For Quick Alerts
ALLOW NOTIFICATIONS  
For Daily Alerts

ಫಟಾಫಟ್ ತಯಾರಿಸಿ ಘಮಘಮಿಸುವ ಘೀ ರೈಸ್ ರೆಸಿಪಿ!

|

ಮಸಾಲ ಘೀ ರೈಸ್ ರೆಸಿಪಿಯು ಅನ್ನದ ಪ್ರಕಾರಗಳಲ್ಲಿಯೇ ಅತ್ಯುತ್ತಮವಾದ ಒಂದು ರೆಸಿಪಿಯಾಗಿದೆ. ಈ ಘೀ ರೈಸನ್ನು ನೀವು ಎರಡು ಬಗೆಯಲ್ಲಿ ಸವಿಯಬಹುದು. ಒಂದು ಇದು ಹೇಗಿದೆಯೋ ಹಾಗೆಯೇ ಸವಿಯಬಹುದು ಅಥವಾ ಸೋಯಾ ತುಣುಕುಗಳನ್ನು ಇದರಲ್ಲಿ ಹಾಕಿಕೊಂಡು ತಿನ್ನಬಹುದು. ಆದರೆ ಯಾವುದು ಇದ್ದರು ಇಲ್ಲದಿದ್ದರು ಈ ಅನ್ನದ ಪ್ರಕಾರವು ನಿಮ್ಮ ಬಾಯಿಯಲ್ಲಿ ನೀರೂರಿಸುವುದರಲ್ಲಿ ಯಾವುದೇ ಸಂಶಯವಿಲ್ಲ.

ಪಲಾವ್ ಎಲೆ ಮತ್ತು ಜೀರಿಗೆಯಂತಹ ಮಸಾಲೆ ಪದಾರ್ಥಗಳು ಈ ಖಾದ್ಯವನ್ನು ಮತ್ತಷ್ಟು ರುಚಿಕರ ಮಾಡುತ್ತವೆ. ಈ ಮಸಾಲಾ ಘೀ ರೈಸನ್ನು ತಯಾರಿಸುವುದು ಸಹ ಸುಲಭ. ಈ ಖಾದ್ಯವನ್ನು ನೀವು ಸಹ ತಯಾರಿಸಬೇಕು ಎಂದಾದಲ್ಲಿ, ಮುಂದೆ ಓದಿ, ಒಮ್ಮೆ ಪ್ರಯತ್ನಿಸಿ ನೋಡಿ. ಮತ್ತೆ ಮತ್ತೆ ಇದನ್ನು ನೀವು ಮಾಡುತ್ತಲೆ ಇರುತ್ತೀರಾ. ಮುಂಬಯಿ ಶೈಲಿಯ ಟೊಮೇಟೊ ಪಲಾವ್ ರೆಸಿಪಿ

15 Minute..Masala Ghee Rice Recipe

ಮೂವರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 15 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 20 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ತುಪ್ಪ - 2 ಟೀ. ಚಮಚ
*ಜೀರಿಗೆ - 1 ಟೀ. ಚಮಚ
*ಪಲಾವ್ ಎಲೆ - 3
*ಗೋಡಂಬಿ - 3 ಟೀ. ಚಮಚ (ಕತ್ತರಿಸಿದಂತಹುದು)

*ಕರಿ ಬೇವು ಸೊಪ್ಪು - 4 - 5
*ಹಸಿ ಬಟಾಣಿ - ½ ಕಪ್
*ಈರುಳ್ಳಿ - 2 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ- 3 (ಸಣ್ಣಗೆ ಕತ್ತರಿಸಿದಂತಹುದು)
*ರುಚಿಗೆ ತಕ್ಕಷ್ಟು ಉಪ್ಪು

*ಅರಿಶಿನ - 1 ಟೀ. ಚಮಚ
*ಖಾರದ ಪುಡಿ - 1 ಟೀ. ಚಮಚ
*ಅನ್ನ - 1 ½

ಕೇವಲ 15 ನಿಮಿಷದಲ್ಲಿ ತಯಾರಿಸಿ ಮೊಟ್ಟೆ ಪುಲಾವ್ ರೆಸಿಪಿ!

ತಯಾರಿಸುವ ವಿಧಾನ
*ಒಂದು ತಳ ಆಳವಿರುವ ಬಾಣಲೆಯಲ್ಲಿ ಸ್ವಲ್ಪ ಎಣ್ಣೆಯನ್ನು ತೆಗೆದುಕೊಳ್ಳಿ. ಆ ಎಣ್ಣೆ ಬಿಸಿಯಾಗುವವರೆಗೂ ಕಾಯಿರಿ. ಇದು ಚೆನ್ನಾಗಿ ಕಾದಮೇಲೆ ಇದಕ್ಕೆ ಜೀರಿಗೆಯನ್ನು ಹಾಕಿ. ಅವು ಒಗ್ಗರಣ್ಣೆಯಂತೆ ಆದ ಮೇಲೆ ಅದಕ್ಕೆ ಪಲಾವ್ ಎಲೆ, ಗೋಡಂಬಿ ಮತ್ತು ಕರಿಬೇವು ಸೊಪ್ಪನ್ನು ಹಾಕಿ. ಈ ಎಲ್ಲಾ ಪದಾರ್ಥಗಳನ್ನು ಮಧ್ಯಮ ಗಾತ್ರದ ಉರಿಯಲ್ಲಿ ಹುರಿದುಕೊಳ್ಳಿ.
*ನಂತರ ಬಾಣಲೆಗೆ ತಾಜಾ ಹಸಿ ಬಟಾಣಿಗಳನ್ನು ಹಾಕಿ, ಜೊತೆಗೆ ಕತ್ತರಿಸಿದ ಈರುಳ್ಳಿ ಮತ್ತು ಹಸಿ ಮೆಣಸಿನಕಾಯಿಗಳನ್ನು ಸಹ ಹಾಕಿಕೊಳ್ಳಿ.
*ತದನಂತರ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರಿಶಿನವನ್ನು ಹಾಕಿ. ಈ ಪದಾರ್ಥಗಳನ್ನು ಚೆನ್ನಾಗಿ ಕಲೆಸಿಕೊಡಿ.
*ಇನ್ನು ಈ ಬಾಣಲೆಗೆ ಖಾರದ ಪುಡಿಯನ್ನು ಹಾಕಿ. ಚೆನ್ನಾಗಿ ಕಲೆಸಿಕೊಡಿ, ಆನಂತರ ಇದಕ್ಕೆ ಅನ್ನವನ್ನು ಹಾಕಿ.
*ಇನ್ನು ಬಾಣಲೆಯಲ್ಲಿರುವ ಪದಾರ್ಥಗಳ ಜೊತೆಗೆ ಚೆನ್ನಾಗಿ ಅನ್ನ ಬೆರೆಯುವ ರೀತಿಯಲ್ಲಿ ಕಲೆಸಿಕೊಡಿ, ಹಾಗೂ ಬಾಣಲೆಯಲ್ಲಿರುವ ಮಸಾಲೆಯೊಂದಿಗೆ ಬಿಳಿ ಅನ್ನ ಚೆನ್ನಾಗಿ ಬೆರೆತಿದೆಯೇ ಇಲ್ಲವೇ, ಎಂಬುದನ್ನು ಖಾತ್ರಿ ಪಡಿಸಿಕೊಳ್ಳಿ.

ಪೋಷಕಾಂಶದ ಪ್ರಮಾಣ
*ಈ ಖಾದ್ಯದಲ್ಲಿ ಗೋಡಂಬಿಗಳನ್ನು ಬಳಸುವುದರಿಂದ ಇವು ಆರೋಗ್ಯಕರ ಮತ್ತು ನಿಮ್ಮ ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತವೆ. ಜೊತೆಗೆ ನಿಮ್ಮ ಮೂಳೆಗಳ ಆರೋಗ್ಯವನ್ನು ಸಹ ಇವು ಸುಧಾರಿಸುತ್ತವೆ. ಇದೆಲ್ಲಕ್ಕಿಂತ ಮುಖ್ಯವಾಗಿ ಇದು ನಿಮ್ಮ ತೂಕವನ್ನು ಇಳಿಸಲು ನೆರವಾಗುತ್ತದೆ.

ಸಲಹೆ
ಅನ್ನವನ್ನು ಕೇವಲ 4 ವಿಷಲ್‌ವರೆಗೆ ಮಾತ್ರ ಕುಕ್ಕರಿನಲ್ಲಿಡಿ.

English summary

15 Minute..Masala Ghee Rice Recipe

Masala ghee rice is one of the best dishes in the rice section. The two advantages of this yummy rice dish is : You can enjoy it the way it is or you can add a special touch by adding soy cubes. No matter what, this yummy vegetarian rice item will make your tongue swirl with joy.
X
Desktop Bottom Promotion