For Quick Alerts
ALLOW NOTIFICATIONS  
For Daily Alerts

ಪಾಕಮಂದಿರದಲ್ಲಿ ಜಟಾಪಟ್ ಕಲಾಕಂದ್ ಮಾಡಿ

By Staff
|

ಭಾರತದ ಪ್ರಸಿದ್ಧ ಹಾಲಿನ ತಿಂಡಿ ಕಲಾಕಂದ್ ನೀವೆಂದಿಗಾದರೂ ಮನೆಯಲ್ಲಿ ಮಾಡಿದ್ದೀರ? ಇಲ್ಲವೆಂದರೆ ಈ ದಿನ ಕಲಾಕಂದ್ ಮಾಡುವುದಕ್ಕೆ ಸೂಕ್ತ ಕಾಲ. ಕೃಷ್ಣ ಜನ್ಮಾಷ್ಟಮಿಗೆ ಕಲಾಕಂದ್ ಸಿಹಿ ತಿಂಡಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಹಂಚಬಹುದು. ಎಲ್ಲ ಹಬ್ಬಹರಿದಿನಗಳಿಗೂ ಒಪ್ಪುವ ವಿಶೇಷವಾದ ಕಲಾಕಂದ್ ರುಚಿಯನ್ನು ನೀವೂ ಟೇಸ್ಟ್ ಮಾಡಬಹುದು.

ಬೇಕಾಗುವ ಪದಾರ್ಥಗಳು:

* 1 ಲೀಟರ್ ಹಾಲು
* 1/2 ಕೆ.ಜಿ. ತಾಜಾ ಪನ್ನೀರು
* 1/2 ಕಪ್ ಸಕ್ಕರೆ
* ಬಾದಾಮಿ ಮತ್ತು ಪಿಸ್ತಾ ಚೂರುಗಳು
* 1/2 ಚಮಚ ಯಾಲಕ್ಕಿ ಪುಡಿ
* ಬೆಣ್ಣೆ

ಕಲಾಕಂದ್ ತಯಾರಿಸುವುದು ಹೇಗೆ?

* ತಳ ಗಟ್ಟಿಯಿರುವ ಪಾತ್ರೆಯಲ್ಲಿ ಹಾಲು ಹಾಕಿ ಅದು ಗಟ್ಟಿಗೊಳ್ಳುವವರೆಗೂ ಸಣ್ಣ ಉರಿಯಲ್ಲಿ ಕಾಯಿಸುತ್ತಿರಬೇಕು. ಪನ್ನೀರನ್ನು ಚೆನ್ನಾಗಿ ಹಿಂಡಿ ಹಾಲಿಗೆ ಬೆರೆಸಬೇಕು.

* ಈಗ ಸಕ್ಕರೆ ಮತ್ತು ಯಾಲಕ್ಕಿ ಪುಡಿಯನ್ನು ಹಾಲಿಗೆ ಹಾಕಿ ಅದು ಗಟ್ಟಿಗೊಳ್ಳುವವರೆಗೂ ತಿರುಗಿಸುತ್ತಲೇ ಇರಬೇಕು.

* ಈ ಮಿಶ್ರಣವನ್ನು ಬೆಣ್ಣೆ ಹಚ್ಚಿದ ತಟ್ಟೆಗೆ ಹಾಕಿ ಅದರ ಮೇಲೆ ಬಾದಾಮಿ ಮತ್ತು ಪಿಸ್ತಾ ಚೂರುಗಳನ್ನು ಹಾಕಬೇಕು. ಅದನ್ನು ನಿಮಗೆ ಬೇಕಾದ ಆಕಾರದಲ್ಲಿ ಆರಿದ ನಂತರ ಕತ್ತರಿಸಿಕೊಳ್ಳಬಹುದು.

ಈಗ ಸ್ವಾದಭರಿತ ಕಲಾಕಂದ್ ರೆಡಿಯಾಗಿದೆ. ಎಲ್ಲ ಹಬ್ಬಹರಿದಿನಗಳಲ್ಲೂ ಬಲು ಸುಲಭವಾಗಿ ಮಾಡಿ ಮುಗಿಸಬಹುದಾದಂತಹ ಈ ಹಾಲಿನ ಕೇಕ್ ಕಲಾಕಂದರ್ ಅನ್ನು ನೀವೂ ತಯಾರು ಮಾಡಿ.

English summary

Special Indian milk recipe Kalakhand | Easy festival sweet kalakhand | ಭಾರತದ ವಿಶೇಷ ಸಿಹಿತಿಂಡಿ ಕಲಾಕಂದ್ | ಹಬ್ಬದ ಸುಲಭ ಸಿಹಿ ತಿಂಡಿ ಕಲಾಕಂದ್

Have you ever tried the famous milk cake recipe of India, we are talking about the Kalakhand. It is nice to prepare Kalakhand in every festival. Take a look at how to go about with the famous Kalakhand recipe.
X
Desktop Bottom Promotion