For Quick Alerts
ALLOW NOTIFICATIONS  
For Daily Alerts

ಕಹಿಬೇವಿನ ರುಚಿರುಚಿ ಪಾನಕ ಕುಡಿಯೋಣ ಬನ್ನಿರೋ..

By Super
|

ಬೇವು-ಬೆಲ್ಲ ತಿನ್ನೋದು ಯುಗಾದಿ ದಿನ ಇದ್ದೇ ಇದೆ. ಈ ವರ್ಷ ಸ್ವಲ್ಪ ವಿಶೇಷ ಇರಲಿ! ಈ ಉದ್ದೇಶದಿಂದಲೇ ಬೇವಿನ ಪಾನಕ ಸಿದ್ಧ ಮಾಡಿ... ಅದರ ರುಚಿ ಹೇಗಿತ್ತು? ಎರಡು ಸಾಲು ಬರೆದು ತಿಳಿಸಿ...

ಬೇವು-ಬೆಲ್ಲ ಮಿಶ್ರಣಕ್ಕೆ ಬೇಕಾಗುವ ಸಾಮಗ್ರಿಗಳು :

  • ಹುರಿಗಡಲೆ : 1 ಕಪ್‌
  • ತಣ್ಣೀರು : 4 ಕಪ್‌
  • ಹುಣಿಸೆಹಣ್ಣಿನ ರಸ : 1/4 ಕಪ್‌
  • ಮಾವಿನಕಾಯಿ ತುರಿ : 1/4 ಕಪ್‌
  • ಕೊಬರಿ ತುರಿ : 2 ಚಮಚ
  • ಗಸಗಸೆ : 2 ಚಮಚ
  • ಬೆಲ್ಲ : 1/2 ಕಪ್‌ಪುಡಿ
  • ಕಲ್ಲು ಸಕ್ಕರೆ : ಸ್ವಲ್ಪ
  • ಖರ್ಜೂರ, ಉತ್ತುತೆ : 2 ರಿಂದ 3
  • ಚಿಟಿಕೆ ಉಪ್ಪು
  • ನಿಂಬೆ ರಸ : 2 ಚಮಚ
  • ಏಲಕ್ಕಿ ಪುಡಿ: 1ರಿಂದ 2 ಚಮಚ
  • ಬೇವಿನ ಕುಡಿ, ಹೂವು : 1-3 ಎಸಳುಗಳು
  • ದ್ರಾಕ್ಷಿ, ಗೋಡಂಬಿ, ಬಾದಾಮಿ, ಪಿಸ್ತಾ (ಎಲ್ಲಾ ಸೇರಿ) : 1/2ಕಪ್‌

ಮಾಡುವ ವಿಧಾನ :

ಮೊದಲಿಗೆ ದ್ರಾಕ್ಷಿ , ಖರ್ಜೂರ, ಉತ್ತತ್ತಿ ಎಲ್ಲವನ್ನೂ ಸಣ್ಣ ಸಣ್ಣ ಚೂರು ಮಾಡಿಕೊಳ್ಳಿ. ಹಾಗೂ ಗೋಡಂಬಿ, ಬಾದಾಮಿ, ಪಿಸ್ತಾ, ಗಸಗಸೆ, ಕಲ್ಲು ಸಕ್ಕರೆ, ಕೊಬ್ಬರಿ ತುರಿ, ಎಲ್ಲವನ್ನೂ ಸ್ವಲ್ಪ ದಪ್ಪಗೆ ಕುಟ್ಟಿ ಪುಡಿ ಮಾಡಿಕೊಳ್ಳುವುದು.

ಪಾತ್ರೆಯಲ್ಲಿ ನೀರು ಹಾಕಿ, ಅದಕ್ಕೆ ಪುಡಿ ಮಾಡಿದ ಹುರಿಗಡಲೆ, ಹುಣಿಸೆಹಣ್ಣಿನ ರಸ, ಮಾವಿನತುರಿ, ಬೆಲ್ಲದ ಪುಡಿ, ಕುಟ್ಟಿ ಪುಡಿ ಮಾಡಿಕೊಂಡಿರುವ ಮಿಶ್ರಣ, ಏಲಕ್ಕಿ ಪುಡಿ, ನಿಂಬೆರಸ, ಉಪ್ಪು ಎಲ್ಲಾ ಹಾಕಿ. ಸರಿಯಾಗಿ ಹೊಂದಿಕೊಳ್ಳುವಂತೆ ಚೆನ್ನಾಗಿ ಕಲೆಸಿ. ಕೊನೆಗೆ ಬೇವಿನ ಕುಡಿ ಹಾಗೂ ಹೂವಿನ 3-4 ಎಸಳುಗಳನ್ನು ಮುರಿದು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.

ನಿಮ್ಮ ರುಚಿಗೆ ತಕ್ಕ ಹಾಗೆ ಉಪ್ಪು, ಹುಳಿ, ಸಿಹಿ ಹಾಗೂ ನೀರನ್ನು ಹಾಕಿಕೊಳ್ಳಿ. ಈಗ ಸಿಹಿ-ಕಹಿಯ ಮಿಶ್ರಣದ ಬೇವು ಸವಿಯಲು ತಯಾರು. ಇದನ್ನು ಬೇಯಿಸಿದ ಶ್ಯಾವಿಗೆ ಮೇಲೆ ಹಾಕಿಕೊಂಡು ತಿನ್ನಬಹುದು.

X
Desktop Bottom Promotion