Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಈ 5 ಮಾತನಾಡಿದರೆ ಶ್ರುತಿ ತಪ್ಪುವುದು ಸಂಸಾರದಲ್ಲಿ

ಮದುವೆಯ ನಂತರ ಗಂಡ-ಹೆಂಡತಿ ನಡುವೆ ವಾದ-ವಿವಾದಗಳು ಹಣ, ಆಸ್ತಿ, ಮಾಜಿ ಸ್ನೇಹಿತ ಅಥವ ಸ್ನೇಹಿತೆ, ಮನೆ ಕೆಲಸ, ಪೋಷಕರು, ಜವಬ್ದಾರಿ ಹೀಗೆ ಇವುಗಳ ಸುತ್ತನೇ ಹೆಚ್ಚಾಗಿ ಇರುತ್ತದೆ. ಚಿಕ್ಕದಾಗಿ ಪ್ರಾರಂಭವಾಗುವ ನಂತರ ದೊಡ್ಡ ರಂಪಾಟಕ್ಕೆ ಕೂಡ ಕಾರಣವಾಗುವುದು. ಆಗ ಈ ಕೆಳಗಿನ ಅಂಶಗಳು ದೊಡ್ಡ ವಿಷಯವಾಗಿರುತ್ತದೆ.
ನೀನು ನನ್ನ ಪ್ರೀತಿಸುತ್ತಿಲ್ಲ: ಮದುವೆಯಾದ ಶುರುವಿನಲ್ಲಿ ಪ್ರಣಯ ಪಕ್ಷಿಗಳಂತೆ ಇರುತ್ತಾರೆ. ಹಾಗಂತ ಯಾವತ್ತೂ ಇರಲು ಸಾಧ್ಯವಿಲ್ಲ. ಅದರಲ್ಲೂ ಪುರುಷರಿಗೆ ಹೆಚ್ಚು ಜವಬ್ದಾರಿ ಹೆಚ್ಚಾಗುವುದರಿಂದ ಹೆಚ್ಚಿನ ಸಮಯವನ್ನು ಜೊತೆಯಲ್ಲಿ ಕಳೆಯಲು ಆಗದೇ ಹೋಗಬಹುದು. ಆದರೆ ಇದನ್ನೇ ತುಂಬಾ ಹೆಣ್ಣು ಮಕ್ಕಳು ಅಪಾರ್ಥ ಮಾಡಿಕೊಳ್ಳುತ್ತಾರೆ. ಅದರಲ್ಲೂ ಪ್ರೀತಿಸಿ ಮದುವೆಯಾದ ಹೆಣ್ಣು ಮಕ್ಕಳಂತೂ ಈ ವಿಷಯದಲ್ಲಿ ತುಂಬಾ ಕೊರಗುತ್ತರೆ. ಮದುವೆಗೆ ಮುಂಚೆ ನನ್ನ ನೋಡಲು ಬರಲು ಯಾವುದೇ ಬ್ಯೂಸಿ ಇರಲಿಲ್ಲ, ಸಿನಿಮಾ, ಪಾರ್ಕ್ ಅಂತ ಸಮಯ ಕಳಿಯುತ್ತಿದ್ದವು ಆದರೆ ಮದುವೆಯಾದ ಮೇಲೆ ಬದಲಾಗಿದ್ದಾರೆ. ಈಗ ನನ್ನ ಮುಂಚಿನಂತೆ ಪ್ರೀತಿಸುತ್ತಿಲ್ಲ ಅಂತ ಸುಮ್ಮನೆ ಕೊರಗುತ್ತಾರೆ. ನನ್ನ ನೀನು ಮುಂಚೆಯಷ್ಟು ಪ್ರೀತಿಸುತ್ತಿಲ್ಲ ಅಂತ ಹೇಳಿ ಗಂಡನಿಗೆ ಕೊಪ ಬರುವಂತೆ ಮಾಡುತ್ತಾರೆ. ಇದರಿಂದ ಇಬ್ಬರ ಮಾನಸಿಕ ನೆಮ್ಮದಿ ಹಾಳಾಗುವುದು.
ಆದರೆ ಈ ಸಮಯದಲ್ಲಿ ಹೆಣ್ಣು ಮಕ್ಕಳು ಸ್ವಲ್ಪ ಪ್ರಾಕ್ಟಿಕಲ್ ಆಗಿ ಯೋಚಿಸಬೇಕು. ಮುಂಚೆಯ ರೀತಿ ಮದುವೆಯ ನಂತರ ಕೂಡ ನಿಮ್ಮ ಹತ್ತಿರನೆ ಇದ್ದರೆ ಮುಂದಿನ ಜೀವನ ನಡೆಯ ಬೇಡ್ವೆ? ನೀವು ಅವರನ್ನು ಮೊದಲಿನಷ್ಟೆ, ಅದಕ್ಕಿಂತ ಹೆಚ್ಚೇ ಪ್ರೀತಿಸಿ. ಆಗ ಅವರಿಗೂ ನಿಮ್ಮ ಮೇಲೆ ಪ್ರೀತಿ ಹೆಚ್ಚಾಗುವುದು. ಏನೇ ವಿಷಯವಿದ್ದರೂ ಇಬ್ಬರೂ ಮುಕ್ತ ಮನಸ್ಸಿನಿಂದ ಚರ್ಚಿಸಬೇಕು. ಎಲ್ಲಾ ನಿರ್ಧಾರವನ್ನು ಇಬ್ಬರೂ ಜೊತೆಗೂಡಿ ಕೈಗೊಳ್ಳಬೇಕು. ಈ ರೀತಿ ಮಾಡಿದರೆ ಒಬ್ಬರನ್ನೊಬ್ಬರು ನಿರ್ಲಕ್ಷ್ಯ ಮಾಡಿದಂತಾಗುವುದಿಲ್ಲ, ಸಂಬಂಧ ಗಟ್ಟಿಯಾಗುವುದು.
ನಂಬಿಕೆ : ಸಂಸಾರ ಎಂಬ ದೋಣಿ ಸಾಗಲು ನಂಬಿಕೆ ಅನ್ನುವುದು ಮುಖ್ಯ. ನಂಬಿಕೆಯಿಲ್ಲದಿದ್ದರೆ ಆ ಸಂಬಂಧ ಮುರಿದು ಬೀಳುವುದು ಖಂಡಿತ. ಗಂಡ-ಹೆಂಡತಿ ನಡುವೆ ಯಾವುದೇ ಮುಚ್ಚುಮರೆ ಇರಬಾರದು. ಒಬ್ಬರ ಮೇಲೆ ತುಂಬಾ ನಂಬಿಕೆಯಿಟ್ಟರೆ ಅವರಿಗೆ ನಮ್ಮ ನಂಬಿಕೆಗೆ ದ್ರೋಹ ಬಗೆಯಲು ಮನಸ್ಸು ಬರುವುದಿಲ್ಲ. ಆದರೆ ಸಂಶಯ ಪಡುವ ಗುಣವಿದ್ದರೆ ಮುಂದೆ ನಿಮ್ಮ ಸಂಶಯ ನಿಜವಾಗುವುದು. ಏಕೆಂದರೆ ನೀವು ಅವರನ್ನು ಸಂಶಯ ಪಡುವಾಗ ಏಕೆ ಹಾಗೇ ಮಾಡಬಾರದು ಅನಿಸುತ್ತದೆ. ಅದು ಮನುಷ್ಯನ ಗುಣ. ಆದ್ದರಿಂದ ಸಂಸಾರದಲ್ಲಿ ಸಂಶಯ ಅನ್ನುವುದು ಬೇಡ.



Click it and Unblock the Notifications
