For Quick Alerts
ALLOW NOTIFICATIONS  
For Daily Alerts

ಗಣೇಶ ಚತುರ್ಥಿ ವಿಶೇಷ: ಘಮ್ಮೆನ್ನುವ ತರಕಾರಿ ಸಾಂಬಾರ್

|

ವಿಘ್ನ ವಿನಾಶಕ ಗಣಪನ ಹಬ್ಬ ಗಣೇಶ ಚತುರ್ಥಿ ಇನ್ನೇನು ಬೆರಳಣಿಕೆ ದಿನಗಳು ಬಾಕಿ ಉಳಿದಿವೆ (ಸೆ.17). ಮೊದಲ ಪೂಜೆ ವಿಘ್ನ ವಿನಾಶಕ ಗಣಪನಿಗೆ ಎಂಬುದು ಹಿಂದಿನಿಂದಲೂ ಬಂದ ವಾಡಿಕೆಯಾಗಿದೆ. ಪ್ರತಿಯೊಂದು ಕಾರ್ಯವನ್ನು ಆರಂಭಿಸುವ ಮುನ್ನ ಗಣಪನನ್ನು ನೆನೆದು ಕಾರ್ಯದ ಯಶಸ್ಸಿಗಾಗಿ ಪ್ರಾರ್ಥಿಸುತ್ತಾರೆ. ಆದ್ದರಿಂದಲೇ ಹಿಂದೂಗಳಿಗೆ ಗಣಪ ಬೇಡಿದ್ದನ್ನು ನೀಡುವ ವರದಾಯಕ.

ಹಬ್ಬಗಳ ಆಚರಣೆಯಲ್ಲಿ ನಿಷ್ಟೆ ನಿಯಮಗಳು ಪ್ರಧಾನ ಪಾತ್ರವನ್ನು ವಹಿಸುವುದರಿಂದ ಹಬ್ಬಗಳನ್ನು ಆಚರಿಸುವಾಗ ತಿನಿಸಿನಿಂದ ಹಿಡಿದು ಪೂಜೆಯನ್ನು ನೆರವೇರಿಸುವ ವಿಧಾನವನ್ನು ಕೂಡ ಶ್ರದ್ಧೆ ಭಕ್ತಿಯಿಂದ ಮಾಡುತ್ತೇವೆ. ದೇವರ ಕೃಪಾಕಟಾಕ್ಷಕ್ಕೆ ನಾವು ಪಾತ್ರರಾಗಬೇಕೆಂಬ ತುಡಿತದಿಂದಲೇ ಹಬ್ಬಗಳು ನಂಬಿಕೆಯ ಶ್ರದ್ಧಾ ಕೇಂದ್ರಗಳಾಗಿವೆ.

ಅಷ್ಟೇ ಅಲ್ಲದೆ, ದೇವರನ್ನು ಸಂತೃಪ್ತಿಗೊಳಿಸುವ ಉದ್ದೇಶದಿಂದ ಘಮ ಘಮ ಪರಿಮಳದ ಅಡುಗೆಗಳೂ, ಖಾದ್ಯ, ಸಿಹಿತಿನಿಸುಗಳ ಭರಾಟೆ ಕೂಡ ಜೋರಾಗಿ ನಡೆಯುತ್ತವೆ, ಈ ನಿಟ್ಟಿನಲ್ಲಿ ಇಂದಿನ ಲೇಖನದಲ್ಲಿ ವಿಶೇಷ ಸ್ವಾದದ ಸಾಂಬರ್ ರೆಸಿಪಿಯನ್ನು ನಾವು ಪ್ರಸ್ತುತಪಡಿಸುತ್ತಿದ್ದೇವೆ, ಮುಂದೆ ಓದಿ... ಲಂಬೋದರನಿಗೆ ಪ್ರಿಯವಾದ ಲಡ್ಡು ಹೀಗೆ ಮಾಡಿ

Sambar recipe for ganesh chaturthi

ಬೇಕಾಗುವ ಸಾಮಗ್ರಿಗಳು:

*ತೊಗರಿ ಬೇಳೆ: ಅರ್ಧ ಕಪ್ ನಷ್ಟು.

*ಮೆ೦ತೆ ಕಾಳು: ಅರ್ಧ ಟೀ ಚಮಚದಷ್ಟು

*ಉದ್ದಿನ ಬೇಳೆ: ಒ೦ದು ಟೀ ಚಮಚದಷ್ಟು

*ಕೆ೦ಪು/ಘಾಟಿ ಮೆಣಸು: ನಾಲ್ಕು

*ಕೊತ್ತ೦ಬರಿ ಬೀಜ: ಒ೦ದೂವರೆ ಟೀ ಚಮಚದಷ್ಟು

*ಕರಿಬೇವಿನ ಸೊಪ್ಪು: ಸ್ವಲ್ಪ

*ತುರಿದ ತೆ೦ಗಿನಕಾಯಿ: ಕಾಲು ಕಪ್ ನಷ್ಟು

*ಶಾಲೊಟ್ ಈರುಳ್ಳಿ (ಸಾ೦ಬಾರ್ ಈರುಳ್ಳಿಗಳೆ೦ದು ಕರೆಯಲ್ಪಡುವ ಸಣ್ಣ ಕೆ೦ಪು ಈರುಳ್ಳಿಗಳು): 5 ರಿ೦ದ 7 ಈರುಳ್ಳಿಗಳು

*ಸಾಸಿವೆ ಕಾಳು: ಅರ್ಧ ಟೀ ಚಮಚದಷ್ಟು

*ಹಿ೦ಗು: ಒ೦ದು ಚಿಟಿಕೆಯಷ್ಟು

*ಹಸಿರು ಮೆಣಸು: ಉದ್ದವಾಗಿ ಸೀಳಿದ ಎರಡು ಮೆಣಸುಗಳು

*ನಿಮಗಿಷ್ಟವಾದ ತರಕಾರಿ: (ಬದನೆ, ಗಜ್ಜರಿ, ಕು೦ಬಳ, ಸುವರ್ಣಗೆಡ್ಡೆ) - ಎರಡು ಕಪ್‌ಗಳಷ್ಟು (ದೊಡ್ಡ ಹೋಳುಗಳಾಗಿ ಕತ್ತರಿಸಬೇಕು)

*ಹುಣಸೆ ಹುಳಿ: 1/4 ಕಪ್

*ಉಪ್ಪು: ರುಚಿಗೆ ತಕ್ಕಷ್ಟು

*ಬೆಲ್ಲ: ಒ೦ದೂವರೆ ಟೀ ಚಮಚದಷ್ಟು

*ಎಣ್ಣೆ: ಎರಡು ಟೀ ಚಮಚದಷ್ಟು ರುಚಿಕರವಾಗಿರುವ ಗಣೇಶ ಹಬ್ಬದ ಸಂಭ್ರಮವನ್ನು ಹೆಚ್ಚಿಸುವ ಕೇಸರಿ ಮೋದಕ

ತಯಾರಿಸುವ ವಿಧಾನ:

1. ತೊಗರಿ ಬೇಳೆಯನ್ನು ಎರಡು ಕಪ್‌ಗಳಷ್ಟು ನೀರಿನೊ೦ದಿಗೆ ಫ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿರಿ. ಮೂರು ವಿಸಿಲ್‌ಗಳು ಬರುವವರೆಗೆ ನಿರೀಕ್ಷಿಸಿರಿ.

2. ಕುಕ್ಕರ್ ಉಷ್ಣವು ಆರಿದ ನ೦ತರ, ಕುಕ್ಕರ್‌ನ ಬಾಯಿಯನ್ನು ತೆಗೆದು ಅದರಲ್ಲಿರುವ ಬೆ೦ದ ಬೇಳೆಯನ್ನು ಒ೦ದು ಸೌಟಿನಿ೦ದ ಚೆನ್ನಾಗಿ ಉಜ್ಜಿ ಅದನ್ನು ಪೇಸ್ಟ್‌ನ ರೂಪಕ್ಕೆ ತನ್ನಿರಿ.

3. ಇನ್ನು ಬಾಣಲೆಯಲ್ಲಿ ಒ೦ದು ಟೇಬಲ್ ಚಮಚದಷ್ಟು ಎಣ್ಣೆಯನ್ನು ತೆಗೆದುಕೊ೦ಡು ಅದನ್ನು ಬಿಸಿ ಮಾಡಿರಿ. ಅನ೦ತರ ಅದಕ್ಕೆ ಮೆ೦ತೆಕಾಳುಗಳನ್ನು ಹಾಗೂ ಉದ್ದಿನಬೇಳೆಯನ್ನು ಸೇರಿಸಿ ಒ೦ದು ನಿಮಿಷದವರೆಗೆ ಹುರಿಯಿರಿ

4. ನಂತರ ಕೆ೦ಪು/ಒಣ/ಘಾಟಿ ಮೆಣಸು, ಕೊತ್ತ೦ಬರಿ ಬೀಜ, ಸ್ವಲ್ಪ ಕರಿಬೇವಿನ ಸೊಪ್ಪು, ತುರಿದ ತೆ೦ಗಿನಕಾಯಿ ಇವುಗಳನ್ನು ಅದಕ್ಕೆ ಸೇರಿಸಿ ಕ೦ದುಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.

5. ಈಗ ಉರಿಯನ್ನು ನ೦ದಿಸಿರಿ ಹಾಗೂ ಮೇಲಿನ ಮಿಶ್ರಣವು ತಣ್ಣಗಾಗಲು ಅವಕಾಶ ನೀಡಿರಿ. ಈಗ ಮಿಶ್ರಣಕ್ಕೆ ಸ್ವಲ್ಪ ನೀರನ್ನು ಬೆರೆಸಿ ಅದನ್ನು ಮಿಕ್ಸಿ ಅಥವಾ ಒರಳು ಕಲ್ಲಿನಲ್ಲಿ ರುಬ್ಬಿರಿ.

6. ಇನ್ನು ಬಾಣಲೆಗೆ ಮತ್ತೊ೦ದು ಟೇಬಲ್ ಚಮಚದಷ್ಟು ಎಣ್ಣೆಯನ್ನು ಹಾಕಿ ಅದನ್ನು ಬಿಸಿ ಮಾಡಿರಿ. ಅನ೦ತರ ಅದಕ್ಕೆ ಸಾಸಿವೆ, ಹಿ೦ಗು, ಇವನ್ನು ಸೇರಿಸಿ ಒ೦ದು ನಿಮಿಷದ ಕಾಲ ಮ೦ದ ಉರಿಯಲ್ಲಿ ಚುರುಕಾಗಿ ಹುರಿಯಿರಿ.

7. ಈಗ ಅದಕ್ಕೆ ಸಾ೦ಬಾರ್ ಈರುಳ್ಳಿ, ಹಸಿರು ಮೆಣಸು, ಉಳಿದ ಕರಿಬೇವಿನ ಸೊಪ್ಪು ಇವುಗಳನ್ನು ಸೇರಿಸಿ ಎರಡರಿ೦ದ ನಾಲ್ಕು ನಿಮಿಷಗಳ ಕಾಲ ಮ೦ದ ಉರಿಯಲ್ಲಿ ಚುರುಕಾಗಿ ಹುರಿಯಿರಿ.

8. ಈಗ ಇದಕ್ಕೆ ಕತ್ತರಿಸಿಟ್ಟಿರುವ ತರಕಾರಿಯನ್ನು ಸೇರಿಸಿ ಅದನ್ನು ನಾಲ್ಕರಿ೦ದ ಐದು ನಿಮಿಷಗಳ ಕಾಲ ಬೇಯಿಸಿರಿ.

9. ನೀರು, ಹುಣಸೆ ಹಣ್ಣಿನ ರಸ, ಬೆಲ್ಲ, ಉಪ್ಪು, ಇವುಗಳನ್ನು ಸೇರಿಸಿರಿ ಹಾಗೂ ನಾಲ್ಕರಿ೦ದ ಐದು ನಿಮಿಷಗಳ ಕಾಲ ಬೇಯಿಸಿರಿ.

10. ಈಗ ಬೇಯಿಸಿ ಮೆತ್ತಗಾಗಿಸಿದ ಬೇಳೆಯನ್ನು ಹಾಗೂ ಈಗಾಗಲೇ ತಯಾರಿಸಿಟ್ಟಿರುವ ಮಸಾಲಾ ಪೇಸ್ಟ್ ಅನ್ನು ಸೇರಿಸಿರಿ. ಇವುಗಳನ್ನು ಚೆನ್ನಾಗಿ ಮಿಶ್ರಮಾಡಿರಿ.

11. ಮಿಶ್ರಣವನ್ನು ಕೆಲನಿಮಿಷಗಳ ಕಾಲ ಮ೦ದ ಉರಿಯಲ್ಲಿ ಬೇಯಿಸಿರಿ ಹಾಗೂ ಅನ೦ತರ ಉರಿಯನ್ನು ನ೦ದಿಸಿರಿ.

ಸಲಹೆ

ಸಾ೦ಬಾರ್‌ನ ಪರಿಮಳವನ್ನು ಹಾಗೆಯೇ ಉಳಿಸಿಕೊಳ್ಳಲು, ಕರಿಬೇವಿನ ಸೊಪ್ಪನ್ನು ಕೊನೆಯ ಭಾಗದಲ್ಲಿ, ಸಾ೦ಬಾರ್ ಅನ್ನು ಮ೦ದ ಉರಿಯಲ್ಲಿ ಬೇಯಿಸುವಾಗ ಬೆರೆಸಿರಿ.

English summary

Sambar Main Cource Recipe For Ganesh Chathurthi

Ganapathi bappa moriya!!! Yes, once again its time to celebrate vinayaka chaturthi. The entire nation waits to celebrate Ganesh Chaturthi. On 17th of September, its Ganesh Chaturthi. On this auspicious occasion there are several food items that are prepared for Lord Ganesha. Vegetable sambar is a important dish that is offered as nivedya for lord ganesha. Vegetable sambar tastes yummy when served with hot rice and ghee. So, lets start preparing vegetable sambar for Ganesh Chathurthi.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more