ಒಳ್ಳೆಯ ಸ್ನೇಹಿತ ಸಿಕ್ಕಿದರೆ, ಅದು ದೇವರು ನೀಡಿದ ವರ

Posted By: Jaya subramanya
Subscribe to Boldsky

ಇಂದಿನ ದಿನಗಳಲ್ಲಿ ಉತ್ತಮ ಸ್ನೇಹಿತರನ್ನು ಪಡೆಯುವುದು ಎಂದರೆ ಅದಕ್ಕೂ ಪುಣ್ಯ ಬೇಕು ಎಂಬ ಮಾತೊಂದಿದೆ. ಏಕೆಂದರೆ ಇತ್ತೀಚಿನ ದಿನಗಳಲ್ಲಿ ಸ್ನೇಹ, ಸ್ನೇಹಿತರು ತಮ್ಮ ಮಹತ್ವ ಮೌಲ್ಯವನ್ನು ಕಳೆದುಕೊಳ್ಳುತ್ತಿರುವ ಪರಿಸ್ಥಿತಿ ಬಂದೊದಗಿದೆ. ದುಡ್ಡು, ಅಧಿಕಾರವಿದ್ದಲ್ಲಿ ಮಾತ್ರ ಸ್ನೇಹ ಎಂಬ ಆಧುನೀಕರಣವು ಸ್ನೇಹವನ್ನೂ ಆವಿಸಿಕೊಂಡುಬಿಟ್ಟಿದೆ. ಇತಿಹಾಸವನ್ನು ಕೆದಕುತ್ತಾ ಹೋದರೆ ಅಲ್ಲಿ ಸ್ನೇಹಕ್ಕಿದ್ದ ಬೆಲೆಯನ್ನು ನಾವು ಕಾಣಬಹುದಾಗಿದೆ. ಕೃಷ್ಣ ಸುಧಾಮ, ದುರ್ಯೋಧನ ಕರ್ಣ, ಅರ್ಜುನ ಕೃಷ್ಣ, ಹೀಗೆ ಪುರಾಣಗಳಿಂದಲೇ ಸ್ನೇಹ ಮತ್ತು ಸ್ನೇಹಕ್ಕಿದ್ದ ಬಾಂಧವ್ಯವನ್ನು ಕಾಣಬಹುದು.

ವಿಶ್ವ ಸ್ನೇಹಿತರ ದಿನ: ಕುತೂಹಲ ಕೆರಳಿಸುವ ಇಂಟರೆಸ್ಟಿಂಗ್ ಕಹಾನಿ! 

ಸ್ನೇಹಿತರು ನಿಜವಾದ ಅರ್ಥದಲ್ಲಿ ಹೇಳುವುದಾದರೆ ಹಿತವನ್ನು ಬಯಸುವವರು ಎಂದಾಗಿದೆ. ನೀವು ಹೇಗೆಯೇ ಇರಲಿ ನಿಮ್ಮ ಸ್ನೇಹಿತ ನಿಮ್ಮನ್ನು ಪ್ರೀತಿಸುತ್ತಾನೆ ಎಂದಾದಲ್ಲಿ ಅಲ್ಲಿರುವುದು ಪರಿಶುದ್ಧವಾದ ಸ್ನೇಹ ಮಾತ್ರವಾಗಿದೆ. ಬರಿಯ ಸ್ನೇಹಿತರ ದಿನದಂದು ಸ್ನೇಹಿತನನ್ನು ನೆನೆದು ಶುಭಾಷಯ ಕೋರುವುದೋ, ಕರೆಮಾಡಿ ಪರಸ್ಪರ ಶುಭಾಷಯ ವಿನಿಮಯ ಮಾಡಿಕೊಳ್ಳುವುದು ಮಾತ್ರ ಇಂದಿನ ಸ್ನೇಹಿತರು ಉತ್ತಮ ಸ್ನೇಹದ ದಿನದಂದು ಮಾಡುವ ಸಣ್ಣತನದ ಕೆಲಸ. ನಿಮ್ಮ ನಿಜ ಸ್ನೇಹಿತ ನಿಮ್ಮ ಕಷ್ಟಕ್ಕೆ ಬಂದೊದಗಬೇಕು. ನಿಮ್ಮ ಕಣ್ಣೀರನ್ನು ಒರೆಸಬೇಕು, ಯಾವ ಬಿಗುಮಾನವೂ ಇಲ್ಲದೆಯೇ ನಿಮ್ಮ ಸರಿಸಮಾನಕ್ಕೆ ನಿಮ್ಮೊಡನಿರಬೇಕು.

ಇಂದಿನ ಲೇಖನದಲ್ಲಿ ನಿಮ್ಮ ಬೆಸ್ಟ್ ಗೆಳೆಯ ಇಲ್ಲವೆ ನಿಮ್ಮ ಪ್ರಾಣ ಸ್ನೇಹಿತ ನಿಮಗಾಗಿ ಮಾತ್ರ ಮಾಡುವಂತಹ ಕೆಲವೊಂದು ಕೆಲಸಗಳ ಬಗ್ಗೆ ತಿಳಿದುಕೊಳ್ಳೋಣ. ಇದು ನಿಜವಾಗಿಯೂ ಒಂದು ಬಗೆಯ ತ್ಯಾಗವೆಂದೂ ಹೇಳಬಹುದು.....

ನಿಜವಾದ ಸ್ನೇಹಿತನಲ್ಲಿ ಭೇದ ಭಾವ ಇರುವುದದಿಲ್ಲ...

ನಿಜವಾದ ಸ್ನೇಹಿತನಲ್ಲಿ ಭೇದ ಭಾವ ಇರುವುದದಿಲ್ಲ...

ನಿಮ್ಮ ಸ್ನೇಹಿತ ನೀವು ಹೇಗಿದ್ದರೂ ನಿಮ್ಮನ್ನು ಬಿಗಿದಪ್ಪಿ ತನ್ನ ಸ್ನೇಹದ ಆಳವನ್ನು ಪರಿಚಯಿಸುತ್ತಾನೆ. ನಿಮ್ಮ ಬಗ್ಗೆ ತೀರ್ಮಾವನ್ನು ತೆಗೆದುಕೊಳ್ಳುವುದಿಲ್ಲ, ನಿಬಂಧನೆಗಳನ್ನು ಹೇರುವುದಿಲ್ಲ.

ನಿಮ್ಮೆಲ್ಲಾ ರಹಸ್ಯಗಳು ಅವರಿಗೆ ತಿಳಿದಿರುತ್ತದೆ

ನಿಮ್ಮೆಲ್ಲಾ ರಹಸ್ಯಗಳು ಅವರಿಗೆ ತಿಳಿದಿರುತ್ತದೆ

ನಿಮ್ಮ ಸ್ನೇಹಿತನೊಂದಿಗೆ ನೀವು ಏನೂ ಬೇಕಾದರೂ ಹಂಚಿಕೊಳ್ಳಬಹುದಾಗಿದೆ. ನಿಮ್ಮ ರಹಸ್ಯಗಳನ್ನು ಆಕೆ, ಆತ ಯಾರಿಗೂ ಹೇಳುವುದಿಲ್ಲ.

ಸ್ನೇಹಿತರ ದಿನ ವಿಶೇಷ ಲೇಖನ-'ಗೆಳೆತನವೆಂಬ ಸಿರಿತನ'

ಧನ ಸಹಾಯ

ಧನ ಸಹಾಯ

ನಿಮ್ಮ ಸ್ನೇಹಿತರ ಬಳಿ ಧನ ಸಹಾಯವನ್ನು ಪಡೆದುಕೊಳ್ಳಲು ನೀವು ಹಿಂಜರಿಯಬೇಕೆಂದೇನಿಲ್ಲ. ಅವರಲ್ಲಿ ಸಂಕೋಚಪಡಬೇಕಾದ ಕಾರಣವೇ ಇಲ್ಲ.

ತಲೆನೋವು ಬಂದರೆ ಹೆಡ್ ಮಸಾಜ್, ಅವರೇ ಮಾಡುತ್ತಾರೆ!

ತಲೆನೋವು ಬಂದರೆ ಹೆಡ್ ಮಸಾಜ್, ಅವರೇ ಮಾಡುತ್ತಾರೆ!

ನಿಮಗೆ ವಿಪರೀತ ತಲೆನೋವಿದ್ದ ಸಂದರ್ಭದಲ್ಲಿ ನಿಮ್ಮ ಆತ್ಮೀಯ ಸ್ನೇಹಿತ, ಸ್ನೇಹಿತೆ ನಿಮಗೆ ಮಸಾಜ್ ಮಾಡುತ್ತಾರೆ. ಇದಕ್ಕಾಗಿ ಅವರು ಸ್ವಲ್ಪ ಕೂಡ ಬೇಸರಿಸುವುದಿಲ್ಲ.

ನಿಮ್ಮ ಯಶಸ್ಸಿಗೆ ಖುಷಿಪಡುತ್ತಾರೆ

ನಿಮ್ಮ ಯಶಸ್ಸಿಗೆ ಖುಷಿಪಡುತ್ತಾರೆ

ನೀವು ಸೋಲಲಿ, ಗೆಲ್ಲಲಿ ನಿಮ್ಮ ಪ್ರಾಣ ಸ್ನೇಹಿತ ನಿಮ್ಮ ಬೆನ್ನು ತಟ್ಟುತ್ತಾರೆ ಮತ್ತು ನಿಮ್ಮ ಕಷ್ಟದ ದಿನಗಳಲ್ಲಿ ನಿಮ್ಮ ಕೈಹಿಡಿದು ಸಹಾಯ ಮಾಡುತ್ತಾರೆ. ನಿಮ್ಮ ಯಶಸ್ಸನ್ನು ನೋಡಿ ನಿಮ್ಮ ಸ್ನೇಹಿತ ನಿಜಕ್ಕೂ ಸಂತಸ ಪಡುತ್ತಾರೆ.

ಸ್ನೇಹಕ್ಕೇಕೆ ಶಾಸ್ತ್ರದ ಹಂಗು !!

ನಿಮ್ಮ ಹಿಂದೆ ಚುಚ್ಚು ಮಾತುಗಳನ್ನು ಆಡುವುದಿಲ್ಲ

ನಿಮ್ಮ ಹಿಂದೆ ಚುಚ್ಚು ಮಾತುಗಳನ್ನು ಆಡುವುದಿಲ್ಲ

ನಿಮ್ಮ ಸ್ನೇಹಿತನನ್ನು ನೀವು ನಂಬಬಹುದು. ಒಳಗೊಂದು ಹೊರಗೊಂದು ಎಂಬಂತೆ ಅವರು ಮಾಡುವುದಿಲ್ಲ. ನಿಮ್ಮ ಹಿಂದಿನಿಂದ ಚುಚ್ಚಿ ಮಾತನಾಡುವುದಿಲ್ಲ.

ಸ್ನೇಹಿತರ ಮುಂದೆ ಏನನ್ನೂ ಮುಚ್ಚಿಡಲು ಹೋಗಬೇಡಿ

ಸ್ನೇಹಿತರ ಮುಂದೆ ಏನನ್ನೂ ಮುಚ್ಚಿಡಲು ಹೋಗಬೇಡಿ

ನೀವು ನಿಮ್ಮಷ್ಟಕ್ಕೆಯೇ ಮುಖಪರದೆಯನ್ನು ಹಾಕಿಕೊಂಡು ನಿಮ್ಮೊಳಗಿನ ದುಃಖವನ್ನು ಮರೆಮಾಚಿಕೊಂಡು ಓಡಾಡಬಹುದು. ಆದರೆ ನಿಮ್ಮ ಸ್ನೇಹಿತರ ಮುಂದೆ ನಿಮ್ಮ ಮುಖಪರದೆ ಕೆಳಕ್ಕೆ ಬೀಳುತ್ತದೆ. ಅವರಿಂದ ಏನನ್ನೂ ಮುಚ್ಚಿಡಲು ನಿಮಗೆ ಸಾಧ್ಯವಾಗುವುದಿಲ್ಲ. ಆದ್ದರಿಂದಲೇ ಒಳ್ಳೆಯ ಸ್ನೇಹಿತರು ದೇವರ ವರ ಎಂಬುದಾಗಿ ನುಡಿಯುವುದು. ಸ್ನೇಹಿತರ ದಿನದ ಶುಭಾಷಯಗಳು

English summary

Friendship Day: Things Only Your Best Friend Will Do For You

There are some things only best friends can do. In the course of life, you may come across thousands of people. You may interact with hundreds of people. You may gather so many acquaintances. But when it comes to the ones who are really close to you, you can find only a handful! Life isn't easy. We all need support systems. And what else would you ask for more than a friend who can be with you during ups and downs of life? Well, here are some things that only a best friend can do for you.