Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಕತ್ ರುಚಿ ಈ ಭೇಲ್ ಪುರಿ ಸ್ಯಾಂಡ್‌ವಿಚ್
ಸಾಮಾನ್ಯವಾಗಿ ಹಾದಿಬದಿ ಅಥವಾ ಕೆಲವು ಹೋಟೆಲುಗಳಲ್ಲಿ ಲಭ್ಯವಿರುವ ಭೇಲ್ ಪುರಿ ಸ್ಯಾಂಡ್ವಿಚ್ ಮನೆಯಲ್ಲಿ ತಯಾರಿಸಲು ಕೊಂಚ ಕಷ್ಟವೇ ಸರಿ. ಆದರೆ ಚಾಟ್ ಮಸಾಲಾಗಳಿಗೆ ಮನಸೋತವರು ಅನಾರೋಗ್ಯಕರವಾದರೂ ಸರಿ, ಹೊರಗಿನಿಂದ ತಿನ್ನಲು ಇಷ್ಟಪಡುತ್ತಾರೆ. ನಿಮ್ಮ ಮನೆಯ ಸದಸ್ಯರೂ ಈ ಪರಿಯನ್ನು ಅನುಸರಿಸುತ್ತಿದ್ದರೆ ಅವರನ್ನು ಇದರಿಂದ ವಿಮುಖರನ್ನಾಗಿಸಲು ಸಾಧ್ಯವಿಲ್ಲ. ಬದಲಿಗೆ ಕೊಂಚ ತ್ರಾಸ ಎನಿಸಿದರೂ ರುಚಿಕರವಾದ ಭೇಲ್ ಪುರಿ ಸ್ಯಾಂಡ್ವಿಚ್ ಅನ್ನು ಮನೆಯಲ್ಲಿಯೇ ತಯಾರಿಸಬಹುದು. ಅಲ್ಲದೇ ಈಗ ಇದನ್ನು ತಯಾರಿಸುವ ವಿಧಾನವೂ ಸುಲಭವಾಗಿದೆ.
ಇದರ ಇನ್ನೊಂದು ಉತ್ತಮ ಗುಣವೆಂದರೆ ಬೆಳಗಿನ ಉಪಾಹಾರಕ್ಕೆ ತಯಾರಿಸಿದ ಬಳಿಕ ಮಧ್ಯಾಹ್ನದ ಊಟಕ್ಕೆ ಬುತ್ತಿ ಕಟ್ಟಿಕೊಂಡೂ ಹೋಗಬಹುದು. ಬನ್ನಿ, ಸ್ವಾದಿಷ್ಟವಾದ ಭೇಲ್ ಪುರಿ ಸ್ಯಾಂಡ್ವಿಚ್ ತಯಾರಿಸುವ ವಿಧಾನವನ್ನು ಈಗ ಕಲಿಯೋಣ

*ಪ್ರಮಾಣ: ಐವರಿಗೆ, ಒಂದು ಹೊತ್ತಿಗಾಗುವಷ್ಟು
*ಸಿದ್ಧತಾ ಸಮಯ: ಇಪ್ಪತ್ತು ನಿಮಿಷಗಳು
*ತಯಾರಿಕಾ ಸಮಯ: ಮೂವತ್ತು ನಿಮಿಷಗಳು
ಅಗತ್ಯವಿರುವ ಸಾಮಾಗ್ರಿಗಳು:
*ಮಂಡಕ್ಕಿ: ನೂರು ಗ್ರಾಂ
*ಈರುಳ್ಳಿ: ಒಂದು (ಚಿಕ್ಕದಾಗಿ ಹೆಚ್ಚಿದ್ದು)
*ಟೊಮೇಟೊ: ಒಂದು (ಚಿಕ್ಕದಾಗಿ ಹೆಚ್ಚಿದ್ದು)
*ಆಲುಗಡ್ಡೆ: ಒಂದು (ಬೇಯಿಸಿ, ಚಿಕ್ಕದಾಗಿ ಕತ್ತರಿಸಿದ್ದು)
*ಕ್ಯಾರೆಟ್ : ಒಂದು (ತುರಿದದ್ದು)
*ಪುದಿನಾ ಚಟ್ನಿ: ಒಂದು ದೊಡ್ಡ ಚಮಚ
*ಉಪ್ಪು: ರುಚಿಗನುಸಾರ
*ಲಿಂಬೆರಸ: ಅಗತ್ಯಕ್ಕನುಸಾರ
*ಸೇವ್ ಪುರಿ: ಅಲಂಕಾರಕ್ಕೆ ಅಗತ್ಯವಿದ್ದಷ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು, ದಂಟು ನಿವಾರಿಸಿ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿದ್ದು
ಪುದಿನಾ ಚಟ್ನಿ ತಯಾರಿಸಲು:
*ಪುದಿನಾ ಎಲೆಗಳು: ಒಂದು ಕಟ್ಟು
*ಕೊತ್ತಂಬರಿ ಸೊಪ್ಪು: ಒಂದು ಕಟ್ಟು
*ಹಸಿಮೆಣಸು: ಚಿಕ್ಕದಾದರೆ ಎರಡು, ದೊಡ್ಡದಾದರೆ ಒಂದು ಉದ್ದಕ್ಕೆ ಸೀಳಿದ್ದು
ಸ್ಯಾಂಡ್ವಿಚ್ ಬ್ರೆಡ್: ಹತ್ತು ಹೋಳುಗಳು (ಬನ್ ಆದರೂ ಸರಿ)
ವಿಧಾನ:
1) ಮೊದಲು ಪುದಿನಾ ಚಟ್ನಿಯನ್ನು ತಯಾರಿಸಿಕೊಳ್ಳಿ. ಇದಕ್ಕಾಗಿ ಪುದಿನಾ ಎಲೆ, ಕೊತ್ತಂಬರಿ ಸೊಪ್ಪು ಮತ್ತು ಹಸಿಮೆಣಸನ್ನು ನಯವಾಗಿ ಮಿಕ್ಸಿಯಲ್ಲಿ ಅರೆಯಿರಿ. ಅರೆಯುವಾಗ ಕೊಂಚ ನೀರು ಮತ್ತು ಉಪ್ಪನ್ನು ಸೇರಿಸಿ.
2) ಚಟ್ನಿ ತಯಾರಿಸಿದ ಬಳಿಕ ಬದಿಗೆ ತೆಗೆದಿಡಿ. ಇದು ಬ್ರೆಡ್ ಹೋಳುಗಳಿಗೆ ಸವರಲು ಅಗತ್ಯವಿದೆ.
3) ಒಂದು ಪಾತ್ರೆಯಲ್ಲಿ ಎಲ್ಲಾ ತರಕಾರಿ, ಈರುಳ್ಳಿ, ಆಲುಗಡ್ಡೆ, ಟೊಮೇಟೋ, ಕ್ಯಾರೆಟ್ ಮತ್ತು ಮಂಡಕ್ಕಿ ಸೇರಿಸಿ ಚೆನ್ನಾಗಿ ಕಲಸಿ.
4) ಈ ಪಾತ್ರೆಗೆ ಒಂದು ದೊಡ್ಡ ಚಮಚ ಪುದಿನಾ ಚಟ್ನಿ, ಲಿಂಬೆರಸ, ಉಪ್ಪು ಸೇರಿಸಿ ದೊಡ್ಡ ಚಮಚ ಬಳಸಿ ಕಲಸಿ
5) ಇದಕ್ಕೆ ಸೇವ್ ಪುರಿ ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕಲಸಿ.
6) ಈಗ ಸಾಂಡ್ವಿಚ್ ತಯಾರಿಸಲು ಒಂದು ಹೋಳು ಬ್ರೆಡ್‌ನ ಒಂದು ಭಾಗಕ್ಕೆ (ಅಥವಾ ಬನ್‌ನ ಒಳಭಾಗ) ಕೊಂಚ ಚಟ್ನಿ ಸವರಿ.
7) ಸವರಿದ ಹೋಳಿನ ಮೇಲೆ ಭೇಲ್ ಪುರಿಯನ್ನು ದಪ್ಪನಾಗಿ ಹರಡಿ.
8) ಈಗ ಇನ್ನೊಂದು ಹೋಳನ್ನು ಇದರ ಮೇಲಿರಿಸಿ. ರುಚಿಯಾದ ಭೇಲ್ ಪುರಿ ಸ್ಯಾಂಡ್ವಿಚ್ ಈಗ ತಯಾರಾಗಿದೆ. ಇದನ್ನು ಹಸಿರು ಚಟ್ನಿಯೊಂದಿಗೆ ಆಸ್ವಾದಿಸಿ.



Click it and Unblock the Notifications
