For Quick Alerts
ALLOW NOTIFICATIONS  
For Daily Alerts

ಮಣ್ಣಿನ ಮಡಕೆಯಲ್ಲೇ ಮಾಡಿ ಈ ಪನ್ನೀರ್ ಗ್ರೇವಿ

|

ಮಣ್ಣಿನ ಮಡಕೆಯಲ್ಲಿ ಮಾಡಿದ ಅಡುಗೆಯ ಸ್ವಾದನೇ ಬೇರೆ. ಆ ರುಚಿಯನ್ನು ಕುಕ್ಕರ್ ಅಥವಾ ಅಲ್ಯುಮಿನಿಯಂ ಪಾತ್ರೆ ಬಳಸಿ ಮಾಡಿದರೆ ದೊರೆಯುವುದಿಲ್ಲ. ಇಲ್ಲಿ ನಾವು ಪನ್ನೀರ್ ಗ್ರೇವಿಯ ರೆಸಿಪಿ ನೀಡಿದ್ದೇವೆ, ಇದನ್ನು ಮಣ್ಣಿನ ಮಡಕೆಯಲ್ಲಿ ಮಾಡಿದರನೇ ರುಚಿ ಹೆಚ್ಚು.

ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Dhaba Style Handi Paneer
ಬೇಕಾಗುವ ಸಾಮಾಗ್ರಿಗಳು
ಪನ್ನೀರ್ 100 ಗ್ರಾಂ
ಮೊಸರು ಕಾಲು ಕಪ್
ಈರುಳ್ಳಿ 1
ಟೊಮೆಟೊ 2
ಹಸಿ ಮೆಣಸಿನಕಾಯಿ 3
ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಅರಿಶಿಣ ಪುಡಿ ಅರ್ಧ ಚಮಚ
ಕೊತ್ತಂಬರಿ ಪುಡಿ ಅರ್ಧ ಚಮಚ
ಕರಿ ಮೆಣಸಿನ ಪುಡಿ ಅರ್ಧ ಚಮಚ
ಗರಂ ಮಸಾಲ ಅರ್ಧ ಚಮಚ
ಖಾರದ ಪುಡಿ ಅರ್ಧ ಚಮಚ
ಕರಿ ಬೇವಿನ ಎಲೆ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ನೀರು 1 ಕಪ್
ಮಣ್ಣಿನ ಮಡಕೆ
ಸ್ವಲ್ಪ ಕೊತ್ತಂಬರಿ ಸೊಪ್ಪು

ತಯಾರಿಸುವ ವಿಧಾನ:

* ಮಣ್ಣಿನ ಮಡಿಕೆಗೆ ಒಂದು ಚಮಚ ಎಣ್ಣೆ ಹಾಕಿ ಅದರಲ್ಲಿ ಪನ್ನೀರ್ ತುಂಡುಗಳನ್ನು ಹಾಕಿ 2-3 ನಿಮಿಷ ಫ್ರೈ ಮಾಡಿ. ನಂತರ ಪನ್ನಿರ್ ಅನ್ನು ಒಂದು ಪಾತ್ರೆಯಲ್ಲಿ ಹಾಕಿಡಿ.

* ಮಡಕೆಗೆ ಮತ್ತೊಂದು ಚಮಚ ಎಣ್ಣೆ ಹಾಕಿ ಅದಕ್ಕೆ ಕರಿಬೇವಿನ ಎಲೆ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ, ನಂತರ ಹಸಿ ಮೆಣಸಿನ ಕಾಯಿ ಹಾಕಿ 2 ನಿಮಿಷ ಹುರಿದು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ, ನಂತರ ಟೊಮೆಟೊ ಹಾಕಿ ಸ್ವಲ್ಪ ಮೆತ್ತಗಾಗುವವರೆಗೆ ಹುರಿಯಿರಿ. ಈಗ ಖಾರದ ಪುಡಿ, ಕೊತ್ತಂಬರಿ ಪುಡಿ, ಗರಂ ಮಸಾಲ, ಕರಿ ಮೆಣಸಿನ ಪುಡಿ, ಅರಿಶಿಣ ಪುಡಿ ಸೇರಿಸಿ.

* ನಂತರ ಚೆನ್ನಾಗಿ ಕದಡಿದ ಮೊಸರು ಹಾಕಿ ಚೆನ್ನಾಗಿ ತಿರುಗಿಸಿ, ನಂತರ ಸ್ವಲ್ಪ ನೀರು ಹಾಕಿ ಗ್ರೇವಿಯನ್ನು ಕುದಿಸಿ.

* ಈಗ ಫ್ರೈ ಮಾಡಿದ ಪನ್ನೀರ್ ಹಾಕಿ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ನಂತರ ಉರಿಯಿಂದ ಇಳಿಸಿ, ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಪನ್ನೀರ್ ಗ್ರೇವಿ ರೆಡಿ.

English summary

Dhaba Style Handi Paneer

Dhaba recipes are generally rich and spicy. Handi paneer is one of those delectable dhaba recipes. The paneer is cooked in a yogurt based gravy and then served in an earthen pot or 'handi'.
X
Desktop Bottom Promotion