For Quick Alerts
ALLOW NOTIFICATIONS  
For Daily Alerts

ಅತ್ತೇರಿ ಅವರೆಕಾಳು ಉಸಲಿ

By Staff
|

ಅವರೆಕಾಯಿ ಉಪಯೋಗಿಸಿ ಮಾಡುವ ರುಚಿರುಚಿ ಅಡುಗೆಗಳಿಗೆ ಲೆಕ್ಕವಿಲ್ಲ. ಅವರೆಕಾಳಿನ ಕೋಡುಬಳೆ, ಹುಳಿ, ಬಸ್ಸಾರು, ಹಿದಕವರೆ ಬೇಳೆ ಸಾರು, ಅವರೆಕಾಳು ಮಸಾಲೆವಡೆ...ಹೀಗೇ ಪಟ್ಟಿ ಬೆಳೆಯುತ್ತಾ ಹೋಗಿ ಅವರೆಕಾಳಿನ ಉಸಲಿ ಬಳಿ ಬಂದು ನಿಲ್ಲುತ್ತದೆ!ಅದರ ರುಚಿ ಸವಿಯಬೇಕು ಅನ್ನಿಸುತ್ತದೆ.

  • ಅರುಣಾ, ಮೈಸೂರು

ಅವರೆಕಾಯಿ ಕಾಲ ಇನ್ನೇನು ಮುಗೀತಾ ಇದೆ. ಅಡುಗೆ ಮನೆಯಲ್ಲಿ ಮಣಿಯಂತ ಅವರೆಯದ್ದೇ ಸಾಮ್ರಾಜ್ಯ. ,ಚಳಿನೂ ಸ್ವಲ್ಪ ಸ್ವಲ್ಪ ಕಮ್ಮಿ ಆಗ್ತಿದೆ. ರಾತ್ರಿಯ ಬೆಳದಿಂಗಳ ಜತೆಗೆ ಊಟಕ್ಕೆ ಅವರೆಕಾಳು ಉಸಲಿ ಇದ್ದರೆ ಇರುವ ಅಲ್ಪ ಸ್ವಲ್ಪ ಚಳಿ ನಿಮ್ಮಿಂದ ದೂರ ಸರಿಯುತ್ತದೆ. ತಡವೇಕೆ ಅವರೆಕಾಳಿನ ಉಸಲಿ ಮಾಡೋಣ ಬನ್ನಿ....

ಬೇಕಾಗುವ ಪಡಿಪದಾರ್ಥಗಳು:

ತಾಜಾ ಅವರೆಕಾಯಿಯ ಕಾಳು: 2 ಕಪ್ಪು
ಈರುಳ್ಳಿ : ಮಧ್ಯಮಗಾತ್ರದ ಎರಡು
ಹಸಿ ಮೆಣಸಿನ ಕಾಯಿ:ಒಂದು ಹಿಡಿ
ತೆಂಗಿನಕಾಯಿ ತುರಿ: ಒಂದು ಹಿಡಿ
ಜೀರಿಗೆ: ಅರ್ಧ ಚಮಚ
ಉಪ್ಪು :ರುಚಿಗೆ ತಕ್ಕಷ್ಟು
ಮೆಂತ್ಯ :ಅರ್ಧ ಚಮಚ
ಅರಿಶಿನ : ಎರಡು ಚಿಟಿಕೆ
ಎಣ್ಣೆ : 2 ಚಮಚ
ಬೆಣ್ಣೆ: ನಿಂಬೆಹಣ್ಣಿನ ಗಾತ್ರ
ತುಪ್ಪ.: 2 ಚಮಚ

ತಯಾರಿಸುವ ವಿಧಾನ :

ಅವರೆಕಾಳು, ಎಣ್ಣೆ, ಬೆಣ್ಣೆ, ತುಪ್ಪ, ಸಣ್ಣಗೆ ಹೆಚ್ಚಿದ ಈರುಳ್ಳಿ,ಹಾಗೂ ಹಸಿ ಮೆಣಸಿನಕಾಯಿಯನ್ನು ದಪ್ಪ ತಳ ಇರುವ ಪಾತ್ರೆಯಲ್ಲಿ ಹಾಕಿ ಮುಚ್ಚಿಡಿ.ಪಾತ್ರೆಯನ್ನು ಒಲೆಯ ಮೇಲಿಟ್ಟು ಸಣ್ಣ ಉರಿಯಲ್ಲಿ ಬೇಯಿಸಿ. ಕಾಳು ಚೆನ್ನಾಗಿ ಬೆಂದ ಬಳಿಕ ಉಪ್ಪು, ತೆಂಗಿನಕಾಯಿ ತುರಿ, ಪುಡಿ ಮಾಡಿದ ಜೀರಿಗೆ, ಮೆಂತ್ಯ, ಅರಿಶಿನ ಹಾಕಿ.ನಂತರ, ಈ ಮಿಶ್ರಣವನ್ನು ಮತ್ತೊಮ್ಮೆ ಸಣ್ಣ ಉರಿಯ ಒಲೆಯ ಮೇಲೆ 10 ನಿಮಿಷ ಬೇಯಿಸಿ.ಪಾತ್ರೆಯ ಮೇಲೆ ಮುಚ್ಚಳ ಮುಚ್ಚುವುದನ್ನು ಮರೆಯಬೇಡಿ.

ಅರ್ಧಗಂಟೆಯಲ್ಲಿ, ರುಚಿಕರವಾದ ಅವರೆಕಾಳು ಉಸಲಿ ರೆಡಿ. ಅಗತ್ಯ ಇರುವವರು ಇಂಗು, ಸಾಸಿವೆ ಒಗ್ಗರಣೆ ಹಾಕಿಕೊಳ್ಳಬಹುದು.

(ದಟ್ಸ್ ಕನ್ನಡ ಪಾಕಶಾಲೆ)

English summary

Lip Smacking 'Avare Kalu Usali'-ಅತ್ತೇರಿ ಅವರೆಕಾಳು ಉಸಲಿ

Lip Smacking 'Avare Kalu Usali' by Aruna Mysore
X
Desktop Bottom Promotion