For Quick Alerts
ALLOW NOTIFICATIONS  
For Daily Alerts

ಆಹಾ, ಆಲೂಗಡ್ಡೆ-ಈರುಳ್ಳಿ ಹಾಕಿ ಮಾಡಿದ ಬೊಂಬಾಟ್ ಸಾಂಬಾರ್!

By Jaya Subramanya
|

ಊಟಕ್ಕೆ ಉಪ್ಪಿನಕಾಯಿ ಹೇಗೆ ಬೇಕೋ ಅಂತೆಯೇ ಅನ್ನಕ್ಕೆ ಸಾಂಬಾರ್ ಬೇಕೇ ಬೇಕು. ದಕ್ಷಿಣ ಭಾರತದ ನಿತ್ಯದ ಊಟದ ಅವಿಭಾಜ್ಯ ಅಂಗವಾಗಿರುವ ಸಾಂಬಾರ್ (ಕನ್ನಡದಲ್ಲಿ ಕೆಲವೆಡೆ ಬರೆಯ ಸಾರು ಎಂದೂ ಕರೆಯುತ್ತಾರೆ) ಅನ್ನದೊಡನೆ ಕಲೆಸಿಕೊಂಡು ಊಟ ಮಾಡದಿದ್ದರೆ ಅದು ಊಟವೇ ಅಲ್ಲ ಎನ್ನುವಂತಹ ಸ್ಥಿತಿ ಇದೆ. ಊಟದ ರುಚಿ ಇರುವುದೇ ಸಾಂಬಾರ್‌ನ ರುಚಿಯಲ್ಲಿ.

ಸಾಮಾನ್ಯವಾಗಿ ಸುಲಭವಾಗಿ ಲಭಿಸುವ, ಅಗ್ಗ ಹಾಗೂ ಹೆಚ್ಚು ದಿನ ಹಾಳಾಗದೇ ಇರುವ ತರಕಾರಿಗಳನ್ನೇ ಸಾಂಬಾರಿಗಾಗಿ ಉಪಯೋಗಿಸಲಾಗುತ್ತದೆ. ಇದರಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ಪ್ರಮುಖವಾಗಿವೆ. ಈ ಜೋಡಿಯ ಸಾಂಬಾರಿಗೆ ಸರಿಸಾಟಿಯಾದ ತರಕಾರಿ ಇನ್ನೊಂದಿಲ್ಲ. ಘಮ್ಮೆನ್ನುವ ಮೊಸರು ಬೆಂಡೆಕಾಯಿ ಸಾರು

ಸಾಂಬಾರ್ ಬರಿಯ ಅನ್ನದೊಡನೆ ಮಾತ್ರವಲ್ಲದೆ ಚಪಾತಿ, ಪರೋಟಾ, ನಾನ್‌ನೊಂದಿಗೆ ಕೂಡ ಉತ್ತಮವಾಗಿ ಹೊಂದಿಕೆಯಾಗುತ್ತದೆ. ಸಾಂಬಾರ್‌ನಲ್ಲಿ ಬೇರೆ ಬೇರೆ ತರಕಾರಿಗಳನ್ನು ಬಳಸಿ ಕೂಡ ಸಿದ್ಧಪಡಿಸುವುದರಿಂದ ಆರೋಗ್ಯಕ್ಕೂ ಇದು ಉತ್ತಮ ಎಂದೆನಿಸಿದೆ. ಹಾಗಿದ್ದರೆ ಇದನ್ನು ಸರಳವಾಗಿ ಸಿದ್ಧಪಡಿಸುವ ಪಾಕ ವಿಧಾನವನ್ನು ಇಂದಿನ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ....

Potato and Onion sambar

ಪ್ರಮಾಣ - 3
ಅಡುಗೆಗೆ ಬೇಕಾದ ಸಮಯ - 15 ನಿಮಿಷಗಳು
ಸಿದ್ಧತಾ ಸಮಯ - 15 ನಿಮಿಷಗಳು

ಸಾಮಾಗ್ರಿಗಳು
*ಆಲೂಗಡ್ಡೆ - 1 ಕಪ್ (ಸಿಪ್ಪೆ ಸುಲಿದು ಚಿಕ್ಕ ತುಂಡುಗಳನ್ನಾಗಿಸಿದ್ದು)
*ಈರುಳ್ಳಿ - 1 ಕಪ್ (ಸಿಪ್ಪೆ ಸುಲಿದು ದೊಡ್ಡದಾಗಿ ಹೆಚ್ಚಿದ್ದು)
*ತೊಗರಿ ಬೇಳೆ - 1 ಕಪ್
*ತುರಿದ ತೆಂಗಿನ ಕಾಯಿ - 1 ಕಪ್
*ಮೆಣಸಿನ ಹುಡಿ - 3 ಚಮಚ (ಸಾಂಬಾರ್‌ನ ರುಚಿಗೆ ಬ್ಯಾಡಗಿ ಮೆಣಸಿನ ಪುಡಿಯೇ ಸೂಕ್ತ)
*ಕೊತ್ತಂಬರಿ ಬೀಜ - 2 ಚಮಚಗಳು
*ಹುಣಸೆ ಹುಳಿ: ಚಿಕ್ಕ ಲಿಂಬೆಯ ಗಾತ್ರದ್ದು
*ಕಡಲೆ ಕಾಳು: ಅರ್ಧ ಚಿಕ್ಕ ಚಮಚ
*ಉದ್ದಿನ ಬೇಳೆ - 1/2 ಚಮಚ
*ಅಕ್ಕಿ ಹುಡಿ: ಅರ್ಧ ಚಿಕ್ಕ ಚಮಚ
*ಬೆಲ್ಲ - 1 ಚಮಚ
*ಹುಳಿ - 5 ಗ್ರಾಮ್ ಅಥವಾ ಸಣ್ಣ ಲಿಂಬೆ ಗಾತ್ರದ್ದು
*ಕರಿಬೇವು - 1/4 ಚಮಚ
*ಉಪ್ಪು ರುಚಿಗೆ ತಕ್ಕಷ್ಟು
*ಎಣ್ಣೆ- ಒಗ್ಗರಣೆಗೆ ಅಗತ್ಯವಿದ್ದಷ್ಟು
*ಸಾಸಿವೆ: ಒಂದು ಚಿಕ್ಕ ಸಮಚ ಮಿಶ್ರ ಬೇಳೆಯ ಸಾಂಬಾರ್ ರೆಸಿಪಿ

ವಿಧಾನ:
1) ಮೊದಲು ಪ್ರೆಶರ್ ಕುಕ್ಕರ್ ನಲ್ಲಿ ತೊಗರಿ ಬೇಳೆ, ಕೊಂಚ ನೀರು ಹಾಕಿ ಸುಮಾರು ಮೂರು ಸೀಟಿ ಬರುವವರೆಗೆ ಕುದಿಸಿ. ಬಳಿಕ ತಣಿಸಿ ಮುಚ್ಚಳ ತೆರೆದು ಈರುಳ್ಳಿ, ಆಲೂಗಡ್ಡೆ ಹಾಕಿ ಮತ್ತೊಂದು ಮೂರು ಸೀಟಿ ಬರುವವರೆಗೆ ಬೇಯಿಸಿ ಇಳಿಸಿ.
2) ಇನ್ನೊಂದು ಚಿಕ್ಕ ಬಾಣಲೆಯನ್ನು ಒಲೆಯ ಮೇಲಿಟ್ಟು ಒಣಗಿದ ಬಳಿಕ ಅಕ್ಕಿಹುಡಿ, ಧನಿಯ, ಉದ್ದಿನಬೇಳೆ, ಕಡ್ಲೆಕಾಳು ಹಾಕಿ ಚಿಕ್ಕ ಉರಿಯಲ್ಲಿ ಕೊಂಚ ಕೆಂಪು ಬಣ್ಣ ಬರುವಷ್ಟು ಹುರಿಯಿರಿ. ಬಳಿಕ ಇದನ್ನು ಅಗಲವಾದ ತಟ್ಟೆಯಲ್ಲಿ ಹರಡಿ ತಣಿಯಲು ಬಿಡಿ.
3) ಇದು ತಣಿದ ಬಳಿಕ ಮಿಕ್ಸಿಯ ಜಾರ್ ನಲ್ಲಿ ಹಾಕಿ. ಇದಕ್ಕೆ ಹುಣಸೆ ಹುಳಿ (ಬೀಜ, ನಾರು ನಿವಾರಿಸಿದ್ದು), ಕಾಯಿತುರಿ, ಬೆಲ್ಲ, ಮೆಣಸಿನ ಪುಡಿ ಮತ್ತು ಕೊಂಚ ನೀರು ಹಾಕಿ ನಯವಾಗುವಂತೆ ಕಡೆಯಿರಿ.
4) ಈ ಹೊತ್ತಿಗೆ ಕುಕ್ಕರ್ ತಣ್ಣಗಾಗಿದ್ದು ಒಳಗಿನ ಬೇಳೆ ಮತ್ತು ಇತರ ತರಕಾರಿಗಳು ಬೆಂದಿರುತ್ತದೆ. ಇದನ್ನು ಇನ್ನೊಂದು ಪಾತ್ರೆಯಲ್ಲಿ ಸುರಿಯಿರಿ.
5) ಈ ಪಾತ್ರೆಗೆ ಇನ್ನೂ ಕೊಂಚ ನೀರು ಸೇರಿಸಿ ಬೇಯಲಿಡಿ. ಇದಕ್ಕೆ ಮಿಕ್ಸಿಯಲ್ಲಿ ಕಡೆದ ಮಸಾಲೆ ಸೇರಿಸಿ ಕಲಸಿ.
6) ಒಗ್ಗರಣೆಯ ಪಾತ್ರೆಯಲ್ಲಿ ಕೊಂಚ ಎಣ್ಣೆ ಹಾಕಿ ಸಾಸಿವೆ ಸಿಡಿಸಿ ಕರಿಬೇವಿನ ಎಲೆಗಳನ್ನು ಹಾಕಿ. ರುಚಿ ಹೆಚ್ಚಲು ಕೊಂಚ ಇಂಗನ್ನೂ ಎಣ್ಣೆಗೆ ಸೇರಿಸಬಹುದು. ಇದನ್ನು ಬಿಸಿಯಿದ್ದಂತೆಯೇ ಸಾಂಬಾರಿನ ಪಾತ್ರೆಯಲ್ಲಿ ಮುಳುಗಿಸಿ.
7) ಸುಮಾರು ಐದರಿಂದ ಹತ್ತು ನಿಮಿಷ ಬೆಂದರೆ ಸಾಕು, ರುಚಿಕರವಾದ ಆಲೂಗಡ್ಡೆ ಈರುಳ್ಳಿ ಸಾಂಬಾರ್ ಸಿದ್ಧವಾಗಿದೆ.

ಒಂದಿಷ್ಟು ಟಿಪ್ಸ್:
* ಊಟದ ಸಮಯದಲ್ಲಿ ಅನ್ನವನ್ನು ಸಾಂಬಾರ್ ಹಾಕಿ ಕಲೆಸಿಕೊಂಡ ಬಳಿಕ ಒಂದು ಚಮಚ ತುಪ್ಪ ಹಾಕಿದರೆ ಈ ರುಚಿ ಇನ್ನಷ್ಟು ಹೆಚ್ಚುತ್ತದೆ.
* ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಕೋಸಂಬರಿ, ಮೊಸರು ಮೊದಲಾದ ಯಾವುದೇ ಖಾದ್ಯವನ್ನು ಇದರೊಂದಿಗೆ ತಿಂದರೆ ಊಟದ ರುಚಿ ಹೆಚ್ಚುತ್ತದೆ.

English summary

Potato and Onion sambar recipe-south indian special

Sambar not only tastes good, but also has many health benefits too. So today we introduces a Easy step to make a tasty Potato Onion Sambar Recipe.
Story first published: Tuesday, February 7, 2017, 20:01 [IST]
X
Desktop Bottom Promotion