For Quick Alerts
ALLOW NOTIFICATIONS  
For Daily Alerts

ರೆಸಿಪಿ: ದೇಹದ ಬೊಜ್ಜು ಕರಗಿಸುವ ಸೀಗೆಸೊಪ್ಪಿನ ಸಾರು

Posted By:
|

ಸೀಗೆಕಾಯಿಯ ಹೆಸರನ್ನು ಹೆಚ್ಚಿನವರು ಕೇಳಿರುತ್ತೀರಿ. ಸೀಗೆಕಾಯಿಯಿಂದ ತಯಾರಿಸಿದ ಸೋಪು ಸ್ನಾನಕ್ಕೆ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಅನೇಕ ಸೋಪು ಮತ್ತು ಶಾಂಪೂ ತಯಾರಿಕಾ ಕಂಪೆನಿಗಳು ಸೀಗೆಕಾಯಿಯನ್ನು ಬಳಸುತ್ತಿವೆ. ಸೀಗೆಕಾಯಿ ಮತ್ತು ಅಂಟುವಾಳದ ಕಾಯಿಯ ಪೌಡರ್ ಬಳಸಿ ಅನಾದಿ ಕಾಲದ ಮಂದಿ ಸ್ನಾನ ಮಾಡುತ್ತಿದ್ದರು. ಇದು ನೊರೆಯನ್ನು ಉಂಟು ಮಾಡುವ ಗುಣವನ್ನು ಹೊಂದಿದ್ದು ಚರ್ಮದ ಸ್ವಚ್ಛತೆಗೆ ಬಹಳ ಪ್ರಯೋಜನಕಾರಿಯಾಗಿರುವ ಕಾಯಿಯಾಗಿದೆ.
ಸೀಗೆಕಾಯಿಯನ್ನು ಇಂಗ್ಲೀಷಿನಲ್ಲಿ ಹರ್ಬಾರಿಯಂ ಎಂದು ಕರೆಯುತ್ತಾರೆ. ಶೀಕಾ ಎಂದರೆ ಕೂದಲು ಮತ್ತು ಕಾಯಿ ಅಂದರೆ ಹಣ್ಣು ಎಂದರ್ಥ. ಅಕಾಶಿಯಾ ಕಾನ್ಚಿನ್ನಾ(Acacia concinna) ಎಂದು ಕೂಡ ಕರೆಯಲಾಗುತ್ತದೆ. ಏಷ್ಯಾದ ಹಲವು ಬೆಟ್ಟ ಪ್ರದೇಶಗಳಲ್ಲಿ ನೀವಿದನ್ನು ಕಾಣಬಹುದು. ಅದರಲ್ಲೂ ಪ್ರಮುಖವಾಗಿ ದಕ್ಷಿಣ ಭಾರತದಲ್ಲಿ ಸೀಗೆಕಾಯಿಯ ಬಳ್ಳಿ ಹೆಚ್ಚಾಗಿ ಬೆಳೆಯುತ್ತದೆ.

Soap Nut Acacia Leaf Recipe

ಹಾಗಂತ ಕೇವಲ ಕಾಯಿಯಿಂದ ಮಾತ್ರ ಪ್ರಯೋಜನ ಅಂದುಕೊಳ್ಳಬೇಡಿ. ಸೀಗೆಬಳ್ಳಿಯ ಸೊಪ್ಪುಗಳು ಕೂಡ ಆರೋಗ್ಯಕ್ಕೆ ಹಲವು ಲಾಭಗಳನ್ನು ಮಾಡುತ್ತದೆ. ಹುಣಸೆ ಮರದ ಸೊಪ್ಪಿನ ರೀತಿಯಲ್ಲೇ ಕಾಣುವ ಈ ಸೊಪ್ಪಿನಿಂದ ಖಾಧ್ಯಗಳನ್ನು ಕೂಡ ತಯಾರಿಸಬಹುದು.
ನಿಮ್ಮ ಡಯಟ್ ನಲ್ಲಿ ಸೀಗೆಸೊಪ್ಪನ್ನು ಬಳಕೆ ಮಾಡುವುದರಿಂದಾಗಿ ಅನೇಕ ಆರೋಗ್ಯ ಸಮಸ್ಯೆಗಳು ದೂರವಾಗುತ್ತದೆ. ತೂಕ ಇಳಿಸಲು, ದೇಹದ ಕೊಬ್ಬು ಕರಗಿಸಲು, ದೇಹಕ್ಕೆ ಶಕ್ತಿ ನೀಡಲು ಸೇರಿದಂತೆ ಹಲವು ಕಾರಣಕ್ಕಾಗಿ ಆಯುರ್ವೇದದ ಹಲವು ಪ್ರಾಡಕ್ಟ್‌ ಗಳಲ್ಲಿ ಸೀಗೇಕಾಯಿಯ ಎಲೆಯನ್ನು ಬಳಸುತ್ತಾರೆ. ನಾವಿಲ್ಲಿ ಸೀಗೆಸೊಪ್ಪಿನಿಂದ ರುಚಿರುಚಿಯಾದ ಸಾರು ತಯಾರಿಸುವುದು ಹೇಗೆ ಎಂಬ ಬಗ್ಗೆ ತಿಳಿಸಿಕೊಡುತ್ತಿದ್ದೇವೆ. ಮುಂದೆ ಓದಿ.

Soap Nut Acacia Leaf Recipe ದೇಹದ ಬೊಜ್ಜು ಕರಗಿಸುವ ಸೀಗೆಸೊಪ್ಪಿನ ಸಾರು
Soap Nut Acacia Leaf Recipe ದೇಹದ ಬೊಜ್ಜು ಕರಗಿಸುವ ಸೀಗೆಸೊಪ್ಪಿನ ಸಾರು
Prep Time
5 Mins
Cook Time
5M
Total Time
10 Mins

Recipe By: Sushma chatra

Recipe Type: Veg

Serves: 4

Ingredients
  • ಸೀಗೆಸೊಪ್ಪಿನ ಸಾರು ತಯಾರಿಕೆಗೆ ಬೇಕಾಗುವ ಸಾಮಗ್ರಿಗಳು

    ಸೀಗೆಸೊಪ್ಪು - ಒಂದು ಮುಷ್ಠಿ

    ಉಪ್ಪು - ರುಚಿಗೆ ತಕ್ಕಷ್ಟು

    ವಾಟೆಪುಡಿ - ಒಂದು ಚಿಟಿಕೆ ( ನೀವು ಹುಣಸೆ ರಸ, ಮಾವಿನ ಪುಡಿ ಅಥವಾ ಇತರೆ ಯಾವುದೇ ಹುಳಿ ಅಂಶವನ್ನು ಬಳಕೆ ಮಾಡಬಹುದು)

    ಕಾಳುಮೆಣಸಿನ ಪುಡಿ - ಅರ್ಧ ಚಮಚ

    ಜೀರಿಗೆ ಪುಡಿ - ಅರ್ಧ ಚಮಚ

    ಬೆಲ್ಲ - ರುಚಿಗೆ ತಕ್ಕಷ್ಟು

Red Rice Kanda Poha
How to Prepare
  • ಮಾಡುವ ವಿಧಾನ

    • ಸೀಗೆಸೊಪ್ಪನ್ನು ಸ್ವಲ್ಪ ಬಾಡುವವರೆಗೆ ಬಾಣಲೆಗೆ ಹಾಕಿ ಹುರಿದುಕೊಳ್ಳಿ

    • ಹುರಿದ ಸೊಪ್ಪಿಗೆ ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ವಾಟೆಪುಡಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

    • ಮಿಕ್ಸಿ ಮಾಡಿದ ಮಿಶ್ರಣಕ್ಕೆ ನೀರು ಸೇರಿಸಿ ಐದು ನಿಮಿಷ ಕುದಿಸಿ.

    • ನಂತರ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಮತ್ತೊಂದೆರಡು ಕುದಿ ಬರುವವರೆಗೆ ಕಾಯಿಸಿದರೆ ಸೀಗೆಸೊಪ್ಪಿನ ಸಾರು ಸವಿಯಲು ಸಿದ್ಧ.

    • ಅನ್ನದೊಂದಿಗೆ ಸಾರನ್ನು ಹೊಕಿಕೊಂಡು ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿಕೊಂಡು ಸೇವಿಸಲು ಬಲು ರುಚಿಯಾಗಿರುತ್ತದೆ.

Instructions
  • ಆರೋಗ್ಯಕ್ಕೆ ಪ್ರಯೋಜನಗಳು • ಸೀಗೆ ಸೊಪ್ಪು ಹೊಟ್ಟೆ ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಅನಾವಶ್ಯಕ ಬೊಜ್ಜು ಹೊಟ್ಟೆಯಲ್ಲಿ ಶೇಖರಣೆಯಾಗಿದ್ದರೆ ಅದನ್ನು ಹೊರಹಾಕುವ ತಾಕತ್ತನ್ನು ಇದು ಹೊಂದಿದೆ. • ದೇಹದ ತೂಕ ಇಳಿಸಬೇಕು ಎಂದುಕೊಂಡಿರುವವರು ಈ ಸಾರನ್ನು ವಾರಕ್ಕೆ ಒಮ್ಮೆ ಬಳಕೆ ಮಾಡಬಹುದು. • ಬಾಣಂತಿಯರಿಗೆ ಈ ಸಾರು ಮಾಡುವ ರೂಢಿಯಿದೆ. • ನಿದ್ದೆಯ ಸಮಸ್ಯೆ ಎದುರಿಸುತ್ತಿರುವವರು ಈ ಸಾರು ಸೇವಿಸುವುದರಿಂದ ತಮ್ಮ ಸಮಸ್ಯೆಯನ್ನು ದೂರ ಮಾಡಿಕೊಳ್ಳಬಹುದು. • ಚರ್ಮದ ಕಾಂತಿ ಹೆಚ್ಚಿಸುವ ಗುಣವನ್ನು ಈ ಸೊಪ್ಪುಗಳು ಹೊಂದಿವೆ.
Nutritional Information

ಮಾಡುವ ವಿಧಾನ
• ಸೀಗೆಸೊಪ್ಪನ್ನು ಸ್ವಲ್ಪ ಬಾಡುವವರೆಗೆ ಬಾಣಲೆಗೆ ಹಾಕಿ ಹುರಿದುಕೊಳ್ಳಿ

Soap Nut Acacia Leaf Recipe
Soap Nut Acacia Leaf Recipe

• ಹುರಿದ ಸೊಪ್ಪಿಗೆ ಉಪ್ಪು, ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ವಾಟೆಪುಡಿ ಸೇರಿಸಿ ಮಿಕ್ಸಿ ಮಾಡಿಕೊಳ್ಳಿ.

Soap Nut Acacia Leaf Recipe
Soap Nut Acacia Leaf Recipe

• ಮಿಕ್ಸಿ ಮಾಡಿದ ಮಿಶ್ರಣಕ್ಕೆ ನೀರು ಸೇರಿಸಿ ಐದು ನಿಮಿಷ ಕುದಿಸಿ.

Soap Nut Acacia Leaf Recipe

• ನಂತರ ರುಚಿಗೆ ತಕ್ಕಷ್ಟು ಬೆಲ್ಲ ಸೇರಿಸಿ ಮತ್ತೊಂದೆರಡು ಕುದಿ ಬರುವವರೆಗೆ ಕಾಯಿಸಿದರೆ ಸೀಗೆಸೊಪ್ಪಿನ ಸಾರು ಸವಿಯಲು ಸಿದ್ಧ.

• ಅನ್ನದೊಂದಿಗೆ ಸಾರನ್ನು ಹೊಕಿಕೊಂಡು ಮೇಲಿನಿಂದ ಒಂದು ಚಮಚ ತುಪ್ಪ ಹಾಕಿ ಕಲಸಿಕೊಂಡು ಸೇವಿಸಲು ಬಲು ರುಚಿಯಾಗಿರುತ್ತದೆ.

[ 4 of 5 - 86 Users]
X
Desktop Bottom Promotion