For Quick Alerts
ALLOW NOTIFICATIONS  
For Daily Alerts

ಸಿಹಿಪಾಕಶಾಲೆ: ಬಂಗಿನಪಲ್ಲಿ ಮಾವಿನ ಹಲ್ವಾ

By Staff
|

ಜೂನ್ ಗೂ ಮೊದಲೇ ಮುಂಗಾರು ಮಳೆ ಸುರಿಯಲಿದ್ದು, ಫಸಲು ಕಡಿಮೆಯಾಗುವ ಕಾರಣ ಮಾವಿನ ಹಣ್ಣಿನ ಬೆಲೆ ದುಬಾರಿ ಯಾಗಲಿದೆ ಎಂಬ ವರದಿ ಮೈಸೂರಿನಿಂದ ಬಂದಿದೆಯಷ್ಟೆ. ಆದರೆ ಹಣ್ಣುಗಳ ರಾಜನನ್ನು ಕೊಂಡು ಬಗೆಬಗೆಯ ತಿನಿಸನ್ನು ಮಾಡಿ ತಿನ್ನುವವರ ಸಂಖ್ಯೆ ಮಾತ್ರ ಕಮ್ಮಿಯಾಗಿಲ್ಲ.

ಕೆ.ಜಿಗೆ 40 ಆಗಲಿ 100 ರು.ಗಳಾಗಲಿ ಕೊಳ್ಳುವವರು ಇದ್ದಾರೆ. ಮಾವಿನ ಗಮ್ಮತ್ತೆ ಹಾಗೆ. ಇನ್ನೂ ಮಾವು ಮೇಳಗಳು ನಡೆದು ಕೊಳ್ಳುವವರಿಗೆ ಹಾಗೂ ಮಾರುವವರಿಗೆ ಕೊಂಚ ರಿಲೀಫ್ ಸಿಗುವುದಂತೂ ಗ್ಯಾರಂಟಿ. ಸದ್ಯಕ್ಕೆ ಬಂಗನಪಲ್ಲಿ(ಬಂಗಿನಪಲ್ಲಿ) ಮಾವಿನ ಹಣ್ಣು ಬಳಸಿ ಹಲ್ವಾ ಮಾಡುವ ವಿಧಾನವನ್ನು ನೋಡೋಣ.

ಇವನ್ನು ಹೊಂದಿಸಿಕೊಳ್ಳಿ:
ಮಾವಿನ ಹಣ್ಣಿನ ಚೂರುಗಳು (ಘನಾಕೃತಿಯಲ್ಲಿ) : 2 ಕಪ್ (ಬಂಗಿನಪಲ್ಲಿ ಹಣ್ಣಾದರೆ ಉತ್ತಮ)
ಸಕ್ಕರೆ: 1 ಕಪ್
ತುಪ್ಪ : 1ಟೇಬಲ್ ಚಮಚ
(ಸೂಚನೆ: ಮಾವಿನ ಹಣ್ಣಿನ ಸಿಹಿಯನ್ನು ಅನುಸರಿಸಿ ಸಕ್ಕರೆಯ ಅಳತೆ ಹೆಚ್ಚುಕಡಿಮೆ ಮಾಡಿಕೊಳ್ಳಬಹುದು.)

ಹೀಗೆ ಮಾಡಿ ನೋಡಿ:
ಮಾವಿನ ಹಣ್ಣಿನ ಚೂರುಗಳೊಂದಿಗೆ ಸಕ್ಕರೆಯನ್ನು ಬೆರೆಸಿ.ಅಗಲವಾದ ದಪ್ಪತಳದ ಬಾಣಲೆಗೆ ಹಾಕಿ ಬಿಸಿ ಮಾಡಿ. ಮಗಚುವ ಕೈಯಿಂದ ಕಲಕುತ್ತಾ ಇರಿ. ಮಾವಿನ ಹಣ್ಣಿನ ಹಲ್ವಾ ಸಿದ್ಧವಾಗುತ್ತದೆ. ಹಲ್ವಾವನ್ನು ದಪ್ಪವಾಗಿ, ತೇವವೆಲ್ಲವೂ ಒಣಗುವವರೆಗೆ ಕಲೆಸುತ್ತಿರಿ.ಕೊನೆಯಲ್ಲಿ ತುಪ್ಪವನ್ನು ಸೇರಿಸಿ, ಒಲೆಯಿಂದ ಕೆಳಗಿಳಿಸಿ.

ಬೇಕಿದ್ದರೆ ಪಿಸ್ತಾ, ಬಾದಾಮಿ ಹಾಗೂ ಗೋಡಂಬಿ ಚೂರುಗಳನ್ನು ಹಲ್ವಾದ ಮೇಲೆ ಹಾಕಿ ಅಲಂಕರಿಸಬಹುದು.

ಮತ್ತೊಂದು ವಿಧಾನ:
ಮಾವಿನ ಹಣ್ಣಿನ ರಸವನ್ನು ಬಳಸುವುದಾದರೆ, ಒಂದು ಕಪ್ ರಸಕ್ಕೆ ಮುಕ್ಕಾಲು ಕಪ್ ಸಕ್ಕರೆಯನ್ನು ಅಧಿಕವಾಗಿ ಬಳಸಿ.

(ದಟ್ಸ್‌ಕನ್ನಡ ಪಾಕಶಾಲೆ)

English summary

Summer Special Banginapalli Mango halwa- ಬಂಗಿನಪಲ್ಲಿ ಮಾವಿನ ಹಲ್ವಾ

Banginapalli Mango Halwa by Chitamani Raju.
X
Desktop Bottom Promotion