For Quick Alerts
ALLOW NOTIFICATIONS  
For Daily Alerts

ಯುಗಾದಿ ಸ್ಪೆಶಲ್ ಮಸಾಲಾ ಗರೇಲು ರೆಸಿಪಿ!

|

ದಕ್ಷಿಣ ಭಾರತೀಯರು ವರ್ಷದ ಸಂಭವನೀಯ ಹಬ್ಬವೆಂದೇ ಜನಜನಿತ ಯುಗಾದಿಯ ಸ್ವಾಗತಿಸುವಿಕೆಯಲ್ಲಿದ್ದಾರೆ. ಕರ್ನಾಟಕ, ಆಂಧ್ರದ ಜನತೆಗೆ ಹೊಸ ವರ್ಷದ ಆರಂಭವನ್ನು ಯುಗಾದಿ ಹಬ್ಬದ ಸುಗ್ಗಿ ಸೂಚಿಸುತ್ತದೆ. ಯುಗಾದಿಯಲ್ಲಿ ಸಡಗರ ಸಂಭ್ರಮ ಹೇಗೆ ಮೇಳೈಸಿದೆಯೋ ಹಬ್ಬಕ್ಕಾಗಿ ತಯಾರಿಸುವ ಖಾದ್ಯ ಕೂಡ ಜನಪ್ರಿಯ ಮತ್ತು ಹಬ್ಬಕ್ಕಾಗಿ ತಯಾರಿಸಲೇಬೇಕು.

ಆದ್ದರಿಂದ ಬೋಲ್ಡ್ ಸ್ಕೈ ಯುಗಾದಿ ಹಬ್ಬಕ್ಕಾಗಿ ನಿಮ್ಮೊಂದಿಗೆ ಕೈ ಜೋಡಿಸುತ್ತಾ ವಿಶೇಷ ಹಬ್ಬದಡುಗೆಯನ್ನು ನಿಮ್ಮ ಮುಂದಿರಿಸುತ್ತಿದೆ. ಅದುವೇ ಮಸಾಲಾ ಗರೇಲು ರೆಸಿಪಿ. ಗರೇಲು ಹೆಸರೇ ಹೇಳುವಂತೆ ದಕ್ಷಿಣ ಭಾರತದಲ್ಲಿ ಹೆಸರುವಾಸಿಯಾಗಿರುವ ವಡೆ. ಮಸಾಲಾ ಗರೇಲುವನ್ನು ಕೆಲವು ಗಿಡಮೂಲಿಕೆಗಳು ಮತ್ತು ಸಾಂಬಾರು ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ.

ಗರೇಲು, ಪಾಯಸ ಮತ್ತು ಪುಳಿಹಾರವನ್ನು ಸಿದ್ಧಪಡಿಸದೇ ಯುಗಾದಿ ಹಬ್ಬ ಪರಿಪೂರ್ಣವಾಗುವುದಿಲ್ಲ. ಹಾಗಿದ್ದರೆ ಮತ್ತೇಕೆ ತಡ, ಮಸಾಲಾ ಗರೇಲು ರೆಸಿಪಿಯನ್ನು ತಯಾರಿಸಿ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿ.

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಬೋಲ್ಡ್ ಸ್ಕೈ ಅಡುಗೆ ಮನೆಯಲ್ಲಿ 8 ಯುಗಾದಿ ಖಾದ್ಯಗಳು

ಪ್ರಮಾಣ: 5
ಸಿದ್ಧತಾ ಸಮಯ: 6 ಗಂಟೆಗಳು
ಅಡುಗೆಗೆ ಬೇಕಾದ ಸಮಯ: 10 ನಿಮಿಷಗಳು

ಸಾಮಾಗ್ರಿಗಳು:
.ಉದ್ದಿನ ಬೇಳೆ - 1 ಕಪ್
.ಶುಂಠಿ - ಸಣ್ಣ ಗಾತ್ರದ್ದು (ತುಂಡರಿಸಿದ್ದು)
.ಈರುಳ್ಳಿ - 1 (ಸಣ್ಣದಾಗಿ ಕತ್ತರಿಸಿದ್ದು)
.ಹಸಿಮೆಣಸು - 3 (ಸಣ್ಣದಾಗಿ ಕತ್ತರಿಸಿದ್ದು)
.ಕೊತ್ತಂಬರಿ ಸೊಪ್ಪು - 1/2 ಕಪ್ (ಕತ್ತರಿಸಿದ್ದು)
.ಕರಿಬೇವಿನೆಲೆ - 1/4 ಕಪ್ (ಕತ್ತರಿಸಿದ್ದು)
.ಜೀರಿಗೆ - 1 ಸ್ಪೂನ್
.ಉಪ್ಪು - ರುಚಿಗೆ ತಕ್ಕಷ್ಟು
.ಎಣ್ಣೆ - ಕರಿಯಲು

ಇನ್ನಷ್ಟು ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ: ಈ ಯುಗಾದಿಗೆ ಅವಲಕ್ಕಿ ಪಾಯಸ

ಮಾಡುವ ವಿಧಾನ:
1. 3 ಕಪ್‌ನಷ್ಟು ಉದ್ದಿನಬೇಳೆಯನ್ನು 6 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ.

2.6 ಗಂಟೆಗಳ ನಂತರ, ಉದ್ದಿನ ಬೇಳೆಯಲ್ಲಿರುವ ನೀರು ಬಸಿದು ಸ್ವಲ್ಪ ನೀರು ಹಾಕಿಕೊಂಡು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ.

3.ಉದ್ದಿನ ಬೇಳೆಯ ಹಿಟ್ಟು ದಪ್ಪಗಿದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

4.ಮಿಕ್ಸಿಂಗ್ ಬೌಲ್‌ನಲ್ಲಿ ಉದ್ದಿನ ಹಿಟ್ಟು ತೆಗೆದುಕೊಂಡು ಅದಕ್ಕೆ ಕತ್ತರಿಸಿದ ಈರುಳ್ಳಿ, ಶುಂಠಿ, ಜೀರಿಗೆ, ಕರಿಬೇವಿನೆಲೆ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ನಿಮ್ಮ ಕೈಯಿಂದ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.

5.ಕರಿಯಲು ಪ್ಯಾನ್‌ನಲ್ಲಿ ಎಣ್ಣೆ ಬಿಸಿ ಮಾಡಿಕೊಳ್ಳಿ.

6.ಸ್ವಲ್ಪ ನೀರು ತೆಗೆದುಕೊಂಡು ನಿಮ್ಮ ಕೈಗಳನ್ನು ಒದ್ದೆ ಮಾಡಿಕೊಳ್ಳಿ ಮತ್ತು ಹಸ್ತದಿಂದ ಉಂಡೆಗಳನ್ನು ತಯಾರಿಸಿ.

7.ವಡೆಯ ಆಕಾರದಲ್ಲಿ ಉಂಡೆಯನ್ನು ತಟ್ಟಿಕೊಳ್ಳಿ ಮತ್ತು ಅದರ ಮಧ್ಯೆ ಸಣ್ಣ ತೂತನ್ನು ಮಾಡಿ.

8.ಎಣ್ಣೆ ಸಾಕಷ್ಟು ಬಿಸಿಯಾದೊಡನೆ, ಮಧ್ಯಮ ಉರಿಯಲ್ಲಿ ವಡೆಯನ್ನು ಕರಿಯಿರಿ.

9.ವಡೆಯ ಎರಡೂ ಬದಿ ಚಿನ್ನ ಮಿಶ್ರಿತ ಕಂದು ಬಣ್ಣ ಬರುವವರೆಗೆ ಕರಿಯಿರಿ.

10.ವಡೆ ಕರಿದು ಸಂಪೂರ್ಣಗೊಂಡ ನಂತರ ಅದನ್ನು ಸರ್ವಿಂಗ್ ಪ್ಲೇಟ್‌ಗೆ ವರ್ಗಾಯಿಸಿ.

11.ಇನ್ನಷ್ಟು ಗರೇಲು ಅಥವಾ ವಡೆಗಳನ್ನು ತಯಾರಿಸಲು ಇದೇ ವಿಧಾನವನ್ನು ಅನುಸರಿಸಿ.

ಮಸಾಲಾ ಗರೇಲು ಸವಿಯಲು ಸಿದ್ಧವಾಗಿದೆ. ತೆಂಗಿನಕಾಯಿ ಅಥವಾ ಕಡಲೆಕಾಳು ಚಟ್ನಿಯೊಂದಿಗೆ ವಡೆಯನ್ನು ಸವಿಯಿರಿ.

English summary

Masala Garelu Recipe For Ugadi

People from South India are gearing up for the most happening festival of the year - Ugadi. This harvest festival signals the beginning of a new year for the people of Karnataka, Andhra Pradesh and other allied areas.
X
Desktop Bottom Promotion