Just In
Don't Miss
- News
ಹರಿದ್ವಾರ ಕುಂಭಮೇಳ 2021: ಕೇಂದ್ರ ಸರ್ಕಾರದಿಂದ ಮಾರ್ಗಸೂಚಿ ಪ್ರಕಟ
- Movies
ದರ್ಶನ್ ಫಾರಂ ಹೌಸ್ಗೆ ಭೇಟಿ ನೀಡಿದ ಸಚಿವ ಬಿ.ಸಿ.ಪಾಟೀಲ್
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Finance
ಜನವರಿ 1ರಿಂದ 22ರ ತನಕ ಎಫ್ ಪಿಐನಿಂದ ರು. 18,456 ಕೋಟಿ ಹೂಡಿಕೆ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಹಾ ಬಾದಾಮಿ ಚೀಸ್ ಬಿಸ್ಕತ್ತು, ಸ್ವರ್ಗಕ್ಕೆ ಮೂರೇ ಗೇಣು!
ಕ್ರಿಸ್‌ಮಸ್‌ಗೆ ಇನ್ನೇನು ಒಂದು ವಾರ ಮಾತ್ರ ಬಾಕಿ ಉಳಿದಿದೆ. ದೇವ ಪುತ್ರನ ಈ ಹಬ್ಬಕ್ಕಾಗಿ ಎಷ್ಟೊಂದು ಸಿದ್ಧತೆಗಳನ್ನು ಮಾಡಿಕೊಂಡರೂ ಅದು ಸಾಕಾಗುವುದಿಲ್ಲ. ಕ್ರಿಸ್‌ಮಸ್ ಹಬ್ಬದಲ್ಲಿ ಕೇಕ್, ವೈನ್ ಮೊದಲಾದ ಪೇಯಗಳು, ಮಾಂಸದಡುಗೆ ಎಷ್ಟು ಮುಖ್ಯವೋ ಅಂತೆಯೇ ಸಿಹಿ ಬಿಸ್ಕತ್ತು (ಬಿಸ್ಕೆಟ್) ಗಳಿಗೂ ಸ್ಥಾನವಿದೆ.
ಏಸುವು ತನ್ನವರು ಹಸಿದುಕೊಂಡು ಇರುವುದನ್ನು ನೋಡಿಕೊಂಡು ಇರುತ್ತಿರಲಿಲ್ಲವಂತೆ. ಪ್ರತಿಯೊಬ್ಬ ಬಡ ಬಗ್ಗರಿಗೂ ಹಸಿವು ತೀರಿಸುತ್ತಿದ್ದಂತೆ. ಈ ನಿಟ್ಟಿನಲ್ಲಿಯೇ ಕ್ರಿಸ್‌ಮಸ್‌ನಂದು ಭರ್ಜರಿ ಭೋಜನ ಕೂಟವನ್ನು ಏರ್ಪಡಿಸಿ ಕುಟುಂಬದ ಸದಸ್ಯರು ಒಗ್ಗೂಡಿ ಹಬ್ಬವನ್ನು ಆಚರಿಸುತ್ತಾರೆ.
ಇಂದಿನ ಲೇಖನದಲ್ಲಿ ಬಾಯಲ್ಲಿ ನೀರೂರಿಸುವ ಮತ್ತು ಸ್ವತಃ ನೀವೇ ತಯಾರಿಸಬಹುದಾದ ಚೀಸ್ ಮತ್ತು ಬಾದಾಮಿ ಬಿಸ್ಕತ್ತುಗಳ ರೆಸಿಪಿಯನ್ನು ನೀಡುತ್ತಿದ್ದೇವೆ. ಬಾದಾಮಿ ಮತ್ತು ಚೀಸ್ ದೇಹಕ್ಕೆ ಅತ್ಯುತ್ತಮ ಎಂದೆನಿಸಿದ್ದು ಈ ಕ್ರಿಸ್‌ಮಸ್ ಹಬ್ಬದಂದು ನೀವು ಇದನ್ನು ಅವಶ್ಯವಾಗಿ ತಯಾರಿಸಬಹುದಾಗಿದೆ. ಬನ್ನಿ ಮಾಡುವ ವಿಧಾನವನ್ನು ಅರಿತುಕೊಳ್ಳೋಣ.
ಪ್ರಮಾಣ - 4
ಅಡುಗೆಗೆ ಬೇಕಾದ ಸಮಯ - 20 ನಿಮಿಷಗಳು
ಸಿದ್ಧತಾ ಸಮಯ - 15 ನಿಮಿಷಗಳು
ಸಾಮಾಗ್ರಿಗಳು
*ಮೈದಾ ಹುಡಿ - 2 ಕಪ್ಸ್
*ತುರಿದ ಚೀಸ್ - 1 ಕಪ್
*ಬಾದಾಮಿ - 1 ಕಪ್ (ಚಿಕ್ಕದಾಗಿ ಕತ್ತರಿಸಿಕೊಂಡಿದ್ದು)
*ಸಕ್ಕರೆ - 1/4 ಕಪ್
*ಬೆಣ್ಣೆ - 1/2 ಕಪ್
*ಹಾಲು - 1/2 ಕಪ್
*ಉಪ್ಪು - 1/4 ಚಮಚ
ಮಾಡುವ ವಿಧಾನ
1. ಪಾತ್ರೆಯನ್ನು ತೆಗೆದುಕೊಂಡು, ಮೈದಾ, ಬೆಣ್ಣೆ, ಸಕ್ಕರೆ ಮತ್ತು ಉಪ್ಪನ್ನು ಸೇರಿಸಿಕೊಂಡು ಎಲ್ಲವನ್ನೂ ಮಿಶ್ರ ಮಾಡಿಕೊಳ್ಳಿ.
2.ಈಗ ತುರಿದ ಚೀಸ್ ಅನ್ನು ಸೇರಿಸಿಕೊಳ್ಳಿ ಮತ್ತು ಕತ್ತರಿಸಿಕೊಂಡ ಬಾದಾಮಿಯನ್ನು ಹಾಕಿ.
3. ಈಗ ಎಲ್ಲವನ್ನೂ ಮಿಶ್ರ ಮಾಡಿ
4.ಹಿಟ್ಟನ್ನು ತಯಾರಿಸಿಕೊಳ್ಳಲು ಬೇಕಾದಷ್ಟು ಪ್ರಮಾಣದಲ್ಲಿ ಹಾಲನ್ನು ಸೇರಿಸಿ, ಮಿಶ್ರಣವನ್ನು ಖಾತ್ರಿಪಡಿಸಿ.
5.ಚಪ್ಪಟೆ ತಟ್ಟೆಯಲ್ಲಿ ಹಿಟ್ಟನ್ನು ಇರಿಸಿಕೊಳ್ಳಿ ಮತ್ತು ಎಲ್ಲಾ ಹಿಟ್ಟನ್ನು ನಾದಿಕೊಳ್ಳಿ
6.ಒಂದು ಇಂಚು ದಪ್ಪಕ್ಕೆ ಅರ್ಧ ಪ್ರಮಾಣದಲ್ಲಿ ಹಿಟ್ಟು ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ
7. ಈಗ, ಕುಕ್ಕಿ ಕಟರ್ ಅನ್ನು ಬಳಸಿಕೊಂಡು, ಹಿಟ್ಟನ್ನು ಸಮಾನ ಪ್ರಮಾಣದಲ್ಲಿ ಕತ್ತರಿಸಿಕೊಳ್ಳಿ ಮತ್ತು ಬಿಸ್ಕೆಟ್ ಟ್ರೇಗೆ ಅದನ್ನು ವರ್ಗಾಯಿಸಿ
8. ಟ್ರೇಯನ್ನು ಓವನ್‌ನಲ್ಲಿ ಇರಿಸಿ ಮತ್ತು 180 ಡಿಗ್ರಿ ಸೆಲ್ಶಿಯಸ್‌ನಲ್ಲಿ 15 ರಿಂದ 18 ನಿಮಿಷಗಳ ಕಾಲ ಅದನ್ನು ಬೇಯಿಸಿಕೊಳ್ಳಿ.
9. ಮೇಲೆ ತಿಳಿಸಿದ ಸಮಯದ ನಂತರ ಬಿಸ್ಕತ್ತನ್ನು ತೆಗೆದು, ಬಿಸಿ ಬಿಸಿಯಾಗಿ ಬಡಿಸಿ.
10. ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕಾಗಿ ಈ ರೆಸಿಪಿ ತಯಾರಿಯನ್ನು ಮರೆಯದೇ ಮಾಡಿ ಮತ್ತು ನಿಮ್ಮ ಪ್ರತಿಕ್ರಿಯೆಗಳನ್ನು ನಮಗೆ ತಿಳಿಸಿ.