Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೆಂತ್ಯೆ ಸೊಪ್ಪಿನ ಕಡುಬು: ಉತ್ತರ ಕರ್ನಾಟಕದ ಖಾದ್ಯ

ಬೇಕಾಗುವ ಸಾಮಾಗ್ರಿಗಳು :
1/4 ಕೆ.ಜಿ. ಗೋಧಿ ಹಿಟ್ಟು
1 ಚಮಚ ಜೀರಿಗೆ
2 ಗೆಡ್ಡೆ ಬೆಳ್ಳುಳ್ಳಿ
2 ಚಮಚ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ
1/2 ಬಟ್ಟಲು ತುರಿದ ಒಣ ಕೊಬ್ಬರಿ
2 ಕಟ್ಟು ಮೆಂತ್ಯೆ ಸೊಪ್ಪು
1 ಬಟ್ಟಲು ಕಡಲೆ ಕಾಯಿ ಬೀಜ
ಒಗ್ಗರಣೆಗೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು, ಕರಿಬೇವು, ಕೊತ್ತಂಬರಿ ಸೊಪ್ಪು
* ಮೆಂತೆ ಸೊಪ್ಪನ್ನು ಸಣ್ಣಗೆ ಕತ್ತರಿಸಿ ನೀರಿನಲ್ಲಿ ತೊಳೆಯಬೇಕು
* ಕಡಲೆಕಾಯಿ ಬೀಜವನ್ನು ಉರಿದು ಪುಡಿ ಮಾಡಿಕೊಳ್ಳಬೇಕು
* ಬೆಳ್ಳುಳ್ಳಿಯನ್ನು ಸುಲಿದು, ಸಣ್ಣಗೆ ತುಂಡುಗಳಾಗಿ ಮಾಡಿ ಕೊಳ್ಳಬೇಕು.ಒಣ ಕೊಬ್ಬರಿಯನ್ನು ತುರಿಯಬೇಕು.
ತಯಾರಿಸುವ ವಿಧಾನ:
1. ಮೊದಲಿಗೆ, ಗೋಧಿ ಹಿಟ್ಟು, ಖಾರದ ಪುಡಿ, ಆರಿಶಿಣ, ಜೀರಿಗೆ, ಸ್ವಲ್ಪ ಉಪ್ಪು ಮಿಶ್ರಣ ಮಾಡಿ, ನಂತರ ನೀರು ಸೇರಿಸಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿಕೊಳ್ಳಬೇಕು.
2. ಕಲಿಸಿದ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಮಾಡಿದ ಉಂಡೆಗಳನ್ನು ಅಂಗೈಯಲ್ಲಿ ಇಟ್ಟುಕೊಂಡು, ಬಿಲ್ಲೆ ಆಕಾರ ಬರುವ ಹಾಗೆ ಒತ್ತಬೇಕು. ನಂತರ ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ, ಕುದಿಯುವ ನೀರಿನಲ್ಲಿ ಹಿಟ್ಟಿನ ಬಿಲ್ಲೆಗಳನ್ನು ಹಾಕಿ, ಐದು ನಿಮಿಷಗಳ ಕಾಲ ಕುದಿಸಬೇಕು. ನಂತರ ಉಳಿದ ನೀರನ್ನು ತೆಗೆದು, ಬಿಲ್ಲೆಗಳನ್ನು ಬೇರೆ ಪಾತ್ರೆಯಲ್ಲಿ ತೆಗೆದಿಡಿ.
3. ಒಗ್ಗರಣೆಗಾಗಿ, ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ, ಸಾಸಿವೆ, ಜೀರಿಗೆ, ಕರಿಬೇವು, ಸುಲಿದ ಬೆಳ್ಳುಳ್ಳಿ ತುಂಡುಗಳು, ಸಣ್ಣಗೆ ಹೆಚ್ಚಿದ ಮೆಂತ್ಯೆ ಸೊಪ್ಪನ್ನು ಹಾಕಿ, ಹಸಿ ಹೋಗುವವರೆಗೂ ಎಣ್ಣೆಯಲ್ಲಿ ಬಾಡಿಸಬೇಕು. ನಂತರ ಬೇಯಿಸಿದ ಬಿಲ್ಲೆಗಳನ್ನು ಮತ್ತು ರುಚಿಗೆ ತಕ್ಕಷ್ಟು ಖಾರ ಮತ್ತು ಉಪ್ಪನ್ನು ಸೇರಿಸಿ.
4. ನಂತರ ಕಡಲೆಕಾಯಿ ಬೀಜದ ಪುಡಿ, ಕೊಬ್ಬರಿ ತುರಿ ಹಾಕಿ ಚೆನ್ನಾಗಿ ಕಲಿಸ ಬೇಕು. ಕೊನೆಯಲ್ಲಿ ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಸವಿಯಲು ಕೊಡಿ. ಬೇಕಿದ್ದರೆ, ಟೊಮೆಟೊ ಸಾಸ್ ನೊಂದಿಗೆ ಸೇವಿಸಬಹುದು. ಬಿಸಿ ಇದ್ದಾಗಲೇ ತಿನ್ನಲು ಚೆನ್ನಾಗಿರುತ್ತದೆ.



Click it and Unblock the Notifications
