Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಪ್ರೀತಿ ವಿಫಲವಾದ್ರೆ ಸ್ನೇಹಕ್ಕೂ ಕೊಳ್ಳಿಯಿಟ್ಟುಬಿಡಿ..

ಒಬ್ಬ ಒಳ್ಳೆಯ ಫ್ರೆಂಡ್ ಪ್ರೇಮಿ ಆಗಬಹುದು. ಆದರೆ ಪ್ರೇಮಿ ಪುನಃ ಒಳ್ಳೆಯ ಗೆಳಯರಾಗಲು ಸಾಧ್ಯನೆ ಇಲ್ಲ. ಪ್ರೇಮಕ್ಕೂ ಗೆಳತನಕ್ಕೂ ಅಜ-ಗಜಾಂತರ ವ್ಯತ್ಯಾಸ ಮತ್ತು ಇತಿ ಮಿತಿಗಳಿರುತ್ತವೆ. ಗೆಳತನ ಅನ್ನುವುದರಲ್ಲಿ ಪರಿಶುದ್ಧತೆ ಇದ್ದರೆ ಪ್ರೇಮದಲ್ಲಿ ತನ್ನದು, ನನ್ನವಳು/ನನ್ನವನು ಎಂಬ ಸ್ವಾರ್ಥ ಇರುತ್ತದೆ.
ಪ್ರೀತಿ ಮುರಿದ ಮೇಲೆ ಗೆಳೆಯರಾದರೆ ಆ ಗೆಳತನದಲ್ಲಿ ನಿಷ್ಕಲ್ಮಶವಾಗಲಿ, ಸಂತೋಷವಾಗಲಿ ಇರುವುದಿಲ್ಲ, ಅಲ್ಲದೆ ಹಳೆ ನೆನಪುಗಳು ಮತ್ತೆ-ಮತ್ತೆ ಚುಚ್ಚುತ್ತಾ ಇರುತ್ತದೆ.
ಅದೇ, ದೂರ ಹೋದರೆ ಆ ಸಂಬಂಧಗಳು ಮನಸ್ಸಿನಿಂದ ಮರೆಯಾಗುವುದು, ಇಲ್ಲದಿದ್ದರೆ ಹಳೆ ಹೊಸ ಬದುಕಿನ ಸಂತೋಷವನ್ನು ಕಿತ್ತು ಕೊಳ್ಳುವುದು. ಹಳೆ ಸಂಬಂಧದ ಜೊತೆ ಗೆಳತನವಿದ್ದು ಮುಂದೆ ನಿಮ್ಮ ಬಾಳ ಸಂಗಾತಿಗೆ ನಿಮ್ಮ ಹಳೆಯ ಪ್ರೇಮದ ಬಗ್ಗೆ ಗೊತ್ತಾಗಿ 'ಈಗ ಬರೀ ಫ್ರೆಂಡ್ ಅಷ್ಟೆ' ಎಂದು ಹೇಳಿದರೂ ಬಾಳ ಸಂಗಾತಿಯಾದವರು ನಂಬಲು ತಯಾರಿರುವುದಿಲ್ಲ.
ಪರಸ್ಪರ ಹೊಂದಾಣಿಕೆಯಾಗದೆ ದೂರವಾದರೆ ಸುಲಭವಾಗಿ ದೂರ ಆಗುತ್ತಾರೆ. ಆದರೆ ಒಬ್ಬರನ್ನೊಬ್ಬರು ತುಂಬಾ ಇಷ್ಟ ಪಟ್ಟು ನಂತರ ಮನೆಯವರ ಕಾರಣಕ್ಕೆ ಅಥವಾ ಮತ್ಯಾವುದೊ ಕಾರಣಕ್ಕೆ ದೂರವಾಗುವ ಅನಿವಾರ್ಯ ಬಂದರೆ ಅಂತಹವರು ತಮ್ಮ ಸಂಬಂಧವನ್ನು ಮುರಿಯಲು ಬಯಸುವುದಿಲ್ಲ. ಈ ರೀತಿಯ ಅಗುಲುವಿಕೆ ತುಂಬಾ ನೋವು ತರುವುದಾದರೂ , ಅವರಿಗೆ ಹಿತವನ್ನು ಬಯಸಿ ದೂರ ಹೋಗುವುದೇ ಇಬ್ಬರ ಜೀವನಕ್ಕೂ ನೆಮ್ಮದಿಯನ್ನು ತರುವುದು.
ಗೆಳತನದ ಮುಖವಾಡದಲ್ಲಿ ಹಳೆಯ ನೆನಪಿನಿಂದ ನೋವನ್ನು ನುಂಗುವುದಕ್ಕಿಂತ, ದೂರ ಹೋಗಿ ನೋವನ್ನು ಮರೆಯುವುದರಿಂದ ಇಬ್ಬರೂ ಬಾಳಲ್ಲಿ ಸಂತೋಷವನ್ನು ಕಾಣಬಹುದು.



Click it and Unblock the Notifications
