Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಸಂಸಾರದಲ್ಲಿ ಕಲಹ ತರುವ ಅಂಶಗಳಿವು

ಹಳೆಯ ವಿಷಯಗಳನ್ನು ಬಿಟ್ಟು ಇರುವ ಜೀವನದ ಕುರಿತು ಚಿಂತಿಸಬೇಕು. ಒಂದು ವೇಳೆ ಮದುವೆಗೆ ಮುಂಚೆ ಪ್ರೇಮವಿದ್ದೂ ನಂತರ ಬೇರೆಯವರ ಜೊತೆ ಮದುವೆಯಾದರೆ ಹಳೆಯ ಬದುಕನ್ನು ಮರೆತು ಸಿಕ್ಕಿರುವ ಬದುಕನ್ನು ಪ್ರೀತಿಸಬೇಕು. ಅಲ್ಲದೆ ಹಳೆಯ ಪ್ರೇಮಿ ಜೊತೆ ಯಾವುದೇ ಸಂಪರ್ಕ ಇಟ್ಟುಕೊಳ್ಳದಿರುವುದು ಒಳ್ಳೆಯದು. ಇಲ್ಲದಿದ್ದರೆ ನಿಮ್ಮ ಬದುಕನ್ನು ಕೈಯಾರೆ ಹಾಳು ಮಾಡಿದಂತಾಗುವುದು.
ನಿನಗೆ ನನ್ನ ಜೊತೆ ಕಳೆಯಲು ಮಾತ್ರ ಸಮಯವಿಲ್ಲ: ಎಲ್ಲಿಗಾದರೂ ಹೋಗಬೇಕೆಂದು ಕಾಯುತ್ತಿರುತ್ತೀರಿ. ಆದರೆ ನಿಮ್ಮ ಗಂಡ ಫ್ರೆಂಡ್ಸ್ ಮನೆಯಲ್ಲಿ ಪಾರ್ಟಿ ಇದೆ ಅಂತ ಹೊರಟು ಬಿಡುತ್ತಾರೆ. ಆ ಸಂದರ್ಭದಲ್ಲಿ ಕೋಪ ಬರುತ್ತದೆ. ಆದರೂ 'ನನಗೆ ಕೊಡಲು ಮಾತ್ರ ನಿಮಗೆ ಸಮಯವಿಲ್ಲ' ಎಂಬ ಮಾತು ಆಡಬೇಡಿ. ಏಕೆಂದರೆ ಈ ರೀತಿ ಹೇಳಿದಾಗ ಅವರಿಗೆ ಸಂಸಾರ ಅನ್ನುವುದು ಬಂಧನವಾಗುತ್ತದೆ. ಗಂಡಸರು ಆದಷ್ಟು ಸ್ವತಂತ್ರ ಆಗಿರಲು ಬಯಸುತ್ತಾರೆ. ಒಂದು ವೇಳೆ ನಿಮ್ಮನ್ನು ಸಿನಿಮಾಕ್ಕೆ ಕರಕ್ಕೊಂಡು ಹೋಗುತ್ತೇನೆ ಎಂದು ಹೇಳಿ ಅವರು ಫ್ರೆಂಡ್ಸ್ ಜೊತೆ ಹೋದಾರೆ, ಅವರು ಬಂದ ತಕ್ಷಣ ಕೋಪಗೊಳ್ಳಬೇಡಿ. ನಿಮಗೆ ಎಷ್ಟು ನಿರಾಸೆಯಾಯಿತು ಅಂತ ಅವರಿಗೆ ಸಮಧಾನವಾಗಿ ಹೇಳಿ.
ಕೆಲವು ಗಂಡಂದಿರು ಹೆಂಡತಿಯನ್ನು ತವರು ಮನೆ ಹೋಗಿ ಎರಡು ದಿನ ನಿಲ್ಲಲೂ ಬಿಡುವುದಿಲ್ಲ. ಯಾವತ್ತೂ ನೀನು ನನ್ನ ಬಳಿ ಇರಬೇಕು ಅಂತಾರೆ. ಆದರೆ ಅತೀಯಾದ ಪ್ರೀತಿ ಉಸಿರು ಕಟ್ಟಿಸಿದ ಅನುಭವ ತರಬಹುದು. ಆದ್ದರಿಂದ ಒಬ್ಬರಿಗೊಬ್ಬರು ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬೇಕು.ಇಷ್ಟ-ಕಷ್ಟಗಳನ್ನು ನೇರವಾಗಿ ಹೇಳಿಕೊಳ್ಳಬೇಕು ಹಾಗೂ ಅರ್ಥ ಮಾಡಿಕೊಳ್ಳಬೇಕು.
ನನಗೆ ಸಾಕಾಯಿತು, ನೀನು ಮಾತ್ರ ಯಾವತ್ತಿಗೂ ಅರ್ಥ ಮಾಡಿಕೊಳ್ಳುವುದಿಲ್ಲ: ತುಂಬಾ ಕೋಪ ಬಂದಾಗ ಈ ಮಾತು ಆಡುವುದು ಸಹಜ ಆದರೆ ಹಾಗೇ ಆಡದಿರುವುದು ಒಳ್ಳೆಯದು. ಮನೆ ಕೆಲಸವನ್ನು ಹೆಂಡತಿ ಮಾತ್ರ ಮಾಡಬೇಕೆಂಬ ನಿಯಮ ಇಟ್ಟುಕೊಳ್ಳುವುದು ಸರಿಯಲ್ಲ. ಈಗ ತುಂಬಾ ಹೆಣ್ಣು ಮಕ್ಕಳು ಹೊರಗೆ ದುಡಿದು ಬಂದು ಮನೆಯಲ್ಲೂ ದುಡಿಯುತ್ತಿರುತ್ತಾರೆ. ಅಗ ಸುಮ್ಮನೆ ಕೂತುಕೊಳ್ಳದೆ ಅವರಿಗೆ ಸಹಾಯ ಮಾಡಬೇಕು. ಈ ರೀತಿ ಮಾಡಿದರೆ ಸಂಸಾರದಲ್ಲಿ ಪ್ರೀತಿ ಮತ್ತಷ್ಟು ಹೆಚ್ಚಾಗುವುದು.
ಸಂಸಾರ ಅನ್ನುವುದೇ ಹೊಂದಾಣಿಕೆ. ಸುಖ ಸಂಸಾರಕ್ಕಾಗಿ ಕೆಲವೊಂದು ನಮ್ಮ ಅಹಂಗಳನ್ನು ತ್ಯಾಗ ಮಾಡುವುದರಲ್ಲಿ ತಪ್ಪೇನಿಲ್ಲ.



Click it and Unblock the Notifications
