಂಬಾ ಸೆಕ್ಸಿಯಾಗಿ ಪೋಸ್ ನೀಡಿದ್ದ ಅನುಷ್ಕಾಳಿಂದ ವಿರಾಟ್ ಸಿಡಿಮಿಡಿಗೊಂಡಿದ್ದ. ಅವರಿಬ್ಬರು ಇದೇ ವಿಚಾರವಾಗಿ ಪರಸ್ಪರ ಜಗಳವಾಡಿದ್ದರು. ಫೋನ್ ನಲ್ಲೇ ಈ ಜಗಳವಾಗಿತ್ತು. ಆದರೆ ಅಂತಿಮವಾಗಿ ಎಲ್ಲವೂ ಸರಿಯಾಗಿತ್ತು ಎನ್ನಲಾಗಿದೆ.

   ವಿರಾಟ್ ಒಬ್ಬ ಜಂಟ್ಲ್ ಮೆನ್

  ವಿರಾಟ್ ಒಬ್ಬ ಜಂಟ್ಲ್ ಮೆನ್

  ಪರಸ್ಪರ ದೂರವಾದ ಬಳಿಕವೂ ವಿರಾಟ್ ಮಾತ್ರ ಅನುಷ್ಕಾಳ ಪರವಾಗಿಯೇ ಮಾತನಾಡುತ್ತಾ ಇದ್ದ. ಅನುಷ್ಕಾ ಬಗ್ಗೆ ಕೆಟ್ಟದಾಗಿ ಮಾತನಾಡಿ, ವಿರಾಟ್ ಕೆಟ್ಟ ಪ್ರದರ್ಶನಕ್ಕೆ ಆಕೆಯೇ ಕಾರಣ ಎಂದು ಭಾರೀ ಜನರು ಟೀಕೆ ಮಾಡುತ್ತಿದ್ದಾಗ ಮೌನ ಮುರಿದಿದ್ದ ವಿರಾಟ್, ಎಲ್ಲರ ಬಾಯಿ ಮುಚ್ಚಿಸಿದ್ದ. ವಿರಾಟ್ ಹೇಳಿರುವುದು....ಎಲ್ಲ ಸಲವೂ ಅನುಷ್ಕಾಳನ್ನು ಗುರಿಯಾಗಿಸಿಕೊಂಡು ಮಾತ ನಾಡುವವರಿಗೆ ಮತ್ತು ಪ್ರತಿಯೊಂದು ನಕಾರಾತ್ಮಕ ವಿಚಾರವನ್ನು ಆಕೆಗೆ ಜೋಡಿಸುವಂತವರಿಗೆ ನಾಚಿಕೆಯಾಗಬೇಕು. ತಮ್ಮನ್ನು ತಾವು ತುಂಬಾ ಸುಶಿಕ್ಷಿತರು ಎನ್ನುವವರಿಗೆ ನಾಚಿಕೆಯಾಗಬೇಕು. ನಾನು ಕ್ರಿಕೆಟಿನಲ್ಲಿ ಆಡುವುದಕ್ಕೂ ಅನುಷ್ಕಾಗೂ ಯಾವುದೇ ಸಂಬಂಧವಿಲ್ಲದಿದ್ದರೂ ಆಕೆಯನ್ನು ದೂರುವುದು ಮತ್ತು ಆಕೆಯ ತಮಾಷೆ ಮಾಡುವಂತವರಿಗೆ ನಾಚಿಗೆಯಾಗಬೇಕು. ಆಕೆ ಯಾವಾಗಲೂ ನನಗೆ ಪ್ರೇರಣೆ ಮತ್ತು ಧನಾತ್ಮಕತೆ ನೀಡಿದ್ದಾಳೆ. ದೀರ್ಘ ಸಮಯದಿಂದ ಇದು ನಡೆದುಬರುತ್ತಾ ಇದೆ. ಅಡಗಿಕೊಂಡು ದಾಳಿ ಮಾಡುವವರಿಗೆ ನಾಚಿಗೆಯಾಗಬೇಕು. ಈ ಪೋಸ್ಟ್ ಗೆ ಯಾವುದೇ ಗೌರವ ನಾನು ನಿರೀಕ್ಷಿಸುವುದಿಲ್ಲ. ನಾನು ಆಕೆಯನ್ನು ಯಾವಾಗಲೂ ಗೌರವಿಸಿದ್ದೇನೆ. ನಿಮ್ಮ ತಂಗಿ, ಗೆಳತಿ ಅಥವಾ ಪತ್ನಿಯನ್ನು ಯಾರಾದರೂ ಟ್ರೋಲ್ ಮಾಡಿದರೆ ಅಥವಾ ಸಾರ್ವಜನಿಕವಾಗಿ ಅವಮಾನ ಮಾಡಿದ್ದರೆ ಯಾವ ಭಾವನೆಯಾಗುತ್ತಿತ್ತು ಎಂದು ಯೋಚಿಸಿ.

   ಮದುವೆಯ ತೊಂದರೆ

  ಮದುವೆಯ ತೊಂದರೆ

  ವರದಿಗಳು ಹೇಳುವಂತೆ ವಿರಾಟ್ ಬೇಗನೆ ಮದುವೆಯಾಗಲು ಬಯಸಿದ್ದರು. ಆದರೆ ಅನುಷ್ಕಾ ಮಾತ್ರ ತನ್ನ ವೃತ್ತಿಯತ್ತ ಹೆಚ್ಚಿನ ಗಮನಹರಿಸಲು ಬಯಸಿದ್ದಳು. ಇದರಿಂದಾಗಿ ಅವರ ಸಂಬಂಧದಲ್ಲಿ ಆಗಾಗ ತೊಂದರೆಯಾಗುತ್ತಿತ್ತು ಮತ್ತು ಸಂಬಂಧದಲ್ಲಿ ಬಿರುಕು ಉಂಟಾಗಿತ್ತು. ಮುಂಬಯಿಯಲ್ಲಿ ನಡೆದ ಯುವರಾಜ್-ಹಝೆಲ್ ಮದುವೆ ಸಂದರ್ಭದಲ್ಲಿ ಅವರಿಬ್ಬರು ಕೈಕೈ ಹಿಡಿದುಕೊಂಡು ನಡೆದಿರುವುದು ಎಲ್ಲರನ್ನು ಅಚ್ಚರಿಗೀಡುಮಾಡಿತು. ಈ ಜೋಡಿ ಬಾಲಿವುಡ್ ನ ಗೋರಿ ನಾಲ್ ಇಷ್ಕ್ ಮಿಟ್ಟಾ....ಹಾಡಿಗೆ ಹೆಜ್ಜೆ ಹಾಕಿದ್ದರು.

  2017ರ ಮಹಿಳಾ ದಿನದಂದು...

  2017ರ ಮಹಿಳಾ ದಿನದಂದು...

  ಅನುಷ್ಕಾ ಜೀವನದಲ್ಲಿ ವಿರಾಟ್ ಕೊಹ್ಲಿ ಅತ್ಯಂತ ಶ್ರೇಷ್ಠ ಸ್ಥಾನ ಪಡೆದುಕೊಂಡಿದ್ದಾರೆ. ಮಹಿಳೆಯರ ದಿನದಂದು ತನ್ನ ತಾಯಿ ಮತ್ತು ಅನುಷ್ಕಾಳ ಕಾಲೇಜು ದಿನಗಳ ಫೋಟೊ ಹಾಕಿ ಅವರಿಬ್ಬರಿಗೆ ಮಹಿಳಾ ದಿನಕ್ಕೆ ಶುಭಾಶಯ ಹೇಳಿದ್ದ. ವಿರಾಟ್ ಬರಹ ಹೀಗಿತ್ತು... ಪ್ರತಿಯೊಬ್ಬ ಮಹಿಳೆಗೂ ಮಹಿಳಾ ದಿನದ ಶುಭಾಷಯಗಳು. ಅದರಲ್ಲೂ ನನ್ನ ಜೀವನದ ತುಂಬಾ ಬಲಶಾಲಿ ಮಹಿಳೆಯರಿಗೆ ಶುಭಾಷಯಗಳು. ಜೀವನದ ಕಠಿಣ ಸಮಯದಲ್ಲಿ ಕುಟುಂಬವನ್ನು ಸಲಹಿದ ನನ್ನ ತಾಯಿ ಮತ್ತು ಅನುಷ್ಕಾಶರ್ಮಾ ಯಾವಾಗಲೂ ಕೆಟ್ಟದರ ವಿರುದ್ಧ ದಿಟ್ಟೆದೆಯಿಂದ ಹೋರಾಡಿ ಸರಿಯಾದ ಮಾರ್ಗದಲ್ಲಿ ನಡೆದುದಕ್ಕಾಗಿ ಮಹಿಳಾ ದಿನದ ಶುಭಾಶಯಗಳು. ಈ ಜೋಡಿಯು ತಮ್ಮ ಪ್ರೀತಿಯ ಜೀವನದ ಪಯಣದಲ್ಲಿ ನಮ್ಮನ್ನು ಸಂಪೂರ್ಣವಾಗಿ ಬೌಲ್ಡ್ ಮಾಡಿದ್ದಾರೆ. ಈಗಲೂ ಕೂಡ ಅಭಿಮಾನಿಗಳು ಅನುಷ್ಕಾಳನ್ನು ವಿರಾಟ್ ಮದುವೆಯಾಗುತ್ತಿದ್ದಾನೆಯಾ ಎಂದು ಕೇಳುತ್ತಿದ್ದಾರೆ. ವರದಿಗಳು ಈ ಪ್ರಶ್ನೆಗೆ ಹೌದೆನ್ನುತ್ತಿದೆ.

  English summary

  all-about-virat-anushkas-love-story

  Well, when it comes to their relationship, the duo were with each other for a long time. The love of Virat Kohli came out while appreciating his partner, Anushka's performance in the movie, NH10. From Virat calling her Nushki, to Anushka cheering up while Virat is on the field, all the emotions of the couple have certainly revealed a lot.
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more