For Quick Alerts
ALLOW NOTIFICATIONS  
For Daily Alerts

ಹಾಗಲಕಾಯಿ ಪಲ್ಯ, ಅರೆ ಮುಖ ಸಿಂಡರಿಸಬೇಡಿ..!

By Jaya subramanya
|

ಹೆಚ್ಚಿನವರಿಗೆ ಹಾಗಲಕಾಯಿಯ ಕಹಿ ರುಚಿಯಿಂದ ಅದನ್ನು ಆದಷ್ಟು ದೂರವಿಡುತ್ತಾರೆ. ಆದರೆ ಈ ಕಹಿಯನ್ನು ಹೋಗಲಾಡಿಸಲು ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿಕೊಂಡು ಇದನ್ನು ಸ್ವಾದಪೂರ್ಣ ರೆಸಿಪಿಯನ್ನಾಗಿ ತಯಾರಿಸಬಹುದಾಗಿದೆ. ಅದೂ ಕೆಲವೇ ನಿಮಿಷಗಳಲ್ಲಿ ಹಾಗಲಕಾಯಿಂದ ಪಲ್ಯವನ್ನು ಸಿದ್ಧಪಡಿಸಿಕೊಳ್ಳಬಹುದಾಗಿದೆ.

ಹಾಗಿದ್ದರೆ ಇನ್ನೇಕೆ ತಡ ಕೆಲವೇ ನಿಮಿಷಗಳಲ್ಲಿ ಹಾಗಲಕಾಯಿ ಪಲ್ಯವನ್ನು ಸಿದ್ಧಪಡಿಸುವ ರೆಸಿಪಿ ವಿಧಾನವನ್ನು ನಾವು ಇಲ್ಲಿ ನೀಡುತ್ತಿದ್ದು ನಿಮಗೆ ಇದನ್ನು ಸ್ವಾದಪೂರ್ಣವಾಗಿ ಆಸ್ವಾದಿಸಬಹುದಾಗಿದೆ. ಇಲ್ಲಿದೆ ಹಾಗಲಕಾಯಿ ರೆಸಿಪಿಯನ್ನು ತಯಾರಿಸುವ ಸುಲಭ ವಿಧಾನ ಚೋಟುದ್ದ ಹಾಗಲಕಾಯಿ-ಬಾಯಿಗೆ ಕಹಿ, ಆರೋಗ್ಯಕ್ಕೆ ಸಿಹಿ

ಪ್ರಮಾಣ: 4
ಅಡುಗೆಗೆ ಬೇಕಾದ ಸಮಯ: 15 ನಿಮಿಷಗಳು
ಸಿದ್ಧತಾ ಸಮಯ: 10 ನಿಮಿಷಗಳು

karela side dish recipe

ಸಾಮಾಗ್ರಿಗಳು
*ಸಣ್ಣ ಹಾಗಲಕಾಯಿ - 12 ರಿಂದ 15
*ಈರುಳ್ಳಿ - 1 ಕಪ್
*ಹಸಿಮೆಣಸು - 4 ರಿಂದ 5
*ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ - 1/2 ಚಮಚ
*ಹುಣಸೆ ಹಣ್ಣಿನ ಹುಳಿ ನೀರು - 1/2 ಕಪ್
*ಅರಿಶಿನ - 1/4 ಚಮಚ
*ಕೆಂಪು ಮೆಣಸಿನ ಹುಡಿ - 1/2 ಚಮಚ ಆಲೂ ಹಾಗಲಕಾಯಿ ಪಲ್ಯ, ಸ್ಟೆಪ್ ಬೈ ಸ್ಟೆಪ್ ರೆಸಿಪಿ*ಗರಮ್ ಮಸಾಲಾ - 1/2 ಚಮಚ
*ಅಮೆಚೂರ್ ಹುಡಿ - 1/2 ಚಮಚ
*ಎಣ್ಣೆ - ಎರಡು ಟೇಬಲ್ ಚಮಚ

ಮಾಡುವ ವಿಧಾನ
1. ಹಾಗಲಕಾಯಿಯನ್ನು ತೊಳೆದುಕೊಳ್ಳಿ. ಇದರ ಸಿಪ್ಪೆಯನ್ನು ತೆಗೆದು ಎರಡು ತುಂಡುಗಳನ್ನಾಗಿ ಮಾಡಿಕೊಳ್ಳಿ.
2. ಹಾಗಲಕಾಯಿಯಲ್ಲಿರುವ ಬೀಜವನ್ನು ಬೇರ್ಪಡಿಸಿ
3.ಈ ಸಮಯದಲ್ಲಿ, ನೀರನ್ನು ಕುದಿಸಿಕೊಂಡು ಇದಕ್ಕೆ ಕತ್ತರಿಸಿದ ಹಾಗಲಕಾಯಿಯನ್ನು ಹಾಕಿ. 15 ನಿಮಿಷಗಳ ಕಾಲ ಕುದಿಸಿಕೊಳ್ಳಿ. ಹೀಗೆ ಮಾಡುವುದರಿಂದ ಹಾಗಲಕಾಯಿ ಮೃದುವಾಗುತ್ತದೆ.
4.ನಮೂದಿಸಿದ ಸಮಯದಲ್ಲಿ, ನೀರನ್ನು ಬಸಿದುಕೊಳ್ಳಿ. ಮತ್ತು ಹಾಗಲಕಾಯಿಯನ್ನು ಪಕ್ಕದಲ್ಲಿಡಿ.
5. ತಳ ಆಳವಿರುವ ಪಾತ್ರೆಯಲ್ಲಿ ಎಣ್ಣೆ ಸೇರಿಸಿ. ಇದಕ್ಕೆ ಈರುಳ್ಳಿ, ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಹಾಗೂ ಹಸಿಮೆಣಸನ್ನು ಹಾಕಿ
6.ಇನ್ನು ಇದನ್ನು ಚೆನ್ನಾಗಿ ಮಗುಚಿಸಿಕೊಳ್ಳಿ
7. ತದನಂತರ ಮಸಾಲಾವನ್ನು ಹಾಕಿ ಮತ್ತು ಎಲ್ಲಾ ಸಾಮಾಗ್ರಿಯನ್ನು ಚೆನ್ನಾಗಿ ಮಗುಚಿಸಿಕೊಳ್ಳಿ
8. ಇನ್ನು ಇದಕ್ಕೆ ಹುಳಿ ನೀರನ್ನು ಸೇರಿಸಿ
9. ಈಗ, ಉಪ್ಪು ಮತ್ತು ನೀರನ್ನು ಮಿತವಾಗಿ ಹಾಕಿ
10. ಸಣ್ಣ ಉರಿಯಲ್ಲಿ ಇದನ್ನು ಬೇಯಿಸಿಕೊಳ್ಳಿ
11. ಸರಿ ಸುಮಾರು 10 ರಿಂದ 15 ನಿಮಿಷಗಳ ಕಾಲ ಬೇಯಿಸಿ
12. ಪೂರ್ಣಗೊಂಡ ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ
13.ರುಚಿಯಾದ ಹಾಗಲಕಾಯಿ ರೆಸಿಪಿ ಸಿದ್ಧವಾಗಿದೆ

ಸಲಹೆ:
*ಹಾಗಲಕಾಯಿಯನ್ನು ಕಹಿಯನ್ನು ನಿವಾರಿಸಲು, ಹಾಗಲಕಾಯಿಯನ್ನು ಎರಡು ತುಂಡುಗಳನ್ನಾಗಿ ಬೇರ್ಪಡಿಸಿ ಮತ್ತು ಉಪ್ಪು ಸವರಿಕೊಳ್ಳಿ.
* ಸುಮಾರು 15 ನಿಮಿಷಗಳ ನಂತರ, ನೀರಿನಲ್ಲಿ ತೊಳೆದುಕೊಳ್ಳಿ.

English summary

Easy karela side dish recipe

we're sharing this simple recipe that can be prepared in few minutes. Now, since we'll be using a mini karela/bitter gourd to prepare this sabji, it can also be called mini karele ki sabji.So, what are you waiting for? Take a look at this simple sabji recipe that you can prepare at home.
Story first published: Wednesday, September 21, 2016, 20:13 [IST]
X
Desktop Bottom Promotion