For Quick Alerts
ALLOW NOTIFICATIONS  
For Daily Alerts

ಸೂರ್ಯನ ಬಿಸಿಲು ನೆಕ್ಕಿದ ಬಾಳೆಕಾಯಿ ಹಪ್ಪಳ

By Super
|

ಹಪ್ಪಳ ಸಂಡಿಗೆ, ಉಪ್ಪಿನಕಾಯಿ, ಚಟ್ನಿಪುಡಿ, ತೊಕ್ಕು, ಮೆಂತ್ಯದಹಿಟ್ಟು, ಗೊಜ್ಜು ಇವೆಲ್ಲ ಇಲ್ಲದಿದ್ದರೆ ಡೈನಿಂಗ್‌ ಟೇಬಲ್ಲಿಗೆ ಹೋಗಬಾರದು.

ಬೇಕಾಗುವ ಪದಾರ್ಥಗಳು :

ಅಕ್ಕಿಹಿಟ್ಟು- 100 ಗ್ರಾಂ
ಉದ್ದಿನ ಹಿಟ್ಟು - 200 ಗ್ರಾಂ
ಕಾರದಪುಡಿ- 2 ಚಮಚ
ಬಾಳೆಕಾಯಿ- 10.
ಇಂಗು ಮತ್ತು ರುಚಿಗೆ ತಕ್ಕಷ್ಟು ಉಪ್ಪು
ಒಣಗುವುದಕ್ಕೆ ಬೇಕಾಗುವಷ್ಟು ಚುರುಕಾದ ಬಿಸಿಲು

ಮಾಡುವ ವಿಧಾನ :

ಬಾಳೆಕಾಯಿ ಸ್ಪಲ್ಪ ಹೊತ್ತು ನೀರಲ್ಲಿ ನೆನೆಸಿ. ಮೃದುವಾದನಂತರ ಸಿಪ್ಪೆ ತೆಗೆದು ತಿರುಳನ್ನು ಸಣ್ಣಗೆ ಹೆಚ್ಚಿಕೊಂಡು ಅದಕ್ಕೆ ಉದ್ದಿನಹಿಟ್ಟು , ಉಪ್ಪು, ಕಾರದ ಪುಡಿ, ಇಂಗು, ಸ್ವಲ್ಪ ನೀರು ಸೇರಿಸಿ ಒಲೆಯ ಮೇಲಿಡಿ. ನಂತರ ಅಕ್ಕಿಹಿಟ್ಟು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಮಿಶ್ರಣ ಬೆಂದ ಮೇಲೆ ಕೆಳಗಿಳಿಸಿ ಆರಿದ ನಂತರ ಸಣ್ಣ ಸಣ್ಣ ಉಂಡೆ ಮಾಡಿ. ಲಟ್ಟಣಿಗೆ ಕೈಗೆತ್ತಿಕೊಳ್ಳಿ. ಮಣೆ ಮೇಲೆ ಲಟ್ಟಿಸಿ ಬಿಸಿಲಿಗಿಡಿ. ಒಣಗಿದ ಹಪ್ಪಳಗಳನ್ನು ಎಣೆಯಲ್ಲಿ ಕರೆಯಬಹುದು ಅಥವಾ ಮೈಕ್ರೋವೋವನ್‌ನಲ್ಲಿ ಸುಟ್ಟುಕೊಳ್ಳಬಹುದು.

ಹಪ್ಪಳ ಮಾಡುವುದಕ್ಕೆ ಒಳ್ಳೆಯ ಬಿಸಿಲು ಬೀಳಬೇಕು. ಉಷ್ಣವಲಯದ ಪ್ರದೇಶಗಳಾದರೆ ಉದಾ : ಚಿತ್ರದುರ್ಗ, ಗದಗ, ಚಾಮರಾಜನಗರ, ಟಾಂಪ, ಸ್ಯಾನ್‌ ಡಿಯಾಗೊ ಪ್ರದೇಶಗಳಲ್ಲಿ ಬಿಸಿಲಿಗೆ ಬರವಿಲ್ಲ. ಆದರೆ, ಸೆಂಟ್‌ಪಾಲ್‌, ಮೇರಿಲ್ಯಾಂಡ್‌, ಚಿಕಾಗೊ, ಆಕ್‌ಲ್ಯಾಂಡ್‌, ಲೀಡ್ಸ್‌, ಲಂಡನ್‌ ನಿವಾಸಿಗಳು ಬಿಸಿಲು ಬೇಕು ಅಂತ ಅರ್ಜಿ ಹಾಕಿಕೊಳ್ಳಬೇಕು. ಪ್ರಕೃತಿ ಸ್ಯಾಂಕ್ಷನ್‌ ಮಾಡುವವರೆಗೆ ಕಾಯಬೇಕು !

ಆಮೇಲೆ... ಕುರುಂಕುರುಂ..ಬಾಳೆಕಾಯಿ ಹಪ್ಪಳ! ಊಟದ ಜತೆ, ತಿಂಡಿಯ ಜತೆ . ಸುಮ್ಮನೆ.

X
Desktop Bottom Promotion