Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೊಟ್ಟಿಗೆ ಬೆಸ್ಟ್ ಕಾಂಬಿನೇಷನ್ ಸುಂಡೆಕಾಯಿ ಚಟ್ನಿ
ರೊಟ್ಟಿ,ಚಟ್ನಿ ಅಂದ್ರೆ ಎಂತವರಿಗೂ ಬಾಯಲ್ಲಿ ನೀರು ಬರುತ್ತದೆ. ಆದರೆ ಕಾಯಿಚಟ್ನಿ, ಕಡಲೆ ಚಟ್ನಿಗೆ ಸೀಮಿತವಾಗಿರುವವರು ಕೆಲವರು. ಆದರೆ ಇವುಗಳನ್ನು ಹೊರತು ಪಡಿಸಿದ ಕೆಲವು ಚಟ್ನಿಗಳು ರೊಟ್ಟಿ ಜೊತೆಗೆ ಅಧ್ಬುತ ಕಾಂಬಿನೇಷನ್ ಆಗಿರುತ್ತದೆ. ಅಂತಹ ವಿಶೇಷ ಚಟ್ನಿ ರೆಸಿಪಿಯೊಂದನ್ನು ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಈ ಕಾಯಿಗಳನ್ನು ನೀವು ಸಾಮಾನ್ಯವಾಗಿ ಹಾದಿಬೀದಿಯಲ್ಲಿ ಓಡಾಡುವಾಗ ನೋಡಿರುತ್ತೀರಿ. ಹಳ್ಳಿಗರಾಗಿದ್ದರಂತೂ ನಿಮ್ಮ ಹೊಲಗಳಲ್ಲಿ ಸಾಮಾನ್ಯವಾಗಿ ತನ್ನಿಂದ ತಾನೇ ಹುಟ್ಟಿ ಬೆಳೆದುಕೊಂಡಿರುತ್ತದೆ.ಅದುವೇ ಕಾಡು ಬದನೆ ಅಥವಾ ಸುಂಡೆಕಾಯಿ.
ಇಂಗ್ಲೀಷಿನಲ್ಲಿ ಸುಂಡೆಕಾಯಿಯನ್ನು ಟರ್ಕಿ ಬೆರ್ರಿ ಅಂತ ಕರೆಯಲಾಗುತ್ತದೆ. ಬದನೆಗಿಡದಂತೆಯೇ ಕಾಣುವ ಈ ಗಿಡದಲ್ಲಿ ಸಣ್ಣಸಣ್ಣ ಮುಳ್ಳುಗಳಿರುತ್ತದೆ ಮತ್ತು ಕಾಯಿಗಳು ಗೊಂಚಲು ರೂಪದಲ್ಲಿ ಬೆಳೆದುಕೊಳ್ಳುತ್ತದೆ. ಇವುಗಳು ಆರೋಗ್ಯಕಾರಿಯಾಗಿರುವ, ನಿಮ್ಮ ದೇಹಕ್ಕೆ ಅನೇಕ ಪೋಷಕಾಂಶಗಳನ್ನು ಒದಗಿಸುವ ಕಾಯಿಗಳಾಗಿದ್ದು ಅನೇಕ ರೀತಿಯ ಅಡುಗೆಗೆ ಪ್ರಯೋಜನಕಾರಿ. ಮಾರುಕಟ್ಟೆಯಲ್ಲಿ ಮಾರಾಟವಾಗದೇ ಇದ್ದರೂ ಕೂಡ ನಿಮ್ಮ ಕಣ್ಣಿಗೆ ಕಂಡರೆ ಖಂಡಿತ ಕೊಯ್ದು ಅಡುಗೆ ಮಾಡುವುದನ್ನು ಮರೆಯಬೇಡಿ.
ಹಾಗಾದ್ರೆ ಸುಂಡೆಕಾಯಿ ಚಟ್ನಿ ತಯಾರಿಸುವುದು ಹೇಗೆ ಎಂಬ ವಿವರ ಇಲ್ಲಿದೆ ನೋಡಿ.
Recipe By: Sushma
Recipe Type: Veg
Serves: 5
-
ಬೇಕಾಗುವ ಸಾಮಗ್ರಿಗಳು:
ಸುಂಡೆಕಾಯಿ - 50
ಕೊತ್ತುಂಬರಿ ಸೊಪ್ಪು - ಒಂದು ಬೌಲ್
ಈರುಳ್ಳಿ- ಎರಡು
ಬೆಳ್ಳುಳ್ಳಿ- 10 ಎಸಳು
ಹುಣಸೆಹಣ್ಣು- ಅಡಿಕೆ ಗಾತ್ರ
ಹಸಿಮೆಣಸು- ಮೂರರಿಂದ ನಾಲ್ಕು
ಉಪ್ಪು- ರುಚಿಗೆ ತಕ್ಕಷ್ಟು
ಅಡುಗೆ ಎಣ್ಣೆ- ಮೂರರಿಂದ ನಾಲ್ಕು ಸ್ಪೂನ್
-
ಮಾಡುವ ವಿಧಾನ -
. ಮೊದಲಿಗೆ ಸುಂಡೆಕಾಯಿಯನ್ನು ಸ್ವಲ್ಪ ಬಾಡುವಂತೆ ಒಂದೆರಡು ಸ್ಪೂನ್ ಎಣ್ಣೆ ಹಾಕಿ ಹುರಿದುಕೊಳ್ಳಿ.
. ಈರುಳ್ಳಿಯನ್ನು ಹೆಚ್ಚಿಕೊಂಡು ಕೆಂಬಣ್ಣಕ್ಕೆ ಬರುವಂತೆ ಹುರಿದು ಪಕ್ಕಕಿಡಿ.
. ಬೆಳ್ಳುಳ್ಳಿ ಎಸಳುಗಳನ್ನು ಕೂಡ ಹುರಿದುಕೊಳ್ಳಿ.
. ಹಸಿಮೆಣಸನ್ನು ಕೂಡ ಕೆಂಬಣಕ್ಕೆ ಬಾಡುವಂತೆ ಹುರಿದುಕೊಳ್ಳಿ.
. ನಂತರ ಹುರಿದ ಸುಂಡೆಕಾಯಿ, ಈರುಳ್ಳಿ, ಬೆಳ್ಳುಳ್ಳಿ, ಹಸಿಮೆಣಸಿಗೆ ಉಪ್ಪು, ಹುಣಸೆಹಣ್ಣು, ಕೊತ್ತುಂಬರಿ ಸೊಪ್ಪು ಸೇರಿಸಿ ನುಣ್ಣಗೆ ರುಬ್ಬಿದರೆ ಚಟ್ನಿ ಸಿದ್ಧ.
.ಬೇಕಿದ್ದರೆ ಸಾಸಿನಕಾಳಿನ ಒಗ್ಗರಣೆ ಹಾಕಬಹುದು.
- ತೂಕ ಹೆಚ್ಚಿಸಲು ಬಯಸುವವರು ಇದನ್ನು ಸೇವಿಸಬಹುದು .ಕಿಡ್ನಿ ಸಮಸ್ಯೆ ಇರುವವರು ಈ ಚಟ್ನಿಯ ಸೇವನೆ ಮಾಡುವುದು ಒಳಿತು. .ಮಧುಮೇಹಿಗಳಿಗೆ ಇದು ಅತ್ಯುತ್ತಮ ಆಹಾರ. .ಜೀರ್ಣಕ್ರಿಯೆ ಸಮಸ್ಯೆ ಇರುವವರಿಗೆ ಮತ್ತು ಮಲಬದ್ಧತೆ ಸಮಸ್ಯೆ ಇರುವವರು ಇದನ್ನು ಸೇವಿಸಬಹುದು. . ಇದರಲ್ಲಿ ಸಾಕಷ್ಟು ಕಬ್ಬಿನಾಂಶ ಇರುವುದರಿಂದಾಗಿ ಅನೀಮಿಯಾ ಸಮಸ್ಯೆಯಿಂದ ಬಳಲುವವರಿಗೆ ಅತ್ಯುತ್ತಮ ಆಹಾರವಾಗಿದೆ. .ಕೆಂಪು ರಕ್ತಕಣಗಳನ್ನು ಹೆಚ್ಚಿಸಲು ಇದು ಸಹಕಾರಿಯಾಗಿದೆ.
- Iron - 100
- manganese per kg - 19.466mg
- calcium - 221.583mg
- copper - 2.642mg



Click it and Unblock the Notifications