For Quick Alerts
ALLOW NOTIFICATIONS  
For Daily Alerts

ಚಿಕನ್ ಪಲಾವ್-ಮೈಕ್ರೋವೇವ್ ಬಳಸಿ ಥಟ್ಟನೇ ತಯಾರಿಸಿ

By manu
|

ಕೆಲವು ಅಡುಗೆಗಳು ಸ್ವಾದಿಷ್ಟವಾದರೂ ಅದರ ತಯಾರಿಕೆಗೆ ಬೇಕಾಗಿರುವ ಶ್ರಮ ಮತ್ತು ಸಮಯದ ಕಾರಣ ಹೆಚ್ಚಿನವರು ಇದರಿಂದ ದೂರ ಸರಿಯುವುದೇ ಜಾಸ್ತಿ. ಈಗ ಬೆರಳತುದಿಯಲ್ಲಿ ಲಭ್ಯವಿರುವ ಆಪ್ ಅಥವಾ ದೂರವಾಣಿ ಮೂಲಕ ಹೋಟೆಲಿನಿಂದ ತರಿಸಿಕೊಳ್ಳುವುದೇ ಹೆಚ್ಚು. ಆದರೆ ಇವು ಆರೋಗ್ಯಕರವೇ? ದುಬಾರಿಯೇ ಎಂಬ ದ್ವಂದ್ವ ಕೊಂಚವಾದರೂ ಇದ್ದೇ ಇರುತ್ತದೆ. ಮನೆಗೆಲಸವನ್ನು ಸುಲಭಗೊಳಿಸಲು ಆಗಮಿಸಿರುವ

ಗೃಹೋಪಯೋಗಿ ಉಪಕರಣಗಳಲ್ಲಿ ಮೈಕ್ರೋವೇವ್ ಓವನ್ ಸಹಾ ಒಂದು. ಆದರೆ ಇದನ್ನು ಬಳಸಿ ಸ್ವಾದಿಷ್ಟವಾದ ಸಾಂಪ್ರಾದಾಯಿಕ ಅಡುಗೆಗಳನ್ನು ಮಾಡಲು ಸಾಧ್ಯವೇ ಎಂಬುದನ್ನು ಯಾರಾದರೂ ತಿಳಿಸಿಕೊಡಬೇಕಷ್ಟೇ. ಇಂದು ಈ ನಿಟ್ಟಿನಲ್ಲಿ ಬೋಲ್ಡ್ ಸ್ಕೈ ತಂಡ ಮಹತ್ವದ ಹೆಜ್ಜೆಯನ್ನಿಡುತ್ತಿದೆ. ದಿನವಿಡೀ ವ್ಯಸ್ತರಿದ್ದರೂ ಕೆಲವೇ ನಿಮಿಷಗಳಲ್ಲಿ ಮೈಕ್ರೋವೇವ್ ಬಳಸಿ ಸ್ವಾದಿಷ್ಟವಾದ ಚಿಕನ್ ಪಲಾವ್ ಮನೆಯಲ್ಲಿಯೇ ತಯಾರಿಸುವ ಬಗೆಯನ್ನು ಇಂದು ನಿಮಗೆ ತಿಳಿಸಲಾಗುತ್ತಿದೆ. ಇದು ಸುಲಭವೂ, ಅಗ್ಗವೂ ಆರೋಗ್ಯಕರವೂ ಆಗಿದೆ ಹಾಗೂ ನಿಮಗೆ ಅಗತ್ಯವಿದ್ದಷ್ಟು ಪ್ರಮಾಣದಲ್ಲಿ ಮಾತ್ರ ತಯಾರಿಸಿಕೊಳ್ಳಲು ಸಾಧ್ಯವಿರುವುದರಿಂದ ಆಹಾರ ಪೋಲಾಗದಂತೆ ತಡೆಯಲೂಬಹುದು. ರುಚಿಯಲ್ಲಿ ಅದ್ವಿತೀಯ ಅಫ್ಘಾನಿ ಚಿಕನ್ ಪಲಾವ್

ಕೆಲವೇ ನಿಮಿಷಗಳಲ್ಲಿ ತಯಾರಿಸಲು ಸಾಧ್ಯವಿರುವ ಕಾರಣ ಕಚೇರಿಯಲ್ಲಿ ಮೈಕ್ರೋವೇವ್ ಇರುವ ಉದ್ಯೋಗಸ್ಥ ಮಹಿಳೆಯರಿಗಂತೂ ಇದೊಂದು ವರದಾನವಾಗಿದೆ. ಅಗತ್ಯವಿರುವ ಸಾಮಾಗ್ರಿಗಳನ್ನು ಬೆಳಿಗ್ಗೆ ಬರುವಾಗ ಮೈಕ್ರೋವೇವ್‌ನಲ್ಲಿ ಬಳಸಬಹುದಾದ ಡಬ್ಬಿಯಲ್ಲಿ ತುಂಬಿಕೊಂಡು ಬಂದು ಮೈಕ್ರೋವೇವ್ ನಲ್ಲಿ ಸೂಕ್ತವಾದ ಕ್ರಮವನ್ನು ಅನುಸರಿಸಿದರೆ ಸಾಕು, ರುಚಿಯಾದ ಪಲಾವ್ ಸಿದ್ಧ. ನಿಮ್ಮ ಸಹೋದ್ಯೋಗಿಗಳಿಗೂ ನೀಡಿ ಇದನ್ನು ನೀವು ಹೇಗೆ ತಯಾರಿಸಿದಿರಿ ಎಂಬು ತಬ್ಬಿಬ್ಬಾಗುವಂತೆ ಮಾಡಿ.

Microwave Recipe For Chicken Pulao

*ಪ್ರಮಾಣ: ಇಬ್ಬರಿಗೆ, ಒಂದು ಹೊತ್ತಿಗಾಗುವಷ್ಟು

*ಸಿದ್ಧತಾ ಸಮಯ: ಸುಮಾರು ಇಪ್ಪತ್ತು ನಿಮಿಷಗಳು (ಮನೆಯಲ್ಲಿ)

*ತಯಾರಿಕಾ ಸಮಯ: ಹನ್ನೊಂದು ನಿಮಿಷಗಳು ಮೈಕ್ರೋವೇವ್ ಹತ್ತಿರ + ಹದಿನಾರು ನಿಮಿಷ ಹತ್ತಿರ ಇರದಿದ್ದರೂ ಸರಿ.

ಅಗತ್ಯವಿರುವ ಸಾಮಾಗ್ರಿಗಳು

1) ಕೋಳಿಮಾಂಸ: ಮುನ್ನೂರು ಗ್ರಾಂ (ಚಿಕ್ಕದಾಗಿ ತುಂಡರಿಸಿದ್ದು)

2) ಬಾಸ್ಮತಿ ಅಕ್ಕಿ: ಇನ್ನೂರು ಗ್ರಾಂ

3) ಒಣಮೆಣಸು: ನಾಲ್ಕು (ಕಾಶ್ಮೀರಿ ಚಿಲ್ಲಿ ಆದರೆ ಎಂಟು)

4) ಹಸಿಮೆಣಸು : ನಾಲ್ಕು

5) ಜೀರಿಗೆ: ಎರಡು ಚಿಕ್ಕ ಚಮಚ

6) ಕಾಳುಮೆಣಸು: ಹತ್ತು ಕಾಳುಗಳು

7) ಚೆಕ್ಕೆ: ಸುಮಾರು ಒಂದಿಂಚಿನ ಎರಡು ತುಂಡುಗಳು

8) ಏಲಕ್ಕಿ : ನಾಲ್ಕು

9) ಮರಾಟಿ ಮೊಗ್ಗು: ಎರಡು

10) ಈರುಳ್ಳಿ: ಎರಡು

11) ಬೆಳ್ಳುಳ್ಳಿ: ಎಂಟು ಎಸಳುಗಳು

12) ಶುಂಠಿ ಸುಮಾರು ಎರಡಿಂಚಿನ ತುಂಡು

13) ಅರಿಶಿನ ಪುಡಿ - ಒಂದು ಚಿಕ್ಕ ಚಮಚ

14) ಜೀರಿಗೆ ಪುಡಿ: ಎರಡು ಚಿಕ್ಕ ಚಮಚ

15) ದಾಲ್ಚಿನ್ನಿ ಎಲೆ: ಒಂದು

16) ತುಪ್ಪ: ಒಂದು ದೊಡ್ಡಚಮಚ

17) ಉಪ್ಪು ರುಚಿಗನುಸಾರ ವೀಕೆಂಡ್ ಸ್ಪೆಷಲ್-ಕೊಹಿನೂರ್ ಚಿಕನ್

ವಿಧಾನ:

1) ಅಕ್ಕಿಯನ್ನು ಚೆನ್ನಾಗಿ ತೊಳೆದು ಸುಮಾರು ಒಂದು ಗಂಟೆ ನೆನೆಸಿಡಿ

2) ಒಂದು ಮೈಕ್ರೋವೇವ್‌ನಲ್ಲಿ ಬಳಸಬಹುದಾದ ಪಾತ್ರೆಯಲ್ಲಿ ತುಪ್ಪಹಾಕಿ ಒಂದು ನಿಮಿಷ 'ಮೈಕ್ರೋ' ಆಯ್ಕೆಯಲ್ಲಿಟ್ಟು ಬಿಸಿಮಾಡಿ

3) ಇನ್ನೊಂದು ಪಾತ್ರೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿ ಶುಂಠಿ, ಕಾಳುಮೆಣಸು, ಒಣಮೆಣಸು, ಹಸಿಮೆಣಸು, ಜೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮಿಕ್ಸಿಯಲ್ಲಿ ಕಡೆಯಿರಿ.

4) ತುಪ್ಪ ಬಿಸಿಯಾಗಿದ್ದ ಪಾತ್ರೆಯಲ್ಲಿ ದಾಲ್ಚಿನ್ನಿ ಎಲೆ, ಮರಾಟಿಮೊಗ್ಗು, ಚೆಕ್ಕೆ ಮತ್ತು ಏಲಕ್ಕಿ ಹಾಕಿ ಮತ್ತೊಮ್ಮೆ ಎರಡು ನಿಮಿಷ 'ಮೈಕ್ರೋ' ಆಯ್ಕೆಯಲ್ಲಿಟ್ಟು ಬಿಸಿಮಾಡಿ

5) ನಂತರ ಇದಕ್ಕೆ ಚಿಕನ್ ತುಂಡುಗಳನ್ನು ಹಾಕಿ ಎರಡು ನಿಮಿಷ ಮೈಕ್ರೋವೇವ್ ಆಯ್ಕೆಯಲ್ಲಿಯೇ ಬಿಸಿಮಾಡಿ.

6) ಇದಕ್ಕೆ ಮಿಕ್ಸಿಯಲ್ಲಿ ಕಡೆದ ಮಸಾಲೆ, ಜೀರಿಗೆ ಮತ್ತು ಅರಿಶಿನ ಪುಡಿ ಹಾಕಿ ಕೊಂಚ ಮಿಶ್ರಣ ಮಾಡಿ.

7) ಈ ಮಿಶ್ರಣವನ್ನು ನಾಲ್ಕು ನಿಮಿಷ ಮೈಕ್ರೋವೇವ್ ನಲ್ಲಿ ಬಿಸಿಮಾಡಿ.

8) ನಂತರ ನೆನೆಸಿಟ್ಟಿದ್ದ ಅಕ್ಕಿಯನ್ನು ಹಾಕಿ ನೀರು ಹಾಕದೇ ಎರಡು ನಿಮಿಷ ಮೈಕ್ರೋವೇವ್ ಆಯ್ಕೆಯಲ್ಲಿ ಬಿಸಿಮಾಡಿ.

9) ಈಗ ಕೊಂಚ ಉಪ್ಪು ಮತ್ತು ಅಕ್ಕಿಯ ಪ್ರಮಾಣದ ಸರಿಯಾಗಿ ಎರಡರಷ್ಟು ಪ್ರಮಾಣದ ನೀರನ್ನು ಹಾಕಿ ಮುಚ್ಚಳ ಮುಚ್ಚಿ. ಬಳಿಕ ಸುಮಾರು ಹದಿನಾರರಿಂದ ಹದಿನೆಂಟು ನಿಮಿಷ ಕಾಲ 640 ಡಿಗ್ರಿ ತಾಪಮಾನದಲ್ಲಿ ಬಿಸಿಮಾಡಿ.

10) ಚಿಕನ್ ಪಲಾವ್ ಈಗ ತಯಾರಾಗಿದೆ. ಬಳಿಕ ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ ಬಿಸಿಬಿಸಿಯಿರುವಂತೆಯೇ ಹಂಚಿಕೊಂಡು ತಿನ್ನಿ.

ಕಿವಿಮಾತು:

ನೀರಿನ ಪ್ರಮಾಣ ಹೆಚ್ಚಾಗದಿರದಂತೆ ಎಚ್ಚರವಹಿಸಿ. ಏಕೆಂದರೆ ಹೆಚ್ಚುವರಿ ನೀರನ್ನು ಚೆಲ್ಲಿದಾಗ ರುಚಿಯೂ ಕೆಡುತ್ತದೆ.

English summary

Microwave Recipe For Chicken Pulao

Chicken pulao is a delicious pulao we would all like to have after a busy day. The problem is that these kind of delicate dishes need a lot of effort which we don't have the time to put in. However, your problem can be solved if you use a simple Indian microwave recipe to prepare this dish. Chicken pulao is even otherwise an easy chicken and rice item to cook but if you cook it in your microwave it gives you the added advantage of of healthy eating.
Story first published: Saturday, October 24, 2015, 13:35 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more