For Quick Alerts
ALLOW NOTIFICATIONS  
For Daily Alerts

ಎಲ್ಲರಿಗೂ ರುಚಿಸೋ ಮಲ್ಬೆರಿ ಮಿಲ್ಕ್ ಶೇಕ್

Posted By:
|

ಕೆಲವು ಹಣ್ಣುಗಳು ಭಾರತದ ಮಾರುಕಟ್ಟೆಗಳಲ್ಲಿ ಸಿಗುವುದಿಲ್ಲ. ಮಾರಾಟ ಪ್ರಕ್ರಿಯೆಗೆ ಸರಿಯಾದ ವ್ಯವಸ್ಥೆ ಲಭ್ಯವಿಲ್ಲದೇ ಇರುವುದು ಕೂಡ ಇದಕ್ಕೆ ಪ್ರಮುಖ ಕಾರಣ. ಅಂತಹ ಹಣ್ಣುಗಳಲ್ಲಿ ಮಲ್ಬೆರಿ ಕೂಡ ಒಂದು.

ದೇಶದ ಹಲವು ಪ್ರದೇಶಗಳಲ್ಲಿ ಮಲ್ಬೆರಿ ಅಥವಾ ಹಿಪ್ಪುನೇರಳೆ ಅಥವಾ ಆಮ್ರ ಹಣ್ಣು ಎಂದು ಕರೆಯುವ ಹಣ್ಣು ಬೆಳೆಯುತ್ತದೆಯಾದರೂ ಅದು ಮಾರುಕಟ್ಟೆಯನ್ನು ಪ್ರವೇಶಿಸುವುದಿಲ್ಲ.

Mulberri Milkshake Recipe

ಆರೋಗ್ಯದ ದೃಷ್ಟಿಯಿಂದ ಹಲವು ಲಾಭಗಳನ್ನು ನೀಡುವ ಈ ಹಣ್ಣುಗಳ ಉಪಯೋಗವನ್ನು ಬೆಳೆಯುವವರೂ ಕೂಡ ತಿಳಿದಿಲ್ಲ. ರಕ್ತದ ಕಣಗಳ ವೃದ್ಧಿಗೆ ಸಾಕಷ್ಟು ಪ್ರಯೋಜನ ನೀಡುವ ಈ ಹಣ್ಣು ತಿನ್ನಲು ಬಲು ರುಚಿ. ಕೇವಲ ತಿನ್ನುವುದು ಮಾತ್ರ ಅನೇಕ ರೀತಿಯ ರೆಸಿಪಿಯನ್ನು ಕೂಡ ಇದರಿಂದ ಮಾಡಬಹುದು. ವಿದೇಶಗಳಲ್ಲಿ ಮಲ್ಬೆರಿಯನ್ನು ಕೇಕ್ ಗಳ ತಯಾರಿಕೆಯಲ್ಲೂ ಕೂಡ ಬಳಸುತ್ತಾರೆ. ನಾವಿಲ್ಲಿ ನಿಮಗೆ ಸಿಂಪಲ್ ಆಗಿ ಮಲ್ಬೆರಿಯಿಂದ ಮಿಲ್ಕ್ ಶೇಕ್ ತಯಾರಿಸುವುದು ಹೇಗೆ ಎಂದು ತಿಳಿಸುತ್ತಿದ್ದೇವೆ.

ಒಂದು ವೇಳೆ ನಿಮ್ಮ ಮನೆಯ ಸುತ್ತಮುತ್ತ ಎಲ್ಲಿಯಾದರೂ ಮಲ್ಬೆರಿ ಹಣ್ಣುಗಳನ್ನು ಗಮನಿಸಿದರೆ ಖಂಡಿತ ಅದನ್ನು ವೇಸ್ಟ್ ಆಗಲು ಬಿಡಬೇಡಿ. ಬದಲಾಗಿ ಮಿಲ್ಕ್ ಶೇಕ್ ತಯಾರಿಸಿ. ಮಕ್ಕಳ ಆರೋಗ್ಯಕ್ಕೆ ಇದು ಬಹಳ ಪ್ರಯೋಜನ ನೀಡುತ್ತದೆ.

Mulberri Milkshake Recipe ಮಲ್ಬೆರಿ ಮಿಲ್ಕ್ ಶೇಕ್
Mulberri Milkshake Recipe ಮಲ್ಬೆರಿ ಮಿಲ್ಕ್ ಶೇಕ್
Prep Time
3 Mins
Cook Time
3M
Total Time
3 Mins

Recipe By: Sushma

Recipe Type: Veg

Serves: 1

Ingredients
  • ಬೇಕಾಗುವ ಸಾಮಗ್ರಿಗಳು:

    ಮಲ್ಬೆರಿ ಹಣ್ಣುಗಳು- 25 ರಿಂದ 30

    ಹಾಲು - ಒಂದು ಲೋಟ

    ಜೇನುತುಪ್ಪ - ಒಂದು ಸ್ಪೂನ್

    ಸಕ್ಕರೆ - 3 ಸ್ಪೂನ್

Red Rice Kanda Poha
How to Prepare
  • ಮಾಡುವ ವಿಧಾನ:

    ಮಲ್ಬೆರಿ ಹಣ್ಣುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ.

    ನಂತರ ಅವುಗಳನ್ನು ಕೈಯಲ್ಲಿ ಸ್ಮ್ಯಾಶ್ ಮಾಡಿ.

    ಅದಕ್ಕೆ ಒಂದು ಲೋಟ ಹಾಲು, ಮೂರು ಸ್ಪೂನ್ ಸಕ್ಕರೆ,ಒಂದು ಚಮಚ ಜೇನುತುಪ್ಪ ಸೇರಿಸಿ ಚೆನ್ನಾಗಿ ಕದಡಿದರೆ ಮಿಕ್ಸ್ ಶೇಕ್ ಸಿದ್ಧವಾಗುತ್ತದೆ.

    ಹೀಗೆ ಮಾಡುವುದರಿಂದ ಮಲ್ಬೆರಿ ಹಣ್ಣುಗಳು ಪಲ್ಪಿಪಲ್ಪಿಯಾಗಿ ಬಾಯಿಗೆ ಸಿಗುವುದರಿಂದ ಮಕ್ಕಳಿಗೆ ಕುಡಿಯುವುದಕ್ಕೆ ಹೆಚ್ಚು ಇಷ್ಟವಾಗುತ್ತದೆ.

    ಇನ್ನು ಹಣ್ಣುಗಳು, ಹಾಲು, ಸಕ್ಕರೆಯನ್ನು ಮಿಕ್ಸಿ ಮಾಡಿಕೊಂಡು ನಂತರ ಒಂದು ಚಮಚ ಜೇನುತುಪ್ಪ ಸೇರಿಸಿ ಕೂಡ ಮಿಲ್ಕ್ ಶೇಕ್ ಮಾಡಬಹುದು. ಆದರೆ ಇದರಲ್ಲಿ ಪಲ್ಪ್ ನಂತೆ ಹಣ್ಣುಗಳು ಬಾಯಿಗೆ ಸಿಗದೇ ಎಲ್ಲವೂ ಕೂಡ ನುಣ್ಣಗೆ ರುಬ್ಬಿರುತ್ತದೆ. ನಿಮ್ಮಗೆ ಯಾವ ವಿಧಾನ ಇಷ್ಟವೆನಿಸುತ್ತದೆಯೋ ಹಾಗೆ ತಯಾರಿಸಿಕೊಳ್ಳಬಹುದು. ನಾವಿಲ್ಲಿ ಮೊದಲನೇ ವಿಧಾನವನ್ನು ಅನುಸರಿಸಿದ್ದೇವೆ.

Instructions
  • ಪ್ರಯೋಜನಗಳು ಕಣ್ಣುಗಳ ಆರೋಗ್ಯ ಹೆಚ್ಚಿಸುವುದಕ್ಕೆ ಇದು ಪ್ರಯೋಜನಕಾರಿ . ವಿಟಮಿನ್ ಸಿ ಅಂಶ ಇದರಲ್ಲಿ ಹೇರಳವಾಗಿರುತ್ತದೆ . ಮಲಬದ್ಧತೆ ಸಮಸ್ಯೆ ಇರುವವರಿಗೆ ಒಳ್ಳೆಯದು . ರಕ್ತಕಣಗಳನ್ನು ಹೆಚ್ಚಿಸುವಲ್ಲಿ ಸಹಕಾರಿ ಮತ್ತು ರಕ್ತದ ಸಂಚಲನವನ್ನು ಅಧಿಕಗೊಳಿಸುತ್ತದೆ. . ದೇಹಕ್ಕೆ ತಂಪಾಗುತ್ತದೆ. . ದೇಹ ತೂಕ ಇಳಿಸುವುದರಲ್ಲೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. .ಜೀರ್ಣಕ್ರಿಯೆ ಹೆಚ್ಚಿಸುತ್ತದೆ. ಇದರಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಬಹಳ ಕಡಿಮೆ ಇರುತ್ತದೆ.
Nutritional Information
[ 3.5 of 5 - 72 Users]
X
Desktop Bottom Promotion