For Quick Alerts
ALLOW NOTIFICATIONS  
For Daily Alerts

ಪ್ರೇಮ ವಿವಾಹ V/S ವ್ಯವಸ್ಥಿತ ವಿವಾಹ-ನಿಮ್ಮ ಅನಿಸಿಕೆ ಏನು?

By Super
|

ಸಮಾಜದಲ್ಲಿ ವಿವಾಹ ವ್ಯವಸ್ಥೆ ನೂರಾರು ವರ್ಷಗಳಿಂದ ನಡೆದು ಬರುತ್ತಿದೆ. ಪ್ರತಿ ವ್ಯಕ್ತಿಯೂ ತನಗೆ ಅನುರೂಪನಾದ/ಳಾದ ಜೀವನಸಂಗಾತಿ ಬೇಕೆಂದು ಬಯಸುತ್ತಾನೆ/ಳೆ. ಭಾರತ ಸೇರಿದಂತೆ ಹೆಚ್ಚಿನ ಸಂಪ್ರದಾಯಸ್ಥ ದೇಶಗಳಲ್ಲಿ ಹಿರಿಯರೇ ತಮ್ಮ ಮಕ್ಕಳಿಗೆ ಯೋಗ್ಯನೆಂದು/ಳೆಂದು ಪರಿಗಣಿಸಿದ ವರ/ವಧುವನ್ನು ಆರಿಸುತ್ತಾರೆ. ಇದೇ ವ್ಯವಸ್ಥಿತ ವಿವಾಹ. ಹಿಂದಿನ ದಿನಗಳಲ್ಲಿ ಮಕ್ಕಳು ಹಿರಿಯರಿಗೆ ಎದುರಾಡುತ್ತಿರಲಿಲ್ಲ. ಎಷ್ಟೋ ಪಕ್ಷ ವರ ವಧುವಿನ ಮುಖವನ್ನು ನೋಡುತ್ತಿದ್ದುದು ವಿವಾಹದ ಬಳಿಕವೇ ಆಗಿತ್ತು. ಆದರೆ ಇಂದು ಈ ಪರಿಯನ್ನು ಯುವಜನತೆ ಒಪ್ಪುತ್ತಿಲ್ಲ.

Love marriage vs Arrange marriage - Which one is better?

ತಮ್ಮ ಜೀವನಸಂಗಾತಿಯಾಗುವವರು ತಮ್ಮ ಇಚ್ಛೆ ಅಭಿಲಾಶೆಗಳಿಗೆ ತಕ್ಕಂತಿರಬೇಕು, ತಮ್ಮ ಅಕಾಂಕ್ಷೆಗಳನ್ನು ಪೂರೈಸುವವನಂತಹವನಾಗಿರಬೇಕು ಎಂದು ಬಯಸುತ್ತಾರೆ. ಅಂತೆಯೇ ತಮಗೆ ಕಂಡುಬಂದ ವ್ಯಕ್ತಿಯನ್ನು ತಾವೇ ಆರಿಸಿ, ಬಯಸಿ ವಿವಾಹವಾಗುತ್ತಾರೆ. ಇದೇ ಪ್ರೇಮ ವಿವಾಹ. ಆದರೆ ಇಂದು ವಿಚ್ಛೇದನ ಕಂಡ ಪ್ರಕರಣಗಳಲ್ಲಿ ಹೆಚ್ಚಿನವು ಪ್ರೇಮವಿವಾಹಗಳೇ ಆಗಿದ್ದು ಆತಂಕ ಹೆಚ್ಚಿಸುತ್ತಿವೆ. ಈ ನಿಟ್ಟಿನಲ್ಲಿ ವ್ಯವಸ್ಥಿತ ಅಥವಾ ಪ್ರೇಮ ವಿವಾಹಗಳಲ್ಲಿ ಯಾವುದು ಹೆಚ್ಚು ಯಶಸ್ವಿ ಎಂಬುದನ್ನು ನೋಡೋಣ...

ಪ್ರೇಮ ವಿವಾಹ:
*ಇಬ್ಬರೂ ವಿವಾಹಕ್ಕೂ ಮೊದಲು ಒಬ್ಬರನ್ನೊಬ್ಬರು ಅರಿತಿರುವವರಾಗಿದ್ದು ಪರಸ್ಪರರ ಜೀವನಸಂಗಾತಿಯಾಗಲು ಪಣ ತೊಡುತ್ತಾರೆ
*ಇಬ್ಬರೂ ಪರಸ್ಪರರ ಆಯ್ಕೆಗೆ ಹೊಣೆಯಾಗಿರುತ್ತಾರೆ ಹಾಗೂ ಈ ವಿವಾಹದ ಯಾವುದೇ ಪರಿಣಾಮವಾದರೂ, ಇದು ಸುಖಕರ ಅಥವಾ ದುಃಖಕರವಾಗುವುದು ಯಾವುದೂ ಆಗಬಹುದು, ಪರಸ್ಪರರೇ ಹೊಣೆಯಾಗುತ್ತಾರೆ.
*ಇಬ್ಬರಿಗೂ ಪರಸ್ಪರ ಇಷ್ಟ ಮತ್ತು ಇಷ್ಟವಿಲ್ಲದ ವಿಷಯಗಳ ಬಗ್ಗೆ ಸ್ಪಷ್ಟವಾಗಿ ಅರಿವಿರುತ್ತದೆ. ಇದು ಜೀವನದಲ್ಲಿ ಯಾವುದೇ ತೊಡಕಿಲ್ಲದಂತೆ ನಡೆಯಲು ಸಹಕಾರಿಯಾಗಿದೆ.


*ಸಾಮಾಜಿಕ ಪಿಡುಗುಗಳಾದ ವರದಕ್ಷಿಣೆ ಮೊದಲಾದ ಅನಿಷ್ಟಗಳು ಈ ವ್ಯವಸ್ಥೆಯ ಮೂಲಕ ಇಲ್ಲವಾಗುತ್ತದೆ. ಇಬ್ಬರೂ ಪರಸ್ಪರ ಒಪ್ಪಿಗೆಯಿಂದಲೇ ಈ ವಿವಾಹಕ್ಕೆ ಒಪ್ಪಿರುವ ಕಾರಣ ಕೊಡು ಕೊಳ್ಳುವ ಮಾತೇ ಇಲ್ಲವಾಗುತ್ತದೆ.
*ವಿವಾಹವೆಂದರೆ ಹಿರಿಯರು ತಮ್ಮ ಪ್ರತಿಷ್ಠೆ ಮೆರೆಯುವ ಒಂದು ಅವಕಾಶವಾಗಿದೆ. ಭಾರೀ ಮೊತ್ತದ ಖರ್ಚು, ಆಡಂಬರ, ಸಮಾಜದಲ್ಲಿ ತಾವು ಉನ್ನತ ಸ್ತರದಲ್ಲಿದ್ದೇವೆ ಎಂದು ಇತರರಿಗೆ ಸೂಚಿಸುವ ರೀತಿ ಮೊದಲಾದವು ಸಮಾಜದಲ್ಲಿ ಅಸಮಾನತೆ, ಕೆಳಸ್ತರದ ಜನರಲ್ಲಿ ಕೀಳರಿಮೆ ಮೊದಲಾದ ನೇರ ಪರಿಣಾಮಗಳೂ, ಪಟ್ಟಿ ಮಾಡಲು ಅಸಾಧ್ಯವಾದುದಷ್ಟು ಪರೋಕ್ಷ ಪರಿಣಾಮಗಳೂ ಎದುರಾಗುತ್ತವೆ. ಪ್ರೇಮ ವಿವಾಹದಲ್ಲಿ ಹೆಚ್ಚಿನ ಪಕ್ಷ ಇವೆಲ್ಲಾ ಇಲ್ಲವಾಗುತ್ತವೆ.

ವ್ಯವಸ್ಥಿತ ವಿವಾಹ:
*ಭಾರತದಂತಹ ದೇಶಗಳಲ್ಲಿ ಮದುವೆ ಎಂದರೆ ಇಬ್ಬರು ವ್ಯಕ್ತಿಗಳಿಗಿಂತ ಹೆಚ್ಚಾಗಿ ಎರಡು ಕುಟುಂಬಗಳ ನಡುವೆ ನಡೆಯುವ ಬೆಸುಗೆಯಾಗಿದೆ.
*ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿದ್ದು ಸಾಮಾಜಿಕವಾಗಿ ಗುರುತಿಸಲ್ಪಟ್ಟಿರುವವರಾಗಿರುತ್ತಾರೆ. ಎರಡೂ ಕುಟುಂಬಗಳ ನಡುವೆ ಉತ್ತಮ ಸ್ನೇಹ ಸಂಬಂಧವಿರುತ್ತದೆ.


*ಮದುವೆಯನ್ನು ನಿಶ್ಚಯಿಸಲು ವಧೂವರರ ಹೊರತಾಗಿ ಕುಟುಂಬದ ಇತರ ಸದಸ್ಯರ ಒಪ್ಪಿಗೆಯೂ ಅಗತ್ಯವಾಗಿರುತ್ತದೆ. ವಧು ವರರ ಇಷ್ಟ ಮತ್ತು ಇಷ್ಟವಿಲ್ಲದ ವಿಷಯದ ಜೊತೆಗೇ ಕುಟುಂಬವರ್ಗದವರ ಇಷ್ಟದ ಮತ್ತು ಇಷ್ಟವಿಲ್ಲದ ವಿಷಯಗಳೂ ಪರಿಗಣಿಸಲ್ಪಡುತ್ತವೆ. ಆದ್ದರಿಂದ ವಿವಾಹದ ಬಳಿಕ ವಧು ವರರ ನಡುವೆ ಯಾವುದೇ ಸಮಸ್ಯೆ ಕಂಡುಬಂದರೆ ಕುಟುಂಬದ ಹಿರಿಯರು ಮಧ್ಯಸ್ಥಿಕೆ ವಹಿಸಿ ತಮ್ಮ ಜೀವನದ ಅನುಭವದ ಮೂಲಕ ಸಮಸ್ಯೆಯನ್ನು ಪರಿಹರಿಸುತ್ತಾರೆ.
*ವಿವಾಹದ ಬಳಿಕ ಎದುರಾಗುವ ಸಮಸ್ಯೆಗಳ ಬಗ್ಗೆ ಹಿರಿಯರಿಗೆ ಮತ್ತು ವಿಶೇಷವಾಗಿ ವಧೂವರರ ತಂದೆತಾಯಿಗಳಿಗೆ ಮಾಹಿತಿ ಇದ್ದು ಈ ಸಮಸ್ಯೆಗೆ ಒಳಗಾಗುವ ಮುನ್ನವೇ ತಮ್ಮ ಮಕ್ಕಳನ್ನು ಎಚ್ಚರಿಸಿ ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡುತ್ತಾರೆ. ಆದರೆ ಪ್ರೇಮ ವಿವಾಹದಲ್ಲಿ ಈ ಅನುಭವದ ಕೊರತೆಯಿಂದ ಚಿಕ್ಕ ಪುಟ್ಟ ಸಮಸ್ಯೆಗಳೇ ಉಲ್ಬಣಗೊಂಡು ಮೂಡುವ ಬಿರುಕು ಕ್ರಮೇಣ ಕೂಡಲಾಗದ ಕಮರಿಯೇ ಆಗುತ್ತದೆ.

ತೀರ್ಮಾನ:
*ಎರಡೂ ವಿಧಾನಗಳಲ್ಲಿ ತಮ್ಮದೇ ಆದ ಅನುಕೂಲತೆ ಮತ್ತು ಅನಾನುಕೂಲತೆಗಳಿವೆ. ಇವೆಲ್ಲವೂ ಜೀವನಪರ್ಯಂತ ಮುಂದುವರೆಯುತ್ತವೆ. ವಿವಾಹದ ಸಮಯದಲ್ಲಿ ಇಡಿಯ ಕುಟುಂಬ ವಧೂ ವರರ ಜೊತೆ ಇರುತ್ತದಾದರೂ ಇಡಿಯ ಜೀವಮಾನ ದಂಪತಿಗಳೇ ಜೊತೆ ನಿಭಾಯಿಸಬೇಕಾಗುತ್ತದೆ. ಆದ್ದರಿಂದ ತಮ್ಮ ಜೀವನ ಸಂಗಾತಿಯನ್ನು ಆರಿಸಿಕೊಳ್ಳಲು ಅವಕಾಶ ಮಾಡಿಕೊಡಬೇಕು.
*ಜೊತೆಗೇ ಎರಡೂ ಕುಟುಂಬದ ಸದಸ್ಯರು ಪರಸ್ಪರ ಸಹಕರಿಸುವ ಮೂಲಕ ಮದುವೆಯನ್ನು ಪ್ರೋತ್ಸಾಹಿಸಬೇಕು. ಆದ್ದರಿಂದ ಕೇವಲ ಪ್ರೇಮ ವಿವಾಹ ಅಥವಾ ಕೇವಲ ವ್ಯವಸ್ಥಿತ ವಿವಾಹವೇ ಉತ್ತಮ ಎಂದು ಒಂದೇ ಮಾತಿನಿಂದ ಹೇಳಲಾಗದು. ಜೀವನದಂತೆಯೇ ವಿವಾಹ ಸಹಾ ಅನಿಶ್ಚಿತವಾದುದರಿಂದ ವಿವಾಹಗಳನ್ನೂ ಒಂದೇ ಪದದಲ್ಲಿ ಉತ್ತಮ ಅಥವಾ ಉತ್ತಮವಲ್ಲ ಎಂದು ಹೇಳಲು ಸಾಧ್ಯವಿಲ್ಲ.

English summary

Love marriage vs Arrange marriage - Which one is better?

Marriage is a very important social institution. Every individual wants to have a perfect match, but the criteria for choosing the partner is different. In love marriages, individuals prefer to choose their partners on their own, while in case of arrange marriages individuals prefers partners chosen by their family or parents. There is a continuous debate regarding the best way to choose the partner for marriage. Let’s analyze which one of the two is better.
X
Desktop Bottom Promotion