For Quick Alerts
ALLOW NOTIFICATIONS  
For Daily Alerts

ಬಿಸಿಬಿಸಿ ಟೀ ಜೊತೆ ಕಡಲೆಹಿಟ್ಟಿನ ಕಟ್ ಲೆಟ್

By * ಭಾರತಿ ಎಚ್.ಎಸ್., ಬೆಂಗಳೂರು
|
Kadlehittu Cutlet recipe
ಚಳಿಗಾಲ ತಣ್ಣಗೆ ಕರ್ನಾಟಕದಲ್ಲಿ ಕಾಲಿಟ್ಟಿದೆ. ಸಿಟಿಸಿಟಿ ಸುಡುವ ಬಿಸಿಲಿನಲ್ಲಿ ಕಚಗುಳಿಯಿಡುವ ಚುಮುಚುಮು ಚಳಿ. ಸ್ವೆಟರು, ಮಫ್ಲರು, ಜರ್ಕಿನ್, ಕೈಗವಸುಗಳನ್ನು ಬಟ್ಟೆಯ ಗಂಟಿನಿಂದ ಹೊರತೆಗೆಯುವ ಸಮಯ. ಧೂಳು ಜಾಡಿಸಿ ಹಾಕಿಕೊಂಡರೆ ಮನಕ್ಕೆ ಏನೋ ಆನಂದ.

ಹಾಗೆಯೆ, ಸಂಜೆ ಕಚೇರಿಯಿಂದ ಮನೆಗೆ ಮರಳಿದಾಗ ಬಿಸಿಬಿಸಿ ಕಾಫಿ ಅಥವಾ ಚಹಾದ ಜೊತೆ ಏನನ್ನಾದರೂ ಬಾಯಾಡಿಸಲು ನಾಲಿಗೆ ಹಪಹಪಿಸುತ್ತಿರುತ್ತದೆ. ಕರಿದ ಪದಾರ್ಥ ತಿಂದು ಸಾಕಾಗಿದ್ದರೆ ಅಥವಾ ಹೊಸದೇನನ್ನೋ ತಿನ್ನಬಯಸಿದ್ದರೆ ಕಡಲೆಹಿಟ್ಟಿನ ಕಟ್ಲೇಟಿಗಿಂತ ಅದ್ಭುತವಾದ ತಿನಿಸು ಇನ್ನೊಂದಿಲ್ಲ.

ಇಲ್ಲಿ ಬೆಂಗಳೂರಿನ ಭಾರತಿ ಎಚ್.ಎಸ್. ಅವರು ಕಡಲೆಹಿಟ್ಟಿನ ಕಟ್ಲೇಟ್ ಮಾಡುವುದು ಹೇಗೆಂಬ ವಿಧಾನವನ್ನು ತಿಳಿಸಿಕೊಟ್ಟಿದ್ದಾರೆ. ಕಡಿಮೆ ಎಣ್ಣೆ ಬಳಸಿ ಮಾಡುವ ಈ ತಿಂಡಿ ದೇಹಕ್ಕೂ ಹಿತ ಮನಸ್ಸಿಗೂ ಖುಷಿ ನೀಡುತ್ತದೆ.

ಬೇಕಾಗುವ ಸಾಮಗ್ರಿಗಳು

ಕಡಲೆಹಿಟ್ಟು 1 ಕಪ್
ಈರುಳ್ಳಿ ಒಂದು ಬಟ್ಟಲು
ಹಸಿಮೆಣಸಿನಕಾಯಿ ಆರು
ಚಿಟಿಕೆ ಸೋಡಪುಡಿ
ರುಚಿಗೆ ಉಪ್ಪು
ಹೆಚ್ಚಿದ ಕೊತ್ತಂಬರಿ ಸೊಪ್ಪು, ಕರಿಬೇವು
ಎಣ್ಣೆ 4 ಚಮಚ
ಓಂ ಕಾಳು ಅರ್ಧ ಚಮಚ

ತಯಾರಿಸುವ ವಿಧಾನ

* ಈರುಳ್ಳಿ, ಹಸಿಮೆಣಿನಕಾಯಿ, ಕೊತ್ತಂಬರಿ ಮತ್ತು ಕರಿಬೇವನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ.
* ಒಂದು ಬಟ್ಟಲಿಗೆ ಮೇಲೆ ತಿಳಿಸಿದ ಸಾಮಗ್ರಿಗಳೆಲ್ಲವನ್ನು ಇಡ್ಲಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ.
* ಕಾದ ತವದ ಮೇಲೆ ಒಂದೆರಡು ಚಮಚ ಎಣ್ಣೆ ಸವರಿ ಈ ಮಿಶ್ರಣವನ್ನು ಸುರುವಿರಿ ಹಾಕಿ.
* ಎರಡು ಬದಿ ಎಣ್ಣೆ ಹಾಕಿ ಚೆನ್ನಾಗಿ ಬೇಯಿಸಿ ಬೇಕಾದ ಆಕಾರದಲ್ಲಿ ಕತ್ತರಿಸಿ ಸಾಸ್ ನೊಂದಿಗೆ ಸವಿಯಲು ನೀಡಿ.
* ಎಣ್ಣೆಯಲ್ಲಿ ಕರಿದ ಪಕೋಡ ತಿನ್ನಲು ಹಿಂದೇಟು ಹಾಕುವವರು ಕಟ್ಲೇಟ್ ಆರಾಮಾಗಿ ತಿನ್ನಬಹುದು.

English summary

Kadlehittu Cutlet recipe | Snacks for a winter evening | ಕಡಲೆಹಿಟ್ಟಿನ ಕಟ್ ಲೆಟ್ | ಚಳಿಗಾಲದ ಸಂಜೆಗೆ ತಿಂಡಿ

Snacks for a cold winter evening. Kadlehittu onion Cutlet recipe by Bharathi HS from Bangalore. It is a perfect snacks with hot coffee or tea.
Story first published: Wednesday, November 9, 2011, 8:35 [IST]
X
Desktop Bottom Promotion