For Quick Alerts
ALLOW NOTIFICATIONS  
For Daily Alerts

ಸುಲಭ ಮತ್ತು ರುಚಿಕರ ಅಡುಗೆಗೆ 10 ಸಲಹೆಗಳು

|
10 Cooking Tips
ರುಚಿಕರವಾದ ಅಡುಗೆಯನ್ನು ತಿನ್ನುವುದು ಚೆಂದ, ಅಮ್ಮ ಮಾಡಿದ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಕಮ್ಮಿಯಾದರೆ 'ನಿಮಗೆ ಅಡುಗೆ ಮಾಡಲಿಕ್ಕೆ ಬರುವುದಿಲ್ಲ' ಅಂತ ಸರ್ಟಿಫಿಕೇಟ್ ಕೊಡುವುದು ಬಲು ಸುಲಭದ ಕೆಲಸ. ಆದರೆ ನಾವೇ ಅಡುಗೆ ಮಾಡಲು ನಿಂತಾಗ ಅದರ ಕಷ್ಟ ಏನು ಅಂತ ಅರ್ಥವಾಗುವುದು.

ಚಪ್ಪಾತಿ ಮಾಡಿದರೆ ರಬ್ಬರ್ ತುಂಡು ರೀತಿ ಗಟ್ಟಿಯಾಗಬಹುದು, ನೀರು ಸರಿಯಾದ ಪ್ರಮಾಣದಲ್ಲಿ ಹಾಕದೆ ಅಡುಗೆ ಸೀದು ಹೋಗಬಹುದು. ಈ ಕೆಳಗಿನ ಅಡುಗೆ ಸಲಹೆಗಳು ಅಡುಗೆಯನ್ನು ಸುಲಭವಾಗಿ ಮತ್ತು ರುಚಿಕರವಾಗಿಸುವಲ್ಲಿ ಸಹಕಾರಿಯಾಗಿದೆ.

ಅಡುಗೆ ಸಲಹೆಗಳು:

1. ಒಂದು ಕಪ್ ಬೇಳೆ ಬೇಯಿಸಲು 2-3 ಕಪ್ ನೀರು ಹಾಕಬೇಕು.

2. ದವಸ ಧಾನ್ಯಗಳನ್ನು ಒಂದು ರಾತ್ರಿ ನೆನೆ ಹಾಕಿದರೆ ಕಾಳುಗಳು ಚೆನ್ನಾಗಿ ಬೇಯುತ್ತದೆ. ಅದದರಲ್ಲೂ ಮೊಳಕೆ ಬರಿಸಿದ ಸಾರು ಹೆಚ್ಚಿನ ರುಚಿಯನ್ನು ಹೊಂದಿರುತ್ತದೆ.

3. ಗ್ರೇವಿ ತಯಾರಿಸುವಾಗ ಸ್ವಲ್ಪ ನೀರು ಸೇರಿಸುವುದಾದರೆ ತಣ್ಣೀರಿನ ಬದಲು ಬಿಸಿ ನೀರು ಹಾಕಿದರೆ ಗ್ರೇವಿ ರುಚಿ ಹೆಚ್ಚಾಗುವುದು.

4. ಮೈದಾ ಅಥವಾ ಗೋಧಿ ಹಿಟ್ಟು ಕಲೆಸುವಾಗ ಒಂದು ಚಮಚ ಬಿಸಿ ಎಣ್ಣೆ ಸೇರಿಸಿದರೆ ಹಿಟ್ಟು ಮೃದುವಾಗುವುದು.

5. ತಳಭಾಗ ದಪ್ಪವಿರುವ ಪಾತ್ರೆಗಳನ್ನು ಬಳಸಿದರೆ ಅಡುಗೆ ಅಷ್ಟು ಬೇಗನೆ ಸೀದು ಹೋಗುವುದಿಲ್ಲ.

6. ಅಡುಗೆಗೆ ಮೊಸರು ಸೇರಿಸುವ ಮುಂಚೆ ಚೆನ್ನಾಗಿ ಕದಡಬೇಕು ಮತ್ತು ಅಡುಗೆಗೆ ನಿಧಾನಕ್ಕೆ ಸುರಿಯಬೇಕು.

7. ತರಕಾರಿ ಬೇಯಿಸಿದ ನೀರನ್ನು ಬಿಸಾಡುವ ಬದಲು ಅದನ್ನು ಸಾರು ಮಾಡಲು ಬಳಸಿದರೆ ಅಡುಗೆ ಮತ್ತಷ್ಟು ರುಚಿಕರವಾಗಿರುತ್ತದೆ ಅಲ್ಲದೆ ತರಕಾರಿಯಲ್ಲಿರುವ ಪೋಷಕಾಂಶಗಳು ಹಾಳಾಗುವುದಿಲ್ಲ.

8. ಹಾಲನ್ನು ಕುದಿಸುವ ಮೊದಲು ಹಾಲಿನ ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ನಂತರ ಹಾಲು ಹಾಕಿ ಕುದಿಸಿದರೆ ಹಾಲು ಅಡಿ ಹಿಡಿಯುವುದಿಲ್ಲ.

9. ಟೊಮೆಟೊವನ್ನು ಬಿಸಿ ನೀರಿನಲ್ಲಿ ಹಾಕಿದರೆ ಅದರ ಸಿಪ್ಪೆ ಸುಲಭವಾಗಿ ಸುಲಿಯಬಹುದು.

10. ಆಲೂಗೆಡ್ಡೆಯನ್ನು ಉಪ್ಪು ನೀರಿನಲ್ಲಿ 20 ನಿಮಿಷ ಇಟ್ಟು ನಂತರ ಬೇಯಿಸಿದರೆ ಬೇಗನೆ ಬೇಯುವುದು.

English summary

10 Cooking Tips | Cookery tips | ಅಡುಗೆ ಮಾಡುವಾಗ ಗಮನಿಸಬೇಕಾದ 10 ಅಂಶಗಳು | ಅಡುಗೆ ಕೆಲ ಸಲಹೆಗಳು

Cooking also one kind of technique. If You know cooking it's not sufficient. Those who knows cookery tips, they only can become expert cook.
Story first published: Wednesday, March 28, 2012, 17:44 [IST]
X
Desktop Bottom Promotion