For Quick Alerts
ALLOW NOTIFICATIONS  
For Daily Alerts

ಶೇಂಗಾ ಹೋಳಿಗೆ ಅಥವಾ ಕಡಲೆಕಾಯಿ ಹೋಳಿಗೆ

By Staff
|
Shenga holige (photo by Sandhya)
ಕಡಲೆಬೇಳೆಯಿಂದ ತಯಾರಿಸಿದ ಹೂರಣದ ಹೋಳಿಗೆ, ಕಾಯಿ ಹೋಳಿಗೆ, ಸಕ್ಕರೆ ಹೋಳಿಗೆ ಮುಂತಾದ ತರಹೇವಾರಿ ಹೋಳಿಗೆಗಳನ್ನು ಹಬ್ಬಹರಿದಿನಗಳಲ್ಲಿ ಮೆಂದಿರುತ್ತೀರಿ. ಇವೆಲ್ಲಕ್ಕೆ ಹೊರತಾಗಿ ಹೊಸಬಗೆಯ ಸಿಹಿತಿನಿಸನ್ನು ಬಯಸುವವರಿಗೆ ಇಲ್ಲಿದೆ ನೋಡಿ ಹೊಸರುಚಿ. ಶೇಂಗಾ ಹೋಳಿಗೆಯನ್ನು ತಯಾರಿಸುವ ವಿಧಾನವನ್ನು ನೋಡೋಣ ಬನ್ನಿ.

* ಸಂಧ್ಯಾ, ಬೆಳಗಾವಿ

ಬೇಕಾಗುವ ಪದಾರ್ಥಗಳು

ಶೇಂಗಾ 1 ಬಟ್ಟಲು
ಬೆಲ್ಲ 1 ಬಟ್ಟಲು
ಗೋಧಿಹಿಟ್ಟು 1 ಬಟ್ಟಲು
ಏಲಕ್ಕಿ ಪುಡಿ 1 ಚಮಚ
ಎಣ್ಣೆ

ಮಾಡುವ ವಿಧಾನ

ಶೇಂಗಾ ಅಥವಾ ಕಡಲೆಕಾಯಿ ಬೀಜಗಳನ್ನು ಹುರಿದುಕೊಂಡು ಸಿಪ್ಪೆಯನ್ನು ತೆಗೆದು ಒಂದು ಬೋಗುಣಿಯಲ್ಲಿ ಹಾಕಿಟ್ಟುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಉಂಡೆ ಬೆಲ್ಲವನ್ನು ಹೆರೆದಿಟ್ಟುಕೊಂಡು ಅದಕ್ಕೆ ಪುಡಿ ಮಾಡಿ ಶೇಂಗಾವನ್ನು ಸೇರಿಸಿ ಮತ್ತೆ ಮಿಕ್ಸಿಯಲ್ಲಿ ತಿರುವಿ ಹೂರಣ ತಯಾರಿಸಿಕೊಳ್ಳಬೇಕು.

ನಂತರದ ಕೆಲಸ ಗೋಧಿಹಿಟ್ಟಿನ ಕಣಕವನ್ನು ತಯಾರಿಸುವುದು. ಹಿಟ್ಟಿಗೆ ನೀರನ್ನು ಬೆರೆಸಿ ಚಪಾತಿ ಮಾಡುವ ಕಣಕದಂತೆ ತಯಾರಿಸಿಟ್ಟುಕೊಳ್ಳಿ. ಮೊದಲೇ ತಯಾರಿಸಿದ ಹೂರಣವನ್ನು ಸಣ್ಣ ಸಣ್ಣ ಉಂಡೆ ಮಾಡಿಕೊಂಡು ಅದನ್ನು ಗೋಧಿಹಿಟ್ಟಿನ ಕಣದಿಂದ ಪೂರ್ತಿ ಮುಚ್ಚಿ ಲಟ್ಟಿಸಿರಿ. ಲಟ್ಟಿಸಿದ ಶೇಂಗಾ ಹೋಳಿಗೆಯ ಎರಡೂ ಬದಿಗೆ ಎಣ್ಣೆಯನ್ನು ಸವರಿ ಕಂದುಬಣ್ಣ ಬರುವವರೆಗೆ ಬೇಯಿಸಿರಿ.

ನೆನಪಿಡಿ, ಈ ಶೇಂಗಾ ಹೋಳಿಗೆಯನ್ನು ಬಿಸಿಬಿಸಿಯಾಗಿರುವಾಗಲೇ ಹೊಟ್ಟೆಗಿಳಿಸಬೇಕು. ಒಂದು ಚಮಚ ತುಪ್ಪದೊಡನೆ ತಿಂದರೆ ರುಚಿಯಾಗಿರುತ್ತದೆ.

Story first published: Tuesday, February 16, 2010, 14:14 [IST]
X
Desktop Bottom Promotion