For Quick Alerts
ALLOW NOTIFICATIONS  
For Daily Alerts

ಅರೆ ಸಕ್ಕರೆ ಕಡ್ಡಿ ಕೇಳಿದ್ದೇವೆ, ಇದೇನಿದು ಚಿಕನ್ ಕಡ್ಡಿ?

By Arshad
|

ವಿಶ್ವದಲ್ಲಿಯೇ ಅತಿ ಹೆಚ್ಚು ಸೇವಿಸಲ್ಪಡುವ ಮಾಂಸಾಹಾರವೆಂದರೆ ಕೋಳಿಮಾಂಸ. ಇಂದು ಪ್ರತಿ ಊರಿನಲ್ಲಿ ಕೋಳಿಯ ವಿವಿಧ ಭಕ್ಷ್ಯಗಳು ದೊರಕುತ್ತಿವೆ. ಕೋಳಿಮಾಂಸ ಪ್ರಿಯರಿಗೆ ಈ ವೈವಿಧ್ಯತೆ ತುಂಬಾ ಇಷ್ಟವಾಗಿದ್ದು ಯಾವ ಊರಿಗೆ ಹೋದರೂ ಅಲ್ಲಿ ಯಾವ ಹೊಸ ಬಗೆಯ ರುಚಿ ಸಿಗುತ್ತದೆ ಎಂಬ ಹಂಬಲದಲ್ಲಿರುತ್ತಾರೆ. ಒಂದು ವೇಳೆ ನೀವೂ ಹೊಸರುಚಿಯನ್ನು ಇಷ್ಟಪಡುವವರದರೆ ನಿಮಗೊಂದು ಖಾರವಾದ ಸಿಹಿಸುದ್ದಿಯಿದೆ. ಇಂದು ನಮ್ಮ ಬಳಿ ನೀವು ಹಿಂದೆಂದೂ ಕೇಳಿರದಿದ್ದ ಕೋಳಿಕಡ್ಡಿಗಳ ಬಗ್ಗೆ ಹೊಸ ಮಾಹಿತಿಯಿದೆ. ರಂಜಾನ್ ಸ್ಪೆಷಲ್: ಕಾಶ್ಮೀರ ಶೈಲಿಯ ಮಿರ್ಚಿ ಕುರ್ಮಾ!

ಸಕ್ಕರೆ ಕಡ್ಡಿ ಕೇಳಿದ್ದೀರಿ, ಇದೇನು ಚಿಕನ್ ಕಡ್ಡಿ ಎಂದು ಕುತೂಹಲ ಕೆರಳಿತೇ? ಅಲ್ಲದೇ ಇದು ಪವಿತ್ರವಾದ ರಂಜಾನ್ ಅಥವಾ ರಮಧಾನ್ ಮಾಸವಾಗಿದ್ದು ಈ ಮಾಸದಲ್ಲಿ ವಿವಿಧ ಭಕ್ಷ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಚಿಕನ್ ಕಡ್ಡಿಯನ್ನು ರಮಧಾನ್‌ನ ಇಫ್ತಾರ್ ಕೂಟದಲ್ಲಿ ಒಂದು ಪ್ರಮುಖ ಖಾದ್ಯವಾಗಿ ಬಡಿಸಿದರೆ ನಿಮ್ಮ ಅತಿಥಿಗಳು ಈ ಹೊಸರೂಪ ಮತ್ತು ಹೊಸರುಚಿಗೆ ಮರುಳಾಗುವುದು ಮಾತ್ರವಲ್ಲ, ಇನ್ನೂ ಹೆಚ್ಚು ಬೇಕೆಂಬ ಬೇಡಿಕೆಯನ್ನೂ ಇಡುವುದು ಖಂಡಿತ.

ಇಫ್ತಾರ್ ಸಮಯದಲ್ಲಿ ತಯಾರಿಸುವ ತಿಂಡಿಗಳಿಗೆ ಹೆಚ್ಚಿನ ಸಮಯ ಬೇಕಾಗಿರುವುದೇ ದೊಡ್ಡ ತೊಂದರೆ. ಏಕೆಂದರೆ ಇಡಿಯ ದಿನದ ಉಪವಾಸದಿಂದ ಬಳಲಿದ ದೇಹಕ್ಕೆ ಹೆಚ್ಚು ಹೊತ್ತು ಅಡುಗೆಯ ಶ್ರಮ ಸಹಿಸಲು ಸಾಧ್ಯವಿಲ್ಲ. ಆದರೆ ಈ ಕಡ್ಡಿಗಳನ್ನು ಕೊಂಚವೇ ಸಮಯದಲ್ಲಿ ಸಿದ್ಧಪಡಿಸಲು ಸಾಧ್ಯವಿದ್ದು ಸುಲಭ ಸಾಮಾಗ್ರಿಗಳೇ ಸಾಕು. ಬನ್ನಿ, ಈ ಮಸಾಲೆಯುಕ್ತ ಚಿಕನ್ ಕಡ್ಡಿಗಳನ್ನು ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ: ರಂಜಾನ್ ಸ್ಪೆಷಲ್: ಪಾಲಕ್ ಸೊಪ್ಪು-ಚೀಸ್ ಟೋಸ್ಟ್ ರೆಸಿಪಿ

Spicy Chicken Sticks Recipe For Iftar Party

*ಪ್ರಮಾಣ: ನಾಲ್ವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಹದಿನೈದು ನಿಮಿಷಗಳು
*ತಯಾರಿಕಾ ಸಮಯ: ಹದಿನೈದು ನಿಮಿಷಗಳು

ಅಗತ್ಯವಿರುವ ಸಾಮಾಗ್ರಿಗಳು
*ಕೋಳಿಮಾಂಸದ ಮೂಳೆರಹಿತ ಭಾಗವನ್ನು ಉದ್ದಕ್ಕೆ ಸೀಳಿದ್ದು: ಅರ್ಧ ಕೇಜಿ
*ಗರಂ ಮಸಾಲೆ ಪುಡಿ - 1 ಚಿಕ್ಕ ಚಮಚ
*ತಾಜಾ ಕ್ರೀಂ - 1 ಕಪ್
*ಹಸಿಮೆಣಸು - 5 ರಿಂದ 6
*ಬೆಳ್ಳುಳ್ಳಿಯ ಪೇಸ್ಟ್-1/2 ಚಿಕ್ಕ ಚಮಚ
*ಜೋಳದಹಿಟ್ಟು (cornflour) - 1 Cup
*ಇಂಗು-ಚಿಟಿಕೆಯಷ್ಟು
*ಜೀರಿಗೆ ಪುಡಿ - 1/2 ಚಿಕ್ಕ ಚಮಚ
*ಕೊತ್ತಂಬರಿ ಪುಡಿ - 1/2 ಚಿಕ್ಕ ಚಮಚ
*ಕೆಂಪು ಮೆಣಸಿನ ಪುಡಿ (ಬ್ಯಾಡಗಿ) - 1/2 ಚಿಕ್ಕ ಚಮಚ (ಕಾಶ್ಮೀರಿ ಚಿಲ್ಲಿ ಆದರೆ ಉತ್ತಮ, ಆದರೆ ಒಂದು ಚಿಕ್ಕ ಚಮಚ ಬಳಸಿ)
*ಲಿಂಬೆರಸ - 1/2 ಚಿಕ್ಕ ಚಮಚ
*ಬ್ರೆಡ್ ಪುಡಿ (bread crumbs):ಅಗತ್ಯಕ್ಕೆ ತಕ್ಕಂತೆ
*ಉಪ್ಪು: ರುಚಿಗನುಸಾರ
*ಎಣ್ಣೆ: ಅಗತ್ಯಕ್ಕೆ ತಕ್ಕಂತೆ ರಂಜಾನ್ ಉಪವಾಸಕ್ಕಾಗಿ ತಂಪುಣಿಸುವ ಬಾದಾಮಿ ಹಾಲು

ತಯಾರಿಸುವ ವಿಧಾನ
1) ಒಂದು ಪಾತ್ರೆಯಲ್ಲಿ ಜೀರಿಗೆ ಪುಡಿ, ಧನಿಯ ಪುಡಿ, ಕೆಂಪು ಮೆಣಸಿನ ಪುಡಿ, ಬೆಳ್ಳುಳ್ಳಿ ಪೇಸ್ಟ್ ಮತ್ತು ಜೋಳದಹಿಟ್ಟನ್ನು ಸೇರಿಸಿ ಮಿಶ್ರಣ ಮಾಡಿ.
2) ಈ ಮಿಶ್ರಣಕ್ಕೆ ಕೋಳಿಮಾಂಸದ ಉದ್ದಕ್ಕೆ ಕುಯ್ದ ತುಂಡುಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
3) ಈ ಮಿಶ್ರಣಕ್ಕೆ ಹಸಿಮೆಣಸು ಮತ್ತು ಲಿಂಬೆರಸ ಸೇರಿಸಿ ಬೆರೆಸಿ.
4) ಬಳಿಕ ಕ್ರೀಂ ಅನ್ನು ಪ್ರತಿ ತುಂಡಿಗೂ ನಯವಾಗಿ ಸವರಿ.
5) ಈ ಸಮಯದಲ್ಲಿ ಒಂದು ದಪ್ಪತಳದ ಬಾಣಲೆಯನ್ನು ಮಧ್ಯಮ ಉರಿಯಲ್ಲಿಟ್ಟು ಹುರಿಯಲು ಅಗತ್ಯವಿದ್ದಷ್ಟು ಎಣ್ಣೆಯನ್ನು ಸುರಿದು ಬಿಸಿಮಾಡಿ.
6) ಎಣ್ಣೆ ಬಿಸಿಯಾದ ಬಳಿಕ ಕೋಳಿಯ ತುಂಡುಗಳನ್ನು ಒಂದು ತಟ್ಟೆಯಲ್ಲಿ ಹರಡಿರುವ ಬ್ರೆಡ್ ಪುಡಿಯ ಮೇಲೆ ಹೊರಳಾಡಿಸಿ ಎಲ್ಲಾ ಕಡೆ ಸಮನಾಗಿ ಮತ್ತು ದಪ್ಪನಾಗಿ ಅಂಟಿಕೊಳ್ಳುವಂತೆ ಮಾಡಿ ಬಳಿಕ ಬಾಣಲೆಯಲ್ಲಿ ಮುಳುಗಿಸಿ.
7) ಇದೇ ರೀತಿ ಇತರ ತುಂಡುಗಳನ್ನೂ ಒಂದಾದ ಬಳಿಕ ಒಂದರಂತೆ ಎಣ್ಣೆಯಲ್ಲಿ ಮುಳುಗಿಸುತ್ತಾ ಹೋಗಿ.
8) ಎರಡೂ ಬದಿ ಮಗುಚುತ್ತಾ ಸುಮಾರು ಕಂದು ಮಿಶ್ರಿತ ಕೆಂಪು ಬಣ್ಣ ಬರುವರೆಗೂ ಹುರಿಯಿರಿ.
9) ಹೊರತೆಗೆದ ಬಳಿಕ ದಪ್ಪನೆಯ ಕಿಚನ್ ಟವೆಲ್ ಪೇಪರ್ ಮೇಲೆ ಹರಡಿ ಎಣ್ಣೆ ಹೀರಿಕೊಳ್ಳುವಂತೆ ಮಾಡಿ. ಬಿಸಿಯಿದ್ದಂತೆಯೇ ಬಡಿಸಿ.
10) ಗರಿಗರಿಯಾಗಿರುವ ಈ ಕಡ್ಡಿಗಳನ್ನು ಟೊಮಾಟೋ ಸಾಸ್ ಚಿಲ್ಲಿ ಸಾಸ್ ಜೊತೆಯೂ ಸೇವಿಸಬಹುದು. ಈ ರೆಸಿಪಿ ಹೇಗೆನಿಸಿತು ಎಂಬುದನ್ನು ನಮಗೆ ಖಂಡಿತಾ ತಿಳಿಸಿ.

English summary

Spicy Chicken Sticks Recipe For Iftar Party

Non-vegetarian lovers would always love to munch on chicken. You would have tried the best recipes ever from every corner of the street. So, we have a good news for you. Today, we have a special chicken recipe that you will be tasting for the first time! So, why wait now, take a look at the delicious chicken sticks recipe that you can prepare for Iftar.
X
Desktop Bottom Promotion