For Quick Alerts
ALLOW NOTIFICATIONS  
For Daily Alerts

ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ ಇದು

By ರೀನಾ ಮಂಜು
|

ನಾನು ಫೇಸ್ ಬುಕ್ ನಲ್ಲಿ ಓದಿದ ಓಂದು ಲವ್ ಸ್ಟೋರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಮದುವೆಯಾದವರು ಮಾತ್ರವಲ್ಲ, ಮದುವೆಯಾಗದವರೂ ತಿಳಿಯಬೇಕಾದ ಸ್ಟೋರಿ ಇದು. ಮನ ಕಲುಕುವ ಆ ಕಥೆಯನ್ನು ನಿಮ್ಮ ಮುಂದೆ ಇಡುತ್ತೀದ್ದೇನೆ ನೋಡಿ:

ನಾನು ಆ ದಿನ ನನ್ನ ಹೆಂಡತಿಗೆ ಏನೋ ಹೇಳಬೇಕೆಂದು ದೃಢ ನಿರ್ಧಾರದಿಂದ ಬಂದಿದ್ದೆ. ಮನೆಗೆ ಬಂದು ಫ್ರೆಶ್ ಆಗಿ ಬಂದ ತಕ್ಷಣ ಹೆಂಡತಿ ಊಟಕ್ಕೆ ಕರೆದಳು. ಅವಳ ಮುಖ ನೋಡಿದೆ, ಆ ಕಣ್ಣುಗಳಲ್ಲಿ ಏನೋ ನೋವು ಇದ್ದಂತೆ ಅನಿಸಿತು. ಏನೂ ಮಾತನಾಡದೆ ಊಟ ಮುಗಿಸಿದೆ. ಮಗ ನಿದ್ದೆ ಹೋಗಿದ್ದ. ಸ್ವಲ್ಪ ಹೊತ್ತು ಇಬ್ಬರು ಮೌನವಾಗಿ ಕೂತೆವು. ಹೇಳ ಬೇಕಾದ ವಿಷಯವನ್ನು ಹೇಳಲೇಬೇಕು ಎಂದು ತೀರ್ಮಾನಿಸಿ ನನ್ನ ಹೆಂಡತಿಯ ಹತ್ತಿರ ನನ್ನ ಮತ್ತು ರೇಖಾಳ ಸಂಬಂಧ ಬಗ್ಗೆ ಹೇಳಿದೆ. ಮುಂದಿನ ಸ್ಟೋರಿಯನ್ನು ಸ್ಲೈಡ್ ನಲ್ಲಿ ನೀಡಲಾಗಿದೆ ಓದಿ...

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಅಂದು ಆಕೆ ನನ್ನ ಮಾತು ಕೇಳಿ ಶಾಕ್ ಆದಳು, ಅವಳ ಕಣ್ಣುಗಳು ತುಂಬಿ ಬರುತ್ತಿದ್ದವು, ನಾನು ನನ್ ಮಾತನ್ನು ಮುಂದುವರೆಸಿದೆ, ಡಿವೋರ್ಸ್ ಬೇಕೆಂದು ಕೇಳಿದೆ. ಅದನ್ನು ಕೇಳಿದ ತಕ್ಷಣ ಅವಳು ಕಿರುಚಾಡಿದಳು. ಹತ್ತು ವರ್ಷ ನನ್ನ ಜೊತೆ ಬಾಳಿದ ಆ ಹೆಣ್ಣಿನ ಹತ್ತಿರ ಡಿವೋರ್ಸ್ ಕೇಳುತ್ತಿದ್ದೇನೆ ಎಂಬ ಯಾವ ಪಶ್ಚಾತಾಪ ನನ್ನಲ್ಲಿ ಇರಲಿಲ್ಲ.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಅವಳಿಗೆ ನನ್ನ ಆಸ್ತಿಯಲ್ಲಿ ಜೀವನಾಂಶ ಕೊಡುತ್ತೇನೆ. ಮಗನ ಓದಿನ ವೆಚ್ಚವನ್ನು ನಾನೇ ಭರಿಸುತ್ತೇನೆ ಎಂದು ಹೇಳಿದೆ. ಡಿವೋರ್ಸ್ ಸಿಕ್ಕಿದ ತಕ್ಷಣ ರೇಖಾಳ ಮದುವೆಯಾಗುತ್ತೇನೆ ಎಂದು ಪ್ರಾಮಿಸ್ ಮಾಡಿ ಬಂದಿದ್ದೆ, ಅದೇ ನನ್ನ ತಲೆಯಲ್ಲಿತ್ತು. ನನ್ನ ಮತ್ತು ಹೆಂಡತಿಯ ಆತ್ಮೀಯತೆ ಅನ್ನುವುದೇ ಇಲ್ಲವಾಗಿತ್ತು, ಬದುಕು ಯಾಂತ್ರಿಕವಾಗಿತ್ತು, ಆಗಲೇ ರೇಖಾಳ ಪರಿಚಯವಾಗಿ , ಪ್ರಣಯಾಂಕುರವಾಗಿ ಹೆಂಡತಿ , ಮಗನನ್ನು ಬಿಟ್ಟು ಅವಳೊಡನೆ ಜೀವನ ಮಾಡುವಷ್ಟು ಮನಸ್ಸು ಸಿದ್ಧವಾಗಿತ್ತು.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ನನ್ನ ಹೆಂಡತಿ ತುಂಬಾ ಹೊತ್ತು ಅಳುತ್ತಳೇ ಇದ್ದಳು, ನಾನೇನು ಸಮಧಾನ ಪಡಿಸಲಿಲ್ಲ, ಹೋಗಿ ಮಲಗಿದೆ. ಬೆಳಗ್ಗೆ ಎದ್ದಾಗ ಹೆಂಡತಿ ಏನೋ ಬರೆಯುತ್ತಿದ್ದಳು, ನಾನು ಅವಳತ್ತ ಗಮನ ಕೊಡದೆ ರೆಡಿಯಾಗುತ್ತಿದ್ದೆ. ನಿಧಾನಕ್ಕೆ ನನ್ನ ಹತ್ತಿರ ಬಂದು ನನ್ನನ್ನೇ ನೋಡಿದಳು. ಆ ಕಣ್ಣುಗಳು ತುಂಬಿ ಬರುತ್ತಿದ್ದವು, ಅದನ್ನು ನಿಯಂತ್ರಿಸಿಕೊಂಡು ನಾನು ನಿಮಗೆ ಡಿವೋರ್ಸ್ ಕೊಡುತ್ತೇನೆ, ಆದರೆ ನನಗೆ ನಿಮ್ಮ ಆಸ್ತಿ ಏನೂ ಬೇಕಾಗಿಲ್ಲ. ನನ್ನ ಜೊತೆ ಒಂದು ತಿಂಗಳು ಇರಿ ಸಾಕು ಅಂದಳು, ನಾನೂ ಒಪ್ಪಿದೆ.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ನನ್ನ ಹೆಂಡತಿ ಹಾಕಿದ ಕಂಡೀಷನ್ ಅನ್ನು ರೇಖಾಳ ಹತ್ತಿರ ಹೇಳಿದಾಗ ಜೋರು ನಕ್ಕಳು. ನಾನು ಮನೆಗೆ ಬಂದಾಗ ನನ್ನ ಹೆಂಡತಿ ನನ್ನ ನೋಡಿ ಮುಗುಳು ನಕ್ಕಳು. ಅವಳು ನನ್ನ ಕೈ ಹಿಡಿದು ಒಳಗೆ ಕರೆದುಕೊಂಡು ಹೋದಳು ನಾನು ಏನೋ ಹೇಳಲಿಲ್ಲ, ಕಾಫಿ ಕೊಟ್ಟು ನಾವು ಮದುವೆಯಾದ ಮೊದಲನೇ ದಿನದ ಬಗ್ಗೆ ಕೇಳಿದಳು.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಆಗ ನಾನು ಅವಳ ಕೈ ಹಿಡಿದು ಬೆಡ್ ರೂಂಗೆ ಕರೆದುಕೊಂಡು ಹೋಗಿದ್ದು, ನಮ್ಮ ಜೀವನದ ಅನೇಕ ರಸ ನಿಮಿಷಗಳು ಇವುಗಳ ಬಗ್ಗೆ ಎಲ್ಲಾ ಹೇಳಲು ಹೇಳಿದಳು. ಅದರ ಬಗ್ಗೆ ಯೋಚಿಸಲೇ ಮುಜುಗರ ಅನಿಸಿದರೂ ಒಂದೇ ತಿಂಗಳು ಮಾತ್ರವಲ್ಲ ಇವಳ ಜೊತೆ ಇರುವುದು ಎಂದು ಯೋಚಿಸಿ ನಾನು ಆ ದಿನಗಳ ಬಗ್ಗೆ ಹೇಳಿದೆ. ಆ ದಿನಗಳ ಬಗ್ಗೆ ಯೋಚಿಸಿದಾಗ ಛೇ.. ನನ್ನ ನಂಬಿ ಬಂದ ಹೆಣ್ಣಿಗೆ ನಾನು ಮೋಸ ಮಾಡುತ್ತಿದ್ದೇನೆ ಎಂದು ಮೊದಲು ಬಾರಿಗೆ ಪಶ್ಚಾತಾಪ ಆಯ್ತು.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಮಾರನೇಯ ಅವಳು ಮಾತನಾಡುತ್ತಾ ನನ್ನ ಎದೆಗೆ ಒರೆಗಿದಳು. ನಾನು ಏನೂ ಹೇಳಲಿಲ್ಲ. ದಿನಗಳು ಕಳೆದಂತೆ ಅವಳನ್ನು ಮತ್ತೆ ಪ್ರೀತಿಸಲಾರಂಭಿಸಿದೆ. ಮಗನಿಗೆ ನಮ್ಮ ಡಿವೋರ್ಸ್ ವಿಷಯ ಗೊತ್ತಿರಲಿಲ್ಲ, ಅದು ಅವನಿಗೆ ಹೇಳಬಾರದೆಂದು ಕೂಡ ಹೇಳಿದ್ದಳು ಕೂಡ. ಆಫೀಸ್ ನಿಂದ ಬೇಗ ಮನೆಗೆ ಬರಲಾರಂಭಿಸಿದೆ, ಹೆಚ್ಚಿನ ಸಮಯವನ್ನು ಕಳೆಯಲಾರಂಭಿಸಿದೆ. ಮಗನನ್ನು ಕರೆದುಕೊಂಡು ಔಟಿಂಗ್ ಹೋದೆವು. ಇದ್ಯಾವುದು ರೇಖಾಳಿಗೆ ಹೇಳಲಿಲ್ಲ. ಒಂದು ತಿಂಗಳು ಮುಗಿಯುತ್ತಾ ಬಂತು. ಈ ಸಮಯದಲ್ಲಿ ನನ್ನ ಹೆಂಡತಿ ತುಂಬಾ ತೆಳ್ಳಗಾಗಿದ್ದಳು. ಆದರೂ ನಗುನಗುತ್ತಾ ಓಡಾಡುತ್ತಿದ್ದಳು. ಅವಳನ್ನು ಬಿಟ್ಟು ಹೋಗಲು ಮನಸ್ಸಾಗಲಿಲ್ಲ. ನನ್ನ ಮನಸ್ಸು ಬದಲಾಗುವ ಮುನ್ನ ರೇಖಾಳನ್ನು ಭೇಟಿ ಮಾಡಲು ನಿರ್ಧರಿಸಿದೆ.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಅವಳ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದ ತಕ್ಷಣ ನನ್ನ ಕಂಡು ಅವಳು ತುಂಬಾ ಖುಷಿಯಾದಳು. ಒಳಗೆ ಕರೆದಳು, ನಾನು ಅವಳ ಕೈ ಹಿಡಿದು ನನ್ನ ಕ್ಷಮಿಸಿಬಿಡು, ನಾನು ನನಗೆ ಹೆಂಡತಿಯನ್ನು ಇಟ್ಟು ಬರಲು ಸಾಧ್ಯವಾಗುತ್ತಿಲ್ಲ, ಸಾವು ಒಂದೇ ನಮ್ಮನ್ನು ಬೇರೆ ಮಾಡುತ್ತದೆ, ಅಲ್ಲಿಯವರೆಗೆ ಜೊತೆಯಾಗಿ ಇರುವೆ ಎಂದು ಹೇಳಿದೆ. ಅವಳು ನನ್ನ ಕೆನ್ನೆಗೆ ಬಾರಿಸಿದಳು, ನಾನು ಹೊರ ನಡೆದೆ, ಅಳುತ್ತಾ ಜೋರಾಗಿ ಬಾಗಿಲು ಹಾಕಿದಳು.

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಹಾರ್ಟ್ ಟಚ್ಚಿಂಗ್ ಲವ್ ಸ್ಟೋರಿ

ಮನೆಗೆ ಬಂದು ನನ್ನ ಮಡದಿಗಾಗಿ ಹುಡುಕಿದರೆ ಬೆಡ್ ರೂಂನಲ್ಲಿ ಮಲಗಿದ್ದಳು. ಹೋಗಿ ಕರೆದೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಹತ್ತಿರವಾಗಿ ನೋಡಿದರೆ ಅವಳು ನಮ್ಮನ್ನು ಬಿಟ್ಟು ಹೋಗಿದ್ದಳು. ಅವಳು ನಮ್ಮನ್ನು ಬಿಟ್ಟು ಹೋದ ಸ್ವಲ್ಪ ಎರಡು ದಿನದಲ್ಲಿ ಅವಳು ಬರೆದ ನೋಡ್ ಬುಕ್ ಸಿಕಿತ್ತು. ಅದರಲ್ಲಿ ಈ ರೀತಿ ಬರೆದಿದ್ದಳು "ನೀವು ನನ್ನನ್ನು ಡಿವೋರ್ಸ್ ಕೇಳಿದಾಗ ಮನಸ್ಸಿಗೆ ಬೇಜಾರಾಯ್ತು. ಆದರೆ ವಾಸ್ತವಾಗಿ ನಾನೇ ನಿಮ್ಮನ್ನು ಬಿಟ್ಟು ಹೋಗುತ್ತಿದ್ದೇನೆ . ಒಂದು ತಿಂಗಳು ನಿಮನ್ನು ಕಾಯಿಸಿದ್ದೆಕ್ಕೆ ಕ್ಷಮಿಸಿ, ನಮ್ಮ ಮಗ ನೀವು ನನ್ನನ್ನು ಬಿಟ್ಟವರು ಎಂದು ನಿಮ್ಮ ಬಗ್ಗೆ ಅಸಹ್ಯ ಪಟ್ಟುಕೊಳ್ಳುವುದು ನನಗೆ ಇಷ್ಟವಿರಲಿಲ್ಲ. ನಮ್ಮ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ, ಅಷ್ಟು ಮಾತ್ರ ಕೇಳಿಕೊಳ್ಳುವೆ".

English summary

Every One Must Read This Love Story | Love And Relationship | ಪ್ರತಿಯೊಬ್ಬರು ಓದಲೇ ಬೇಕಾದ ಲವ್ ಸ್ಟೋರಿ | ಪ್ರೀತಿ ಮತ್ತು ಸಂಬಂಧ

Remember love is the richest of all treasures. Without it there is nothing; and with it there is everything. Love never perishes , even if the bones of a lover are ground fine like powder.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more