For Quick Alerts
ALLOW NOTIFICATIONS  
For Daily Alerts

ರಂಜಾನ್ ಹಬ್ಬಕ್ಕೆ ಸ್ಪೆಷೆಲ್-ಚಿಕನ್ ಹುಸೈನಿ

|
Chicken Hussainy Ramzan Recipe
ಸಮಸ್ತ ಮುಸ್ಲೀಂ ಬಾಂಧವರಿಗೆ ಕನ್ನಡ ಬೋಲ್ಡ್ ಸ್ಕೈ ಕಡೆಯಿಂದ ರಂಜಾನ್ ಹಬ್ಬದ ಶುಭಾಶಯಗಳು. ಒಂದು ತಿಂಗಳ ಉಪವಾಸದ ನಂತರ ರಂಜಾನ್ ಹಬ್ಬದಂದು ಅನೇಕ ಬಗೆಯ ವಿಶೇಷ ಅಡುಗೆಗಳನ್ನು ತಯಾರಿಸಲಾಗುವುದು. ಅದರಲ್ಲೂ ಮಟನ್, ಚಿಕನ್ ಬಳಸಿ ಅನೇಕ ರುಚಿಕರವಾದ ಅಡುಗೆಗಳನ್ನು ತಯಾರಿಸುವ ಸಿದ್ಧತೆ ಭರದಿಂದ ನಡೆಯುತ್ತಿರುತ್ತದೆ. ಇವತ್ತು ಚಿಕನ್ ಬಳಸಿ ಮಾಮೂಲಿ ರುಚಿಯ ಅಡುಗೆ ತಯಾರಿಸುವುದಕ್ಕಿಂತ ಸ್ವಲ್ಪ ವಿಭಿನ್ನವಾಗಿ ತಯಾರಿಸಲು ಬಯಸುವುದಾದರೆ ಈ ಚಿಕನ್ ಹುಸೈನಿ ರೆಸಿಪಿ ಟ್ರೈ ಮಾಡಬಹುದು.

ಬೇಕಾಗುವ ಸಾಮಾಗ್ರಿಗಳು:
* ಚಿಕನ್ ಒಂದು ಕೆಜಿ
* ದೊಡ್ಡ ಈರುಳ್ಳಿ 4 (ಕತ್ತರಿಸಿದ್ದು)
* ಹಸಿ ಮೆಣಸಿನ ಕಾಯಿ 8
* ಒಂದು ಚಿಕ್ಕ ತುಂಡು ಶುಂಠಿ (ಜಜ್ಜಿದ ಶುಂಠಿ)
* ಟೊಮೆಟೊ 2 (ಕತ್ತರಿಸಿದ್ದು)
* ಬೆಳ್ಳುಳ್ಳಿ 8-10 ಎಸಳು
* ಅರಿಶಿಣ 1 ಚಮಚ
* ಮೆಣಸಿನ ಪುಡಿ 2 ಚಮಚ
* ಚಕ್ಕೆ ಮತ್ತು ಲವಂಗ 1/2 ಚಮಚ
* ಜೀರಿಗೆ 1/4 ಚಮಚ
* ಏಲಕ್ಕಿ 2
* ಕೊತ್ತಂಬರಿ ಸೊಪ್ಪು, ಪುದೀನಾ ಸೊಪ್ಪು ಮತ್ತು ಕರಿಬೇವಿನ ಎಲೆ
* ಎಣ್ಣೆ 1 ಚಮಚ
* ರುಚಿಗೆ ತಕ್ಕ ಉಪ್ಪು

ತಯಾರಿಸುವ ವಿಧಾನ:

1. ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಅದಕ್ಕೆ ರುಚಿಗೆ ತಕ್ಕ ಉಪ್ಪು, ಅರಿಶಿಣ, ಮೆಣಸಿನ ಪುಡಿ, ಚಕ್ಕೆ, ಲವಂಗ, ಏಲಕ್ಕಿ, ಜೀರಿಗೆ ಪುಡಿ ಹಾಕಿ ಮಿಶ್ರಣ ಮಾಡಬೇಕು.

2. ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನ ಕಾಯಿ , ಜಜ್ಜಿದ ಶುಂಠಿ, ಜಜ್ಜಿದ ಬೆಳ್ಳುಳ್ಳಿ ಹಾಕಿ , ಈರುಳ್ಳಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಈಗ ಸ್ವಲ್ಪ ಪುದೀನಾ ಮತ್ತು ಕರಿಬೇವಿನ ಎಲೆ ಹಾಕಬೇಕು. ನಂತರ ಕತ್ತರಿಸಿದ ಟೊಮೆಟೊ ಹಾಕಿ, ಟೊಮೆಟೊ ಮೆತ್ತಗಾಗುವವರೆಗೆ ಹುರಿಯಬೇಕು. ನಂತರ ಮಸಾಲೆ ಮಿಕ್ಸ್ ಮಾಡಿದ ಚಿಕನ್ ಹಾಕಿ ಬೇಯಿಸಿಬೇಕು (ಇದರಲ್ಲಿ ಉಪ್ಪು ಸರಿಯಾಗಿ ಇದೆಯೇ ಎಂದು ನೋಡಿ).

3. ಚಿಕನ್ ಬೆಂದ ನಂತರ ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಿದರೆ ಚಿಕನ್ ಹುಸೈನಿ ರೆಡಿ.
(ಇದನ್ನು ನೀರು ಹಾಕದೆ ತಯಾರಿಸಬೇಕು, ಚಿಕನ್ ಹುಸೈನಿ ಬೇಯಿಸುವಾಗ ಅದು ತಳ ಹಿಡಿಯದಿರಲು ಆಗಾಗ ಸೌಟ್ ನಿಂದ ಆಡಿಸುತ್ತಾ ಇರಬೇಕು).

English summary

Chicken Hussainy Ramzan Recipe | Variety Of Chicken Recipe | ರಂಜಾನ್ ಹಬ್ಬಕ್ಕೆ ಚಿಕನ್ ಹುಸೈನಿ ರೆಸಿಪಿ | ಅನೇಕ ಬಗೆಯ ಚಿಕನ್ ರೆಸಿಪಿ

In the special vocation of Ramzan if you want to prepare special food from chicken you can try this chicken hussiany recipe. This recipe very easy to prepare and taste to have.
X
Desktop Bottom Promotion