For Quick Alerts
ALLOW NOTIFICATIONS  
For Daily Alerts

ಅವಿಯಲ್ : ಹೆಸರಷ್ಟೇ ವಿಚಿತ್ರ!

By Staff
|

ಕೇರಳದಲ್ಲಿ ಎಲ್ಲೇ ಹೋಗಿ ಬಾಳೇಕಾಯಿ-ಕೊಬ್ಬರಿ ಎಣ್ಣೆ ವಾಸನೆ. ಕೊಬ್ಬರಿ ಎಣ್ಣೆ ತಲೆಗೆ ಹೊಯ್ದುಕೊಳ್ಳುವಂತೆ ಉದರಕ್ಕೂ ಉಪಯೋಗ ಅವರಲ್ಲಿ. ಕೇರಳಿಗರಿಗೆ ತಿರು ಓಣಂ ಈಗ ಮುಗಿದ ಸಂಭ್ರಮ. ಈ ಸಂದರ್ಭದಲ್ಲಿ ಅವಿಯಲ್ ಮುಖ್ಯ ಪಳದ್ಯ. ತಾಜಾ ತಾಜಾ ತರಕಾರಿ, ಕಾಯಿ-ಶುಂಠಿ ಮಸಾಲಾ, ಥಂಡೀ-ಥಂಡೀ ಗಟ್ಟಿ ಮೊಸರು..ಸೇರಿದರೆ ಹೇಗಿರುತ್ತೆ.. ಬಾಯಲ್ಲಿ ನೀರೂರತ್ತಾ.?


ಪದಾರ್ಥಗಳ ಪಟ್ಟಿ :

ಗಟ್ಟಿ ಮೊಸರು : 1 ಕಪ್
ತರಕಾರಿಗಳು
ಕ್ಯಾರೆಟ್ :1 ಕಪ್
ಹುರುಳೀಕಾಯಿ :1 ಕಪ್
ಚೂರಣಗೆಡ್ಡೆ : 1/2 ಕಪ್
ನುಗ್ಗೇಕಾಯಿ : 2
ಬಟಾಣಿ : 1/2 ಕಪ್

ಇವೇ ಅಲ್ಲದೆ ನಿಮಗಿಷ್ಟವಾದ ಸೀಮೆಬದನೆ, ಪಡುವಲ, ಹಲಸಿನ ಬೀಜ, ಅವರೆಕಾಳುಗಳನ್ನು ಸಹ ಉಪಯೋಗಿಸಬಹುದು. ತರಕಾರಿಗಳನ್ನು ಮಾತ್ರ ಉದ್ದುದ್ದಕ್ಕೆ ಹೆಚ್ಚಿಕೊಳ್ಳಿ.

ಮಸಾಲಾ ಸಾಮಾಗ್ರಿ :

ತುರಿದ ತೆಂಗಿನಕಾಯಿ : 1 ಕಪ್
ಜೀರಿಗೆ : 1 ಟೀ ಸ್ಪೂನ್
ಹಸಿರು ಮೆ.ಕಾಯಿ : ಖಾರಕ್ಕೆ ತಕ್ಕಂತೆ
ಶುಂಠಿ : ಚಿಕ್ಕ ತುಂಡು
ಕೊತ್ತಂಬರಿ ಸೊಪ್ಪು, ಇವೆಲ್ಲವನ್ನೂ ಸ್ವಲ್ಪ ಗಟ್ಟಿಯಾಗಿ-ನುಣ್ಣಗೆ ರುಬ್ಬಿಟ್ಟುಕೊಳ್ಳಿ.

ಮಾಡುವ ವಿಧಾನ :

ಹೆಚ್ಚಿದ ತರಕಾರಿಗಳಿಗೆ 2ಕಪ್ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ, 2ಸೀಟಿ ಕೂಗುವ ತನಕ ಕುಕ್ಕರಿನಲ್ಲಿ ಬೇಯಿಸಿ. ನಂತರ ರುಬ್ಬಿದ ಮಸಾಲೆಯನ್ನು ಬೆಂದ ತರಕಾರಿಗಳಿಗೆ ಸೇರಿಸಿ, ಮಂದ ಉರಿಯಲ್ಲಿ ಒಂದು ಕುದಿ ಬರುವ ತನಕ ಕುದಿಸಿ. ಸ್ವಲ್ಪ ಆರಿದ ನಂತರ ತುಪ್ಪ ಅಥವಾ ಕೊಬ್ಬರಿ ಎಣ್ಣೆ ಕಾಯಿಸಿ ಸಾಸಿವೆ, ಜೀರಿಗೆ, ಇಂಗು, ಕರಿಬೇವಿನ ಒಗ್ಗರಣೆ ಹಾಕಿ ಸ್ವಲ್ಪ ಬೆಚ್ಚಗಾಗುವ ತನಕ ಬಿಡಿ. ಬಡಿಸುವ ಮುನ್ನ ಅವಿಯಲ್‍ಗೆ 1 ಕಪ್ ಗಟ್ಟಿ ಮೊಸರು ಬೆರೆಸಿ ಚೆನ್ನಾಗಿ ಕಲಸಿ ಬಡಿಸಿ.

ಚಪಾತಿ, ಬಿಸಿ-ಬಿಸಿ ಅನ್ನ, ಖಾರದ ದೋಸೆ, ಪೂರಿ, ಪೊಂಗಲ್ ಎಲ್ಲದರೊಡನೆಯೂ ಸವಿ-ಸವಿ ಈ ಅವಿಯಲ್.

(ದಟ್ಸ್ ಕನ್ನಡ ಪಾಕಶಾಲೆ)

English summary

ಅವಿಯಲ್ : ಹೆಸರಷ್ಟೇ ವಿಚಿತ್ರ! -Avial : South Indian Cuisine

Avial : South Indian Cuisine
X
Desktop Bottom Promotion