For Quick Alerts
ALLOW NOTIFICATIONS  
For Daily Alerts

ನವರಾತ್ರಿ ಸ್ಪೆಷಲ್: ಘಮ್ಮೆನ್ನುವ ಪಾಲಕ್ ಪಲಾವ್

By manu
|

ನವರಾತ್ರಿ ಎಂದರೆ ಒಂದು ಕಟ್ಟುಪಾಡಿನ ಹಬ್ಬವಾಗಿದೆ. ಒಂಬತ್ತು ದಿನಗಳ ಉಪವಾಸ ಮತ್ತು ನಿಯಮಿತ ಆಹಾರದೊಡನೆ ವ್ರತವನ್ನು ಕಟ್ಟುನಿಟ್ಟಾಗಿ ಆಚರಿಸಿದರೆ ಮಾತ್ರ ನವರಾತ್ರಿಯ ಆಚರಣೆಗೆ ನಿಜವಾದ ಅರ್ಥ ಬರುತ್ತದೆ. ಆದ್ದರಿಂದ ನಿಮ್ಮ ಆಹಾರ ಸರಳವೂ ಪೌಷ್ಠಿಕವೂ ಆಗಿರುವುದು ಅಗತ್ಯ. ಆದರೆ ಸರಳವಾಗಿರಬೇಕೆಂದರೆ ಒಂದೇ ರೀತಿ ಇರಬೇಕೆಂದು ಅರ್ಥವಲ್ಲ, ಒಂಬತ್ತೂ ದಿನಗಳು ಬೇರೆ ಬೇರೆ ರೀತಿಯ

ಅಡುಗೆಗಳನ್ನು ಮಾಡಬಹುದು. ಆದರೆ ಇದರ ಆಯ್ಕೆ ಕೊಂಚ ಕಷ್ಟ. ನಿಮ್ಮ ಆಯ್ಕೆಯನ್ನು ಸುಲಭಗೊಳಿಸಲು ನಮ್ಮ ಸಲಹೆ ಎಂದರೆ ಪಾಲಕ್ ಪಲಾವ್. ಇದೊಂದು ನವರಾತ್ರಿಗೆ ಅತ್ಯಂತ ಸೂಕ್ತವಾದ ಹೊಸರುಚಿಯಾಗಿದ್ದು ನಿಮ್ಮ ಉಪವಾಸಕ್ಕೆ ಅಗತ್ಯವಾದ ಶಕ್ತಿ ಹಾಗೂ ಪೌಷ್ಠಿಕಾಂಶಗಳನ್ನು ನೀಡುತ್ತದೆ.

ಸಾಮಾನ್ಯವಾಗಿ ನವರಾತ್ರಿಯ ಅಡುಗೆಗಳಲ್ಲಿ ಅನ್ನವನ್ನು ಸೇರಿಸುವುದಿಲ್ಲ. ಏಕೆಂದರೆ ಉಪವಾಸದ ಅವಧಿಯಲ್ಲಿ ಅನ್ನ ನಿಷೇಧವಾಗಿದೆ. ಆದರೆ ವ್ರತ ಆಚರಿಸುವವರಿಗೆ ವಿಶೇಷವಾದ 'ವ್ರತದ ಅನ್ನ' ಅಥವಾ ವ್ರತ್ ಕೀ ಚಾವಲ್ ಎಂದು ಉತ್ತರ ಭಾರತದಲ್ಲಿ ಕರೆಯಲ್ಪಡುವ ವಿಶೇಷ ಅಡುಗೆಯನ್ನು ಸೇವಿಸಬಹುದು. ಪಾಲಕ್ ಪಲಾವ್ ಸಹಾ ವ್ರತದ ಅನ್ನದ ವ್ಯಾಪ್ತಿಯಲ್ಲಿಯೇ ಇರುವುದರಿಂದ ನವರಾತ್ರಿಗೆ ಅತ್ಯಂತ ಸೂಕ್ತವಾದ ಆಹಾರವಾಗಿದೆ. ನವರಾತ್ರಿಯ ಉಪವಾಸದ ಅವಧಿಯಲ್ಲಿ ಅನ್ನ ತಿನ್ನುವ ಬಯಕೆಯಾದರೆ ಪಾಲಕ್ ಪಲಾವ್ ಉತ್ತಮ ಪರ್ಯಾಯವಾಗಿದೆ. ಬನ್ನಿ, ಸ್ವಾದಿಷ್ಟವಾದ ಈ ಪಾಲಕ್ ಪಲಾವ್ ತಯಾರಿಸುವ ವಿಧಾನವನ್ನು ಕಲಿಯೋಣ: ನವರಾತ್ರಿ ಉಪವಾಸ ಮಾಡುವವರಿಗಾಗಿ ಈ 12 ರೆಸಿಪಿ

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು

*ತಯಾರಿಕಾ ಸಮಯ: ಮೂವತ್ತು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು:

*ಪಾಲಕ್ ಸೊಪ್ಪು - ಎರಡು ಕಟ್ಟು, ಚೆನ್ನಾಗಿ ತೊಳೆದು ಚಿಕ್ಕದಾಗಿ ಹೆಚ್ಚಿದ್ದು.

*ವ್ರತದ ಅಕ್ಕಿ - ಎರಡು ಕಪ್ (ತಣ್ಣೀರಿನಲ್ಲಿ ನೆನೆಸಿದ್ದು)

*ಏಲಕ್ಕಿ - ಎರಡು

*ಲವಂಗ - ಎರಡು

*ಚೆಕ್ಕೆ - ಒಂದಿಂಚಿನ ತುಂಡು

*ಕಾಳುಮೆಣಸು-ಎಂಟು ಕಾಳು

*ದಾಲ್ಚಿನ್ನಿ ಎಲೆ - ಒಂದು

*ಜೀರಿಗೆ- 1 ಚಿಕ್ಕ ಚಮಚ

*ಟೊಮೇಟೋ - 1 (ಚಿಕ್ಕದಾಗಿ ಹೆಚ್ಚಿದ್ದು)

*ಹಸಿಮೆಣಸು- 2 (ಉದ್ದಕ್ಕೆ ಸೀಳಿದ್ದು)

*ಅರಿಶಿನ- ½ ಚಿಕ್ಕ ಚಮಚ

*ಕೊತ್ತೊಂಬರಿ ಪುಡಿ - 1 ಚಿಕ್ಕ ಚಮಚ

*ಜೀರಿಗೆ ಪುಡಿ- 1 ಚಿಕ್ಕ ಚಮಚ

*ಉಪ್ಪು - ರುಚಿಗನುಸಾರವಾಗಿ

*ತುಪ್ಪ- 2 ದೊಡ್ಡ ಚಮಚ

ವಿಧಾನ:

1) ಪ್ರೆಶರ್ ಕುಕ್ಕರ್ ಅನ್ನು ಒಲೆಯ ಮೇಲಿಟ್ಟು ಮಧ್ಯಮ ಉರಿಯಲ್ಲಿ ಕೊಂಚ ಬಿಸಿಯಾದ ಬಳಿಕ ತುಪ್ಪ ಹಾಕಿ ಕರಗಿಸಿ

2) ಇದಕ್ಕೆ ದಾಲ್ಚಿನ್ನಿ ಎಲೆ, ಜೀರಿಗೆ, ಹಸಿಮೆಣಸು, ಏಲಕ್ಕಿ, ಕಾಳುಮೆಣಸು, ಚೆಕ್ಕೆ ಮೊದಲಾದ ಎಲ್ಲಾ ಮಸಾಲೆ ವಸ್ತುಗಳನ್ನು ಹಾಕಿ ಒಂದು ನಿಮಿಷ ಹುರಿಯಿರಿ.

3) ಬಳಿಕ ಹೆಚ್ಚಿದ ಪಾಲಕ್ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

4) ಚಿಕ್ಕ ಉರಿಯಲ್ಲಿ ನಡುನಡುವೆ ತಿರುವುತ್ತಾ ನೀರೆಲ್ಲಾ ಆವಿಯಾಗುವಂತೆ ಮಾಡಿ. ಪಾಲಕ್ ಸೊಪ್ಪಿನಲ್ಲಿಯೇ ಸಾಕಷ್ಟು ನೀರು ಇರುವುದರಿಂದ ನೀರು ಪ್ರತ್ಯೇಕವಾಗಿ ಸೇರಿಸುವ ಅಗತ್ಯವಿಲ್ಲ.

5) ಈಗ ಟೊಮೇಟೊ, ಉಪ್ಪು, ಅರಿಶಿನ, ಕೊತ್ತೊಂಬರಿ ಪುಡಿ ಮತ್ತು ಜೀರಿಗೆ ಪುಡಿ ಹಾಕಿ ಸುಮಾರು ಎರಡರಿಂದ ಮೂರು ನಿಮಿಷ ತಿರುವಿ.

6) ಈಗ ನೆನೆಸಿಟ್ಟ ಅಕ್ಕಿಯನ್ನು ಹಾಕಿ ನಯವಾಗಿ ತಿರುವಿ. ಚಿಕ್ಕ ಉರಿಯಲ್ಲಿಯೇ ಸುಮಾರು ನಾಲ್ಕು ನಿಮಿಷ ಬೇಯಲಿ

7) ಈಗ ನಾಲ್ಕು ಕಪ್ ನೀರು ಹಾಕಿ ಕುಕ್ಕರಿನ ಮುಚ್ಚಳ ಮುಚ್ಚಿ ಉರಿಯನ್ನು ಹೆಚ್ಚಿಸಿ ಮಧ್ಯಮ ಗಾತ್ರವಾಗಿಸಿ.

8) ಎರಡು ಸೀಟಿ ಬರುತ್ತಿದ್ದಂತೆಯೇ ಉರಿ ನಂದಿಸಿ ಕುಕ್ಕರ್ ಕೆಳಗಿಸಿ ತಣ್ಣೀರಿನ ಕೆಳಗೆ ಸೀಟಿ ತಣ್ಣಗಾಗಿಸಿ ಒತ್ತಡ ನಿವಾರಿಸಿ ಮುಚ್ಚಳ ತೆರೆಯಿರಿ.

9) ಬಿಸಿ ಬಿಸಿಯಿದ್ದಂತೆಯೇ ಸೇವಿಸಲು ಸಿದ್ಧರಾಗಿ. ಇದನ್ನು ನವರಾತ್ರಿಯ ವಿಶೇಷ ಆಲೂ ಖಾದ್ಯದೊಂದಿಗೂ ಸೇವಿಸಬಹುದು.

English summary

Palak Pulao Recipe For Navratri Fasting

Navratri means nine days of fasting and restricted diet. It is not so easy to cook with restricted ingredients. That is why; you need a wide variety of Navratri recipes in your kitty so that you don't get bored with the same old dishes for nine days. Palak pulao is one such innovative recipe that you can try out this festive season.
Story first published: Wednesday, October 14, 2015, 11:22 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X