For Quick Alerts
ALLOW NOTIFICATIONS  
For Daily Alerts

ಕಣಲೆ ಪಲ್ಯದ ರುಚಿ ನೋಡಲು ಮಿಸ್ ಮಾಡ್ಕೋಬೇಡಿ

|

ಕಣಲೆಯಿಂದ ಮಾಡಿದ ಪದಾರ್ಥಗಳ ರುಚಿ ಕೆಲವರಿಗಷ್ಟೇ ಗೊತ್ತು. ಕೊಡಗು, ಚಿಕ್ಕ ಮಂಗಳೂರು, ದಕ್ಷಿಣ ಕನ್ನಡ ಈ ಕಡೆಗಳಲ್ಲಿ ಜೂನ್ -ಜುಲೈ ತಿಂಗಳು ಬಂತೆಂದರೆ ಕಣಲೆಯಿಂದ ಮಾಡಿದ ಪದಾರ್ಥಗಳದ್ದೇ ಸುಗ್ಗಿ. ಆದರೆ ಬೆಂಗಳೂರು, ಉತ್ತರ ಕನ್ನಡದವರಲ್ಲಿ ಹೆಚ್ಚಿನವರಿಗೆ ಎಳೆ ಬಿದಿರಿನಿಂದ ಅಡುಗೆ ಮಾಡಿ ತಿನ್ನಬಹುದು ಎಂದು ಹೇಳಿದರೆ ಆಶ್ಚರ್ಯವಾಗುವುದು.

ಆದರೆ ಇದರ ರುಚಿ ನೋಡಿದವರಿಗೇ ಗೊತ್ತು ಕಣಲೆ ಸಾರಿನ ಗಮ್ಮತ್ತು. ಇದುವರೆಗೆ ಟೇಸ್ಟ್ ಮಾಡಿಲ್ಲ ಅಂದರೆ ಈ ಸಮಯದಲ್ಲಿ ಕೊಡಗು, ಚಿಕ್ಕ ಮಂಗಳೂರು ಕಡೆಗೆ ಭೇಟಿ ನೀಡುವುದಾದರೆ ಕಣಲೆ ಸಾರನ್ನು ಟೇಸ್ಟ್ ಮಾಡಲು ಮಾತ್ರ ಮರೆಯಬೇಡ.

ಎಳೆ ಬಿದಿರನ್ನು ತಂದು ಅದನ್ನು ಕತ್ತರಿಸಿ 2-3 ದಿನಗಳ ನೀರಿನಲ್ಲಿ ನೆನೆ ಹಾಕುತ್ತಾರೆ, ಪ್ರತೀದಿನ ಅದರ ನೀರು ಬದಲಾಯಿಸಬೇಕು, ನಂತರ ಅದನ್ನು ಚೆನ್ನಾಗಿ ತೊಳೆದು ಕಡಲೆ ಜೊತೆ ಹಾಕಿ ಪಲ್ಯ ಅಥವಾ ತೆಂಗಿನ ತುರಿಯನ್ನು ಹುರಿದು, ರುಬ್ಬಿ ಸಾರು ಮಾಡಿ, ರೊಟ್ಟಿ ಅಥವಾ ಚಪಾತಿ ಜೊತೆ ತಿಂದರೆ ಇದೆಯೆಲ್ಲಾ ಕಣಲೆ ರುಚಿ ಸೂಪರ್ ಆಗಿರುತ್ತದೆ.

ಇಲ್ಲಿ ನಾನು ಕಣಲೆ ಪಲ್ಯದ ರೆಸಿಪಿ ನೀಡಿದ್ದೇನೆ ನೋಡಿ:
ಕತ್ತರಿಸಿದ ಕಣಲೆ( 2 ಕಪ್)
ಕಡಲೆ ಅರ್ಧ ಕಪ್ (3 ಗಂಟೆಗಳ ನೀರಿನಲ್ಲಿ ನೆನೆ ಹಾಕಿರಬೇಕು)
ಖಾರದ ಪುಡಿ 1 ಚಮಚ
ಗರಂ ಮಸಾಲ 1 ಚಮಚ
ಕೊತ್ತಂಬರಿ ಪುಡಿ 1 ಚಮಚ
ಅರಿಶಿಣ ಪುಡಿ 1 ಚಮಚ
ರುಚಿಗೆ ತಕ್ಕ ಉಪ್ಪು
ಎಣ್ಣೆ 2 ಚಮಚ
ಈರುಳ್ಳಿ 1
ಶುಂಠಿ- ಬೆಳ್ಳುಳ್ಳಿ ಪೇಸ್ಟ್ 1 ಚಮಚ
ಸ್ವಲ್ಪ ಕರಿಬೇವಿನ ಎಲೆ ಸಾಸಿವೆ

ತಯಾರಿಸುವ ವಿಧಾನ:
ಪಾತ್ರೆಯನ್ನು ಉರಿ ಮೇಲೆ ಇಟ್ಟು ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟಾಪಟ ಶಬ್ದ ಮಾಡುವಾಗ ಕರಿಬೇವಿನ ಎಲೆ ಹಾಕಿ, ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಮತ್ತೆ 2 ನಿಮಿಷ ಹುರಿದು, ಕಣಲೆ ಹಾಕಿ 2-3 ನಿಮಿಷ ಹುರಿಯಿರಿ, ಕಡಲೆ ಹಾಕಿ ನಂತರ ಗರಂ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಹಾಕಿ ಮಿಕ್ಸ್ ಮಾಡಿ 1 ಕಪ್ ನೀರು ಸೇರಿಸಿ ಪಾತ್ರೆಯ ಬಾಯಿ ಮುಚ್ಚಿ 20-25 ನಿಮಿಷ ಬೇಯಿಸಿ. ಆಗಾಗ ಸೌಟ್ ನಿಂದ ಆಡಿಸುತ್ತಾ ಇರಿ, ಪಲ್ಯ ತುಂಬಾ ಡ್ರೈಯಾದರೆ ಸ್ವಲ್ಪ ನೀರು ಸೇರಿಸಿ ಬೇಯಿಸಿ, ಪಲ್ಯ ರೆಡಿಯಾಗಿದೆಯೇ ಎಂದು ನೋಡಲು ಕಡಲೆಯನ್ನು ತಿಂದು ನೋಡಿ, ಕಡಲೆ ಬೆಂದಿದ್ದರೆ ಕಣಲೆ ಕೂಡ ಬೆಂದಿರುತ್ತದೆ. ಪಲ್ಯದಲ್ಲಿ ನೀರಿದ್ದರೆ ನೀರು ಆವಿಯಾಗುವವರೆಗೆ ಸೌಟ್ ನಿಂದ ತಿರುಗಿಸುತ್ತಾ ಬೇಯಿಸಿ, ನಂತರ ಉರಿಯಿಂದ ಇಳಿಸಿದರೆ ರುಚಿಯಾದ ಕಣಲೆ ಪಲ್ಯ ರೆಡಿ.

English summary

Kanale Palya Recipe

Kanale recipe very famous in Kodagu, Chikka Mangalore South Karnataka. This is a recipe prepare by using seedling Bamboo tree. Here is recipe of Kanale Palya recipe.
X
Desktop Bottom Promotion