Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೆಕ್ಕರಿಕೆ ಚಿಗುರೆಲೆಗಳ ತಂಬುಳಿ
ಕೆಲವು ನಮ್ಮ ಸುತ್ತಮುತ್ತಲೇ ಇರುವ ಗಿಡಗಳೇ ಆಗಿದ್ದರೂ ಅವುಗಳ ಪ್ರಯೋಜನ ನಮಗೆ ತಿಳಿದಿರುವುದಿಲ್ಲ. ನೆಕ್ಕರಿಕೆಯೂ ಹಾಗೆಯೇ ಆಗಿರುವ ಸಸ್ಯಸಂಕುಲದಲ್ಲಿ ಒಂದೆನಿಸಿದೆ. ಪಶ್ಚಿಮ ಘಟ್ಟಗಳಲ್ಲಿ ಹೇರಳವಾಗಿ ಲಭ್ಯವಿದ್ದರೂ ಮಾರುಕಟ್ಟೆ ಪ್ರವೇಶಿಸುವುದಿಲ್ಲ. ಜನರಿಗೆ ಇರದ ಪ್ರಯೋಜನ ತಿಳಿದಿಲ್ಲ. ವಿದೇಶದಲ್ಲಿ ಬಳಕೆಯಲ್ಲಿದ್ದರೂ ನಮ್ಮಲ್ಲಿ ಅಪರಿಚಿತವೆನಿಸಿರುವ ಸಸ್ಯ.

ನೆಕ್ಕರಿಕೆ ಚಿಗುರೆಲೆಗಳು ಆರೋಗ್ಯಕ್ಕೆ ಬಹಳ ಪ್ರಯೋಜನ ನೀಡುವ ಎಲೆಗಳಾಗಿವೆ. ಇಂಡೋನೇಷಿಯಾದ ಜನ ಇದನ್ನು ತಮ್ಮ ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ ಎಂದು ಗೂಗಲ್ ತಿಳಿಸುತ್ತದೆ. ಅನೇಕರು ಇದರ ಹಣ್ಣುಗಳನ್ನು ಕೇಕ್ ಗಳ ತಯಾರಿಕೆಯಲ್ಲಿ ಡ್ರೈಫ್ರೂಟ್ಸ್ ಆಗಿ ಬಳಸುತ್ತಾರಂತೆ.

ನಾವಿಲ್ಲಿ ನೆಕ್ಕರಿಕೆ ಚಿಗುರೆಲೆಗಳಿಂದ ತಂಬಳಿ ತಯಾರಿಸುವುದು ಹೇಗೆ ಎಂದು ತಿಳಿಸಿಕೊಡುತ್ತಿದ್ದೇವೆ.
ಈ ಗಿಡವನ್ನು Melastoma malabathricum ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಾಡು ಸಸ್ಯವೆಂದೇ ಹೇಳಬಹುದು. ಈ ಗಿಡದಲ್ಲಿ ನೀಲಿ ಅಥವಾ ಪಿಂಕ್ ಎಂದು ಹೇಳಬಹುದಾದ ಬಣ್ಣದ ಹೂವುಗಳಾಗುತ್ತದೆ.

ಇದರ ಎಲೆಗಳು,ಬೇರುಗಳು, ತೊಗಟೆ ಸೇರಿದಂತೆ ಸಸ್ಯದ ಎಲ್ಲಾ ಭಾಗಗಳೂ ಕೂಡ ಔಷಧೀಯ ವಸ್ತುಗಳಾಗಿವೆ.ನಮ್ಮ ದೇಶದಲ್ಲಿ ಲಭ್ಯವಿರುವ ಅಂದಾಜು 4000 ಸಾಂಬಾರ ಪದಾರ್ಥಗಳಲ್ಲಿ ನೆಕ್ಕರಿಯೂ ಒಂದು.

ಹಾಗಾದ್ರೆ ತಂಬುಳಿ ಮಾಡುವುದು ಹೇಗೆ ತಿಳಿದುಕೊಳ್ಳೋಣ.
Recipe By: Sushma
Recipe Type: Tambuli
Serves: 4
-
ಬೇಕಾಗುವ ಸಾಮಗ್ರಿಗಳು:
ನೆಕ್ಕರಿಕೆ ಚಿಗುರೆಲೆಗಳು- ಒಂದು ಮುಷ್ಠಿ
ಕಾಳುಮೆಣಸು- ಐದರಿಂದ ಆರು ಕಾಳುಗಳು
ಜೀರಿಗೆ- ಒಂದು ಸ್ಪೂನ್
ಮಜ್ಜಿಗೆ- ಅರ್ಧ ಲೀಟರ್
ತೆಂಗಿನತುರಿ- ಒಂದು ಮುಷ್ಟಿ
ಬೆಲ್ಲ- ನಾಲ್ಕೈದು ಗೋಲಿ ಗಾತ್ರದಷ್ಟು
ಉಪ್ಪು- ರುಚಿಗೆ ತಕ್ಕಷ್ಟು
ಸಾಸಿವೆ- ಅರ್ಧ ಸ್ಪೂನ್
ಕೆಂಪುಮೆಣಸು_1
-
ಮಾಡುವ ವಿಧಾನ:
ಮೊದಲಿಗೆ ಎರಡು ಸ್ಪೂನ್ ಅಡುಗೆ ಎಣ್ಣೆಗೆ ಅರ್ಧ ಸ್ಪೂನ್ ಜೀರಿಗೆ, ಕಾಳುಮೆಣಸು ಹಾಕಿ ಸ್ವಲ್ಪ ಹುರಿಯಿರಿ.
ನಂತರ ಅದಕ್ಕೆ ಹೆಚ್ಚಿದ ನೆಕ್ಕರಿಕೆ ಚಿಗುರೆಲೆಗಳನ್ನು ಹಾಕಿ ಬಾಡಿಸಿ.
ಇದಕ್ಕೆ ತೆಂಗಿನತುರಿ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ತಂಬಳಿ ಚಿಗುಟಾಗಿ ಇರಬಾರದು ಎನ್ನಿಸುವವರು ರಸವನ್ನು ಸೋಸಿಕೊಳ್ಳಬಹುದು ಅಥವಾ ಹಾಗೆಯೇ ಬಳಸಲೂ ಬಹುದು.
ರುಬ್ಬಿದ ಮಿಶ್ರಣಕ್ಕೆ ಕಡೆದ ಮಜ್ಜಿಗೆಯನ್ನು ಸೇರಿಸಿ.
ಉಪ್ಪು,ಬೆಲ್ಲ ಹಾಕಿ ಕದಡಿ.
ನಂತರ ಜೀರಿಗೆ,ಸಾಸಿವೆ, ಕೆಂಪುಮೆಣಸು ಹಾಕಿ ತಂಬಳಿಗೆ ಒಗ್ಗರಣೆ ಮಾಡಿದರೆ ನೆಗ್ಗರಿಕೆ ಚಿಗುರೆಲೆಗಳ ತಂಬಳಿ ಸಿದ್ಧವಾಗುತ್ತದೆ.
- ಗಾಯಗಳ ನಿವಾರಣೆಗೆ ಇದು ಸಹಕಾರಿ. ಮಲವಿಸರ್ಜನೆ ಸಮಸ್ಯೆಗೆ ಪರಿಣಾಮಕಾರಿ. ಮೂತ್ರಕೋಶದ ಬಲವರ್ಧನೆಗೆ ಇದನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬಾಣಂತಿಯರಿಗೆ ಈ ತಂಬಳಿ ಬಡಿಸುವುದು ವಾಡಿಕೆಯಲ್ಲಿದೆ. ಗರ್ಭಕೋಶ ಸಂಬಂಧಿ ಸಮಸ್ಯೆಗಳ ನಿವಾರಣೆಗೆ ಇದನ್ನು ಬಳಸಲಾಗುತ್ತದೆ. ಮುಟ್ಟಿನ ದಿನಗಳಲ್ಲಿ ಹೆಚ್ಚಿನ ರಕ್ತಸ್ರಾವವಾಗುತ್ತಿದ್ದರೆ ಈ ತಂಬಳಿ ಮಾಡಿ ಸೇವಿಸುವುದರಿಂದಾಗಿ ಪರಿಹಾರ ಪಡೆಯಬಹುದು. ಪೈಲ್ಸ್ ಸಮಸ್ಯೆಗೆ ಇದು ರಾಮಬಾಣ. ಕ್ಯಾನ್ಸರ್ ನಿವಾರಣೆಯಲ್ಲೂ ಬಳಸಲಾಗುತ್ತದೆ ಎಂದು ಹೇಳಲಾಗುತ್ತದೆ.



Click it and Unblock the Notifications