Just In
Don't Miss
- Movies
ಸಂಜೆ 6 ಗಂಟೆಗೆ ಬಿಗ್ ಬಾಸ್-8 ಆರಂಭ: 17 ಸ್ಪರ್ಧಿಗಳು ಯಾರು?
- News
ಪುಣೆಯಲ್ಲಿ ಕೊರೊನಾ ಕಾಟ: ಮಾರ್ಚ್.14ರವರೆಗೂ ರಾತ್ರಿ ನಿಷೇಧಾಜ್ಞೆ
- Sports
ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿ: ಜೀವಮಾನ ಶ್ರೇಷ್ಠ ಸ್ಥಾನಕ್ಕೇರಿದ ರೋಹಿತ್ ಶರ್ಮಾ, ಅಶ್ವಿನ್ ನಂಬರ್ 3
- Automobiles
ಅನಾವರಣವಾಯ್ತು 2021ರ ಹ್ಯುಂಡೈ ಸೊನಾಟಾ ಎನ್ ಲೈನ್ ಪರ್ಫಾಮೆನ್ಸ್ ಕಾರು
- Finance
ಭಾರತದಲ್ಲಿ ನೋಕಿಯಾ ಪವರ್ ಈಯರ್ಬಡ್ಸ್ ಲೈಟ್ಸ್ ಮಾರಾಟ
- Education
MCL Recruitment 2021: 8 ಸಾಮಾನ್ಯ ವೈದ್ಯಕೀಯ ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಯಿಗೆ ರುಚಿ, ಹೊಟ್ಟೆಗೆ ಹಿತ ಪಾಲಾಕ್ ತಂಬುಳಿ
ಹೆಸರು ಬೇಳೆ ಮತ್ತು ಪಾಲಾಕ್ ಸೊಪ್ಪಿನ ಕಾಂಬಿನೇಶನ್ ಅಂದರೆ ಡಿಫರೆಂಟ್ ಆಗಿರುತ್ತೆ. ಈ ಎರಡರಲ್ಲೂ ಪೋಷಕಾಂಶಗಳು ತುಂಬಿರುವುದರಿಂದ ಇದರ ಸೇವನೆ ಆರೋಗ್ಯಕ್ಕೆ ಹಿತ. ಸುಲಭವಾಗಿ ಸಿಗುವ ವಸ್ತುಗಳನ್ನು ಉಪಯೋಗಿಸಿಕೊಂಡು ಸಖತ್ ಟೇಸ್ಟಿ ಆಗಿರೊ ಅಡುಗೆಯನ್ನ ಮಾಡಬಹುದು. ಬೆಳಗಿನ ತಿಂಡಿ ಚಪಾತಿಯ ಜೊತೆಗೋ, ದೋಸೆಗೋ ಬರೀ ಚಟ್ನಿಗಳನ್ನ ತಿಂದು ಬೇಜಾರಾಗಿದ್ದವರು ಇದನ್ನ ಮಾಡಿದರೆ ತಿನ್ನೋದಕ್ಕೆ ರುಚಿ.
ಬೇಕಾಗುವ ಪದಾರ್ಥಗಳು:
* ಒಂದು ಕಪ್ ಹೆಸರುಬೇಳೆ
* ಚೆನ್ನಾಗಿ ತೊಳೆದು ಕತ್ತರಿಸಿದ ಫ್ರೆಶ್ ಪಾಲಾಕ್ ಸೊಪ್ಪು ಒಂದು ಕಟ್ಟು
* ಒಂದು ಚಮಚ ಬೆಳ್ಳುಳ್ಳಿ ಪೇಸ್ಟ್
* ಒಂದು ಚಮಚ ಶುಂಠಿ ಪೇಸ್ಟ್
* ಅರ್ಧ ಕಪ್ ಕತ್ತರಿಸಿದ ಈರುಳ್ಳಿ
* ಮುಕ್ಕಾಲು ಕಪ್ ಕತ್ತರಿಸಿಟ್ಟ ಟೊಮೊಟೊ
* ಒಂದು ಚಮಚ ಕಡಲೆಹಿಟ್ಟು
* ಎರಡು ಚಮಚ ಮೊಸರು
* ಇಂಗು, ಕೊತ್ತಂಬರಿ, ಗರಂ ಮಸಾಲ, ಕೆಂಪು ಮೆಣಸಿನ ಪುಡಿ
ಮಾಡುವ ವಿಧಾನ: ಮೊದಲು ಹೆಸರು ಬೇಳೆ ಮತ್ತು ಪಾಲಾಕನ್ನು ಸ್ವಲ್ಪ ನೀರಿನಲ್ಲಿ ಒಟ್ಟಿಗೆ ಹಾಕಿ, ಅದಕ್ಕೆ ಕೊತ್ತಂಬರಿ, ಇಂಗು ಮತ್ತು ಉಪ್ಪನ್ನು ಬೆರೆಸಿ 10 ನಿಮಿಷ ಕುಕ್ಕರಿನಲ್ಲಿ ಇಡಬೇಕು. ಆ ನಂತರ ಕಡಲೆ ಹಿಟ್ಟು, ಮೊಸರನ್ನು ಕಲೆಸಿಕೊಂಡು ಬೇಯಿಸಿದ ಹೆಸರುಬೇಳೆಗೆ ಸೇರಿಸಬೇಕು. ಎರಡು ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿದ ನಂತರ ಕುಕ್ಕರಿನಲ್ಲಿ ಒಂದು ಕೂಗು ಕೂಗಿಸಬೇಕು. ಬಾಣಲೆಯಲ್ಲಿ ಎಣ್ಣೆ ಹಾಕಿ ಈರುಳ್ಳಿಯನ್ನು ಹುರಿಯಬೇಕು.
ಅದು ಕೆಂಪಗಾದ ನಂತರ ಕತ್ತರಿಸಿದ್ದ ಟೊಮೊಟೊ ಹಾಕಬೇಕು. ಅದಕ್ಕೆ ಗರಂ ಮಸಾಲ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಕೆಂಪುಮೆಣಸಿನ ಕಾಯಿ ಪುಡಿ ಸೇರಿಸಬೇಕು. 2 ನಿಮಿಷ ಚೆನ್ನಾಗಿ ಉರಿದ ನಂತರ ಕುಕ್ಕರಿನಲ್ಲಿದ್ದ ಮಿಶ್ರಣವನ್ನು ಬಾಣಲೆಗೆ ಸುರಿದುಕೊಳ್ಳಬೇಕು. ಈ ಎಲ್ಲ ಮಿಶ್ರಣವನ್ನು ಸಣ್ಣ ಕುದಿಯಲ್ಲಿ ಚೆನ್ನಾಗಿ ಬೇಯಿಸಬೇಕು.
ಹೆಸರುಬೇಳೆ ಮತ್ತು ಪಾಲಾಕ್ ತಂಬಳಿ ಈಗ ತಿನ್ನಲು ರೆಡಿ. ಚಪಾತಿಗೋ ದೋಸೆಗೋ ಅಥವಾ ಪುಲಾವ್ ನೊಂದಿಗೆ ಕಾಂಬಿನೇಶನ್ ನಲ್ಲಿ ತಿಂದರೆ ಇನ್ನೂ ರುಚಿ. ಬೇಕಾದರೆ ಅನ್ನಕ್ಕೂ ಇದನ್ನು ಬೆರೆಸಿ ತಿನ್ನಬಹುದು.