For Quick Alerts
ALLOW NOTIFICATIONS  
For Daily Alerts

ಇವನು ತನ್ನ ಜೀವನ ಸಂಗಾತಿಯಾಗಲು ಅರ್ಹನೇ?

By Super
|

ಜೀವನಸಂಗಾತಿಯನ್ನು ತಂದೆತಾಯಿಯರೇ ಹುಡುಕಿಕೊಡುವ ಕಾಲ ಈಗ ಬದಲಾಗಿದೆ. ಇಂದಿನ ಯುವಕ ಯುವತಿಯರು ತಮ್ಮ ಸಂಗಾತಿಯನ್ನು ತಾವೇ ಹುಡುಕಿಕೊಳ್ಳಲು ಇಚ್ಛಿಸುತ್ತಾರೆ. ಆದರೆ ನಿಮ್ಮ ಅನಿಸಿಕೆಯಂತೇ ಇರುವ ವ್ಯಕ್ತಿ ಸಿಗುವುದು ಮಾತ್ರ ಕಷ್ಟಸಾಧ್ಯ. ಆದರೆ ಈಗಾಗಲೇ ನಿಮಗೆ ಪರಿಚಿತನಿರುವ ಪುರುಷ ನಿಮ್ಮ ಸಂಗಾತಿಯಾಗಲು ಅರ್ಹನೇ ಎಂಬುದನ್ನು ಒರೆಹಚ್ಚುವುದು ದೊಡ್ಡ ಸವಾಲಿನ ಸಂಗತಿಯಾಗಿದೆ. ಏಕೆಂದರೆ ಯಾವುದೇ ಸಂಬಂಧಗಳು ಆಕರ್ಷಣೆಗೂ ಹೊರತಾಗಿವೆ.

ಪ್ರಥಮ ನೋಟದಲ್ಲಿ ಬಾಹ್ಯ ಸೌಂದರ್ಯವೇ ಆಕರ್ಷಕ ಎಂದು ಕಂಡುಬಂದರೂ ನಿಜವಾಗಿ ಜೀವನಪರ್ಯಂತ ಪರಿಗಣಿಸಲ್ಪಡುವುದು ಮಾತ್ರ ಸದ್ಗುಣಗಳೇ ಆಗಿವೆ. ಜೀವನಪರ್ಯಂತ ಕಷ್ಟ ಸುಖಗಳಲ್ಲಿ ಸಮನಾಗಿ ಭಾಗಿಯಾಗಿ ತನ್ನ ಸಂಗಾತಿಯ ವ್ಯಕ್ತಿತ್ವವನ್ನು ಗೌರವಿಸುವ ಪುರುಷನನ್ನೇ ಪ್ರತಿ ಹೆಣ್ಣೂ ಅಪೇಕ್ಷಿಸುತ್ತಾಳೆ. ಈಗ ನಿಮ್ಮ ಪರಿಗಣನೆಯಲ್ಲಿರುವ ವ್ಯಕ್ತಿಯೇ ನಿಮ್ಮ ಜೀವನಸಂಗಾತಿಯಾಗಲು ಅರ್ಹನೇ ಎಂಬುದನ್ನು ಒರೆಹಚ್ಚಲು ಸಹಕರಿಸುವ ಕೆಲವು ವಿಷಯಗಳನ್ನು ಇಲ್ಲಿ ವಿವರಿಸಲಾಗಿದೆ. ಮದುವೆಗೆ ಮುಂಚೆ ಮುಜುಗರ ತರುವ ಪ್ರಶ್ನೆಯನ್ನು ಕೇಳಬೇಡಿ

Signs To Know He's The Right Man

ಈ ವ್ಯಕ್ತಿಯ ಇರುವಿಕೆ ನಿಮ್ಮಲ್ಲಿ ಸಂತೋಷ ತರುತ್ತದೆ
ಈ ವ್ಯಕ್ತಿ ನಿಮ್ಮ ಸುತ್ತಮತ್ತಲಿದ್ದರೆ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆದುಕೊಂಡು ಹೋಗುತ್ತಿರುವಂತೆ, ಇಲ್ಲದ್ದಿದ್ದಾಗ ಯಾವುದೋ ಕೊರತೆ ಇರುವಂತೆ ಅನ್ನಿಸುತ್ತಿದೆಯೇ, ಹಾಗಾದರೆ ಈ ವ್ಯಕ್ತಿ ನಿಮ್ಮ ಜೀವನ ಸಂಗಾತಿಯಾಗಲು ಸೂಕ್ತ ಎಂದು ಪರಿಗಣಿಸಬಹುದು. ಆದರೆ ಇದು ಕೇವಲ ಬಾಹ್ಯ ಆಕರ್ಷಣೆಯೇ, ಅಥವಾ ಆತನ ವ್ಯಕ್ತಿತ್ವವೇ ನಿಮ್ಮನ್ನು ಆವರಿಸಿದೆಯೇ ಎಂಬುದನ್ನು ಕಂಡುಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ.

ಆತನ ಬಗ್ಗೆ ನಿಮಗೆ ಅಸೂಯೆ ಉಂಟಾಗುವುದಿಲ್ಲ
ಮಾನವರಿಗೆ ಸಹಜವಾಗಿರುವ ಅಸೂಯೆ ಈ ವ್ಯಕ್ತಿಯ ಬಗ್ಗೆ ರಿಯಾಯಿತಿ ತೋರಿದೆಯೇ? ಆತನ ಯಾವುದೇ ಏಳ್ಗೆ ನಿಮಗೆ ಸಂತೋಷ ಉಂಟುಮಾಡುತ್ತಿದೆಯೇ? ಒಂದು ವೇಳೆ ಆತ ತನ್ನ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದು ನಿಮ್ಮನ್ನು ನಿಮ್ಮ ಸ್ನೇಹಿತರೊಂದಿಗೆ ಕಳೆಯಲು ಅನುವು ಮಾಡಿಕೊಡುತ್ತಿದ್ದಾನೆಯೇ ಎಂಬುದನ್ನು ಗಮನಿಸಿ. ಎರಡೂ ಕಡೆಯಿಂದ ಹೌದು ಎಂಬ ಉತ್ತರ ಬಂದರೆ ಇದು ಉತ್ತಮ ಸಂಜ್ಞೆಯಾಗಿದೆ.

ಮನದಾಳದ ಗುಟ್ಟುಗಳನ್ನು ಈತನೊಂದಿಗೆ ಹಂಚಿಕೊಳ್ಳುವ ಬಯಕೆಯಾಗುತ್ತಿದೆಯೇ?
ನಾವೆಲ್ಲರೂ ನಮ್ಮ ಮನದಾಳದ ಗುಟ್ಟನ್ನು ಕೇವಲ ಅತ್ಯಂತ ಆಪ್ತರೊಂದಿಗೆ ಮಾತ್ರ ಹಂಚಿಕೊಳ್ಳಬಯಸುತ್ತೇವೆ. ಅದರಲ್ಲೂ ಮಹಿಳೆಯರು ತಮ್ಮ ಬಾಳಸಂಗಾತಿಗೆಂದೇ ಹಲವು ಗುಟ್ಟುಗಳನ್ನು ಬಚ್ಚಿಟ್ಟುಕೊಂಡಿರುತ್ತಾರೆ. ಒಂದು ವೇಳೆ ಈ ವ್ಯಕ್ತಿಯೊಂದಿಗೆ ಅಂತಹ ಗುಟ್ಟುಗಳನ್ನು ಹಂಚಿಕೊಳ್ಳಬೇಕೆಂದು ಮನಸ್ಸಾಗುತ್ತಿದ್ದರೆ ಈತ ನಿಮ್ಮ ಸಂಗಾತಿಯಾಗಲು ಸೂಕ್ತ ಎಂದು ಪರಿಗಣಿಸಬಹುದು.

ಆತ ನಿಮ್ಮನ್ನು ಅರ್ಥಮಾಡಿಕೊಳ್ಳುತ್ತಿದ್ದಾನೆ ಎಂದು ಅನ್ನಿಸುತ್ತಿದೆಯೇ
ಯಾವುದೇ ವಿಷಯವನ್ನು ನೀವು ತಿಳಿಸುತ್ತಿರುವಾಗ ಅದನ್ನು ಆತ ಸುಲಭವಾಗಿ, ಹೆಚ್ಚಿನ ಪದಗಳಿಗೆ ಆಸ್ಪದ ನೀಡದಂತೆ ಗ್ರಹಿಸುತ್ತಿದ್ದಾನೆಯೇ? ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ ಪ್ರತಿಕ್ರಿಯಿಸುತ್ತಿದ್ದಾನೆಯೇ? ಹೌದು ಎಂದಾದರೆ ನಿಮ್ಮ ಆಯ್ಕೆಯೂ ಸರಿ ಎಂದು ಪರಿಗಣಿಸಬಹುದು.

ಆತನ ಬಗ್ಗೆ ನಿಮ್ಮಲ್ಲಿ ಗೌರವ ಭಾವನೆ ಮೂಡುತ್ತಿದೆಯೇ?
ಆತ ಈಗ ಹೇಗಿದ್ದಾನೋ ಹಾಗೇ ಆತನ ಬಗ್ಗೆ ಗೌರವ ಮೂಡುತ್ತಿದೆಯೇ? ಆತನನ್ನು ಈಗ ಇರುವ ಸ್ಥಿತಿಯಲ್ಲಿಯೇ ಒಪ್ಪಿಕೊಳ್ಳಲು ಸಿದ್ಧರಿದ್ದೀರಾ, ಆತನೂ ನಿಮ್ಮನ್ನು ನೀವು ಈಗಿರುವ ಸ್ಥಿತಿಯಲ್ಲಿಯೇ ಒಪ್ಪಿಕೊಳ್ಳಲು ತಯಾರಿದ್ದಾನೆಯೇ? ತನಗೆ ಬೇಕೆಂದ ರೀತಿಯಲ್ಲಿ ಬದಲಾಗುವಂತೆ ನಿಮ್ಮನ್ನು ಪ್ರೇರೇಪಿಸುತ್ತಿಲ್ಲವೇ ಹಾಗಾಗರೆ ನಿಮ್ಮ ಆಯ್ಕೆ ಸರಿ ಎಂದು ಪರಿಗಣಿಸಬಹುದು.

ನಿಮ್ಮಿಬ್ಬರ ನಡುವೆ ಒಮ್ಮತ ಮೂಡದ ವಿಷಯಗಳು ಆತನ ಬಗ್ಗೆ ದ್ವೇಷ ಮೂಡಿಸುವುದಿಲ್ಲವೇ?
ಸಾಮಾನ್ಯವಾಗಿ ಒಂದು ವಿಷಯದ ಕುರಿತು ಇಬ್ಬರು ವ್ಯಕ್ತಿಗಳಲ್ಲಿ ಭಿನ್ನಾಭಿಪ್ರಾಯವಿರಬಹುದು. ಒಂದು ವೇಳೆ ಈ ಭಿನ್ನಾಭಿಪ್ರಾಯ ನಿಮ್ಮಬ್ಬರಲ್ಲಿಯೂ ಮೂಡಿಬಂದರೂ ನೀವಿಬ್ಬರೂ ಪರಸ್ಪರರ ಅಭಿಪ್ರಾಯಗಳಿಗೆ ಬೆಲೆ ನೀಡುತ್ತಿರುವುದು ಕಂಡು ಬರುತ್ತದೆಯೇ? ನಿಮ್ಮ ಅಭಿಪ್ರಾಯ ಭಿನ್ನವಾಗಿರುವುದರಿಂದ ಆತನನ್ನು ನಿರಾಕರಿಸುವ ಬಗ್ಗೆ ನಿಮ್ಮಲ್ಲಿ ಯೋಚನೆಗಳು ಮೂಡಲಿಲ್ಲವೇ? ಹಾಗಾದರೆ ಇದು ನೀವು ಜೀವನಸಂಗಾತಿಗಳಾಗಲು ಅರ್ಹರು ಎಂದು ನೀಡುವ ಸಂಜ್ಞೆಯಾಗಿದೆ.

ಆತನ ಸಾಂಗತ್ಯ ನಿಮಗೆ ಅಪ್ಯಾಯಮಾನ ಎನ್ನಿಸುತ್ತಿದೆಯೇ?
ಆತನ ಜೊತೆಗೆ ಕಳೆಯುವ ಪ್ರತಿ ಕ್ಷಣ ನಿಮಗೆ ಅಪ್ಯಾಯಮಾನ ಎನ್ನಿಸುತ್ತಿದೆಯೇ? ಯಾವುದೇ ಮಾತುಕತೆಯಿಲ್ಲದೆಯೂ ಇಡಿಯ ದಿನ ಕಳೆದರೂ ಬೇಸರ ಮೂಡುತ್ತಿಲ್ಲವೇ, ಇದೇ ಭಾವನೆ ನಿಮ್ಮ ಸಂಗಾತಿಯಲ್ಲಿಯೂ ಮೂಡುತ್ತಿದೆಯೇ? ಹಾಗಾಗರೆ ನೀವಿಬ್ಬರೂ ಪರಸ್ಪರರಿಗಾಗಿದ್ದೀರಿ ಎಂದು ಭಾವಿಸಬಹುದು.

English summary

Signs To Know He's The Right Man

You are seeing a man since a few weeks or months. You seem to enjoy each other's company. But still, you are confused whether he's the right one for you. Are there any signs to know he's the right man? Well there are some. When you can see these signs, you don't need to feel embarrassed to take things further.
X
Desktop Bottom Promotion