For Quick Alerts
ALLOW NOTIFICATIONS  
For Daily Alerts

ಮೊಸರು- ಚಿಕನ್ ಕಾಂಬಿನೇಷನ್: ಹೆಸರೇ ಬಾಯಲ್ಲಿ ನೀರೂರಿಸುತ್ತಿದೆ..!

By Deepak
|

ಪ್ರೋಟೀನ್ ಅಧಿಕವಾಗಿರುವ ಆಹಾರ ಪದಾರ್ಥಗಳಲ್ಲಿ ಕೋಳಿ ಮಾಂಸ ಸಹ ಒಂದು. ಒಂದು ವೇಳೆ ನಿಮ್ಮ ತೂಕ ಕಡಿಮೆಯಿದ್ದಲ್ಲಿ, ಈ ಮೆದುವಾದ ಮಾಂಸವನ್ನು ಸೇವಿಸುವುದರ ಮೂಲಕ ನೀವು ಪ್ರೋಟೀನ್ ಅನ್ನು ಪಡೆಯಬಹುದು.

ಕೋಳಿ ಮಾಂಸದಲ್ಲಿ ಇನ್ನಿತರ ಪ್ರಯೋಜನಗಳು ಸಹ ಇವೆ. ಇದು ದೇಹದ ಉಷ್ಣತೆಯನ್ನು ಸಹ ಅಧಿಕಗೊಳಿಸುತ್ತದೆ. ತೆಂಗಿನ ಹಾಲಿನ ಜೊತೆಗೆ ತಯಾರಿಸಿದ ಕೋಳಿ ಮಾಂಸವು ಸ್ವಲ್ಪ ವಿಭಿನ್ನವಾಗಿ ಏನಾದರು ಮಾಡಿಕೊಳ್ಳಬೇಕು ಎಂದು ಇಚ್ಛಿಸುವವರಿಗೆ, ಹೇಳಿ ಮಾಡಿಸಿದ ಖಾದ್ಯವಾಗಿರುತ್ತದೆ.

ಇಂದು ನಾವಿಲ್ಲಿ ಹೇಳ ಹೊರಟಿರುವುದು ಅತ್ಯಂತ ರುಚಿಕರವಾದ ಮತ್ತು ಸುಲಭವಾಗಿ ತಯಾರಿಸಬಹುದಾದ ಮೊಸರು ಬೆರೆಸಿ ಮಾಡುವ ಚಿಕನ್ ರೆಸಿಪಿ! ಈ ರೆಸಿಪಿಯ ವಿಶೇಷತೆಯೆಂದರೆ, ಕೊಬ್ಬಿನಂಶ ಕಡಿಮೆ ಇದ್ದು, ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇದು ಸೂಕ್ತವಾದ ರೆಸಿಪಿಯಾಗಿದೆ. ಇನ್ನೇಕೆ ತಡ? ಬನ್ನಿ ರೆಸಿಪಿ ಮಾಡುವ ವಿಧಾನವನ್ನು ನೋಡೋಣ...

Low Fat Chicken Curry With Curd Recipe

ಇಬ್ಬರಿಗೆ ಬಡಿಸಬಹುದು
*ತಯಾರಿಕೆಗೆ ತಗುಲುವ ಸಮಯ: 20 ನಿಮಿಷಗಳು
*ಅಡುಗೆಗೆ ತಗುಲುವ ಸಮಯ: 25 ನಿಮಿಷಗಳು

ಅಗತ್ಯವಾದ ಪದಾರ್ಥಗಳು
*ಕೋಳಿ ಮಾಂಸ - 1/2 ಕೆ.ಜಿ
*ಖಾರದ ಪುಡಿ - 2 ಟೀ.ಚಮಚ
*ಸಾಸಿವೆ ಬೀಜ - 1 ಟೀ.ಚಮಚ
*ಅರಿಶಿನ ಪುಡಿ - 1 ಟೀ.ಚಮಚ
*ಕೊತ್ತೊಂಬರಿ ಪುಡಿ- 1 ಟೀ.ಚಮಚ
*ಶುಂಠಿ-ಬೆಳ್ಳುಳ್ಳಿ ಪೇಸ್ಟ್ - 1 ಟೀ.ಚಮಚ
*ಈರುಳ್ಳಿ - 1 (ಕತ್ತರಿಸಿದಂತಹುದು)
*ಹಸಿ ಮೆಣಸಿನಕಾಯಿ - 1 (ಕತ್ತರಿಸಿದ)
*ಎಣ್ಣೆ - 2 ಟೀ.ಚಮಚ
*ನೀರು - 1 ಕಪ್
*ಮೊಸರು - 1 ಕಪ್
*ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
*ಮೊದಲು ಒಂದು ಕುಕ್ಕರಿನಲ್ಲಿ ಎಣ್ಣೆಯನ್ನು ಹಾಕಿ ಕಾಯಿಸಿ. ಬಾಣಲೆ ಕಾದ ಮೇಲೆ ಅದಕ್ಕೆ ಸಾಸಿವೆ ಕಾಳುಗಳನ್ನು ಸಿಡಿಸಿ, ತದನಂತರ ಹಸಿ ಮೆಣಸಿನ ಕಾಯಿಗಳನ್ನು ಹಾಕಿ ಹುರಿದುಕೊಳ್ಳಿ.
*2 ಸೆಕೆಂಡ್‌ಗಳ ನಂತರ, ಇದಕ್ಕೆ ಕತ್ತರಿಸಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ಚೆನ್ನಾಗಿ ಹುರಿದುಕೊಳ್ಳಿ.
*ಈಗ ಇದಕ್ಕೆ ಖಾರದಪುಡಿ, ಅರಿಶಿನ ಪುಡಿ ಮತ್ತು ಕೊತ್ತೊಂಬರಿ ಪುಡಿಯನ್ನು ಬೆರೆಸಿ ಹುರಿಯಿರಿ.
*ಇನ್ನು ನೀರನ್ನು ಬೆರೆಸಿ, ಇತರ ಪದಾರ್ಥಗಳ ಜೊತೆಗೆ ಕುಕ್ಕರಿನಲ್ಲಿಟ್ಟು ಬೇಯಿಸಿ.
*ಇದಕ್ಕೆ ಕೋಳಿ ಮಾಂಸದ ತುಂಡುಗಳನ್ನು ಸಹ ಬೆರೆಸಿ, ಕುಕ್ಕರಿನ ಮುಚ್ಚಳವನ್ನು ಮುಚ್ಚಿ. ಇದನ್ನು 4 ವಿಷಲ್ ಬರುವವರೆಗೆ ಬೇಯಿಸಿ ಮತ್ತು ನಂತರ ಇದನ್ನು ಒಲೆಯಿಂದ ಕೆಳಗಿಳಿಸಿ.
*ಈಗ ಇದಕ್ಕೆ ಮೊಸರನ್ನು ಸೇರಿಸಿ, ಮತ್ತೆ 5 ನಿಮಿಷ ಕಡಿಮೆ ಉರಿಯಲ್ಲಿ ಬೇಯಿಸಿ.

ಪೋಷಕಾಂಶದ ಸಲಹೆ
ಕೋಳಿಮಾಂಸವು ಮೆದುವಾಗಿರುತ್ತದೆ ಮತ್ತು ಮೊಸರನ್ನು ಇದಕ್ಕೆ ಬೆರೆಸಿದಾಗ ಜೀರ್ಣಕ್ರಿಯೆ ಹೆಚ್ಚಾಗುತ್ತದೆ.

ಸಲಹೆ
ಕೋಳಿ ಮಾಂಸವನ್ನು ಕೇವಲ 4 ವಿಷಲ್‍ವರೆಗು ಮಾತ್ರ ಬೇಯಿಸಿ, ಅದಕ್ಕಿಂತ ಹೆಚ್ಚು ಬೇಯಿಸಬೇಡಿ.

English summary

Low Fat Chicken Curry With Curd Recipe

Chicken is one of the best meats you can consume when your thinking about weight loss. Boldsky shares with you simple chicken delight treat with curd. The best thing about this recipe is the way the curd mixes with the gravy of the chicken.
X
Desktop Bottom Promotion